• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Organic Farming: ಸಾವಯವ ಕೃಷಿ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ ಈ ಶಿಕ್ಷಕಿ! ರೈತರ ಆದಾಯವನ್ನು ಡಬಲ್ ಮಾಡಿದ ಟೀಚರ್

Organic Farming: ಸಾವಯವ ಕೃಷಿ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ ಈ ಶಿಕ್ಷಕಿ! ರೈತರ ಆದಾಯವನ್ನು ಡಬಲ್ ಮಾಡಿದ ಟೀಚರ್

ಪ್ರತಿಭಾ ತಿವಾರಿ

ಪ್ರತಿಭಾ ತಿವಾರಿ

ಶಿಕ್ಷಕಿಯೆಂದರೆ ಕೇವಲ ಶಾಲೆಯಲ್ಲಿ ಪಾಠ ಮಾಡುವುದನ್ನು ನಾವು ನೋಡಿದ್ದೇವೆ, ಆದರೆ ಭೋಪಾಲ್​ನ ಗಣಿತ ಶಿಕ್ಷಕಿಯೊಬ್ಬರು ತಾವೂ ತಮ್ಮ ಜಮೀನಿನಲ್ಲಿ ಸಾವಯವ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಲ್ಲದೆ, ಸಾವಿರಾರು ರೈತರಿಗೆ ರಾಸಾಯನಿಕದಿಂದಾಗುವ ಅಪಾಯವನ್ನು ಮನವರಿಕೆ ಮಾಡಿ ಅವರೂ ಕೂಡ ಸಾವಯವ ಕೃಷಿ ಅಳವಡಿಸಿಕೊಳ್ಳುವಂತೆ ಮಾಡಿದ್ದಾರೆ. ಜೊತೆಗೆ ರೈತರಿಗೆ ಉತ್ತಮ ಬೆಲೆಗಳನ್ನು ಒದಗಿಸುವುದಲ್ಲದೆ, ಗ್ರಾಹಕರಿಗೂ ಕೈಗೆಟಕುವ ದರದಲ್ಲಿ ಸಾವಯವ ಆಹಾರ ಪದಾರ್ಥಗಳನ್ನು ಒಗಿಸಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದ್ದಾರೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Bhopal, India
  • Share this:

    ಸಾಮಾನ್ಯವಾಗಿ ಶಿಕ್ಷಕರು(Teacher) ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ ಅಂತಾ ಹೇಳುವುದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೆವು ಕೂಡ. ಆದರೆ ಭೋಪಾಲ್ ನ ಶಾಲೆಯೊಂದರಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಯೊಬ್ಬರು ಕೋಟಿ ರೂಪಾಯಿಯ ಲಾಭದಾಯಕ ಕೃಷಿ ವ್ಯವಹಾರವನ್ನು ಮಾಡುತ್ತಿದ್ದಾರೆ. ಸಾವಿರಾರು ರೈತರ (Farmer) ಆದಾಯವನ್ನು ಸಹ ಡಬಲ್ ಎಂದರೆ ದ್ವಿಗುಣ ಮಾಡುವುದರೊಂದಿಗೆ ರೈತರ ಭವಿಷ್ಯವನ್ನು ರೂಪಿಸಿದ್ದಾರೆ. ಹಲವಾರು ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರತಿಭಾ ತಿವಾರಿ  ಲಾಭದಾಯಕ ಕೃಷಿ ವ್ಯವಹಾರವನ್ನು ಮಾಡುತ್ತಿದ್ದಾರೆ. ಸಾವಯವ ಕೃಷಿಯಿಂದ (Organic Farming) ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ಸುಮಾರು 1400 ರೈತರಿಗೆ ಸಹಾಯ ಸಹ ಮಾಡಿದ್ದಾರೆ.


    ಪ್ರತಿಭಾ ಅವರ ಪತಿಯ ಊರಿನಲ್ಲಿತ್ತು 50 ಎಕರೆ ಭೂಮಿ


    ಮದುವೆಯ ನಂತರ, ಪ್ರತಿಭಾ ತನ್ನ ಪತಿಯೊಂದಿಗೆ ಭೋಪಾಲ್​ನಲ್ಲಿ ನೆಲೆಸಿದರು. ಇಬ್ಬರೂ ಅಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಪತಿಯ ಕುಟುಂಬವು ಭೋಪಾಲ್​ನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಹರ್ದಾದಲ್ಲಿ 50 ಎಕರೆ ಭೂಮಿಯನ್ನು ಹೊಂದಿತ್ತು. ಪ್ರತಿಭಾ ಅವರು ಹರ್ದಾಗೆ ಭೇಟಿ ನೀಡಿದಾಗ, ರೈತರು ತಮ್ಮ ಹೆಚ್ಚಿನ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲು ರಾಸಾಯನಿಕಗಳನ್ನು ಬಳಸುವುದನ್ನು ಮತ್ತು ಸಣ್ಣ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುವುದನ್ನು ಗಮನಿಸಿದ್ದರು


    ಸ್ವಲ್ಪ ಭೂಮಿಯಲ್ಲಿ ಸಾವಯವ ಬೆಳೆಗಳನ್ನು ಬೆಳೆಯಲು ಕಾರಣವೇನು ಎಂದು ಅವರು ರೈತರನ್ನು ಕೇಳಿದಾಗ, ರೈತರು ಆ ಬೆಳೆಗಳು ತಮ್ಮ ಸ್ವಂತ ಬಳಕೆಗಾಗಿ ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆದ ಬೆಳೆಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ ಎಂದು ಹೇಳಿದ್ದಾರೆ.


    " ರೈತರು ತಮ್ಮ ಬೆಳೆಗಳಿಗೆ ಅನೇಕ ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಅಂಶದಿಂದ ನಾನು ಸ್ವಲ್ಪ ಬೇಸರವಾಯಿತು, ನಂತರ ನಾನೂ ಸಾವಯವ ಕೃಷಿಯ ಕಡೆಗೆ ಗಮನಹರಿಸಿದೆ"   ಎಂದು ಪ್ರತಿಭಾ ಹೇಳಿದ್ದಾರೆ.


    ಇದನ್ನೂ ಓದಿ: Good News: ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಅಲ್ಫೋನ್ಸೋ ಮಾವು, ಬೆಲೆ ಕೇಳಿದ್ರೆ ತಲೆ ಸುತ್ತೋದು ಗ್ಯಾರಂಟಿ!


    ಸಾವಯವ ಕೃಷಿಯ ಕಾರ್ಯಾಗಾರಗಳಲ್ಲಿ ಭಾಗಿ


    ಸಾವಯವ ಕೃಷಿ ಬಗ್ಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ ಕೃಷಿಯ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಆರಂಭಿಸಿದ್ದಾರೆ. ಜೊತೆಗೆ ದೆಹಲಿಯಲ್ಲಿ ಸಾವಯವ ಕೃಷಿಯ ಕೋರ್ಸ್​ ಸಹ ಸೇರಿಕೊಂಡರು ಹೆಚ್ಚು ವಿಷಯಗಳನ್ನು ತಿಳಿದುಕೊಂಡಿದ್ದಾರೆ.


    ಪ್ರತಿಭಾ ತಾವೇ ರೈತರಿಗೆ ಉದಾಹರಣೆಯಾಗಬೇಕೆಂಬ ಉದ್ದೇಶದಿಂದ ಮೊದಲು  ತಮ್ಮ ಪತಿ ಮತ್ತು ಅವರ ಕುಟುಂಬವನ್ನು ಸಾವಯವ ಕೃಷಿ ಮಾಡಲು ತಿಳಿಸಿದ್ದಾರೆ. ಮೊದ ಮೊದಲು ಹಿಂಜರಿಯುತ್ತಿದ್ದ ಕುಟುಂಬದವರಿಗೆ ಪ್ರತಿಭಾ, ಸಣ್ಣ ಜಮೀನಿನಲ್ಲಿ  ಸಾವಯವ ಕೃಷಿ ಮಾಡುವ ಮೂಲಕ ಪ್ರಾರಂಭಿಸಲು ಸೂಚಿಸಿದರು. ಆದ್ದರಿಂದ, 2016 ರಲ್ಲಿ, ಅವರು ಭೂಮಿಯ ಸಣ್ಣ ಭಾಗದಲ್ಲಿ ಗೋಧಿಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ.


    ಐದು ವರ್ಷ ಸಮಯ


    ಸಾಂಪ್ರದಾಯಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾಗಲು ಸುಮಾರು ಮೂರರಿಂದ ಐದು ವರ್ಷಗಳು ಬೇಕಾಯಿತು. ಏಕೆಂದರೆ ಭೂಮಿಯನ್ನು ವಿಷಕಾರಿ ರಾಸಾಯನಿಕಗಳಿಂದ ತೊಡೆದು ಹಾಕಬೇಕು ಮತ್ತು ಸಾವಯವ ಒಳಹರಿವುಗಳನ್ನು ಬಳಸಿಕೊಂಡು ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸಿ ಸುಧಾರಿಸಬೇಕು. ಮಣ್ಣಿನ ಸಾವಯವ ಇಂಗಾಲವು ಸಾವಯವ ವಸ್ತುವಿನ ಮುಖ್ಯ ಅಂಶವಾಗಿದೆ ಮತ್ತು ಮಣ್ಣಿಗೆ ಅದರ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ರಚನೆ ಮತ್ತು ಫಲವತ್ತತೆಯನ್ನು ನೀಡುತ್ತದೆ ಎಂದು ಪ್ರತಿಭಾ ಹೇಳುತ್ತಾರೆ.


    ಭಾರತದಲ್ಲಿ, ಮಣ್ಣಿಗೆ ಸರಿಯಾದ ರಸಗೊಬ್ಬರವನ್ನು ಒದಗಿಸದೆ ಮತ್ತು ಅದರ ಉತ್ಪಾದಕತೆಯನ್ನು ಕಡಿಮೆ ಮಾಡದೆ ತೀವ್ರವಾದ ಕೃಷಿಯಿಂದಾಗಿ ಕಳೆದ 70 ವರ್ಷಗಳಲ್ಲಿ ಮಣ್ಣಿನ ಸಾವಯವ ಇಂಗಾಲದ (ಎಸ್ಒಸಿ) ಅಂಶವು ಶೇಕಡಾ 1 ರಿಂದ 0.3 ಕ್ಕೆ ಇಳಿದಿದೆ.


    ಇದನ್ನೂ ಓದಿ: Uttara Kannada: ತಾಳೆ ಮರದಿಂದ ತುಂಬಿ ಹೋದ ವರದಾ ದಂಡೆ! ಬಂಡವಾಳದ 3 ಪಟ್ಟು ಲಾಭ ಗಳಿಸಿದ ಬನವಾಸಿ ಕೃಷಿಕರು


    ಹಸುವಿನ ಸಗಣಿ, ಜೀವಾಮೃತ ನಂತಹ ಸಾವಯವ ಗೊಬ್ಬರಗಳ ಬಳಜೆ


    ಸಾವಯವ ಕೃಷಿ ಪರಿವರ್ತನೆಯ ಸಮಯದಲ್ಲಿ, ರೈತರು ಸಾಮಾನ್ಯವಾಗಿ ತಮ್ಮ ಇಳುವರಿಯಲ್ಲಿ ಕುಸಿತವನ್ನು ಅನುಭವಿಸುತ್ತಾರೆ. ಸಾವಯವ ಕೃಷಿಗೆ ಬದಲಾಗಿದ್ದರಿಂದ  ಭೂಮಿಯಲ್ಲಿ ಗೋಧಿ ಇಳುವರಿ ಎಕರೆಗೆ 18 ಕ್ವಿಂಟಾಲ್ ನಿಂದ 10 ಕ್ವಿಂಟಾಲ್​ಗೆ ಇಳಿದಿತ್ತು. ಆದರೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಬೇಕು, ಇದಕ್ಕಾಗಿ  ಹಸುವಿನ ಸಗಣಿ, ಜೀವಾಮೃತ ಮತ್ತು ಮಲ್ಚಿಂಗ್ ನಂತಹ ಸಾವಯವ ಗೊಬ್ಬರಗಳನ್ನು ಬಳಸಬೇಕು ಎಂದು ಪ್ರತಿಭಾ ಹೇಳಿದ್ದಾರೆ.



    ಭೂಮಿಶಾ ಆರ್ಗಾನಿಕ್ಸ್ ಶಾಪ್  ಮೂಲಕ ಸಾವಯವ ಆಹಾರ ಉತ್ಪನ್ನ ಮಾರಾಟ


    ತಾವೂ ಸಾವಯವ ಕೃಷಿಗೆ ಬದಲಾಗಿದ್ದಲ್ಲದೆ,  ಪ್ರತಿಭಾ ಅವರು ಭೋಪಾಲ್ ನಲ್ಲಿ 2016 ರಲ್ಲಿ 'ಭೂಮಿಶಾ ಆರ್ಗಾನಿಕ್ಸ್' ಅಂಗಡಿಯನ್ನು ಪ್ರಾರಂಭಿಸಿದರು.  ಇದರಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ಗೋಧಿ, ಅಕ್ಕಿ, ಬೇಳೆಕಾಳುಗಳು, ಮಸಾಲೆಗಳು, ಉಪ್ಪಿನಕಾಯಿ, ಗಿಡಮೂಲಿಕೆಗಳು, ಹಿಟ್ಟು, ಕ್ವಿನೋವಾ, ಅಗಸೆ ಮತ್ತು ಚಿಯಾದಂತಹ ಖಾದ್ಯ ಬೀಜಗಳು ಮತ್ತು ಕೋಲ್ಡ್ ಪ್ರೆಸ್ಡ್ ಎಣ್ಣೆಗಳು ಸೇರಿದಂತೆ 70 ರೀತಿಯ ಸಾವಯವ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಶುರುಮಾಡಿದರು.


    ಅವರು ಭೋಪಾಲ್, ದೆಹಲಿ ಮತ್ತು ಮುಂಬೈನಲ್ಲಿ ಸುಮಾರು 400 ಜನರ ಮೀಸಲು ಗ್ರಾಹಕರನ್ನು ಹೊಂದಿದ್ದಾರೆ. ಅಲ್ಲದೆ ಅವರು ಗ್ರಾಹಕರಿಗೆ ಸಾವಯವ ಕೃಷಿಗೆ ಬದಲಾಗುವ ಸಂದರ್ಭದಲ್ಲಿ  ರಾಸಾಯನಿಕಗಳ ಪ್ರಮಾಣವನ್ನು ಕಡಿಮೆ ಬಳಿಸಿರುವ ಬಗ್ಗೆಯೂ ಮಾಹಿತಿ ನೀಡಿ ಮಾರಾಟ ಮಾಡಿರುವುದಾಗಿ ಪ್ರತಿಭಾ ತಿಳಿಸಿದ್ದಾರೆ.


    ಇಡೀ ಭೂಮಿಯನ್ನು ಸಾವಯವವಾಗಿ ಪರಿವರ್ತನೆ


    2019 ರ ಹೊತ್ತಿಗೆ, ಪ್ರತಿಭಾ ತನ್ನ ಇಡೀ ಭೂಮಿಯನ್ನು ಸಾವಯವವಾಗಿ ಪರಿವರ್ತಿಸಿದ್ದಲ್ಲದೆ,  ಮತ್ತು ಸರ್ಕಾರದಿಂದ ಪ್ರಮಾಣಪತ್ರವನ್ನು ಸಹ ಪಡೆದರು. ಅವರು ಗೋಧಿ, ಮತ್ತು ದ್ವಿದಳ ಧಾನ್ಯಗಳಾದ ಹುರುಳಿ ಕಾಳು, ಕಡಲೆ ಮತ್ತು ಬಟಾಣಿಗಳನ್ನು ಬೆಳೆಯುತ್ತಾರೆ. ರೋಸೆಲ್ಲಾ, ನುಗ್ಗೆಕಾಯಿ, ದಾಸವಾಳ ಮತ್ತು ಅಲೋವೆರಾದಂತಹ ಔಷಧೀಯ ಸಸ್ಯಗಳನ್ನು ಸಹ ಅಲ್ಲಿ ಬೆಳೆಸುತ್ತಿದ್ದಾರೆ.


    ರೈತರ ಆದಾಯ ದುಪ್ಪಟ್ಟು ಮಾಡಿದ ಶಿಕ್ಷಕಿ


    ಪ್ರತಿಭಾ ಅವರು ಸಾವಯವ ಕೃಷಿಯನ್ನು ತಾವಷ್ಟೇ ಅಲ್ಲ,  ಹರ್ದಾದಲ್ಲಿನ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು.  ರೈತರೊಂದಿಗೆ ಹಲವು ಸಭೆಗಳನ್ನು ನಡೆಸಿದರು ಮತ್ತು ರಾಸಾಯನಿಕ ಆಧಾರಿತ ಕೃಷಿಯ ಹಾನಿಕಾರಕ ಪರಿಣಾಮಗಳು ಮತ್ತು ಸಾವಯವ ಕೃಷಿಯ ಪ್ರಯೋಜನಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು. ಅವರು ತಮ್ಮದೇ ಆದ ಉದಾಹರಣೆಯನ್ನು ಅವರಿಗೆ ನೀಡಿದರು ಮತ್ತು ಸಾವಯವ ಕೃಷಿಯಿಂದಾಗಿ ಇಳುವರಿಯಲ್ಲಿ ಯಾವುದೇ ನಷ್ಟವನ್ನು ಅನುಭವಿಸಲಿಲ್ಲ ಎಂಬುದಾಗಿ ಮನದಟ್ಟು ಮಾಡಿದರು.


    "ರೈತರ ಮನವೊಲಿಸುವುದು ಮೊದಲಿಗೆ ತುಂಬಾನೇ ಕಷ್ಟಕರವಾಗಿತ್ತು. ಈ ಪ್ರದೇಶದಲ್ಲಿನ ಅವರಲ್ಲಿ ಹೆಚ್ಚಿನವರು ಸಣ್ಣ ಭೂಮಿಯನ್ನು ಹೊಂದಿದ್ದರಿಂದ, ಸಾವಯವ ಕೃಷಿಯಿಂದ ತಮ್ಮ ಉತ್ಪಾದನೆ ಮತ್ತು ಆದಾಯವು ಕುಸಿಯುತ್ತದೆ ಎಂದು ಅವರು ಹೆದರುತ್ತಿದ್ದರು. ನಾನು ಅವರಿಗೆ ಇಳುವರಿ ನಿಧಾನವಾಗಿ ಹೆಚ್ಚಾಗುತ್ತದೆ ಮತ್ತು ಅವರು ಖರ್ಚನ್ನು ಕಡಿಮೆಗೊಳಿಸುತ್ತದೆ ಎಂದು ಮನವರಿಗೆ ಮಾಡಿದೆ.


    ಪರಿವರ್ತನೆಯ ಅವಧಿಯಲ್ಲಿ, ಅವರು ರಾಸಾಯನಿಕಗಳನ್ನು  ಕಡಿಮೆ ಬಳಸಬೇಕು ಎಂದು ನಾನು ಅವರಿಗೆ ಹೇಳಿದೆ, ಇದರಿಂದ ಅವರ ಉತ್ಪಾದನೆ ತೀವ್ರವಾಗಿ ಕುಸಿಯಲಿಲ್ಲ. ಮೂರು ವರ್ಷಗಳ ನಂತರ, ಸಾವಯವ ಪ್ರಮಾಣೀಕರಣಕ್ಕಾಗಿ ರೈತರು ತಮ್ಮ ಭೂಮಿಯನ್ನು ನೋಂದಾಯಿಸಲು ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರು ಪ್ರಮಾಣಪತ್ರವನ್ನು ಪಡೆದ ನಂತರ, ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಮತ್ತು ನಾವು ಅವರಿಗೆ ಅಗತ್ಯವಾದ ಎರೆಗೊಬ್ಬರ ಮತ್ತು ಜೀವಾಮೃತದಂತಹ ಸಾವಯವ ವಸ್ತುಗಳನ್ನು ಬಳಸಲು ನಾವು ಅವರಿಗೆ  ಹೇಳಿಕೊಡುತ್ತೇವೆ ಎಂದು  ಅವರಿಗೆ ಅಭಯ ನೀಡಿದೆವು


    ತಮ್ಮ   ಪ್ರಯತ್ನದಿಂದ ಪ್ರತಿಭಾ 5-6 ರೈತರನ್ನು ಸಾವಯವ ಕೃಷಿಯನ್ನು ಕೈಗೊಳ್ಳಲು ಮನವೊಲಿಸುವಲ್ಲಿ ಯಶಸ್ವಿಯಾದರು. " ಕೃಷಿ ಹಂತದಲ್ಲಿ ನಾನು ಅವರಿಗೆ ಎಲ್ಲಾ ಸಹಾಯವನ್ನು ಒದಗಿಸುವುದಲ್ಲದೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತೇನೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೆ" ಎಂದು ಅವರು ಹೇಳುತ್ತಾರೆ.


    ಸಾವಯವ ಕೃಷಿಗೆ ಬದಲಾದ ರೈತ ದಾದಾಮ್ ಚಂದ್ ಇದರ ಬಗ್ಗೆ ಹೇಳುವುದೇನು?


    ರತ್ಲಾಮ್ ಬಳಿಯ ಸರ್ದಾರ್ಪುರ ಗ್ರಾಮದ ರೈತ ದಾದಾಮ್ ಚಂದ್ ಕಳೆದ ಆರು ವರ್ಷಗಳಿಂದ ಪ್ರತಿಭಾ ಅವರೊಂದಿಗೆ ಸಂಪರ್ಕದಲ್ಲಿದ್ದು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.


    " ಅಕ್ಕ ತರಬೇತಿ ಕಾರ್ಯಕ್ರಮಕ್ಕಾಗಿ ನಮ್ಮ ಗ್ರಾಮಕ್ಕೆ ಬಂದಿದ್ದರು. ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯ ಮತ್ತು ಮಣ್ಣಿಗೆ ಉಂಟಾಗುವ ಅಪಾಯಗಳ ಬಗ್ಗೆ ಅವರು ನಮಗೆ ಮಾಹಿತಿ ನೀಡಿದರು.  ನಂತರ ನಾನು ಕೂಡ ಸಾವಯವ ಕೃಷಿ ಮಾಡುವುದಕ್ಕೆ ನಿರ್ಧರಿಸಿದೆ, ನನ್ನ ಮೂರು ಎಕರೆಯಲ್ಲಿ  ಗೋದಿ ಬೆಳೆದೆ" ಎಂದು 54 ವರ್ಷದ ದಾದಾಮ್ ಚಂದ್ ಹೆಮ್ಮೆಯಿಂದ ಹೇಳಿಕೊಂಡರು.


    " ಮೊದಲು ಒಂದು ಎಕರೆಯಲ್ಲಿ 13 ಕ್ವಿಂಟಾಲ್ ಇದ್ದ ಉತ್ಪಾದನೆ ಅರ್ಧಕ್ಕೆ ಇಳಿದಿತ್ತು, ನನಗೆ ಕೇವಲ 6 ಕ್ವಿಂಟಾಲ್ ಸಿಕ್ಕಿತು. ನಾನು ತುಂಬಾ ಚಿಂತಿತನಾಗಿದ್ದೆ. ನಾನು ಇದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಭಾವಿಸಿದೆ. ಆದರೆ ಅಕ್ಕ ನನಗೆ ಪಟ್ಟು ಸಡಿಲಿಸದೆ ಇರಲು ಹೇಳಿ ಧೈರ್ಯ ತುಂಬಿದರು. ಮುಂದಿನ ವರ್ಷ ಇಳುವರಿ 9 ಕ್ವಿಂಟಾಲ್​,  ಅದರ ಮುಂದಿನ ವರ್ಷದಲ್ಲಿ 13 ಕ್ವಿಂಟಾಲ್​ಗೆ ಏರಿತು.  ನಾವು ಮಂಡಿಯಲ್ಲಿ ಮಾರಾಟ ಮಾಡಿದಾಗ, ನಮಗೆ ಪ್ರತಿ ಕೆಜಿ ಗೆ 20 ರೂಪಾಯಿ ಸಿಗುತ್ತಿತ್ತು. ಆದರೆ ಅಕ್ಕ ನಮ್ಮಿಂದ ಪ್ರತಿ ಕೆಜಿಗೆ 35-36 ರೂಪಾಯಿಗೆ ಖರೀದಿಸುತ್ತಾರೆ" ಎಂದು ರೈತ ತನ್ನ ಸಾವಯವ ಕೃಷಿಯ ಕಥೆಯನ್ನು ಹೇಳಿಕೊಂಡಿರು.


    ಈ ರೈತನ  ಯಶಸ್ಸನ್ನು ನೋಡಿ, ಸರ್ದಾರ್ಪುರ, ರತ್ಲಾಮ್ ಮತ್ತು ನೀಮುಚ್ ನ ಸುಮಾರು 70 ರೈತರು ಪ್ರತಿಭಾ ಅವರೊಂದಿಗೆ ಸಂಪರ್ಕಕ್ಕೆ ಬಂದು, ಅಲ್ಲಿ ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಮತ್ತು ಅದಕ್ಕೆ ಸರಿಯಾದ ಬೆಲೆಯನ್ನು ಸಹ ಪಡೆಯಬಹುದು ಎಂಬ ನಂಬಿಕೆ ಬಂದ ಮೇಲೆ ತಾವೂ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.


    ಮೊದಲು 1.5 ಎಕರೆಗೆ ಕೃಷಿ ಮಾಡಲು ಸಲಹೆ


    ನಾವು ಮೊದಲು ಮೂರು ವರ್ಷಗಳ ಕಾಲ 1.5 ಎಕರೆ ಭೂಮಿಯಲ್ಲಿ ಸಾವಯವ ಕೃಷಿಯನ್ನು ಮಾಡಲು ರೈತರಿಗೆ ಹೇಳುತ್ತೇವೆ. ಅವರು ಪ್ರಯೋಜನ ಪಡೆದರೆ ಮತ್ತು ಅವರ ಆದಾಯ ಹೆಚ್ಚಾಗುವುದನ್ನು ನೋಡಿದರೆ, ಅವರು ನಮ್ಮೊಂದಿಗೆ ಮುಂದುವರೆಯಬಹುದು. ಇನ್ನು ಉತ್ಪನ್ನಗಳನ್ನು ಇತರ ಅಂಗಡಿಗಳು ಮತ್ತು ಚಿಲ್ಲರೆ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅಲ್ಲಿಯೂ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಬಹುದು ಎಂದು ಪ್ರತಿಭಾ ಹೇಳುತ್ತಾರೆ.


    ರೈತರು ಸಾವಯವ ಕೃಷಿಯಿಂದ ಈಗಾಗಲೇ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ.  ರಾಸಾಯನಿಕಗಳನ್ನು ಬಳಸಿ ಒಂದು ಎಕರೆ ಭೂಮಿಯಲ್ಲಿ ಗೋಧಿ ಬೆಳೆದರೆ, ಅವರು 30,000 ರಿಂದ 35,000 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಮತ್ತು ಸಾವಯವ ಕೃಷಿಗೆ 7,000-8,000 ರೂಪಾಯಿ ಅಷ್ಟೇ ಸಾಕು ಎನ್ನುತ್ತಾರೆ ಪ್ರತಿಭಾ.


    ಕೃಷಿ ಉದ್ಯಮದಲ್ಲಿ ಹೂಡಿಕೆ


    ಪ್ರತಿಭಾ ಅವರು ಕೇವಲ ಕೃಷಿಯಷ್ಟೇ ಮಾಡುತ್ತಿಲ್ಲ, ತಮ್ಮ ಭೂಮಿಶಾ ಶಾಪ್ ಜಜೊತೆಗೆ ಭೋಪಾಲ್​ ನಲ್ಲಿ ಗೋಧಿ ಮತ್ತು ರಾಗಿಯಂತಹ ಏಕದಳ ಧಾನ್ಯಗಳನ್ನು ಹಿಟ್ಟಿನಲ್ಲಿ ಅರೆಯುವ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಇಲ್ಲಿಯವರೆಗೆ ಸುಮಾರು 50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಬೇಳೆ ಕಾಳುಗಳಿಗಾಗಿ ಒಂದು ಸಣ್ಣ ಸಂಸ್ಕರಣಾ ಘಟಕವಿದೆ. ಪ್ರಸ್ತುತ 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿರಿಧಾನ್ಯಗಳ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಉದ್ಯಮಿಯಾಗಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ.


    ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತಿರುವ ಪ್ರತಿಭಾ


    ಪ್ರತಿಭಾ ತಮ್ಮ ಈ ಕೃಷಿ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ಸೂರತ್​ನಲ್ಲಿ ಹೊಸ ಸಾವಯವ ಮಳಿಗೆಗಳನ್ನು ಸಹ ತೆರೆದಿದ್ದಾರೆ. ರಾಗಿ ಉತ್ಪನ್ನಗಳನ್ನು ರಫ್ತು ಮಾಡಲು ಅವರು ಇತ್ತೀಚೆಗೆ ಇಂಡೋನೇಷ್ಯಾದ ಎರಡು ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.


    ಸಾವಯವ ಕೃಷಿಯನ್ನು ಪ್ರಾರಂಭಿಸುವ ನನ್ನ ಮೂಲ ಉದ್ದೇಶ ಹಾನಿಕಾರಕ ಅಭ್ಯಾಸಗಳನ್ನು ಕೊನೆಗೊಳಿಸುವುದಾಗಿತ್ತು. ರಾಸಾಯನಿಕಗಳು ಪರಿಸರ, ರೈತ ಮತ್ತು ಗ್ರಾಹಕರಿಗೆ ಹಾನಿ ಮಾಡುತ್ತಿವೆ. ಆರೋಗ್ಯಕರವಾದ ಆಹಾರ ತಿನ್ನುವುದು ಪ್ರತಿಯೊಬ್ಬರ ಹಕ್ಕು. ನಾನು ರೈತರಿಗೆ ಉತ್ತಮ ಬೆಲೆ ಪಡೆಯಲು ಸಹಾಯ ಮಾಡಲು ಬಯಸುತ್ತೇನೆ, ಅದರ ಜೊತೆಗೆ ಸಾವಯವ ಆಹಾರವನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಸಹ ನಾನು ಬಯಸುತ್ತೇನೆ" ಎಂದು ಪ್ರತಿಭಾ ತಿಳಿಸಿದ್ದಾರೆ.

    Published by:Rajesha B
    First published: