• Home
 • »
 • News
 • »
 • business
 • »
 • Agriculture: ಪರ್ಯಾಯ ಬೆಳೆಗಳಿಂದ ಲಕ್ಷ ಲಕ್ಷ ಎಣಿಸುತ್ತಿರುವ ಟೆಕ್ಕಿ ದಂಪತಿ, ಇವರ ಯಶಸ್ಸಿನ ಗುಟ್ಟು ಇದೇ ನೋಡಿ!

Agriculture: ಪರ್ಯಾಯ ಬೆಳೆಗಳಿಂದ ಲಕ್ಷ ಲಕ್ಷ ಎಣಿಸುತ್ತಿರುವ ಟೆಕ್ಕಿ ದಂಪತಿ, ಇವರ ಯಶಸ್ಸಿನ ಗುಟ್ಟು ಇದೇ ನೋಡಿ!

ಪರ್ಯಾಯ ಬೆಳೆಗಳಿಂದ ಲಕ್ಷ ಲಕ್ಷ ಎಣಿಸುತ್ತಿರುವ ಟೆಕ್ಕಿ ದಂಪತಿ

ಪರ್ಯಾಯ ಬೆಳೆಗಳಿಂದ ಲಕ್ಷ ಲಕ್ಷ ಎಣಿಸುತ್ತಿರುವ ಟೆಕ್ಕಿ ದಂಪತಿ

ತೆಲಂಗಾಣದ ಟೆಕ್ಕಿ ದಂಪತಿ ಕೃಷಿ ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸುವ ಮೂಲಕ ಪರ್ಯಾಯ ಬೆಳೆ ಕೃಷಿಯಲ್ಲಿ ಯಶೋಗಾಥೆಯನ್ನು ಬರೆದಿದ್ದಾರೆ. 

 • Trending Desk
 • 3-MIN READ
 • Last Updated :
 • Telangana, India
 • Share this:

  ಹೈದರಾಬಾದ್(ಜ.25): ಕೆಲವೊಮ್ಮೆ ಕೆಲವರಿಗೆ ತಾವು ಮಾಡುತ್ತಿರುವ ಕೆಲಸ ಅಷ್ಟೊಂದು ತೃಪ್ತಿ ಕೊಡುವುದಿಲ್ಲ, ಕೈ ತುಂಬಾ ಸಂಬಳ ಬರುತ್ತಿದ್ದರೂ ಮನಸ್ಸಿಗೆ ಖುಷಿ ಎನ್ನುವುದು ಇರುವುದಿಲ್ಲ. ಆದ್ದರಿಂದಲೇ ಕೆಲವು ಜನರು ತಮಗೆ ಇದ್ದ ಕೆಲಸವನ್ನು ಬಿಟ್ಟು ತಮಗೆ ಇಷ್ಟವಾದ ಕೆಲಸವನ್ನು ಮಾಡಲು ಮುಂದಾಗುತ್ತಾರೆ ಮತ್ತು ಅದರಲ್ಲಿ ಯಶಸ್ಸು ಕಾಣುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ಸಹ ಕಾಣುತ್ತಾರೆ ಅಂತ ಹೇಳಬಹುದು.


  ಹೀಗೆ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿಯೂ ಅನೇಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡು ತಮ್ಮ ಊರಿಗೆ ಮರಳಿದರು. ಎಷ್ಟೋ ಜನರು ತಮ್ಮ ಟೆಕ್ಕಿ ಉದ್ಯೋಗವನ್ನು ಕಳೆದುಕೊಂಡು ಊರಿಗೆ ಬಂದು ವ್ಯವಸಾಯ ಅಥವಾ ಕೃಷಿ ಆಧಾರಿತ ವ್ಯವಹಾರಗಳನ್ನು ಮಾಡಿ ತಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.


  ಇದನ್ನೂ ಓದಿ: Business Loan: ಸಣ್ಣ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರಕ್ಕಾಗಿ ಲೋನ್‌ಗಳನ್ನು ಹೇಗೆ ಪಡೆದುಕೊಳ್ಳಬಹುದು? ಅರ್ಹತೆಗಳೇನು?


  ತೆಲಂಗಾಣದ ಟೆಕ್ಕಿ ದಂಪತಿ ಈಗ ಯಶಸ್ವಿ ಕೃಷಿಕರು


  ತೆಲಂಗಾಣದ ಟೆಕ್ಕಿ ದಂಪತಿ ಕೃಷಿ ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸುವ ಮೂಲಕ ಪರ್ಯಾಯ ಬೆಳೆ ಕೃಷಿಯಲ್ಲಿ ಯಶೋಗಾಥೆಯನ್ನು ಬರೆದಿದ್ದಾರೆ. ತೆಲಂಗಾಣದ ಕರೀಂನಗರ ಜಿಲ್ಲೆಯ ಜಂಗಪಲ್ಲಿ ಗ್ರಾಮದ ಕರ್ರಾ ಶ್ರೀಕಾಂತ್ ರೆಡ್ಡಿ ಮತ್ತು ಅನುಷಾ ರೆಡ್ಡಿ ಅವರು ಪರ್ಯಾಯ ಬೆಳೆ ಕೃಷಿಗೆ ನೀಡಿದ ಕೊಡುಗೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಾದರಿ ರೈತರಾಗಿ ಗುರುತಿಸಲ್ಪಟ್ಟಿದ್ದಾರೆ ಅಂತ ಹೇಳಬಹುದು.


  ಶ್ರೀಕಾಂತ್ ವಿಜ್ಞಾನದಲ್ಲಿ ಪದವಿ ಪಡೆದಿದ್ದು, ಅವರ ಪತ್ನಿ ಅನುಷಾ ಏರೋನಾಟಿಕಲ್ ಎಂಜಿನಿಯರ್ ಆಗಿದ್ದು, ಹೈದರಾಬಾದ್​ನ ಒಂದು ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು.


  ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಮಯದಲ್ಲಿ ಅವರು ಕೆಲವು ಸಮಸ್ಯೆಗಳನ್ನು ಎದುರಿಸಿದರು ಮತ್ತು ತಮ್ಮ ಸ್ಥಳೀಯ ಗ್ರಾಮಕ್ಕೆ ಮರಳಬೇಕಾಯಿತು ಮತ್ತು ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಬೇಕಾಯಿತು.


  ಹಳ್ಳಿಗೆ ಹಿಂದಿರುಗಿದಾಗ ದಂಪತಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಯೋಚಿಸಿದರು


  ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಐದು ಎಕರೆ ಭೂಮಿಯಲ್ಲಿ ಆಧುನಿಕ ಕೃಷಿ ವಿಧಾನಗಳೊಂದಿಗೆ ಪೂರ್ಣ ಸಮಯದ ಆಧಾರದ ಮೇಲೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಯೋಚಿಸಿದರು. ಇವರಿಬ್ಬರು ಗುಲಾಬಿ, ಚೆಂಡು ಹೂವು, ಕ್ರಿಸಾಂಥೆಮಮ್, ಸೂರ್ಯಕಾಂತಿ ಮತ್ತು ಲಿಲ್ಲಿ ಸೇರಿದಂತೆ ಹೂವಿನ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯನ್ನು ಪ್ರಾರಂಭಿಸಿದರು.


  ದಂಪತಿಗಳು ಗುಲಾಬಿ, ಕ್ರಿಸಾಂಥೆಮಮ್ ಮತ್ತು ಮಾರಿಗೋಲ್ಡ್ ಹೂವಿನ ಬೆಳೆಗಳಿಗೆ ಕೊಯ್ಲು ಮಾಡುವ ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡರು ಮತ್ತು ಹನಿ ನೀರಾವರಿ ವ್ಯವಸ್ಥೆಯ ಮೂಲಕ ಈ ಬೆಳೆಗಳಿಗೆ ನೀರನ್ನು ಒದಗಿಸಿದರು.


  ಕೃಷಿಯ ಬಗ್ಗೆ ಏನ್ ಹೇಳಿದ್ರು ರೆಡ್ಡಿ ದಂಪತಿ?


  ಕ್ರಿಸಾಂಥೆಮಮ್ ಬೆಳೆಯ ಕೃಷಿಗೆ ಅಗತ್ಯವಾದ ತಾಪಮಾನವನ್ನು ಕಾಪಾಡಿಕೊಳ್ಳಲು ಅವರು ವಿದ್ಯುತ್ ಬಲ್ಬ್ ಗಳನ್ನು ಸಹ ಸ್ಥಾಪಿಸಿದ್ದಾರೆ. ತಮ್ಮ ಕೃಷಿ ಪಯಣದ ಬಗ್ಗೆ ನ್ಯೂಸ್ 18 ನೊಂದಿಗೆ ಮಾತನಾಡಿದ ರೆಡ್ಡಿ ದಂಪತಿ ಕೃಷಿಯಲ್ಲಿ ತುಂಬಾ ಆಸಕ್ತಿ ಹೊಂದಿದ್ದು ಮತ್ತು ಪ್ರಾಯೋಗಿಕ ಆಧಾರದ ಮೇಲೆ ಆಧುನಿಕ ಕೃಷಿ ವಿಧಾನಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿರುವುದಾಗಿ ಹೇಳಿದರು.


  ಇದನ್ನೂ ಓದಿ: Business Startup: ಭಾರೀ ಲಾಭ ತಂದುಕೊಡುವ ಕೃಷಿ ಉದ್ಯಮಗಳಿವು, ಆರಂಭಿಸಲು ಸರ್ಕಾರದಿಂದಲೇ ಸಿಗುತ್ತೆ ಸಾಲ!


  "ನಮ್ಮ ಮೊದಲ ಪ್ರಯತ್ನದಲ್ಲಿಯೇ ನಾವು ಯಶಸ್ಸನ್ನು ಪಡೆದಿದ್ದೇವೆ ಮತ್ತು ಪರ್ಯಾಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ರೈತರು ಮುಂದೆ ಬರಬೇಕೆಂದು ಒತ್ತಾಯಿಸಿದರು. ಪರ್ಯಾಯ ಬೆಳೆಗಳು ಇಡೀ ದೇಶಕ್ಕೆ ಆಹಾರವನ್ನು ಒದಗಿಸುವ ರೈತರ ಆರ್ಥಿಕ ಬೆಳವಣಿಗೆಗೆ ಉಪಯುಕ್ತವಾಗುತ್ತವೆ" ಎಂದು ಅವರು ಹೇಳಿದರು.


  ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ದಂಪತಿ ದಿನಕ್ಕೆ 3,000 ರಿಂದ 5,000 ರೂಪಾಯಿಗಳನ್ನು ಗಳಿಸುತ್ತಿದ್ದಾರೆ.


  .
  ಎಕರೆಗೆ 10 ಕ್ವಿಂಟಾಲ್ ಕುಸುಮ ಬೀಜಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಒಂದು ಕ್ವಿಂಟಾಲ್ ಕುಸುಬೆ ಬೀಜಗಳ ಮಾರುಕಟ್ಟೆ ಮೌಲ್ಯ 5,000 ರಿಂದ 6,000 ರೂಪಾಯಿ ಆಗಿದೆ.

  Published by:Precilla Olivia Dias
  First published: