Air India: ನಾಳೆ ಟಾಟಾ ಸಂಸ್ಥೆ ಸೇರಲಿದೆ ಏರ್ ಇಂಡಿಯಾ, 69 ವರ್ಷಗಳ ಬಳಿಕ ಮಾತೃಸಂಸ್ಥೆ ಅಂಗಳದಲ್ಲಿ ಲ್ಯಾಂಡ್
ಇದರ ಹೆಸರು 1953ರಲ್ಲಿ ಏರ್ ಇಂಡಿಯಾ ಎ೦ದು ಬದಲಾಯಿತು. ಆ ಹೊತ್ತಿಗೆ ಏರ್ ಇಂಡಿಯಾವು ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಿತು. ಇದೀಗ ಬರೋಬ್ಬರಿ 69 ವರ್ಷಗಳ ಬಳಿಕ ಏರ್ ಇಂಡಿಯಾ ಟಾಟಾ ಸಂಸ್ಥೆಯ ತೆಕ್ಕೆಗೆ ಸೇರುತ್ತಿದೆ.
ಟಾಟಾ (Tata) ಸಂಸ್ಥೆಯ ಪಾಲಿಗೆ ನಿಜಕ್ಕೂ ಇದೊಂದು ಅಪರೂಪದ ಕ್ಷಣ. ಮನೆಯಲ್ಲೇ ಹುಟ್ಟಿ ಬೆಳೆದ ಮಗು, ಅದೆಲ್ಲೋ ಕಳೆದು ಹೋಗಿ, ಸಂಕಷ್ಟಕ್ಕೆ ಒಳಗಾಗಿ, ಮತ್ತೆ ಪುನಃ ಮನೆ ಸೇರುವಂತಹ ಅಪರೂಪದ ಪ್ರಸಂಗ. ಮಗುವಿಗೆ ಜನ್ಮನೀಡಿದ ತಾಯಿ ಮರಳಿ ಬಂದ ಮಗುವನ್ನು ಬಿಗಿದಪ್ಪುವ ಅಪರೂಪದ ಕ್ಷಣ. ಟಾಟಾ ಸಂಸ್ಥೆ ಪಾಲಿಗೆ ನಾಳಿನ ದಿನ ಮಹತ್ವದ್ದಾಗಲಿದೆ. ಯಾಕೆಂದರೆ ಟಾಟಾ ಒಡೆತನದಿಂದ ಬೇರೆಡೆ ಹಾರಿ, ಬಳಲಿ ಬೆಂಡಾದ ಏರ್ ಇಂಡಿಯಾ (Air India) ವಿಮಾನ, ನಾಳೆ ಮತ್ತೆ ಟಾಟಾ ಅಂಗಳದಲ್ಲಿ ಲ್ಯಾಂಡ್ (Land) ಆಗಲಿದೆ. ಈ ಹಿಂದೆ ಬಿಡ್ನಲ್ಲಿ (Bid) ಏರ್ ಇಂಡಿಯಾ ವಿಮಾನವನ್ನು ಟಾಟಾ ಸಂಸ್ಥೆ ಖರೀದಿಸಿತ್ತು. ಇದೀಗ ನಾಳೆ ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ಸಮೂಹ ಸಂಸ್ಥೆಗಳ (Tata Groups) ಮಾಲೀಕತ್ವಕ್ಕೆ ಒಳಗಾಗಲಿದೆ.
ನಾಳೆ ಟಾಟಾ ಗ್ರೂಪ್ಸ್ಗೆ ಸೇರಲಿದೆ ಏರ್ ಇಂಡಿಯಾ
ಜನವರಿ 27ರಂದು ಏರ್ ಇಂಡಿಯಾ ಮಾಲೀಕತ್ವವು ಟಾಟಾ ಸಂಸ್ಥೆಯ ಕೈ ಸೇರಲಿದೆ ಅಂತ ಮೂಲಗಳು ತಿಳಿಸಿವೆ. ಟಾಟಾ ಸಮೂಹಗಳ ಅಂಗ ಸಂಸ್ಥೆಯಾದ ಟೆಲೆಸ್ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಏರ್ ಇಂಡಿಯಾ ಮಾಲೀಕತ್ವವನ್ನು ಖರೀದಿಸಿದೆ. ಹೀಗಾಗಿ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಮುಗಿಯುತ್ತಿದ್ದು, ನಾಳೆ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾದರೆ ನಾಳೆ ಏರ್ ಇಂಡಿಯಾ ಟಾಟಾ ಗ್ರೂಪ್ ತೆಕ್ಕೆಗೆ ಸೇರಲಿದೆ.
1800 ಕೋಟಿ ರೂಪಾಯಿಗಳಿಗೆ ಏರ್ ಇಂಡಿಯಾ ಖರೀದಿ
ಭಾರೀ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಮಾರಾಟಕ್ಕೆ ಕೇಂದ್ರ ಸರ್ಕಾರ ಹರಾಜು ಕರೆದಿತ್ತು. ಈ ಬಿಡ್ನಲ್ಲಿ ಭಾಗಿಯಾಗಿದ್ದ ಟಾಟಾ ಗ್ರೂಪ್ನ ಅಂಗಸಂಸ್ಥೆ ಟೆಲೆಸ್ ಪ್ರೈವೇಟ್ ಲಿಮಿಟೆಟ್ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿಗಳಿಗೆ ಏರ್ ಇಂಡಿಯಾವನ್ನು ಖರೀದಿಸಿತ್ತು. ಕಳೆದ ಅಕ್ಟೋಬರ್ನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.
ಬಳಿಕ ಅಕ್ಟೋಬರ್ 11ರಂದು ವಿಮಾನಯಾನ ಕಂಪನಿಯನ್ನು ₹ 18 ಸಾವಿರ ಕೋಟಿಗೆ ಮಾರಾಟ ಮಾಡುವ ಆಸಕ್ತಿ ಇದೆ ಎಂಬ ಪತ್ರವನ್ನು ಕೇಂದ್ರ ಸರ್ಕಾರವು ಟಾಟಾ ಸಮೂಹಕ್ಕೆ ನೀಡಿತು. ಅಕ್ಟೋಬರ್ 25ರಂದು ಕೇಂದ್ರ ಸರ್ಕಾರ ಮತ್ತು ಟಾಟಾ ಸನ್ಸ್ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು.
69 ವರ್ಷಗಳ ಬಳಿಕ ಟಾಟಾ ಅಂಗಳಕ್ಕೆ ಬರಲಿವೆ ವಿಮಾನಗಳು
ಏರ್ ಇಂಡಿಯಾ ಜನ್ಮ ತಳೆದಿದ್ದೇ ಟಾಟಾ ಸಂಸ್ಥೆಯಲ್ಲಿ 15 ಅಕ್ಟೋಬರ್ 1932 ಜನ್ಮ ತಳೆದಿತ್ತು. ಟಾಟಾ ಏರ್ಲೈನ್ಸ್ ಅಂತ ನಾಮಕರಣಗೊಂಡಿದ್ದನ್ನು ನಂತರ ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು.ಬಳಿಕ ಇದರ ಹೆಸರು 1953ರಲ್ಲಿ ಏರ್ ಇಂಡಿಯಾ ಎ೦ದು ಬದಲಾಯಿತು . ಆ ಹೊತ್ತಿಗೆ ಏರ್ ಇಂಡಿಯಾವು ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಿತು. ಇದೀಗ ಬರೋಬ್ಬರಿ 69 ವರ್ಷಗಳ ಬಳಿಕ ಏರ್ ಇಂಡಿಯಾ ಟಾಟಾ ಸಂಸ್ಥೆಯ ತೆಕ್ಕೆಗೆ ಸೇರುತ್ತಿದೆ.
ಏರ್ ಇಂಡಿಯಾದ ಹೂಡಿಕೆಯನ್ನು ನಾಡಿದ್ದು, ಅಂದರೆ ಜನವರಿ 27ರಿಂದ ಪ್ರಾರಂಭ ಮಾಡಲು ಮಾಡಲು ನಿರ್ಧರಿಸಲಾಗಿದೆ. ಜನವರಿ 20 ರಂದು ಮುಕ್ತಾಯವಾದ ಬ್ಯಾಲೆನ್ಸ್ ಶೀಟ್ ಅನ್ನು ಜನವರಿ 24 ರಂದು ಒದಗಿಸ ಬೇಕಾಗಿತ್ತು. ಆದ್ದರಿಂದ ಅದನ್ನು ಟಾಟಾಗಳು ಆಡಳಿತ ಮಂಡಳಿ ಪರಿಶೀಲಿಸಬಹುದು ಮತ್ತು ಯಾವುದೇ ಬದಲಾವಣೆಗಳನ್ನು ಇಂದಿನಿಂದಲೇ ಜಾರಿಗೆ ತರಬಹುದು ಎಂದು ಏರ್ ಇಂಡಿಯಾ ಹಣಕಾಸು ನಿರ್ದೇಶಕರು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ