• Home
  • »
  • News
  • »
  • business
  • »
  • NPS ಚಂದಾದಾರರೇ ಗಮನಿಸಿ, ಸರ್ಕಾರಿ ನೌಕರನ ಮರಣದ ಗ್ರಾಚ್ಯುಟಿಯಲ್ಲಿ ಬದಲಾವಣೆ!

NPS ಚಂದಾದಾರರೇ ಗಮನಿಸಿ, ಸರ್ಕಾರಿ ನೌಕರನ ಮರಣದ ಗ್ರಾಚ್ಯುಟಿಯಲ್ಲಿ ಬದಲಾವಣೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಎನ್‌ಪಿಎಸ್‌ ಯೋಜನೆಯು ಒಂದು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಚಂದಾದಾರರಿಗೆ ನಿವೃತ್ತಿಯ ನಂತರದ ಯೋಜಿತ ಉಳಿತಾಯಕ್ಕೆ ನಿರ್ದಿಷ್ಟ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.

  • Share this:

ಭಾರತ ಸರ್ಕಾರವು (Indian Government) ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ. ಅದರಲ್ಲಿ ಮುಖ್ಯವಾಗಿ ಹಣ ಉಳಿತಾಯ (Money Savings) ದಂತಹ ಯೋಜನೆಗಳು ಹೆಚ್ಚೆಚ್ಚು ಜಾರಿಯಾಗುತ್ತಿವೆ. ಹೆಣ್ಣು ಮಕ್ಕಳಿ (Girl Child) ಗೆ ಸುಕನ್ಯ ಸಮೃದ್ಧಿ ಯೋಜನೆ (Sukanya Samruddhi Scheme) , ವಯಸ್ಸಾದವರಿಗೆ ವೃದ್ಯಾಪನ ಯೋಜನೆ, ಕೆಲಸದಿಂದ ನಿವೃತ್ತಿ ಪಡೆದವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಹೀಗೆ ಮುಂತಾದವುಗಳು ಇವೆ. ಅವುಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಇಂದು ನಾವಿಲ್ಲಿ ಚರ್ಚಿಸೋಣ ಬನ್ನಿ.


ರಾಷ್ಟ್ರೀಯ ಪಿಂಚಣಿ ಯೋಜನೆ (NPS):


NPS ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಯು ಭಾರತ ಸರ್ಕಾರದ ನಿವೃತ್ತಿ ಪ್ರಯೋಜನಗಳ ಯೋಜನೆಯಾಗಿದ್ದು ಅದು ಅವರ ನಿವೃತ್ತಿಯ ನಂತರ ಅದರ ಎಲ್ಲಾ ಚಂದಾದಾರರಿಗೆ ನಿಯಮಿತ ಆದಾಯವನ್ನು ಒದಗಿಸುತ್ತದೆ. NPS ಅನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.


ನಾವಿಂದು ರಾಷ್ಟ್ರೀಯ ಪಿಂಚಣಿ ಯೋಜನೆಯ (NPS) ಪ್ರಮುಖ ಭಾಗವಾಗಿ ಕೇಂದ್ರ ಸರ್ಕಾರಿ ನೌಕರರು ಭಾಗವಹಿಸುತ್ತಾರೆ. ಈ ಎನ್‌ಪಿಎಸ್‌ ಯೋಜನೆಯು ಒಂದು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಚಂದಾದಾರರಿಗೆ ನಿವೃತ್ತಿಯ ನಂತರದ ಯೋಜಿತ ಉಳಿತಾಯಕ್ಕೆ ನಿರ್ದಿಷ್ಟ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.


ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರಯೋಜನಗಳೇನು?


ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನೋಡಲ್ ಏಜೆನ್ಸಿ ಸಂಸ್ಥೆಯು NPS ನ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಕಾರ್ಯವನ್ನು ನಿಯಂತ್ರಿಸುತ್ತದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಸರ್ಕಾರಿ ನೌಕರನ ಮರಣದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಅಥವಾ ನಾಮಿನಿಗಳಿಗೆ ಎನ್‌ಪಿಎಸ್ ಪಾವತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡಿದೆ.


ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಗುಡ್​ ನ್ಯೂಸ್​, ಇನ್ಮುಂದೆ ತೆರಿಗೆ ಪಾವತಿಸುವರರಿಗೆ ಫುಲ್​ ರಿಲ್ಯಾಕ್ಸ್​!


ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು, ಸರ್ಕಾರಿ ನೌಕರನ ಮರಣದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಅಥವಾ ನಾಮಿನಿಗಳಿಗೆ ಎನ್‌ಪಿಎಸ್ ಪಾವತಿಗೆ ಸಂಬಂಧಿಸಿದಂತೆ, ಅಕ್ಟೋಬರ್ 28 ರ ಕಚೇರಿಯ ಜ್ಞಾಪಕ ಪತ್ರದಲ್ಲಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಕೇಂದ್ರ ನಾಗರಿಕ ಸೇವೆಗಳ (NPS ಅನುಷ್ಠಾನ) ನಿಯಮಗಳು, 2021 ರ ನಿಯಮ 20 ರ ನಿಬಂಧನೆಗಳನ್ನು ಹೈಲೈಟ್ ಮಾಡಿದೆ.


NPS ಬಗ್ಗೆ ಜ್ಞಾಪಕ ಪತ್ರದಲ್ಲಿರುವ ಉಲ್ಲೇಖವೇನು?


"ಎನ್‌ಪಿಎಸ್‌ ಚಂದಾದಾರರ ಮರಣದ ನಂತರ, ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ ಅಡಿಯಲ್ಲಿ ಕುಟುಂಬಕ್ಕೆ ಪಿಂಚಣಿ ಪ್ರಯೋಜನಗಳನ್ನು ಪಾವತಿಸಿದರೆ, ಚಂದಾದಾರರ ಸಂಚಿತ ಪಿಂಚಣಿ ಕಾರ್ಪಸ್‌ನಲ್ಲಿ ಸರ್ಕಾರದ ಕೊಡುಗೆ ಮತ್ತು ಅದರ ಮೇಲಿನ ಬಡ್ಡಿಯನ್ನು ಸಹ ಸರ್ಕಾರಿ ಖಾತೆಗೆ ವರ್ಗಾಯಿಸಲಾಗುವುದು.


ಉಳಿದ ಸಂಚಿತ ಪಿಂಚಣಿ ಕಾರ್ಪಸ್ ಅನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ನಿರ್ಗಮನ ಮತ್ತು ಹಿಂತೆಗೆದುಕೊಳ್ಳುವಿಕೆ) ಕಾಯಿದೆ- 2015 ರ ನಿಯಮಗಳ ಅಡಿಯಲ್ಲಿ ಯಾರ ಪರವಾಗಿ ನಾಮನಿರ್ದೇಶನ ಮಾಡಲಾಗಿದೆಯೋ ಆ ವ್ಯಕ್ತಿಗಳಿಗೆ ಪಿಂಚಣಿ ಹಣವನ್ನು ಪಾವತಿಸಲಾಗುತ್ತದೆ” ಎಂದು ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಪಿಂಚಣಿ ಇಲಾಖೆ ತಿಳಿಸಿರುವ ಮಾಹಿತಿಯಿದು!


“ಎನ್‌ಪಿಎಸ್‌ ಚಂದಾದಾರರ ಮರಣದ ನಂತರ ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಅಥವಾ ಮಾಡಿದ ನಾಮನಿರ್ದೇಶನವು ಅಸ್ತಿತ್ವದಲ್ಲಿಲ್ಲದಿದ್ದರೆ, ಚಂದಾದಾರರ ಕಾನೂನುಬದ್ಧ ಉತ್ತರಾಧಿಕಾರಿಗೆ ಮೊತ್ತವನ್ನು ಪಾವತಿಸಲಾಗುವುದು ಎಂದು ಮಾಹಿತಿ ಇದೆ.


ಇದನ್ನೂ ಓದಿ: ರೇಂಜ್​ ರೋವರ್​​ ಲುಕ್​ನಲ್ಲೇ ಬರ್ತಿದೆ ಹೊಸ ಎಲೆಕ್ಟ್ರಿಕ್​ ಕಾರು, ಅಬ್ಬಾ ಏನಿದೆ ಅಂತೀರಾ!


ಎನ್‌ಪಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಆಯ್ಕೆಯನ್ನು ಚಲಾಯಿಸಿದ ಚಂದಾದಾರರ ಮರಣದ ಸಂದರ್ಭದಲ್ಲಿ, ಅಂತಹ ಪ್ರಯೋಜನಗಳನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕಾಯಿದೆ- 2015 ರ ಪ್ರಕಾರ ನೀಡಲಾಗುತ್ತದೆ” ಎಂದು ಇಲಾಖೆ ತಿಳಿಸಿದೆ.


"ಸೇವಾ ಅವಧಿಯಲ್ಲಿ ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ಮರಣ ಹೊಂದಿದಲ್ಲಿ ಮತ್ತು ಎನ್‌ಪಿಎಸ್ ಅಡಿಯಲ್ಲಿ ಸಂಚಿತ ಪಿಂಚಣಿ ಕಾರ್ಪಸ್‌ನಿಂದ ಪ್ರಯೋಜನಗಳನ್ನು ಪಡೆದರೆ, ಅಂತಹ ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬದ ಸದಸ್ಯರು ಸಹ ಮರಣ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಇಲಾಖೆಯು ಅದರ ದರಗಳನ್ನು ವಿವರಿಸುತ್ತದೆ” ಎಂದು ಇಲಾಖೆಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Published by:ವಾಸುದೇವ್ ಎಂ
First published: