ಭಾರತದ ಭವ್ಯ ಆರ್ಥಿಕ ಭವಿಷ್ಯದತ್ತ ಮುಖ ಮಾಡಿವೆ ಎಲ್ಲಾ ರಸ್ತೆಗಳು

ಭಾರತದ ಪ್ರಗತಿಗಾಥೆ ಮುಂದಿನ ಹಂತಕ್ಕೇರುವುದಕ್ಕೆ ಸರಾಗ, ಬಹು ಮಾದರಿಯ ಸಾರಿಗೆ ವ್ಯವಸ್ಥೆಯು ವೇದಿಕೆಯಾಗಿದೆ.

ಭಾರತದ ಪ್ರಗತಿಗಾಥೆ ಮುಂದಿನ ಹಂತಕ್ಕೇರುವುದಕ್ಕೆ ಸರಾಗ, ಬಹು ಮಾದರಿಯ ಸಾರಿಗೆ ವ್ಯವಸ್ಥೆಯು ವೇದಿಕೆಯಾಗಿದೆ.

ಭಾರತದ ಪ್ರಗತಿಗಾಥೆ ಮುಂದಿನ ಹಂತಕ್ಕೇರುವುದಕ್ಕೆ ಸರಾಗ, ಬಹು ಮಾದರಿಯ ಸಾರಿಗೆ ವ್ಯವಸ್ಥೆಯು ವೇದಿಕೆಯಾಗಿದೆ.

  • Share this:

    ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಅಮೃತ ಮಹೋತ್ಸವದ ವೇಳೆ, ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 2047 ರ ವೇಳೆಗೆ ಪಂಚಪ್ರಾಣದ ಸಂಕಲ್ಪಕ್ಕೆ ಕರೆ ನೀಡಿದರು. ಈ ಪಂಚಪ್ರಾಣದಲ್ಲಿ ಮೊದನೆಯದೇ, ಅಭಿವೃದ್ಧಿ ಹೊಂದಿದ ಭಾರತದ ಗುರಿ. ಈ ಗುರಿಯನ್ನು ಸಾಧಿಸಲು, ಮೂಲಸೌಕರ್ಯ ಅಭಿವೃದ್ಧಿಯೇ ಮಾರ್ಗವಾಗಿದೆ.


    2014 ರಿಂದ, GOI ವ್ಯೂಹಾತ್ಮಕ ಹೂಡಿಕೆ ನಡೆಸುತ್ತಿದ್ದು,ಅದರಿಂದಾಗಿ ಭಾರತದಲ್ಲಿ ಉದ್ಯಮ ಆರಂಭಿಸುವುದು, ನಡೆಸುವುದು ಮತ್ತು ಯಶಸ್ಸು ಗಳಿಸುವುದು ಸಾಧ್ಯವಾಗಿದೆ. ಮೂಲಸೌಲಭ್ಯ ಕ್ಷೇತ್ರವು ಅತ್ಯಂತ ಗಮನಾರ್ಹ ಮುನ್ನಡೆ ಸಾಧಿಸಿದ ಕ್ಷೇತ್ರಗಳಲ್ಲೊಂದಾಗಿದೆ. 63.73 ಲಕ್ಷ ಕಿಮೀಗಳೊಂದಿಗೆ ವಿಶ್ವದಲ್ಲೇ ಎರಡನೇ ಅತಿದೊಡ್ಡ ರಸ್ತೆಜಾಲ ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಜತೆಗೆ ಬಿರುಸಿನ ಗತಿಯ ಪ್ರಗತಿಗಾಗಿ ವಿಶ್ವದಾಖಲೆಯನ್ನೂ ಹೊಂದಿದೆ: ಭಾರತದ ರಸ್ತೆಗಳು 38ಪ್ರತಿದಿನಕ್ಕೆ 38 ಕಿಮೀಗಳ ದರದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ ಮತ್ತು ಈ ದರವು ಹೆಚ್ಚುತ್ತಿದೆ. ದೇಶದಲ್ಲಿನ ಎಲ್ಲಾ ಸರಕುಗಳ 64.5% ಮತ್ತು ಭಾರತದ ಒಟ್ಟು ಪ್ರಯಾಣಿಕ ಟ್ರಾಫಿಕ್‌ನ 90% ನಷ್ಟು. ನಮ್ಮ ರಸ್ತೆ ಸಾರಿಗೆಯ ಮೂಲಕವೇ ನಡೆಯುತ್ತದೆ.


    ಈ ಪ್ರಗತಿಯು ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ ಎಂಬ ಬೃಹತ್ ಮೂಲಸೌಕರ್ಯ ಯೋಜನೆಯ ಭಾಗವಾಗಿದೆ. ಯಾವುದೇ ಆರ್ಥಿಕತೆಯ ಅಭಿವೃದ್ಧಿಗೆ ಮೂಲಸೌಕರ್ಯವು ಮುಖ್ಯವಾಗಿದೆ. ರಸ್ತೆಗಳು, ರೈಲ್ವೆ, ವಿಮಾನಯಾನ ಮತ್ತು ಜಲಮಾರ್ಗಗಳು ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವನ್ನು ಸಾಧ್ಯವಾಗಿಸುತ್ತವೆ, ವ್ಯಾಪಾರಕ್ಕೆ ಸೌಲಭ್ಯ ಕಲ್ಪಿಸುತ್ತವೆ ಮತ್ತು ಅವುಗಳು ಸಂಪರ್ಕ ಕಲ್ಪುಸುವ ಪ್ರದೇಶಗಳಿಗೆ ಸಮೃದ್ಧಿಯನ್ನು ತರುತ್ತವೆ. ಮೂಲಸೌಕರ್ಯವು ಹಲವು ಪಟ್ಟುಗಳ ಪರಿಣಾಮವನ್ನು ಬೀರುತ್ತದೆ. ಇದು  2.5 ಮತ್ತು 3.5 ಪಟ್ಟುಗಳ ನಡುವೆ ಇರಬಹುದು– ಅಂದರೆ, ಮೂಲಸೌಕರ್ಯದ ಮೇಲೆ ವಿನಿಯೋಗಿಸುವ ಪ್ರತಿ ರೂಪಾಯಿಯಿಂದ ರೂ 2.5 ನಿಂದ 3.5 ನಷ್ಟು GDP  ಏರುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆಂಡ್ ಪಾಲಿಸಿ ಅಂದಾಜಿಸಿವೆ.


    ಖಂಡಿತವಾಗಿಯೂ, ಈ ಹಣವನ್ನು ಎಲ್ಲಿ ವೆಚ್ಚ ಮಾಡಲಾಗುತ್ತದೆ ಎಂಬುದು ಅತ್ಯಂತ ಮುಖ್ಯ. ಭಾರತದ ಗತಿ ಶಕ್ತಿ ಕಾರ್ಯಕ್ರಮವು  ಅತಿಹೆಚ್ಚು ಪರಿಣಾಮಕಾರಿ 81 ಪ್ರೊಜೆಕ್ಟ್‌ಗಳ ಪಟ್ಟಿಯನ್ನು ಕ್ರೋಢೀಕರಿಸಿದೆ, ಇದರಲ್ಲಿ ರಸ್ತೆ ಮೂಲಸೌಕರ್ಯ ಪ್ರೊಜೆಕ್ಟ್‌ಗಳಿಗೆ ಅಗ್ರ ಆದ್ಯತೆ ನೀಡಲಾಗಿತ್ತು. ಪ್ರಮುಖ ಹೆದ್ದಾರಿ ಪ್ರೊಜೆಕ್ಟ್‌ಗಳಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ(1,350 ಕಿಲೋಮೀಟರ್‌ಗಳು), ಅಮೃತ್‌ಸರ-ಜಾಮ್‌ನಗರ್ ಎಕ್ಸ್‌ಪ್ರೆಸ್‌ವೇ (1,257 ಕಿಲೋಮೀಟರ್‌ಗಳು) ಮತ್ತು ಸಹರಾನ್ಪುರ್-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ (210 ಕಿಲೋಮೀಟರ್‌ಗಳು) ಒಳಗೊಂಡಿವೆ.


    ಮಿಶನ್ ಒಂದೇ ಆಗಿದೆ: ಎಲ್ಲಾ ವಿವಿಧ ಪಾಲುದಾರರನ್ನು ಒಂದೇ ಪ್ಲಾಟ್‌ಫಾರ್ಮ್‌ಗೆ ತರುವುದು ಮತ್ತು ಬಹು ಮಾದರಿಯ ಸಂಪರ್ಕವನ್ನು ರಚಿಸುವ ನೀಲನಕ್ಷೆ ರಚಿಸುವುದಾಗಿದೆ. ಬಹು ಮಾದರಿಯ ಸಂಪರ್ಕ ಎಂದರೆ, ಸರಕುಗಳು ಮತ್ತು ಜನರು ಸರಾಗವಾಗಿ ಒಂದು ವಿಧದ ಸಾರಿಗೆಯಿಂದ ಇನ್ನೊಂದು ವಿಧಕ್ಕೆ ಸಾಗುವುದು ಹಾಗೂ ಕಟ್ಟಕಡೆಯ ಸ್ಥಳದವರೆಗೂ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ಮತ್ತು ಪ್ರಯಾಣ ಸಮಯ ತಗ್ಗಿಸುವುದಾಗಿದೆ. ಬಹು ಮಾದರಿಯ ಸಂಪರ್ಕವು ಸಂಕೀರ್ಣ ಪೂರೈಕೆ ಸರಪಳಿಯ ರಚನೆಯನ್ನು ಸಾಧ್ಯವಾಗಿಸುತ್ತದೆ, ಜತೆಗೆ ಭಾರತೀಯ ಉದ್ಯಮಕ್ಕೆ ಅನೇಕ ಲಾಭಗಳನ್ನು ಒದಗಿಸುತ್ತದೆ.


    ಈ ಎಲ್ಲಾ ಸಂಗತಿಗಳಲ್ಲಿ, ಅನುಷ್ಠಾನವೇ ಮುಖ್ಯವಾಗಿದೆ. ಇಷ್ಟೊಂದು ದೊಡ್ಡ ಪ್ರೊಜೆಕ್ಟ್‌ನಲ್ಲಿ, ವ್ಯರ್ಥವಾಗುವಿಕೆ ಮತ್ತು ಮರುಕೆಲಸವನ್ನು ಕನಿಷ್ಠಗೊಳಿಸುವುದು ಮುಖ್ಯ ಮತ್ತು ಗುಣಮಟ್ಟದ ಸ್ಟಾಂಡರ್ಡ್‌ಗಳು ಬರುವುದು ಅದರಲ್ಲೇ. ಉನ್ನತ ಗುಣಮಟ್ಟದ ಫಲಿತಾಂಶ ಮತ್ತು ಪ್ರೊಜೆಕ್ಟ್‌ಗಳನ್ನು ಕ್ಲಪ್ತ ಸಮಯದಲ್ಲಿ ಪೂರ್ಣಗೊಳಿಸುವುದನ್ನು ಖಾತ್ರಿಗೊಳಿಸಲು ದೃಢವಾದ ಕಾರ್ಯಕ್ಷಮತೆಯ ನಿಗಾ ಚೌಕಟ್ಟು ಅಗತ್ಯವಿದೆ. ಇದೇ ಕಾರಣಕ್ಕಾಗಿ ಗುಣಮಟ್ಟದ ಸ್ಟಾಂಡರ್ಡ್‌ಗಳು ಸ್ಥಾಪಿಸುವುದು, ಆಡಿಟರ್‌ಗಳು ಮತ್ತು ಕನ್ಸಲ್ಟೆಂಟ್‌ಗಳಿಗೆ ತರಬೇತಿ ನೀಡುವುದು ಮತ್ತು ವಸ್ತುನಿಷ್ಠ ಮೌಲ್ಯಮಾಪನಗಳಿಗಾಗಿ ಚೌಕಟ್ಟನ್ನು ರಚಿಸುವುದು ಹೀಗೆ ಸಂಪೂರ್ಣ ವ್ಯವಸ್ಥೆಯೊಂದಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ಕಾರ್ಯನಿರ್ವಹಿಸುತ್ತಿದೆ.


    ಕಾರ್ಯಕ್ಷಮತೆಗೆ ಮಾನದಂಡ ನಿಗದಿಗೊಳಿಸುವಿಕೆ
    ಭಾರತದಲ್ಲಿ ರಸ್ತೆಗಳನ್ನು ನಿರ್ಮಿಸುವುದು ಸವಾಲಿನ ಕಾರ್ಯವಾಗಬಹುದು (ತಮಾಷೆಯಲ್ಲ). ಪ್ರೊಜೆಕ್ಟ್‌ಗಳು ಹೆಚ್ಚಾಗಿ ನಿಗದಿತ ಸಮಯ ಹಾಗೂ ವೆಚ್ಚವನ್ನು ಮೀರುತ್ತವೆ. ಕಳಪೆ ಯೋಜನೆ ಮತ್ತು ವಿನ್ಯಾಸವೇ ಕೆಲವೊಮ್ಮೆ ಸಮಸ್ಯೆಯ ಮೂಲವಾಗಿದ್ದರೆ, ಇನ್ನು ಕೆಲವೊಮ್ಮೆ ಭೂ ಸ್ವಾಧೀನ ಮತ್ತು ಅನುಮೋದನೆ ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ, ಹಣವನ್ನು ಪ್ರಶಸ್ತವಾಗಿ ಬಳಸಲಾಗುವುದಿಲ್ಲ, ನಿರ್ಮಾಣದಲ್ಲಿ ಅತ್ಯುತ್ತಮ ಅಭ್ಯಾಸಗಳ ಕೊರತೆ, ಕೆಲವೊಮ್ಮೆ ವಿವಿಧ ಪಾಲುದಾರರ ನಡುವಿನ ಹಳೆಯ ವಿವಾದವೂ ಪ್ರೊಜೆಕ್ಟ್ ನಿಗದಿತ ಸಮಯ ಹಾಗೂ ಬಜೆಟ್‌ನಲ್ಲಿ ಪೂರ್ಣಗೊಳ್ಳದೇ ಇರಲು ಕಾರವಾಗಬಹುದು. ನಿರ್ಮಾಣದ ಗುಣಮಟ್ಟ ಹಾಗೂ ಪ್ರೊಜೆಕ್ಟ್ ನಿರ್ವಹಣೆಯು ಹೆಚ್ಚಾಗಿ ಕೆಳಮಟ್ಟದಲ್ಲಿರುತ್ತದೆ.


    ಇದನ್ನು ಮೀರಿ ಯಶಸ್ವಿಯಾಗುವ ಸಲುವಾಗಿಯೇ, ಹೆದ್ದಾರಿ ನಿರ್ಮಾಣ ವೆಂಡರ್‌ಗಳ ಕಾರ್ಯಕ್ಷಮತೆ ರೇಟಿಂಗ್ ಮಾದರಿ ಅಭಿವೃದ್ಧಿಪಡಿಸಲು ಮತ್ತು ಭವಿಷ್ಯದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಾರ್ಯಕ್ಷಮತೆಯ ರೇಟಿಂಗ್ ಅನ್ನು ಅಳವಡಿಸಿಕೊಳ್ಳುವ ಸಲುವಾಗಿ ಚೌಕಟ್ಟು ರೂಪಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) QCI ಅನ್ನು ತೊಡಗಿಸಿಕೊಂಡಿದೆ. ಚೌಕಟ್ಟು ಮತ್ತು ವಿಧಾನಶಾಸ್ತ್ರವನ್ನು ಸೂತ್ರೀಕರಿಸುವ ನಿಟ್ಟಿನಲ್ಲಿ, QCI ವ್ಯಾಪಕ ಸಂಶೋಧನೆಯನ್ನು ಕೈಗೊಂಡಿದೆ: ಇದು ಸಂಹಿತೆಗಳು ಮತ್ತು ಸ್ಟಾಂಡರ್ಡ್‌ಗಳನ್ನು ಮೌಲ್ಯಮಾಪನ ಮಾಡಿದೆ, ಅಂತಾರಾಷ್ಟ್ರೀಯ ಕಾರ್ಯಕ್ಷಮತೆ ರೇಟಿಂಗ್ ಅನ್ನು ಪರಿಶೀಲಿಸಿದೆ ಮತ್ತು ಕ್ಷೇತ್ರದ ವಿವಿಧ ತಜ್ಞರೊಂದಿದೆ ಸಮಾಲೋಚಿಸಿದೆ.


    ಇದರ ಪರಿಣಾಮದ ಚೌಕಟ್ಟು ಈ ದೀರ್ಘಕಾಲಿಕ ಪ್ರೊಜೆಕ್ಟ್‌ಗಳಲ್ಲಿ ವಿವಿಧ ರೂಪಗಳಲ್ಲಿ ಮತ್ತು ಪ್ರಗತಿಯ ವಿವಿಧ ಹಂತಗಳಲ್ಲಿ ಅನುಷ್ಠಾನಕ್ಕೆ ಬರುತ್ತದೆ. ಮೌಲ್ಯಮಾಪನಗಳು ಸಮಗ್ರವಾಗಿರುತ್ತವೆ: ನಿರ್ಮಾಣದ ಗುಣಮಟ್ಟ, ಕ್ಲಪ್ತ ಸಮಯದಲ್ಲಿ ಪ್ರಗತಿ ವರದಿಗಳು ಮತ್ತು ಆಡಿಟ್ ವರದಿಗಳ ಸಲ್ಲಿಕೆ, ಮಾರ್ಗಸೂಚಿಗಳು ಮತ್ತು IRC (ಇಂಡಿಯನ್ ರೋಡ್ಸ್ ಕಾಂಗ್ರೆಸ್) ನ ಸಂಹಿತೆಗಳಿಗೆ ಬದ್ಧವಾಗಿರುವಿಕೆ, ಕೈಗಾರಿಕಾ ಮಾನದಂಡ ಮತ್ತು ನಿರ್ದಿಷ್ಟತೆಗಳ ಅನುಸರಣೆ ಮತ್ತು ಒಟ್ಟಾರೆ ಪ್ರಕ್ರಿಯೆ ನಿರ್ವಹಣೆಯಂತಹ ಮಾನದಂಡಗಳಲ್ಲಿ ವೆಂಡರ್‌ಗಳ ಮೌಲ್ಯಮಾಪನ. ಪ್ರತಿ ವೆಂಡರ್ ತಮ್ಮ ಕ್ಲೈಮ್‌ ಅನ್ನು ಪುಷ್ಟೀಕರಿಸುವ ದಾಖಲೆ ರೂಪದ ಸಾಕ್ಷ್ಯಗಳನ್ನು ಸಲ್ಲಿಸಬೇಕಾಗುತ್ತದೆ, ಭವಿಷ್ಯದ ಪರಾಮರ್ಶೆಗಾಗಿ ಸ್ಪಷ್ಟವಾದ ದಾಖಲೀಕರಣವನ್ನು ರಚಿಸಿಕೊಳ್ಳಬೇಕಾಗುತ್ತದೆ.


    QCI ನ ವಿಧಾನಕ್ಕೆ ಅನುಗುಣವಾಗಿ, ಈ ಚೌಕಟ್ಟನ್ನು ತಕ್ಷಣವೇ ಆರಂಭಿಸಿಲ್ಲ, ಆದರೆ ಮೊದಲ ಪ್ರಯೋಗವನ್ನು 20 ರಾಷ್ಟ್ರೀಯ ಹೆದ್ದಾರಿ ಪ್ರೊಜೆಕ್ಟ್‌ಗಳಲ್ಲಿ ಪರೀಕ್ಷಿಸಲಾಯಿತು. ಡೇಟಾವನ್ನು ಸ್ಟಾಂಡರ್ಡೈಸ್ ಮಾಡಲು ಮತ್ತು ಪ್ರಕ್ರಿಯೆಗಳು ಸ್ಥಗಿತಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಡೇಟಾ ನಿರ್ವಹಣೆಯ ಶಿಷ್ಟಾಚಾರಗಳನ್ನು ಪರಿಷ್ಕರಿಸಲು ಮತ್ತು ಸುಧಾರಿಸಲು ಈ ಪ್ರಯೋಗದ ಫಲಿತಾಂಶಗಳನ್ನು ಬಳಸಲಾಯಿತು. ಭಾರತದಲ್ಲಿ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ರೊಜೆಕ್ಟ್‌ಗಳಿಗೆ ಕಾರ್ಯಕ್ಷಮತೆ ರೇಟಿಂಗ್ ಚೌಕಟ್ಟನ್ನು ಸರಾಗವಾಗಿ ಅಳೆಯಲು ಒಂದು ಮಾದರಿಯನ್ನು ಕೂಡಾ QCI ಪರಿಚಯಿಸಿತು. ಅದಕ್ಕಿಂತ ಹೆಚ್ಚಾಗಿ, ಭವಿಷ್ಯದ ಬಿಡ್‌ಗಳಲ್ಲಿ ಈ ಕಾರ್ಯಕ್ಷಮತೆಯ ಸ್ಟಾಂಡರ್ಡ್‌ಗಳನ್ನು ಅಳವಡಿಸಿಕೊಳ್ಳುವ ಹಾಗೂ ಹಿಂದಿನ ಕಾರ್ಯಕ್ಷಮತೆಯ ಡೇಟಾವನ್ನು ಭವಿಷ್ಯದ ಬಿಡ್‌ನಲ್ಲೂ ಅಂಶೀಕರಿಸುವ ಸಲುವಾಗಿ ಒಂದು ಚೌಕಟ್ಟನ್ನು ಕೂಡಾ QCI ರೂಪಿಸಿದೆ.


    ಇದರೊಂದಿಗೆ, ಹೆದ್ದಾರಿ ಅಭಿವೃದ್ಧಿ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಕಂಪನಿಗಳನ್ನು ಗುರುತಿಸುವ ಮತ್ತು ಪ್ರಶಸ್ತಿ ನೀಡುವ ಕಟ್ಟುನಿಟ್ಟಿನ ಮೌಲ್ಯಮಾಪನ ಚೌಕಟ್ಟು ಮತ್ತು ಪ್ರಕ್ರಿಯೆಯನ್ನು ಕೂಡಾ QCI ಅಭಿವೃದ್ಧಿಪಡಿಸಿದೆ. ನಿರ್ಮಾಣ ನಿರ್ವಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆ, ಟೋಲ್ ಪ್ಲಾಝಾ ನಿರ್ವಹಣೆ, ಹೆದ್ದಾರಿ ಸುರಕ್ಷತೆ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸುವುದು- ಹೀಗೆ ಐದು ವಿಭಾಗಗಳಾದ್ಯಂತ ಈ ಪ್ರಶಸ್ತಿಗಳನ್ನು ನಿಗದಿಗೊಳಿಸಲಾಗಿದೆ. ಕಾರ್ಯಕ್ಷಮತೆ ರೇಟಿಂಗ್ ಚೌಕಟ್ಟಾಗಿರುವುದರಿಂದ, ಪ್ರಶಸ್ತಿಗಳು ಅನುಷ್ಠಾನದ ವಿಧ, ಭೂಪ್ರದೇಶ ಮತ್ತು ನಿರ್ಮಾಣ ತಂತ್ರವನ್ನು ಪರಿಗಣಿಸುತತವೆ, ಮತ್ತು ಪ್ರತಿ ವಿಭಾಗಕ್ಕೆ, ಪ್ರೊಜೆಕ್ಟ್‌ಗಳನ್ನು ವಸ್ತುನಿಷ್ಠವಾಗಿ ಮತ್ತು ಪರಿಮಾಣಾತ್ಮಕ ಮಾನದಂಡಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.


    ಗುಣಮಟ್ಟದ ವ್ಯವಸ್ಥೆಯ ನಿರ್ಮಾಣ
    ನಿರ್ದಿಷ್ಟ ಕಾರ್ಯಕ್ಷಮತೆಯ ಸ್ಟಾಂಡರ್ಡ್‌ನ ಹೊರತಾಗಿ, ಸ್ಟಾಂಡರ್ಡ್‌ಗಳನ್ನು ಸ್ಥಾಪಿಸುವ ವಿಧಾನ, ಈ ಸ್ಟಾಂಡರ್ಡ್‌ಗಳನ್ನು ಜಾರಿಗೊಳಿಸುವಿಕೆ ಮತ್ತು ಗುಣಮಟ್ಟ ಹಾಗೂ ಪಾರಿಸರಿಕ ಆಡಿಟ್‌ಗಳೆರಡನ್ನೂ ನಡೆಸಬಲ್ಲ ಮಾನ್ಯತೆ ಹೊಂದಿದ ಕನ್ಸಲ್ಟೆಂಟ್‌ಗಳು ಮತ್ತು ಸಂಸ್ಥೆಗಳ ಸ್ಥಿರವಾದ ಪೂರೈಕೆಯನ್ನು ಮಾಡುವ ಮೂಲಕ QCI ಗುಣಮಟ್ಟದ ವ್ಯವಸ್ಥೆಯನ್ನು ಕೂಡಾ ರಚಿಸುತ್ತದೆ. QCI ನೊಳಗಿನ ಪ್ರತಿಯೊಂದು ಬೋರ್ಡ್‌ಗಳು ಜೀವನದ ಪ್ರತಿ ಹಂತದಲ್ಲಿ ಗುಣಮಟ್ಟದ ಮಟ್ಟವನ್ನು ಹೆಚ್ಚಿಸುವ ಮುಖ್ಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತವೆ,


    ರಸ್ತೆಗಳು ಮತ್ತು ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ, ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಎಜುಕೇಶನ್ ಆಂಡ್ ಟ್ರೈನಿಂಗ್ (NABET), ಕೌಶಲ್ಯಗಳು, ಶಿಕ್ಷಣ ಮತ್ತು ತರಬೇತಿ ರಂಗದಲ್ಲಿ ಮಾನ್ಯತಾ ಕಾರ್ಯತಂತ್ರದ ನಿಬಂಧನೆಯ ಮೂಲಕ ತಳಹದಿಯನ್ನು ಹಾಕಿದೆ. ಇದು ವಿಶ್ವಾಸಾರ್ಹ ತರಬೇತಿಯ ಫಲಿತಾಂಶವನ್ನು ನೀಡುವಂತಹ ಶಿಕ್ಷಣ ಮತ್ತು ತರಬೇತಿ ಒದಗಿಸುವವರ ಸ್ಥಿರವಾದ ಪೈಪ್‌ಲೈನ್ ಅನ್ನು ರಚಿಸುತ್ತದೆ. ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಸರ್ಟಿಫಿಕೇಶನ್ ಬಾಡೀಸ್, ಭಾರತದಲ್ಲಿ ಗುಣಮಟ್ಟದ ಕಾರ್ಯಗಳ ಬುನಾದಿಯನ್ನು ನಿರ್ಮಿಸುವ ಸಲುವಾಗಿ ಎಲ್ಲಾ ಪ್ರಮಾಣೀಕರಣ ಮಂಡಳಿಗಳಿಗೆ ಸ್ಟಾಂಡರ್ಡ್ ಅನ್ನು ನಿಗದಿಗೊಳಿಸುತ್ತದೆ. ಬ್ಯುಸಿನೆಸ್ ಕಂಟಿನ್ಯುಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್(BCMS), ಎನರ್ಜಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್(EnMS), ಎನ್ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್(EMS), ಆಕ್ಯುಪೇಶನಲ್ ಹೆಲ್ತ್ ಆಂಡ್ ಸೇಫ್ಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ (OHSMS), ಕ್ವಾಲಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್(QMS), ಇನ್‌ಸ್ಪೆಕ್ಷನ್ ಬಾಡೀಸ್(IB), ಪರ್ಸನಲ್ ಸರ್ಟಿಫಿಕೇಶನ್ ಬಾಡೀಸ್(PrCB), ಪ್ರೊಡಕ್ಟ್ ಸರ್ಟಿಫಿಕೇಶನ್ ಬಾಡೀಸ್(PCB) ಮತ್ತು ಇತರೆ ಸಂಬಂಧಿತ ಪ್ರಮಾಣೀಕರಣಗಳಂತಹ ಅಕ್ರೆಡಿಟೇಶನ್ ಸ್ಕೀಂಗಳು ಪ್ರೊಜೆಕ್ಟ್ ಪ್ರಾಯೋಜಕರು ಮತ್ತು ಪ್ರೊಜೆಕ್ಟ್ ನಿರ್ವಾಹಕರು ಮೊದಲ ದಿನದಿಂದಲೇ ತಮ್ಮ ಪ್ರೊಜೆಕ್ಟ್‌ ಅನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಸಾಧ್ಯವಾಗಿಸುತ್ತವೆ.


    ಇದರೊಂದಿಗೆ, ಭಾರತದಲ್ಲಿ ಬಹುತೇಕ ಅಭಿವೃದ್ಧಿಯ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಸಾಂಸ್ಥಿಕ ಅಗತ್ಯತೆಯಾದ ಎನ್ವಿರಾನ್‌ಮೆಂಟಲ್ ಇಂಪಾಕ್ಟ್ ಅಸೆಸ್‌ಮೆಂಟ್(EIA) ಅಡಿಯಲ್ಲಿ ನಮೂದಿಸಲಾದ ನಿಯಂತ್ರಕ ನಿಯಮಗಳಿಗೆ ಕೂಡಾ ಪಾಲುದಾರರಿಗೆ QCI ಸಹಾಯ ಮಾಡಿದೆ. ಇದನ್ನು ನೀಡಲಾದ ಪ್ರೊಜೆಕ್ಟ್‌ನಲ್ಲಿ ಹೂಡಿಕೆಯ ಸದೃಢತೆಯನ್ನು ವಿಶ್ಲೇಷಿಸಲು ಹಣಕಾಸು ಸಂಸ್ಥೆಗಳು ಹಂತಹಂತವಾಗಿ ಬಳಸಿವೆ. QCI ನ NABET ಯು ಸ್ವಯಂಇಚ್ಛೆಯ ಅಕ್ರೆಡಿಟೇಶನ್ ಸ್ಕೀಮ್ ಅನ್ನು ಅಭಿವೃದ್ಧಿಪಡಿಸಿದ್ದು, EIA ನಿಮಯಗಳ ಅನುಸರಣೆಯನ್ನು ಖಾತ್ರಿಗೊಳಿಸಲು ನೆರವಾಗುವ ಕನ್ಸಲ್ಟೆಂಟ್‌ಗಳು ಮತ್ತು ಆಡಿಟರ್‌ಗಳಿಗೆ ಲಭ್ಯಗೊಳಿಸುತ್ತದೆ ಮತ್ತು ಪಾರಿಸರಿಕ ಅನುಮೋದನೆಯನ್ನು ಪಡೆಯಲು EIA ವರದಿಗಳನ್ನು ಸಿದ್ಧಗೊಳಿಸುತ್ತದೆ. ತರಬೇತುಗೊಂಡ ಆಡಿಟರ್‌ಗಳು ಮತ್ತು ಕನ್ಸಲ್ಟೆಂಟ್‌ಗಳ ಲಭ್ಯತೆಯು ತೀರಾ ಮುಖ್ಯವಾದ ಅಡಚಣೆಯನ್ನು ಸುಗಮಗೊಳಿಸಿದೆ, ಇದೇ ವೇಳೆ ಭಾರತದಲ್ಲಿ ಮೂಲಸೌಕರ್ಯ ಪ್ರೊಜೆಕ್ಟ್‌ಗಳ ಗುಣಮಟ್ಟ ಮತ್ತು ಸುಸ್ಥಿರತೆಯ ಪ್ರೊಫೈಲ್ ಅನ್ನು ಹೆಚ್ಚಿಸಿದೆ.


    ಇದಕ್ಕಿಂತ ಹೆಚ್ಚಾಗಿ, ಕೆಲವು ಪ್ರಕರಣಗಳಲ್ಲಿ, QCI ನ ಪ್ರೊಜೆಕ್ಟ್ ಪ್ಲಾನಿಂಗ್ ಆಂಡ್ ಇಂಪ್ಲಿಮೆಂಟೇಶನ್ ಡಿವಿಶನ್ (PPID) ನಿರ್ದಿಷ್ಟ ಪ್ರೊಜೆಕ್ಟ್‌ಗಳು, ಸ್ಕೀಂಗಳು ಅಥವಾ ಉಪಕ್ರಮಗಳ ಅನುಷ್ಠಾನಕ್ಕಾಗಿ; ಅವುಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವಲ್ಲಿ ಕೂಡಾ ನೇರವಾಗಿ ಕಾರ್ಯಾಚರಿಸುತ್ತದೆ. ಇದರರ್ಥ, QCI ಸಂಪೂರ್ಣ ಪ್ರೊಜೆಕ್ಟ್ ನಿರ್ವಹಣಾ ಚಕ್ರವನ್ನು ನಡೆಸುತ್ತದೆ: ಕೇಂದ್ರೀಕೃತ ಕ್ಷೇತ್ರ, ಸಮೀಕ್ಷೆಗಳು ಮತ್ತು ಪಾಲುದಾರರೊಂದಿಗೆ ಪ್ರೊಜೆಕ್ಟ್ ವಿಧಾನಶಾಸ್ತ್ರವನ್ನು ಸೂತ್ರೀಕರಿಸುವುದು; ಪ್ರೊಜೆಕ್ಟ್ ಯೋಜನೆ ಮತ್ತು ಟೈಮ್‌ಲೈನ್‌ಗಳನ್ನು ರಚಿಸುವುದು ಮತ್ತು ಸಂಪನ್ಮೂಲ ಯೋಜನೆಗಳು; ವಿವಿಧ ಪಾಲುದಾರರೊಂದಿಗೆ ಸಮನ್ವಯ (ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಸರ್ಕಾರಿ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು (ULBs), ಟೆಕ್ ಮತ್ತು PR ಏಜೆನ್ಸಿಗಳು ಮತ್ತು ಇತರೆ ಪಾಲುದಾರರು); ಮತ್ತು ಅಂತಿಮವಾಗಿ, ಪ್ರೊಜೆಕ್ಟ್‌ ಅನ್ನು ಕಾರ್ಯಗತಗೊಳಿಸುವುದು, ಇದೇ ವೇಳೆ ನೈಜ ಸಮಯದಲ್ಲಿ ನಿಗಾ ಕಾರ್ಯ.


    ಈ ನಿಟ್ಟಿನಲ್ಲಿ, QCI ಎಲ್ಲಾ ಗಾತ್ರದ ಮೂಲಸೌಕರ್ಯ ಪ್ರೊಜೆಕ್ಟ್‌ಗಳಲ್ಲಿ ಪರಿಕಲ್ಪನೆಯ ಕ್ಷಣದಿಂದ ಸಾರ್ವಜನಿಕರಿಗೆ ಮುಕ್ತವಾಗುವ ಅಂತಿಮ ಹಂತದವರೆಗೆ ಗುಣಮಟ್ಟ ಮತ್ತು ಸಮಯಪಾಲನೆಯನ್ನು ಸಾಧ್ಯವಾಗಿಸಿದೆ. ಇದು ಸುರಕ್ಷತೆ ಮತ್ತು ದೀರ್ಘ ಬಾಳ್ವಿಕೆಯಲ್ಲಿ ವಿಶ್ವಾಸವನ್ನು ಮೂಡಿಸುವುದಷ್ಟೇ ಅಲ್ಲ, ಜತೆಗೆ ವೆಚ್ಚ ಹಾಗೂ ಸಮಯ ಮೀರುವುದನ್ನು ಕೂಡಾ ಕಡಿಮೆಗೊಳಿಸಲು ನೆರವಾಗುತ್ತದೆ. ಭಾರತವು ಭವಿಷ್ಯದತ್ತ ಸುಸ್ಥಿರವಾಗಿ ದಾಪುಗಾಲಿಡಲು ಬಯಸುವ ಸರ್ಕಾರಕ್ಕೆ ಇದು ಸಮಯ ಮತ್ತು ಮೌಲ್ಯ ಎರಡರಲ್ಲೂ ಮಾಡುವ ಮರುಪಾವತಿಯನ್ನು ಅಳೆಯಲಾಗದು.


    ತೀರ್ಮಾನ
    ಭಾರತವು ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮುಕುಟದ ರತ್ನವೆಂದು ಪರಿಗಣಿತವಾಗಿತ್ತು. ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ 75 ವರ್ಷಗಳ ನಂತರ, ಭಾರತವು ಆರ್ಥಿಕ ಸೂಪರ್ ಪವರ್ ಆಗಿ, ಸುಸ್ಥಿರತೆಯಲ್ಲಿ ಚಿಂತನಶೀಲ ನಾಯಕನಾಗಿ ತನ್ನ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಅರ್ಹವಾದ ಮತ್ತು ಗೌರವಯುತವಾದ ಭಾರತೀಯ ಜನರಿಂದಾಗಿ ಈ ಸಾಮರ್ಥ್ಯ ಪ್ರಾಪ್ತವಾಗಿದೆ.


    ಭಾರತೀಯ ಉದ್ಯಮಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಸ್ಪರ್ಧಾತ್ಮಕವಾದಂತೆ, ಭಾರತದ ಸಂಪತ್ತು ಬೆಳೆಯುತ್ತಿದೆ. ಒಂದು ದೇಶವಾಗಿ ನಮ್ಮ ಪ್ರಗತಿಯ ಈ ನಿರ್ಣಾಯಕ ಹಂತದಲ್ಲಿ, ರಸ್ತೆಗಳು ಮತ್ತು ಮೂಲಸೌಕರ್ಯದಲ್ಲಿ ಸರ್ಕಾರದ ಹೂಡಿಕೆಗಳು ಬಹುಪಟ್ಟುಗಳನ್ನು ತೆರೆದುಕೊಳ್ಳಲಿವೆ. ಸ್ವತಃ ರಸ್ತೆಗಳು ಸಂಬಂಧಿತ ಉದ್ಯಮಗಳಾದ ಸ್ಟೀಲ್, ಸಿಮೆಂಟ್, ಆಟೋ, ರಿಯಲ್ ಎಸ್ಟೇಟ್ ಮೇಲೆ ಕೂಡಾ ಪರಿಣಾಮ ಬೀರಲಿದೆ. ಈ ಕ್ಷೇತ್ರಗಳಲ್ಲಿ ಸರಾಸರಿ ಆದಾಯಗಳೊಂದಿಗೆ ಪ್ರತಿಯೊಂದೂ ಮೇಲ್ಮುಖವಾಗಿ ಚಲಿಸುತ್ತದೆ.


    ಜನರು ಮತ್ತು ಸರಕುಗಳ ಸರಾಗ ಸಾಗಣೆಯು ಹೊಸ ಮಾರುಕಟ್ಟೆಗಳು ಮತ್ತು ಉದ್ಯಮಗಳಿಗೆ ಪೂರೈಕೆದಾರರು ಮತ್ತು ಬಳಕೆದಾರರಿಗೆ ಇನ್ನಷ್ಟು ಆಯ್ಕೆಗಳ ಅವಕಾಶದ ಬಾಗಿಲು ತೆರೆಯುತ್ತದೆ, ಭಾರತೀಯ ಉದ್ಯಮಗಳು ಪರಸ್ಪರ ಸಮಾನ ಅವಕಾಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ, ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರಕ್ರಿಯೆಗಳು, ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಅತ್ಯುತ್ತಮ ಸಂಗತಿಗಳು ಹೊರಹೊಮ್ಮುತ್ತವೆ.


    ನಾವೆಲ್ಲರೂ ಮಾಡುವ ಕೆಲಸದಲ್ಲಿ ಉತ್ತಮಗೊಳ್ಳುತ್ತೇವೆ. ಇದು ಯಾವತ್ತೂ ಉದ್ಯಮಕ್ಕೆ ಒಳ್ಳೆಯದು.

    First published: