ಬೆಳಗಾವಿಯಲ್ಲಿ (Belagavi) ವಿವಿಧ ಯೋಜನೆಗಳ ಕಾಮಗಾರಿಗೆ ಪ್ರಧಾನಿ ನರೆಂದ್ರ ಮೋದಿ (Prime Minister Narendra Modi) ಚಾಲನೆ ನೀಡಿದ್ದು, ಜೊತೆಗೆ 16,800 ಕೋಟಿ ರೂಪಾಯಿ ಕಿಸಾನ್ ಸಮ್ಮಾನ್ (PM Kisan Samman) ನಿಧಿಯಡಿ 8 ಕೋಟಿ ರೈತರಿಗೆ ಹಣ ವರ್ಗಾವಣೆ ಮಾಡಿದರು. ಇನ್ನೂ ಗಡಿನಾಡಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಕೂಡ ಉಪಸ್ಥಿತರಿದ್ದರು. ಅರ್ಹ ರೈತರಿಗೆ (Farmers) 16,800 ಕೋಟಿ ರೂಪಾಯಿ ಮೌಲ್ಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದ್ದು, ಇದರೊಂದಿಗೆ ಫಲಾನುಭವಿಗಳಿಗೆ ವರ್ಗಾವಣೆಯಾದ ಒಟ್ಟು ಮೊತ್ತ 2.30 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ.
ಪಿಎಂ ಕಿಸಾನ್ ಅಡಿಯಲ್ಲಿ ಅಕ್ಟೋಬರ್ 2022ರಲ್ಲಿ 12ನೇ ಕಂತು ಬಿಡುಗಡೆಯಾಗಿತ್ತು. ಪ್ರಸ್ತುತ 4 ತಿಂಗಳ ಬಳಿಕ 13ನೇ ಕಂತು ಬಿಡುಗಡೆಯಾಗುತ್ತಿದೆ.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 24 ಫೆಬ್ರವರಿ 2019ರಂದು ಆರಂಭಿಸಿತು. ದೇಶಾದ್ಯಂತ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ಭೂ ಹಿಡುವಳಿದಾರ ರೈತರ ಕುಟುಂಬಗಳಿಗೆ ಆದಾಯದ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯಡಿಯಲ್ಲಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಗಳನ್ನು ಪಡೆಯುವ ಮೂಲಕ ವರ್ಷಕ್ಕೆ ಒಟ್ಟು 6,000 ರೂ.ಗಳನ್ನು ಪಡೆಯುತ್ತಾರೆ. ಹಣವನ್ನು ಪ್ರತಿ ವರ್ಷ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್‌ನಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಸರ್ಕಾರ ಬಿಡುಗಡೆ ಮಾಡಿದ ಈ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.
ಫಲಾನುಭವಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
1) ಮೊದಲಿಗೆ pmkisan.gov.in ಈ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅದನ್ನು ತೆರೆಯಿರಿ
2) ಮುಖಪುಟದಲ್ಲಿ 'ಫಾರ್ಮರ್ಸ್ ಕಾರ್ನರ್' (ರೈತರ ಕಾರ್ನರ್ ) ಎಂಬ ಪ್ರತ್ಯೇಕ ವಿಭಾಗ ಗೋಚರವಾಗುತ್ತದೆ. ಬಳಿಕ ಅದರ ಮೇಲೆ ಕ್ಲಿಕ್ ಮಾಡಿ
3) ಫಾರ್ಮರ್ಸ್ ಕಾರ್ನರ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ನಿಮಗೆ ‘ಫಲಾನುಭವಿ ಸ್ಥಿತಿ’ (‘Beneficiary Status’) ಟ್ಯಾಬ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.
ಇದನ್ನೂ ಓದಿ: ನೌಕರರ ಭವಿಷ್ಯ ನಿಧಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ, ಹೆಚ್ಚಿನ ಪಿಂಚಣಿ ಬೇಕಾದ್ರೆ ಹೀಗೆ ಮಾಡಿ
ಪರ್ಯಾಯ ಮಾರ್ಗ
ಈ ಮೇಲಿನ ಮಾರ್ಗದ ಬದಲು, ನೀವು ನೇರವಾಗಿ https://pmkisan.gov.in/BeneficiaryStatus.aspx ಈ ಲಿಂಕ್‌ಗೆ
ಭೇಟಿ ನೀಡುವ ಮೂಲಕ ಫಲಾನುಭವಿಯ ಸ್ಥಿತಿಯನ್ನು ಪರಿಶೀಲಿಸಬಹುದು:
1) ಇದಕ್ಕೆ ನೀವು ಮುಖಪುಟದಲ್ಲಿ, ನಿಮ್ಮ ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ, ಈ ಮೂರರಲ್ಲಿ ಒಂದನ್ನು ಭರ್ತಿ ಮಾಡಬೇಕು.
2) ವಿವರಗಳನ್ನು ಭರ್ತಿ ಮಾಡಿದ ನಂತರ, 'ಗೆಟ್ ಡೇಟಾ' ಆಯ್ಕೆಯನ್ನು ಆರಿಸಿ
3) ಗೆಟ್ ಡೇಟಾ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಫಲಾನುಭವಿಯ ಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತದೆ..
ಫಲಾನುಭವಿಗಳ ಪಟ್ಟಿಯಲ್ಲಿ ರೈತರು ತಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ ಗೊತ್ತಾ?
ಹಂತ 1: PM ಕಿಸಾನ್ ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ
ಹಂತ 2: ಪುಟದ ಬಲ ಮೂಲೆಯಲ್ಲಿರುವ ‘ಫಲಾನುಭವಿಗಳ ಪಟ್ಟಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 3: ಡ್ರಾಪ್-ಡೌನ್‌ನಿಂದ ಆಯ್ದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಗಳ ವಿವರಗಳನ್ನು ಆಯ್ಕೆಮಾಡಿ
ಹಂತ 4: 'ಗೆಟ್ ರಿಪೋರ್ಟ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಇದರ ನಂತರ, ಫಲಾನುಭವಿಗಳ ಪಟ್ಟಿಯ ವಿವರವು ಗೋಚರವಾಗುತ್ತದೆ.
ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಶಿವಮೊಗ್ಗದಲ್ಲಿ ರಾಷ್ಟ್ರಕವಿ ಕುವೆಂಪು ಹೆಸರಿನ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ ಬಳಿಕ ಬೆಳಗಾವಿಗೆ ತೆರಳಿ ಅಲ್ಲಿ ಹಲವಾರು ಯೋಜನೆಗಳಿಗೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ