Agriculture: ವ್ಯವಸಾಯದಲ್ಲಿ ಈ ವಿಧಾನ ಅನುಸರಿಸಿದರೆ ವರ್ಷಕ್ಕೆ 5ರಿಂದ 6 ಲಕ್ಷ ಆದಾಯ ಪಕ್ಕಾ!

ವಾಣಿಜ್ಯ ಬೆಳೆ

ವಾಣಿಜ್ಯ ಬೆಳೆ

Agriculture: ಭಜನ್ ಲಾಲ್ ಎಂಬ ರೈತ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಗೋಧಿ ಮತ್ತು ಸಾಸಿವೆ ಕೃಷಿ ಮಾಡುತ್ತಿದ್ದರು. ಅದರಿಂದ ಅವರು ಹೆಚ್ಚಿನ ಆದಾಯವನ್ನು ಗಳಿಸಲು ಸಾದ್ಯವಾಗುತ್ತಿರಲಿಲ್ಲ. ಏಕೆಂದರೆ ಭರತ್‌ಪುರದ ಅನೇಕ ರೈತರು ಈ ಬೆಳೆಗಳನ್ನೇ ಬೆಳೆಯುತ್ತಾರೆ. ಉತ್ಪಾದನೆ ಹೆಚ್ಚಾದಷ್ಟೂ ಬೆಲೆ ಕಡಿಮೆಯಾಗುತ್ತಿತ್ತು. ಇದೀಗ ಅದೇ ಜಮೀನನಲ್ಲಿ 4 ವಾಣಿಜ್ಯ ಬೆಳೆ ಬೆಳೆದು ವರ್ಷಕ್ಕೆ 5-6 ಲಕ್ಷ ಆದಾಯ ಗಳಿಸುತ್ತಿದ್ದಾರೆ

ಮುಂದೆ ಓದಿ ...
  • Local18
  • 2-MIN READ
  • Last Updated :
  • Rajasthan, India
  • Share this:

ಭರತಪುರ, ರಾಜಸ್ಥಾನ: ಕಾಲ ಬದಲಾದರೂ ತಂತ್ರಜ್ಞಾನದ (Technology) ಬಳಕೆ ಹೆಚ್ಚಾದರೂ ಕೂಡ ರೈತರ (Farmer) ಸಮಸ್ಯೆಗಳು ಮುಗಿಯುತ್ತಿಲ. ಕಾಡಾನೆ ದಾಳಿ, ಪ್ರಕೃತಿ ವಿಕೋಪ (Natural Disaster), ಉತ್ತಮ ಬೆಳೆ ಬಂದರೂ ಮಾರುಕಟ್ಟೆಯಲ್ಲಿ (Market) ಸರಿಯಾದ ಬೆಲೆ ಇಲ್ಲದ ಕಾರಣ ರೈತರು ನಷ್ಟ ಎದುರಿಸುತ್ತಿದ್ದಾರೆ. ಅನೇಕ ಸಲ ರೈತರು ಕೃಷಿಗೆ ಹೂಡಿಕೆ ಮಾಡಿದ್ದನ್ನೂ ಹಿಂದಕ್ಕೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಿದೆ. ರೈತರು ನಷ್ಟ ಅನುಭವಿಸಲು ಸಾಂಪ್ರದಾಯಿಕ ಬೆಳೆಗಳನ್ನು(Traditional Crops) ಹೆಚ್ಚು ಬೆಳೆಯುತ್ತಿರುವುದೇ ಪ್ರಮುಖ ಕಾರಣ. ಆದರೆ ಕಾಲ ಬದಲಾದಂತೆ ದೇಶದ ರೈತರು ಕೃಷಿಯಲ್ಲೂ ಬದಲಾವಣೆ ತರಲು ಆರಂಭಿಸಿದ್ದಾರೆ.  ಸಾಂಪ್ರದಾಯಿಕ ಬೆಳೆ ಬದಲು ವಾಣಿಜ್ಯ ಬೆಳೆ ಮಾಡಿ ರೈತರು ಶ್ರೀಮಂತರಾಗುತ್ತಿದ್ದಾರೆ. ರಾಜಸ್ಥಾನದ (Rajasthan) ಭರತ್‌ಪುರ ಜಿಲ್ಲೆಯ ಕುಮ್ಹೇರ್ ತಾಲೂಕಿನ ಬೈಲಾರಾ ಗ್ರಾಮದ ರೈತರು ವರ್ಷಕ್ಕೆ 4 ಬೆಳೆಗಳನ್ನು ಬೆಳೆದು ದುಪ್ಪಟ್ಟು ಲಾಭ ಪಡೆಯುತ್ತಿದ್ದಾರೆ.


ಭರತ್‌ಪುರ ಜಿಲ್ಲೆಯ ಕುಮ್ಹೇರ್ ಮಂಡಲದ ಬೈಲಾರ ಗ್ರಾಮದ ಭಜನ್ ಲಾಲ್ ಎಂಬ ರೈತ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಗೋಧಿ ಮತ್ತು ಸಾಸಿವೆ ಕೃಷಿ ಮಾಡುತ್ತಿದ್ದರು. ಅದರಿಂದ ಅವರು ಹೆಚ್ಚಿನ ಆದಾಯವನ್ನು ಗಳಿಸಲು ಸಾದ್ಯವಾಗುತ್ತಿರಲಿಲ್ಲ. ಏಕೆಂದರೆ ಭರತ್‌ಪುರದ ಅನೇಕ ರೈತರು ಈ ಬೆಳೆಗಳನ್ನೇ ಬೆಳೆಯುತ್ತಾರೆ. ಉತ್ಪಾದನೆ ಹೆಚ್ಚಾದಷ್ಟೂ ಬೆಲೆ ಕಡಿಮೆ ಸಿಗುತ್ತಿತ್ತು.


ಈ ಕಾರಣದಿಂದ ಹೊಸ ಬಗೆಯ ಬೆಳೆಗಳನ್ನು ಬೆಳೆಯಲು ಭಜನ್ ಲಾಲ್ ನಿರ್ಧರಿಸಿದರು. ಅಲ್ಲದೆ ಒಂದೇ ವರ್ಷದಲ್ಲಿ ನಾಲ್ಕು ಬೆಳೆ ಬೆಳೆಯಲು ಆರಂಭಿಸಿದರು. ಅಂದರೆ ವರ್ಷಕ್ಕೆ ಎರಡರಂತೆ ಒಂದೇ ಜಮೀನಿನಲ್ಲಿ ಏಕಕಾಲದಲ್ಲಿ ಎರೆಡೆರಡು ಬೆಳೆ ಹಾಕಿ ಒಟ್ಟು ನಾಲ್ಕು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ನೀತಿಯಿಂದ ಭಜನ್ ಲಾಲ್ ಅವರ ಆದಾಯ ಹೆಚ್ಚಾಯಿತು. ಆರ್ಥಿಕ ಪರಿಸ್ಥಿತಿಯೂ ಬದಲಾಗಿದೆ.


ಇದನ್ನೂ ಓದಿ: Agriculture Companies: ಕೃಷಿಕರಿಗೆ ಖುಷಿ ನೀಡುವ ಟಾಪ್-20 ಕಂಪನಿಗಳಿವು! ಅಂದಹಾಗೆ ಇವು ರೈತನಿಗೆ ಹೇಗೆ ನೆರವಾಗುತ್ತವೆ?


ವರ್ಷದಲ್ಲಿ 4 ಬೆಳೆ, ದುಪ್ಪಟ್ಟು ಆದಾಯ


ಸಾಂಪ್ರದಾಯಿಕ ಕೃಷಿಯಲ್ಲಿ ಗೋಧಿ ಮತ್ತು ಸಾಸಿವೆ ಬೆಳೆಗಳನ್ನು ಬೆಳೆಯುತ್ತಿದ್ದೆ. ನಂತರ ಸಾಂಪ್ರದಾಯಿಕ ಕೃಷಿ ಬಿಟ್ಟು, ವಾಣಿಜ್ಯ ಬೆಳೆ ಬೆಳೆಯಲು ಶುರು ಮಾಡಿದೆ. ನಾನು 1 ವರ್ಷದಲ್ಲಿ ನಾಲ್ಕು ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದೆ.  ಅಂದರೆ ಒಂದೇ ಬಾರಿಗೆ ಎರಡು ಬೆಳೆಗಳನ್ನು ಬೆಳೆಯುವುದು. ಇದೀಗ ನನ್ನ ಆದಾಯವು ಹೆಚ್ಚಾಗತೊಡಗಿದೆ. ನನ್ನ ಆರ್ಥಿಕ ಸ್ಥಿತಿಯೂ ಬಲಗೊಂಡಿದೆ. ಈ ರೀತಿಯ ಕೃಷಿಯಿಂದ ವರ್ಷಕ್ಕೆ 5 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ. ನನ್ನ ಸುತ್ತಮುತ್ತಲಿನ ರೈತರು ನನ್ನನ್ನೆ ಅನುಸರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ವರ್ಷಕ್ಕೆ 5ರಿಂದ 6 ಲಕ್ಷ ಆದಾಯ


ಭಜನ್​ ಲಾಲ್​ ಮೊದಲು ತರಕಾರಿಯಲ್ಲಿ ಬೆಂಡೆ ಕೃಷಿ ಆರಂಭಿಸಿದರು. ಅದರ ಜೊತೆಗೆ ಹಸಿರುಕಾಳನ್ನು ಚೆಲ್ಲಿದರು. ಬೆಂಡೆಕಾಯಿಯಿಂದ ಒಂದೂವರೆ ಲಕ್ಷ ರೂಪಾಯಿ ಹಾಗೂ ಹಸಿರುಕಾಳುನಿಂದ 35 ಸಾವಿರ ರೂ ಆದಾಯ ಬಂದಿತು.


ಈ ಎರಡು ಬೆಳೆ ಮುಗಿದ ನಂತರ ಕೊತ್ತಂಬರಿ, ಟೊಮ್ಯಾಟೊ ಕೃಷಿ ಮಾಡಿದರು. ಕೊತ್ತಂಬರಿ ಸೊಪ್ಪು 85 ಸಾವಿರಕ್ಕೆ ಮಾರಾಟವಾಗಿದೆ. ಇನ್ನೂ ಫಸಲು ಇದೆ, ಜೊತೆಗೆ ಟೊಮ್ಯಾಟೊ ಬೆಳೆಯೂ ಕಟಾವಿಗೆ ಬಂದಿದ್ದು, ಶೀಘ್ರವೇ ಮಾರುಕಟ್ಟೆಗೆ ಕೊಂಡೊಯ್ಯಲಾಗುವುದು ಎಂದು ಭಜನ್​ಲಾಲ್ ತಿಳಿಸಿದ್ದಾರೆ. ಹೀಗೆ ವರ್ಷಕ್ಕೆ 5 ರಿಂದ 6 ಲಕ್ಷ ರೂಪಾಯಿ ಆದಾಯಗಳಿಸುತ್ತಿರುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್


ಸಾವಯವ ಗೊಬ್ಬರ ಬಳಕೆ


ಭಜನ್​ಲಾಲ್​ ಅವರ ಮತ್ತೊಂದು ವಿಶೇಷತೆಯಂದರೆ, ಇವರು ಕೃಷಿಯಲ್ಲಿ ಯಾವುದೇ ಕೀಟನಾಶಕಗಳನ್ನು ಬಳಸುವುದಿಲ್ಲ. ಸಾವಯವ ಗೊಬ್ಬರಗಳನ್ನು ಮಾತ್ರ ಬಳಸುತ್ತಿದ್ದಾರೆ. ಇವರನ್ನು ನೋಡಿ ಅಕ್ಕಪಕ್ಕದ ರೈತರು ಕೂಡ ಸಾಂಪ್ರಾದಾಯಿಕ ಬೆಳೆಗಳ ಬದಲಿಗೆ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿ ಲಕ್ಷ ಲಕ್ಷ ಆದಾಯಗಳಿಸುತ್ತಿದ್ದಾರೆ.


ಕೃಷಿ ತಜ್ಞರು ಕೂಡ ರೈತರು ಎಂದಿಗೂ ಸಾಂಪ್ರದಾಯಿಕ ಬೆಳೆಗಳಿಗೆ ಮೊರೆ ಹೋಗಬಾರದು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡುತ್ತಾರೆ. ಅದನ್ನೇ ಭಜನ್​ಲಾಲ್​ ಅನುಸರಿಸಿದ್ದಾರೆ.

Published by:Rajesha M B
First published: