• Home
  • »
  • News
  • »
  • business
  • »
  • UPI ವಹಿವಾಟಿಗೆ ಮಿತಿ ಹೇರಿದ ಬ್ಯಾಂಕ್​​​ಗಳು- ಈಗ ದಿನಕ್ಕೆ ಇಷ್ಟು ಟ್ರಾನ್ಸಾಕ್ಷನ್ ಮಾತ್ರ ಸಾಧ್ಯ!

UPI ವಹಿವಾಟಿಗೆ ಮಿತಿ ಹೇರಿದ ಬ್ಯಾಂಕ್​​​ಗಳು- ಈಗ ದಿನಕ್ಕೆ ಇಷ್ಟು ಟ್ರಾನ್ಸಾಕ್ಷನ್ ಮಾತ್ರ ಸಾಧ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ, ಬ್ಯಾಂಕ್‌ಗಳು ತಮ್ಮ ಯುಪಿಐ ವಹಿವಾಟಿಗೆ ಮಿತಿಯನ್ನು ನಿಗದಿಪಡಿಸಿದ್ದು, ನೀವು ಹೆಚ್ಚಾಗಿ ಯುಪಿಐ ಮೂಲಕವೇ ಪಾವತಿಗಳನ್ನು ಮಾಡುತ್ತಿದ್ದರೆ ಈ ಡಿಜಿಟಲ್ ಕ್ಯಾಶ್ ಲಿಮಿಟ್ ಬಗ್ಗೆ ಅರಿತುಕೊಳ್ಳುವುದು ಮುಖ್ಯವಾಗಿದೆ.

  • Share this:

    ಇಂದಿನ ಯುಗದಲ್ಲಿ ಯಾರೂ ಕೂಡ ಕೈಯಲ್ಲಿ ನಗದು (Cash) ಹಣವನ್ನು ಇರಿಸಿಕೊಂಡು ಓಡಾಡುವುದು ತುಂಬಾ ಕಡಿಮೆಯಾಗಿದೆ. ಆನ್‌ಲೈನ್ ವಹಿವಾಟಿನಲ್ಲೇ(Online Transaction) ತಮ್ಮ ವ್ಯವಹಾರಗಳನ್ನು ಜನರು ಮುಗಿಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಯಾಶ್(Digital Cash) ಇಂದು ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಖ್ಯವಾಗಿದೆ. ಏಕೀಕೃತ ಪಾವತಿ ವ್ಯವಸ್ಥೆ (UPI) ಹೆಚ್ಚಿನ ನಗದನ್ನು ತಮ್ಮಲ್ಲಿ ಇರಿಸಿಕೊಳ್ಳುವ ಅಪಾಯದಿಂದ ಕೂಡ ಜನಸಾಮಾನ್ಯರನ್ನು ರಕ್ಷಿಸಿದೆ. ಏಕೆಂದರೆ ಆನ್‌ಲೈನ್‌ನಲ್ಲಿ ಪಾವತಿಗಳನ್ನು(Payment) ಮಾಡುವ ಕಾರಣ ಹೆಚ್ಚು ಹಣವನ್ನು ವ್ಯಾಪಾರ ವಹಿವಾಟಿಗಾಗಿ ಕೊಂಡೊಯ್ಯಬೇಕಾಗಿರುವ ಪ್ರಸಂಗವಿಲ್ಲ.


    ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ, ಬ್ಯಾಂಕ್‌ಗಳು ತಮ್ಮ ಯುಪಿಐ ವಹಿವಾಟಿಗೆ ಮಿತಿಯನ್ನು ನಿಗದಿಪಡಿಸಿದ್ದು, ನೀವು ಹೆಚ್ಚಾಗಿ ಯುಪಿಐ ಮೂಲಕವೇ ಪಾವತಿಗಳನ್ನು ಮಾಡುತ್ತಿದ್ದರೆ ಈ ಡಿಜಿಟಲ್ ಕ್ಯಾಶ್ ಲಿಮಿಟ್ ಬಗ್ಗೆ ಅರಿತುಕೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಂದು ಬ್ಯಾಂಕ್‌ಗಳು ಕೂಡ ಯುಪಿಐ ಪಾವತಿಗೆ ಇದೀಗ ಮಿತಿಯನ್ನು ಹೊಂದಿಸಿವೆ. ಬೇರೆ ಬೇರೆ ಬ್ಯಾಂಕ್‌ಗಳು ಬೇರೆ ಬೇರೆ ರೀತಿಯಲ್ಲಿ ಈ ಮಿತಿಗಳನ್ನು ಹೊಂದಿಸಿವೆ. ಪೇಮೆಂಟ್ ಆ್ಯಪ್‌ಗಳ ಮೂಲಕ ನೀವು ಪಾವತಿಸುತ್ತಿದ್ದೀರಿ ಎಂದಾದಲ್ಲಿ ಹೆಚ್ಚುವರಿ ಶುಲ್ಕ ಭರಿಸುವ ಅಗತ್ಯವೂ ಇಲ್ಲ.


    ಇದನ್ನೂ ಓದಿ: Business Tips: ಏನಾದ್ರೂ ಸ್ವಂತ ಬ್ಯುಸಿನೆಸ್ ಶುರು ಮಾಡ್ಬೇಕು ಅನ್ಕೊಂಡಿದ್ದೀರಾ? ಈ 4 ವಿಷಯಗಳು ಗೊತ್ತಿರ್ಲಿ!


    ವಹಿವಾಟು ಮಿತಿ


    NPCI (ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ) ತಿಳಿಸಿರುವ ಮಾರ್ಗಸೂಚಿಗಳ ಪ್ರಕಾರ ಯುಪಿಐ ಮೂಲಕ ದಿನವೊಂದಕ್ಕೆ 1 ಲಕ್ಷದವರೆಗಿನ ವಹಿವಾಟುಗಳನ್ನು ನಡೆಸಬಹುದು ಎಂದಾಗಿದೆ. ಬೇರೆ ಬೇರೆ ಬ್ಯಾಂಕ್‌ಗಳು ಈ ಮಿತಿಯನ್ನು ವ್ಯತ್ಯಾಸಗೊಳಿಸಬಹುದು. ಉದಾಹರಣೆಗೆ ಕೆನರಾ ಬ್ಯಾಂಕ್‌ನಲ್ಲಿ ಈ ಮಿತಿ ರೂ 25,000 ಆಗಿದ್ದರೆ ಎಸ್‌ಬಿಐ ರೂ 1ಲಕ್ಷ ಮಿತಿಯನ್ನು ಹೊಂದಿಸಿದೆ. ಹಣ ವರ್ಗಾವಣೆ ಮಿತಿಯೊಂದಿಗೆ ಒಂದು ದಿನದಲ್ಲಿ ಮಾಡಬಹುದಾದ ಯುಪಿಐ ವರ್ಗಾವಣೆಗಳಿಗೂ ಮಿತಿ ಇದೆ ಎಂಬುದನ್ನು ಗಮನಿಸಬೇಕಾಗುತ್ತದೆ.


    ದೈನಂದಿನ ಯುಪಿಐ ವರ್ಗಾವಣೆ ಮಿತಿಯನ್ನು 20 ವಹಿವಾಟುಗಳಿಗೆ ಹೊಂದಿಸಲಾಗಿದೆ. ಮಿತಿ ಮುಗಿದ ನಂತರ, ಮಿತಿಯನ್ನು ನವೀಕರಿಸಲು 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಆದಾಗ್ಯೂ, ವಿಭಿನ್ನ ಯುಪಿಐ ಅಪ್ಲಿಕೇಶನ್‌ಗಳು ವಿಭಿನ್ನ ಮಿತಿಗಳನ್ನು ಹೊಂದಿವೆ. ಯಾವ ಆ್ಯಪ್ ಮೂಲಕ ನೀವು ಪ್ರತಿದಿನ ಎಷ್ಟು ವಹಿವಾಟು ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.


    ಅಮೆಜಾನ್ ಪೇ




    ಅಮೆಜಾನ್ ಪೇ ಯುಪಿಐ ಮೂಲಕ ಪಾವತಿ ಮಾಡುವ ಗರಿಷ್ಠ ಮಿತಿಯನ್ನು ರೂ 1 ಲಕ್ಷಕ್ಕೆ ನಿಗದಿಪಡಿಸಿದೆ. ಅಮೆಜಾನ್ ಪೇ ಯುಪಿಐಯಲ್ಲಿ ನೋಂದಾಯಿಸಿದ ನಂತರ, ಬಳಕೆದಾರರು ಮೊದಲ 24 ಗಂಟೆಗಳಲ್ಲಿ ರೂ 5000 ದವರೆಗೆ ಮಾತ್ರ ವಹಿವಾಟು ನಡೆಸಬಹುದಾಗಿದೆ. ಮತ್ತೊಂದೆಡೆ, ಬ್ಯಾಂಕ್ ಅನ್ನು ಅವಲಂಬಿಸಿ, ದಿನಕ್ಕೆ ವಹಿವಾಟಿನ ಸಂಖ್ಯೆಯನ್ನು 20 ಕ್ಕೆ ನಿಗದಿಪಡಿಸಲಾಗಿದೆ.


    ಫೋನ್‌ ಪೇ




    ಫೋನ್ ಪೇ (Phone Pe) ಯುಪಿಐ ಮೂಲಕ ಒಂದು ದಿನದ ಗರಿಷ್ಠ ಮೊತ್ತದ ಮಿತಿ 1 ಲಕ್ಷ ರೂ. ಈಗ ಈ ಆ್ಯಪ್ ಮೂಲಕ ಒಂದು ದಿನದಲ್ಲಿ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾಡಬಹುದು. ಫೋನ್ ಪೇ ಯಾವುದೇ ಗಂಟೆಯ ವಹಿವಾಟಿನ ಮಿತಿಯನ್ನು ನಿಗದಿಪಡಿಸಿಲ್ಲ.


    ಗೂಗಲ್ ಪೇ




    ಗೂಗಲ್ ಪೇ (Google Pay) ಅಥವಾ ಜಿಪೇ ಯ ಮೂಲಕ, ಭಾರತೀಯ ಬಳಕೆದಾರರು ದಿನವಿಡೀ ಯುಪಿಐ ಮೂಲಕ ರೂ 1 ಲಕ್ಷದವರೆಗೆ ಪಾವತಿಗಳನ್ನು ಮಾಡಬಹುದು. ನೀವು ಒಂದು ದಿನದಲ್ಲಿ ಕೇವಲ 10 ವಹಿವಾಟುಗಳನ್ನು ಮಾಡಬಹುದು. ಅಂದರೆ, ನೀವು ಒಂದು ದಿನದಲ್ಲಿ ಗರಿಷ್ಠ 10-10 ಸಾವಿರದ 10 ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಆದಾಗ್ಯೂ, ಗೂಗಲ್ ಪೇ ಯಾವುದೇ ಗಂಟೆಯ ವಹಿವಾಟು ಮಿತಿಯನ್ನು ನಿಗದಿಪಡಿಸಿಲ್ಲ.


    ಪೇಟಿಎಮ್




    ಪೇಟಿಎಮ್ (Paytm) UPI ಮೂಲಕ, ನೀವು ಒಂದು ದಿನದಲ್ಲಿ ಕೇವಲ ರೂ 1 ಲಕ್ಷ ಹಾಗೂ ಇದೀಗ ನೀವು ಪೇಟಿಎಮ್ ಮೂಲಕ ಒಂದು ಗಂಟೆಯಲ್ಲಿ ಕೇವಲ ರೂ 20,000 ವಹಿವಾಟು ನಡೆಸಬಹುದಾಗಿದೆ. ಈ ಆ್ಯಪ್ ಮೂಲಕ ನೀವು ಒಂದು ಗಂಟೆಯಲ್ಲಿ 5 ವಹಿವಾಟುಗಳನ್ನು ಮಾಡಬಹುದು ಮತ್ತು ಒಂದು ದಿನದಲ್ಲಿ ಕೇವಲ 20 ವಹಿವಾಟುಗಳನ್ನು ಮಾಡಬಹುದು.

    Published by:Latha CG
    First published: