ಧಾರವಾಡ : ಇಡೀ ಉತ್ತರ ಕರ್ನಾಟಕದ ರೈತರಿಗಾಗಿ ನಡೆಯುವ ರೈತ ಹಬ್ಬ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿನ ತಂತ್ರಜ್ಞಾನ, ಕಲರ್ ಕಲರ್ ಹೂಗಳ ಕಲರವ... ವಿವಿಧ ಬಗೆಯ ಫಿಷ್... ಹೊಸ ತಳಿಗಳ ಅನಾವರಣಗೊಳಿಸುವ ಕೃಷಿಮೇಳ ಈ ವರ್ಷ ನಡೆಯುವುದು ಡೌಟ್. ಹೌದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷದಂತೆ ನಡೆಯಬೇಕಿದ್ದ ಕೃಷಿ ಮೇಳ ಈ ವರ್ಷ ನಡೆಯುವುದಿಲ್ಲ. ಕಳೆದ ಹಲವು ವರ್ಷಗಳಿಂದ ನಡೆಯುತ್ತ ಬಂದಿರೊ ಕೃಷಿ ಮೇಳ ಮೇಲೆ ಕೊರೊನಾ ಕರಿನೆರಳು ಬಿದ್ದಿರೊ ಹಿನ್ನೆಲೆ ಈ ವರ್ಷ ಕೃಷಿ ಮೇಳ ನಡೆಸಲು ಹಿಂದೆಟು ಹಾಕಲಾಗುತ್ತಿದೆ. ಹೆಚ್ಚು ಜನ ಸಂಖ್ಯೆ ಸೇರಿದಂತೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆದಂತೆ ಸರ್ಕಾರ ಸೂಚನೆ ನೀಡಿದೆ.
ಉತ್ತರ ಕರ್ನಾಟಕದ ರೈತರಿಗೆ ವಿನೂತನ ಕೃಷಿ, ಅತ್ಯಾಧುನಿಕ ಯಂತ್ರಗಳು ಪರಿಚಯ, ಹೊಸ ಬೀಜಗಳು, ಹೊಸ ನೀರಾವರಿ ಪದ್ದತಿ, ಸಾವಯವ ಕೃಷಿ, ಮೀನುಗಾರಿಗೆ, ಔಷಧಿ ಸಸ್ಯಗಳ ಬೆಳೆಸುವ ವಿಧಾನ ಹೀಗೆ ಹತ್ತು ಹಲವು ಬಗೆಯ ಮಾಹಿತಿಯನ್ನು ಲಕ್ಷಾಂತರ ರೈತರಿಗೆ ನೀಡುತ್ತದೆ ಕೃಷಿ ಮೇಳ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮೂರುದಿನಗಳ ಕಾಲದ ವರೆಗೆ ನಡೆಯುತ್ತ ಬಂದಿದೆ.
ಪ್ರತಿ ವರ್ಷ ಸಪ್ಟೆಂಬರ್ ಕೊನೆಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಕೃಷಿ ಮೇಳವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆಯೋಜನೆ ಮಾಡುತ್ತ ಬಂದಿದೆ. ಆದರೆ ಕಳೆದ ವರ್ಷ ಅತಿಯಾದ ಮಳೆಯಿಂದ ಇಡೀ ಉತ್ತರ ಕರ್ನಾಟಕ ಪ್ರವಾಹದಲ್ಲಿ ಮೂಳಗಿತ್ತು. ಇದರಿಂದ ಸಪ್ಟೆಂಬರ್ ತಿಂಗಳ ನಡೆಸಬೇಕದ್ದ ಕೃಷಿ ಮೇಳವನ್ನು ಜನೇವರಿಯಲ್ಲಿ ನಡೆಸಲಾಗಿತ್ತು. ಆದರೆ ಕಳೆದ ವರ್ಷದ ಸಾಲಿನಲ್ಲಿ ಕೃಷಿ ನಡೆದಿತ್ತು.
ಈ ವರ್ಷವು ಕೃಷಿಮೇಳ ನಡೆಯುತ್ತದೆ ಎಂದುಕೊಂಡ ರೈತರಿಗೆ ನಿರಾಶೆ ಮೂಡಿಸಿದೆ ಮಹಾಮಾರಿ ಕೊರೋನಾ ವೈರಸ್, ಹೆಚ್ಚು ಜನ ಒಂದೇಡೆ ಸೇದತಂತೆ ಸರ್ಕಾರ ಸೂಚನೆ ನೀಡಿದೆ ಇದರಿಂದ ಈ ವರ್ಷವು ಕೃಷಿ ಮೇಳ ನಡೆಸಲು ಸಾಧ್ಯವಿಲ್ಲ.
ಇದನ್ನೂ ಓದಿ : ಡ್ರಗ್ಸ್ ಮಾಫಿಯಾ ಜೊತೆಗೆ ನಂಟು?; ಮುಂಬೈ ಪೊಲೀಸರ ತನಿಖೆ ಎದುರಿಸಲಿದ್ದಾರೆ ನಟಿ ಕಂಗನಾ
ಈಗಾಗಲೇ ಕೃಷಿ ಮೇಳ ನಡೆಸಬೇಕೊ ಅಥವಾ ಮೂಂದುಡಬೇಕೊ ಎಂದು ಕೃಷಿ ಸಚಿವರ ಜೋತೆ ಕೃಷಿ ವಿವಿ ಕುಲಪತಿ ಮಹದೇವ ಚಟ್ಟಿ ಮಾತನಾಡಿದ್ದಾರೆ. ಆದರೆ, ಕೃಷಿ ಸಚಿವರು ಸಹ "ಕೊರೋನಾ ಸಂದರ್ಭದಲ್ಲಿ ಲಕ್ಷಾಂತರ ರೈತರು ಸೇರುವ ಮೇಳ ಆಗಿರೊ ಹಿನ್ನೆಲೆ ಈ ವರ್ಷ ಕೃಷಿ ನಡೆಸುವುದು ಸದ್ಯ ಬೇಡ, ಡಿಸೆಂಬರ್ ತಿಂಗಳೊಳಗೆ ಕೊರೋನಾ ಹಾವಳಿ ಕಡಿಮೆ ಆದರೆ ಜನವರಿ ತಿಂಗಳಲ್ಲಿ ಕೃಷಿ ಮೇಳ ನಡೆಸುವ ಬಗ್ಗೆ ಚರ್ಚಿಸೊಣ" ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ