• ಹೋಂ
  • »
  • ನ್ಯೂಸ್
  • »
  • business
  • »
  • Ragi Crop: ಮಳೆ ಹೆಚ್ಚಾಗಿದ್ದಕ್ಕೆ ರಾಗಿಗೆ ಬೆಂಕಿ ರೋಗ, ರೈತರನ್ನು ಎಚ್ಚರಿಸುತ್ತಿದ್ದಾರೆ ತಜ್ಞರು

Ragi Crop: ಮಳೆ ಹೆಚ್ಚಾಗಿದ್ದಕ್ಕೆ ರಾಗಿಗೆ ಬೆಂಕಿ ರೋಗ, ರೈತರನ್ನು ಎಚ್ಚರಿಸುತ್ತಿದ್ದಾರೆ ತಜ್ಞರು

ರೋಗಗ್ರಸ್ತ ರಾಗಿ

ರೋಗಗ್ರಸ್ತ ರಾಗಿ

Disease for Raagi Crop leads to Loss: ಎಲೆಗಳ ಮೇಲೆ ಕಂದು ಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು, ಅವುಗಳು ಒಂದಕ್ಕೊಂದು ಸೇರಿ ಗರಿಗಳು ಒಣಗಿದಂತೆ ಕಾಣುತ್ತದೆ. ಇದ್ದರಿಂದ ರಾಗಿ ಬೆಳೆಗೆ ಅಪಾರ ನಷ್ಟವಾಗಲಿದೆ.

  • Share this:

ಬೆಂಗಳೂರು ಗ್ರಾಮಾಂತರ: ಬಯಲು ಸೀಮೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ರಾಗಿಯನ್ನು (Raagi Crop) ಬೆಳೆಯಲಾಗುತ್ತದೆ.  ಜಿಲ್ಲೆಯಾದ್ಯಂತ  ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ  ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 51,849 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗುವ ಮೂಲಕ ಬಿತ್ತನೆ ಪ್ರಕ್ರಿಯೆ ಬಹುತೇಕ  ಪೂರ್ಣಗೊಂಡಿದೆ.ಇದೀಗ ರಾಗಿ ಬೆಳೆಯುವ ಬೆಳವಣಿಗೆ ಹಂತದಲ್ಲಿರುವ ರಾಗಿ ಬೆಳೆಯಲ್ಲಿ ಮಳೆ (Excess Rain) ಹಾಗೂ ತೇವಾಂಶದಿಂದ  ಬೆಂಕಿ ರೋಗದ ಬಾಧೆ ಕಂಡು ಬಂದಿದೆ.ಇದರಿಂದ ‌ಬೆಳೆಯ ಪ್ರಮಾಣ ಕುಸಿಯುವ ಆಂತಕವಿದ್ದು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು‌ ರೋಗದಿಂದ ಬೆಳೆ ಉಳಿಸಿಕೊಳ್ಳಲು ಸಲಹೆಯನ್ನು ನೀಡಿದ್ದಾರೆ.


ಬೆಂಕಿ ರೋಗದ ಲಕ್ಷಣವೇನು?


ರಾಗಿ ಗಿಡಗಳ ಬೆಳೆಯುವ ಹಂತದಲ್ಲಿ ಸಂದರ್ಭದಲ್ಲಿ ತೇವಾಂಶ ಹಾಗೂ ಬಿತ್ತನೆಯಾದ ಕೆಲವು ಪ್ರದೇಶಗಳಲ್ಲಿ ತಂಪು ವಾತಾವರಣ ಮತ್ತು ನಿರಂತರ ತುಂತುರು ಮಳೆಯಿಂದ ರಾಗಿ ಗರಿ ಬಿಡುವ ಸಮಯದಲ್ಲಿ ಬೆಂಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ಎಲೆಗಳ ಮೇಲೆ ಕಂದು ಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು, ಅವುಗಳು ಒಂದಕ್ಕೊಂದು ಸೇರಿ ಗರಿಗಳು ಒಣಗಿದಂತೆ ಕಾಣುತ್ತದೆ. ಇದ್ದರಿಂದ ರಾಗಿ ಬೆಳೆಗೆ ಅಪಾರ ನಷ್ಟವಾಗಲಿದೆ.


ಫಸಲಿಗೆ ಬೆಂಕಿ ಆಂತಕ:


ಬೆಂಕಿ ರೋಗವನ್ನು ಸರಿಯಾದ ರೀತಿಯಿಂದ ಹತೋಟಿ ತರಲು ಕ್ರಮ ವಹಿಸದಿದ್ದಲ್ಲಿ ಇಳುಕಿನ ಮೇಲೆ ಕಂದು ಬಣ್ಣ ಕಾಣಿಸಿಕೊಂಡು ತೆನೆ ಇಳುಕು ಕಾಳು ಕಟ್ಟದೆ ಇಳುವರಿಯಲ್ಲಿ ಶೇ.೫೦ಕ್ಕೂ ಹೆಚ್ಚು ನಷ್ಟ ಸಂಭವಿಸಲಿದೆ.ಇದರಿಂದ ರಾಗಿ ಬೆಳೆಯ ಆದಾಯದ  ಮೇಲೆ ಗಂಭೀರ ಪರಿಣಾಮ ಬೀರುತ್ತದೆ.


ರೋಗದ ಬಾಧೆ ಹತೋಟಿಗೆ ವಿಜ್ಞಾನಿಗಳ ಸಲಹೆ:


ರಾಗಿಯಲ್ಲಿ ಕಾಣಿಸಿಕೊಳ್ಳುವ ಬೆಂಕಿರೋಗ ಪರಿಹರಿಸಲು ಶೀಲಿಂಧ್ರನಾಶಕಗಳಾದ ಮ್ಯಾಂಕೋಜೆಬ್ 75 ಡಬ್ಲ್ಯೂಪಿ 2 ಗ್ರಾಂ ಅಥವಾ ಕಾರ್ಬೆಂಡಜಿ 50 ಡಬ್ಲ್ಯೂಪಿ 1 ಗ್ರಾಂ ಅಥವಾ ಜೈನೆಬ್ 75 ಡಬ್ಲ್ಯೂಪಿ 2.5 ಗ್ರಾಂ ಅಥವಾ ಕಾರ್ಬೆಂಡಜಿA 12% ಮ್ಯಾಂಕೋಜೆಬ್ 63% 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು ಸಾಧ್ಯವಾದಷ್ಟು ಬೆಳಿಗ್ಗೆ 12 ಗಂಟೆಗೂ ಮುನ್ನ ಅಥವಾ ಮಧ್ಯಾಹ್ನ 3 ಗಂಟೆಯ ನಂತರ ಸಿಂಪರಣೆಯನ್ನು ಕೈಗೊಳ್ಳಬೇಕು ಹಾಗೂ ಸಿಂಪಡಿಸುವ ಸಂದರ್ಭದಲ್ಲಿ ಸಿಂಪರಣಾ ದ್ರಾವಣವು ಅತಿ ಸೂಕ್ಷ್ಮ ಹನಿಯ ರೂಪದಲ್ಲಿ ಬೀಳುವ ನೋಜಲ್‌ಗಳನ್ನು ರೈತರು ಬಳಸಬೇಕು‌ ಎಂದು ಜಿಲ್ಲೆಯ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ತರಲು  ವಿಜ್ಞಾನಿಯಾದ ಡಾ. ಮಂಜುನಾಥ್  ಸಲಹೆ ನೀಡಿದ್ದಾರೆ.


ಜಿಲ್ಲೆಯ ರಾಗಿಬೆಳೆಯಲ್ಲಿ  ಕಂಡು ಬಂದಿರುವ ಈ ಸಮಸ್ಯೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ. 50%ರ ರಿಯಾಯಿತಿಯಲ್ಲಿ ಸಸ್ಯ ಸಂರಕ್ಷಣೆ ಔಷಧಿಗಳು ಲಭ್ಯವಿದೆ. ಜಿಲ್ಲೆಯ ರೈತರು ಈ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಂಟಿ ಕೃಷಿ ನಿರ್ದೇಶಕ ಜಿ.ಎಸ್ ಜಯಸ್ವಾಮಿ ಹೇಳಿದರು.


(ವರದಿ: ಮನುಕುಮಾರ ಹೆಚ್ ಕೆ, ಚಿಕ್ಕಬಳ್ಳಾಪುರ)

top videos
    First published: