Alibaba Layoff: ಆರ್ಥಿಕ ಬಿಕ್ಕಟ್ಟಿನಲ್ಲಿ ಅಲಿಬಾಬಾ ಸಂಸ್ಥೆ, 10 ಸಾವಿರ ಉದ್ಯೋಗಿಗಳ ಕೈ ಬಿಟ್ಟ ಚೀನಾದ ಕಂಪನಿ

ವಿಶ್ವದಾದ್ಯಂತ ಉದ್ಯೋಗಿಗಳ ವಜಾಗೊಳಿಸುವಿಕೆ (Employees Layoff) ಮಹಾಪರ್ವ ಮುಂದುವರೆಯುತ್ತಿದೆ. ಮೊನ್ನೆ ತಾನೇ ಪ್ರತಿಷ್ಠಿತ ಒರಾಕಲ್ ಕಂಪನಿ ಭಾರತ ಸೇರಿದಂತೆ (Oracle Company) ಹಲವು ದೇಶಗಳ ಉದ್ಯೋಗಿಗಳನ್ನು ಸುಮಾರು $1 ಶತಕೋಟಿಯಷ್ಟು ವೆಚ್ಚವನ್ನು ಕಡಿತಗೊಳಿಸಲು ವಜಾ ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಮಹಾ ವಜಾ ಪರ್ವ ವರದಿಯಾಗಿದೆ. 

ಅಲಿಬಾಬಾ ಸಂಸ್ಥೆ

ಅಲಿಬಾಬಾ ಸಂಸ್ಥೆ

  • Share this:
ವಿಶ್ವದಾದ್ಯಂತ ಉದ್ಯೋಗಿಗಳ ವಜಾಗೊಳಿಸುವಿಕೆ (Employees Layoff) ಮಹಾಪರ್ವ ಮುಂದುವರೆಯುತ್ತಿದೆ. ಮೊನ್ನೆ ತಾನೇ ಪ್ರತಿಷ್ಠಿತ ಒರಾಕಲ್ ಕಂಪನಿ ಭಾರತ ಸೇರಿದಂತೆ (Oracle Company) ಹಲವು ದೇಶಗಳ ಉದ್ಯೋಗಿಗಳನ್ನು ಸುಮಾರು $1 ಶತಕೋಟಿಯಷ್ಟು ವೆಚ್ಚವನ್ನು ಕಡಿತಗೊಳಿಸಲು ವಜಾ ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಮಹಾ ವಜಾ ಪರ್ವ ವರದಿಯಾಗಿದೆ. ಚೀನಾದ (China) ಬಹುದೊಡ್ಡ ಮತ್ತು ಪ್ರತಿಷ್ಠಿತ ಅಲಿಬಾಬಾ (Alibaba) ಸಂಸ್ಥೆ ಕೂಡ ಈ ಪ್ರಕ್ರಿಯೆಗೆ ಹೊರತಾಗಿಲ್ಲ. ಆರ್ಥಿಕ ನಷ್ಟ (Financial loss) ಅನುಭವಿಸುತ್ತಿರುವ ಈ ಸಂಸ್ಥೆ ಸಾವಿರಾರು ಉದ್ಯೋಗಿಗಳನ್ನು ಕೈ ಬಿಟ್ಟಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ವರದಿ ಮಾಡಿದೆ.

10 ಸಾವಿರಾರು ಉದ್ಯೋಗಿಗಳನ್ನು ಕೈಬಿಟ್ಟ ಅಲಿಬಾಬಾ ಸಂಸ್ಥೆ
ದೇಶದಲ್ಲಿ ನಿಧಾನಗತಿಯ ಮಾರಾಟ ಮತ್ತು ನಿಧಾನಗತಿಯ ಆರ್ಥಿಕತೆಯ ನಡುವೆ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಚೀನಾದ ಟೆಕ್ ಸಮೂಹ ಸಂಸ್ಥೆ ಅಲಿಬಾಬಾ ಸುಮಾರು 10,000 ಉದ್ಯೋಗಿಗಳಿಗೆ ವಿದಾಯ ಹೇಳಿದೆ ಎಂದು ವರದಿ ಹೇಳಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಜೂನ್ ತ್ರೈಮಾಸಿಕದಲ್ಲಿ 9,241 ಕ್ಕೂ ಹೆಚ್ಚು ಉದ್ಯೋಗಿಗಳು ಹ್ಯಾಂಗ್‌ಝೌ ಮೂಲದ ಅಲಿಬಾಬಾ ಸಂಸ್ಥೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಂಪನಿಯು ತನ್ನ ಕಾರ್ಯಪಡೆಯನ್ನು 245,700 ಉದ್ಯೋಗಿಗಳಿಗೆ ಮಿತಿಗೊಳಿಸಿದೆ ಎಂದು ಸಂಸ್ಥೆ ತಿಳಿಸಿದೆ.

ಆರ್ಥಿಕ ಬಿಕ್ಕಟ್ಟಿನಲ್ಲಿ ಇ-ಕಾಮರ್ಸ್ ದಿಗ್ಗಜ
“ಅಲಿಬಾಬಾ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಯಲ್ಲಿನ ಒಟ್ಟು ಇಳಿಕೆಯನ್ನು ಜೂನ್‌ನಿಂದ ಆರು ತಿಂಗಳ ಅವಧಿಯಲ್ಲಿ 13,616 ರಷ್ಟಾಗಿದೆ, ಇದು ಮಾರ್ಚ್ 2016ರಿಂದ ವೇತನದಾರರ ಗಾತ್ರದಲ್ಲಿ ಸಂಸ್ಥೆಯ ಮೊದಲ ಕುಸಿತವನ್ನು ಗುರುತಿಸುತ್ತದೆ" ಎಂದು ವರದಿಯು ತಿಳಿಸಿದೆ. ಮಾರ್ಚ್ 2016ಕ್ಕೆ ಹೋಲಿಸಿದರೆ ಕಳೆದ ಆರು ತಿಂಗಳಿಂದ ವಜಾಗೊಂಡವರ ಸಂಖ್ಯೆ ಹೆಚ್ಚಾಗಿದೆ ಮತ್ತು ಜೂನ್ ತ್ರೈಮಾಸಿಕದಲ್ಲಿ ಅಲಿಬಾಬಾ ನಿವ್ವಳ ಆದಾಯದಲ್ಲಿ 22.74 ಶತಕೋಟಿ ಯುವಾನ್ ಗೆ 50% ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 45.14 ಶತಕೋಟಿ ಯುವಾನ್‌ನಷ್ಟು ಆದಾಯವಿತ್ತು ಎಂದು ವರದಿಯಾಗಿದೆ.

ಹೊಸ ಉದ್ಯೋಗಿಗಳ ನೇಮಕಾತಿಗೆ ಚಿಂತನೆ
ಅಲಿಬಾಬಾ ಅಧ್ಯಕ್ಷ ಮತ್ತು ಸಿಇಒ ಡೇನಿಯಲ್ ಜಾಂಗ್ ಯೋಂಗ್ ಮಾತನಾಡಿ, ಕಂಪನಿಯು ಈ ವರ್ಷ ಸುಮಾರು 6,000 ಹೊಸ ವಿಶ್ವವಿದ್ಯಾಲಯ ಪದವೀಧರರನ್ನು ತನ್ನ ಸಂಸ್ಥೆಗೆ ಸೇರಿಸಿಕೊಳ್ಳುವ ಮೂಲಕ ಹೊಸ ಪ್ರತಿಭೆಗಳನ್ನು ಹೊಂದಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Googleನಲ್ಲೂ ಜನ ಕೆಲಸ ಕಳೆದುಕೊಳ್ಳೋ ದಿನ ಬೇಗ ಬರುತ್ತಂತೆ, Sundar Pichai ಹೀಗಂದ್ರು!

ಅಲಿಬಾಬಾ ಸಂಸ್ಥೆಗೆ ಗುಡ್ ಬೈ ಹೇಳ್ತಾರಾ ಜಾಕ್ ಮಾ?
ಆರ್ಥಿಕ ಸಂಕಷ್ಟದಲ್ಲಿರುವ ಈ ಸಂಸ್ಥೆ ಕಳೆದ ತಿಂಗಳು, ಅಲಿಬಾಬಾ ಮುಖ್ಯಸ್ಥ ಬಿಲಿಯನೇರ್ ಜಾಕ್ ಮಾ ಅವರು ಸರ್ಕಾರಿ ನಿಯಂತ್ರಕರ ಒತ್ತಡದ ನಡುವೆ ಗುಂಪಿನ ಮೇಲಿನ ತನ್ನ ನಿಯಂತ್ರಣವನ್ನು ಬಿಟ್ಟುಕೊಡಲು ಯೋಜಿಸುತ್ತಿದ್ದಾರೆ ಎಂದು ವರದಿಗಳು ಕೇಳಿಬಂದಿದ್ದವು. ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಸರ್ಕಾರದಿಂದ ಅಪಾರ ಪರಿಶೀಲನೆಗೆ ಒಳಪಟ್ಟಿರುವ ಅಲಿಬಾಬಾ ಗ್ರೂಪ್ ಹೋಲ್ಡಿಂಗ್‌ನಿಂದ ದೂರ ಸರಿಯಲು ಫಿನ್‌ಟೆಕ್ ದೈತ್ಯನ ಪ್ರಯತ್ನದ ಭಾಗವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದೆ.

ಚೀನಾದ ಸರಕಾರದ ಕೆಲವು ಆರ್ಥಿಕ ನೀತಿಗಳೇ ಸಂಸ್ಥೆಯ ಹೊಡೆತಕ್ಕೆ ಕಾರಣ  
ಚೀನಾದ ಸರಕಾರದ ಕೆಲವು ಆರ್ಥಿಕ ನೀತಿಗಳು ಸಹ ಸಂಸ್ಥೆಗೆ ಹೊಡೆತ ನೀಡುತ್ತಿದ್ದು, ಮಾ ಈ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ. ಇದರಿಂದಾಗಿ ಚೀನಾ ಸರಕಾರ ಅವರ ವಿರುದ್ಧ ತಿರುಗಿ ಬಿದ್ದು, ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಮೇಲೆ ಅವಿಶ್ವಾಸ ತನಿಖೆ ಚಾಲೂ ಮಾಡಿತ್ತು. 37 ಶತಕೋಟಿ ಡಾಲರ್ ಮೌಲ್ಯದ ಐಪಿಒ ಘೋಷಿಸಿದ್ದ ಅಲಿಬಾಬಾ ಸಮೂಹದ ಆ್ಯಂಟ್ ಕಂಪನಿಯನ್ನು ಸ್ಥಗಿತಗೊಳಿಸಿತ್ತು. ಇದರಿಂದ ದಿಢೀರನೆ ಜಾಕ್ ಮಾ ಆಸ್ತಿಯಲ್ಲಿ10 ಶತಕೋಟಿ ಡಾಲರ್ ನಷ್ಟವುಂಟಾಗಿತ್ತು. ಹೀಗೆ ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಸಂಸ್ಥೆ ಸದ್ಯ ಉದ್ಯೋಗಿಗೆ ವಜಾಗೊಳಿಸುವಿಕೆಗೆ ಮುಂದಾಗಿದೆ.

ಇದನ್ನೂ ಓದಿ: Walmart lays off: ಹಣದುಬ್ಬರದ ಎಫೆಕ್ಟ್: 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ವಾಲ್​​ಮಾರ್ಟ್​​

ವರದಿಯ ಪ್ರಕಾರ, ಮುಖ್ಯ ಕಾರ್ಯನಿರ್ವಾಹಕ ಎರಿಕ್ ಜಿಂಗ್ ಸೇರಿದಂತೆ ಇತರ ಅಧಿಕಾರಿಗಳಿಗೆ ತನ್ನ ಸಂಸ್ಥೆಯ ಹಕ್ಕನ್ನು ವರ್ಗಾಯಿಸುವ ಮೂಲಕ ಜಾಕ್ ಮಾ ತನ್ನ ನಿಯಂತ್ರಣವನ್ನು ತ್ಯಜಿಸಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. 1999 ರಲ್ಲಿ ಸ್ಥಾಪನೆಯಾದ ಅಲಿಬಾಬಾ 2015 ರಲ್ಲಿ ಡೇನಿಯಲ್ ಜಾಂಗ್‌ಗೆ ಸಿಇಒ ಸ್ಥಾನ ನೀಡಿ 2019 ರಲ್ಲಿ ಅವರನ್ನು ಅಧ್ಯಕ್ಷರಾಗಿ ನೇಮಿಸಿದರು.
Published by:Ashwini Prabhu
First published: