• Home
  • »
  • News
  • »
  • business
  • »
  • Akash Ambani: Time100 Next ನಲ್ಲಿ ಜೂನಿಯರ್ ಅಂಬಾನಿ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ!

Akash Ambani: Time100 Next ನಲ್ಲಿ ಜೂನಿಯರ್ ಅಂಬಾನಿ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ!

ಆಕಾಶ್​ ಅಂಬಾನಿ

ಆಕಾಶ್​ ಅಂಬಾನಿ

ಆಕಾಶ್ ಅಂಬಾನಿ ಈ ವರ್ಷದ ಟೈಮ್ 100 ನೆಕ್ಸ್ಟ್ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ಭಾರತೀಯರಾಗಿದ್ದಾರೆ. ದೇಶದ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಹೊಸ ತಲೆಮಾರಿನ ನಾಯಕ ಆಕಾಶ್ ಅಂಬಾನಿ ಬಗ್ಗೆ ಟೈಮ್ ನಿಯತಕಾಲಿಕೆಯಲ್ಲಿ, ಕೇವಲ 22 ನೇ ವಯಸ್ಸಿನಲ್ಲಿ ಅವರು ಜಿಯೋ ಮಂಡಳಿಯಲ್ಲಿ ಸ್ಥಾನ ಪಡೆದರು, ಇದು ಗಮನಾರ್ಹ ಸಾಧನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ(ಸೆ.29): ಟೈಮ್ ಮ್ಯಾಗಜೀನ್ (ಪ್ರಸಿದ್ಧ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿಯವರ Mukesh Ambani) ಹಿರಿಯ ಮಗ ಮತ್ತು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ (Reliance Jio Chairman Akassh Ambani) ಅವರನ್ನು ಟೈಮ್ 100 ನೆಕ್ಟ್ಸ್ ಲಿಸ್ಟ್​ 2022 ರಲ್ಲಿ ಇರಿಸಿದೆ. ಅವರನ್ನು ಲೀಡರ್ಸ್​ ವಿಭಾಗದಲ್ಲಿ (TIME100 Next highlights 100 emerging leaders) ಆಯ್ಕೆ ಮಾಡಲಾಗಿದೆ. ಟೈಮ್ ನಿಯತಕಾಲಿಕೆಯು (Time Magazine) ಆಕಾಶ್ ಅಂಬಾನಿ ವ್ಯಾಪಾರವನ್ನು ಹೆಚ್ಚಿಸಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ ಎಂದು ಹೇಳಿದೆ. ಗೂಗಲ್ ಮತ್ತು ಫೇಸ್‌ಬುಕ್‌ನೊಂದಿಗೆ ಶತಕೋಟಿ ಡಾಲರ್ ಹೂಡಿಕೆ ಒಪ್ಪಂದಗಳನ್ನು ಪೂರ್ಣಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.


Time100 Next ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ಭಾರತೀಯ


ಆಕಾಶ್ ಅಂಬಾನಿ ಈ ವರ್ಷ ಟೈಮ್ 100 ನೆಕ್ಸ್ಟ್ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ಭಾರತೀಯ ಆಗಿದ್ದಾರೆ. ದೇಶದ ಅತಿ ದೊಡ್ಡ ಕಾರ್ಪೊರೇಟ್ ಸಂಸ್ಥೆಯ ಹೊಸ ತಲೆಮಾರಿನ ನಾಯಕ ಆಕಾಶ್ ಅಂಬಾನಿ ಬಗ್ಗೆ ಟೈಮ್ ನಿಯತಕಾಲಿಕೆಯಲ್ಲಿ, ಕೇವಲ 22 ನೇ ವಯಸ್ಸಿನಲ್ಲಿ ಅವರು ಜಿಯೋ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು, ಇದು ಗಮನಾರ್ಹ ಸಾಧನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ವರ್ಷದ ಜೂನ್‌ನಲ್ಲಿ30 ವರ್ಷದ ಆಕಾಶ್ ಅಂಬಾನಿಗೆ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು ಎಂಬುವುದು ಗಮನಾರ್ಹ ವಿಚಾರ. 42 ಕೋಟಿ 60 ಲಕ್ಷ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋವನ್ನು ನಿಭಾಯಿಸುವ ಜವಾಬ್ದಾರಿ ಈಗ ನೂತನ ಅಧ್ಯಕ್ಷ ಆಕಾಶ್ ಅಂಬಾನಿ ಅವರ ಹೆಗಲ ಮೇಲಿದೆ.


ಇದನ್ನೂ ಓದಿ: Akash Ambani: ರಿಲಯನ್ಸ್ ಜಿಯೋಗೆ ನೂತನ ಸಾರಥಿ, ಮುಖೇಶ್ ಅಂಬಾನಿ ಪುತ್ರ ಆಕಾಶ್‌ ನೂತನ ಚೇರ್ಮನ್


ಆಕಾಶ್ ಜಿಯೋದ 5G ರೋಲ್‌ಔಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ


ರಿಲಯನ್ಸ್ ಜಿಯೋದ 5G ರೋಲ್‌ಔಟ್ ಕೂಡ ಆಕಾಶ್ ಅಂಬಾನಿಯವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಕಂಪನಿಯು ದೆಹಲಿ, ಮುಂಬೈ ಸೇರಿದಂತೆ ಇತರ ಕೆಲವು ಮೆಟ್ರೋ ನಗರಗಳಲ್ಲಿ ದೀಪಾವಳಿಯವರೆಗೆ 5G ಅನ್ನು ಪ್ರಾರಂಭಿಸಲು ಯೋಜಿಸಿದೆ. ಇತ್ತೀಚಿನ ಹರಾಜಿನಲ್ಲಿ ರಿಲಯನ್ಸ್ ಜಿಯೋ ಮಾತ್ರ 700 MHz ಸ್ಪೆಕ್ಟ್ರಮ್ ಬ್ಯಾಂಡ್ ಅನ್ನು ಖರೀದಿಸಿದೆ. ಅದ್ವಿತೀಯ 5G ನೆಟ್‌ವರ್ಕ್ ಅಂದರೆ ಟ್ರೂ 5G ಈ ಸ್ಪೆಕ್ಟ್ರಮ್ ಬ್ಯಾಂಡ್‌ನಲ್ಲಿ ರನ್ ಆಗಬಹುದು. 700 MHz ಬ್ಯಾಂಡ್ ಅನ್ನು US ಮತ್ತು ಯುರೋಪ್‌ನಲ್ಲಿ 5G ಗಾಗಿ ಪ್ರೀಮಿಯಂ ಬ್ಯಾಂಡ್ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ, 5G ವಿಷಯದಲ್ಲಿ, ಜಿಯೋ ಈಗಾಗಲೇ ಇತರ ಕಂಪನಿಗಳಿಗಿಂತ ಮುನ್ನಡೆ ಸಾಧಿಸಿದೆ.


mukesh ambani s son akash ambani has been appointed as the new chairman of jio
ಮುಖೇಶ್ ಅಂಬಾನಿ ಜೊತೆ ಪುತ್ರ ಆಕಾಶ್ ಅಂಬಾನಿ


ರಿಲಯನ್ಸ್ ಜಿಯೋವನ್ನು ಪ್ರಾರಂಭಿಸುವಲ್ಲಿ ಆಕಾಶ್ ಮತ್ತು ಇಶಾ ಅಂಬಾನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಕಂಪನಿಯು 426 ಮಿಲಿಯನ್ ಗ್ರಾಹಕರನ್ನು ಹೊಂದಿದೆ.


Time100 Next ಪಟ್ಟಿಯಲ್ಲಿ ಹೀಗೆ ಸಿಗುತ್ತೆ ಸ್ಥಾನ


ಟೈಮ್ ಮ್ಯಾಗಜೀನ್ ಪ್ರತಿ ವರ್ಷ TIME100 ನೆಕ್ಸ್ಟ್​ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ಪಟ್ಟಿಯಲ್ಲಿ, ಉದ್ಯಮ ಸೇರಿದಂತೆ ದೇಶ ಮತ್ತು ಪ್ರಪಂಚದ ವಿವಿಧ ಪ್ರದೇಶಗಳ 100 ಉದಯೋನ್ಮುಖ ತಾರೆಗಳಿಗೆ ಸ್ಥಾನ ನೀಡಲಾಗುತ್ತದೆ. ಸಂಗೀತಗಾರರು, ವೃತ್ತಿಪರ ವೈದ್ಯರು, ಸರ್ಕಾರಿ ಅಧಿಕಾರಿಗಳು, ಆಂದೋಲನಕಾರರು, ಉನ್ನತ ಮಟ್ಟದ ವಿಸ್ಲ್-ಬ್ಲೋವರ್‌ಗಳು ಮತ್ತು ಉನ್ನತ CEO ಗಳನ್ನು 2022 ರ TIME100 ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಸೆಲೆಬ್ರಿಟಿಗಳು ಜಗತ್ತನ್ನು ಮರುರೂಪಿಸಿದ್ದು ಮಾತ್ರವಲ್ಲದೆ ಭವಿಷ್ಯವನ್ನು ಮರು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದಾರೆ ಎಂದು ಟೈಮ್ ಮ್ಯಾಗಜೀನ್ ಹೇಳುತ್ತದೆ.


ಇದನ್ನೂ ಓದಿ: Reliance Jio: ಜಿಯೋ ಬೆಳವಣಿಗೆಗೆ ಆಕಾಶ್ ಅಂಬಾನಿ ಕೊಡುಗೆ; ಜಾಗತಿಕವಾಗಿ ಇನ್ನಷ್ಟು ಬೆಳವಣಿಗೆ


2022ರ ಪಟ್ಟಿಯಲ್ಲಿ ಈ ಸೆಲೆಬ್ರಿಟಿಗಳು ಸ್ಥಾನ ಪಡೆದಿದ್ದಾರೆ


ಈ ಬಾರಿ ಅಮೆರಿಕದ ಗಾಯಕ SZA, ನಟಿ ಸಿಡ್ನಿ ಸ್ವೀನಿ, ಬಾಸ್ಕೆಟ್‌ಬಾಲ್ ಆಟಗಾರ್ತಿ ಜಾ ಮೊರಾಂಟ್, ಸ್ಪ್ಯಾನಿಷ್ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್, ನಟ ಮತ್ತು ಕಿರುತೆರೆ ವ್ಯಕ್ತಿತ್ವದ ಕೇಕೆ ಪಾಲ್ಮರ್ ಮತ್ತು ಪರಿಸರ ಹೋರಾಟಗಾರ್ತಿ ಫರ್ವಿಜಾ ಫರ್ಹಾನ್ ಅವರು ಟೈಮ್ 100 ನೆಕ್ಸ್ಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಓನ್ಲಿ ಫ್ಯಾನ್ಸ್‌ನ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಮ್ರಪಾಲಿ ಗನ್‌ಗೂ ಸ್ಥಾನ ನೀಡಲಾಗಿದೆ.

Published by:Precilla Olivia Dias
First published: