• ಹೋಂ
  • »
  • ನ್ಯೂಸ್
  • »
  • business
  • »
  • Karwar: ನಾಲ್ಕು ವರ್ಷ ಪ್ರವಾಹದಿಂದ ಕೈ ಸುಟ್ಟುಕೊಂಡ ಕಾರವಾರದ ರೈತರು; ಈ‌ ಬಾರಿ ಕೃಷಿ ಚಟುವಟಿಕೆ ಆರಂಭಿಸಲು ಮೀನಮೇಷ

Karwar: ನಾಲ್ಕು ವರ್ಷ ಪ್ರವಾಹದಿಂದ ಕೈ ಸುಟ್ಟುಕೊಂಡ ಕಾರವಾರದ ರೈತರು; ಈ‌ ಬಾರಿ ಕೃಷಿ ಚಟುವಟಿಕೆ ಆರಂಭಿಸಲು ಮೀನಮೇಷ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರ ಜಿಲ್ಲೆಯಲ್ಲಿ ಒಟ್ಟು 8641 ರೈತರಿಗೆ, 538.45 ಲಕ್ಷ ರು. ಪರಿಹಾರವನ್ನು ವಿತರಿಸಿದರೂ ಇದು ‘ಆನೆ ಹೊಟ್ಟೆಗೆ ಸಾಸಿವೆ’ ಎನ್ನುವಂತ ಭಾವನೆ ರೈತಬಾಂಧವರಲ್ಲಿ ಮೂಡುವಂತಾಯಿತು.

  • Share this:

ಮುಂಗಾರು ಮಳೆ (Monsoon Rain) ಪ್ರಾರಂಭವಾಗುತ್ತಿದ್ದಂತೆ, ಅನ್ನದಾತರ ಕೃಷಿ ಚಟುವಟಿಕೆಗಳು (Agriculture Activities) ಪ್ರಾರಂಭವಾಗುವುದು ಸರ್ವೇ ಸಾಮಾನ್ಯ. ಆದರೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ (Karwar) ಕಳೆದೆರಡು ವರ್ಷಗಳಲ್ಲಿ ಆದ ಅತಿವೃಷ್ಠಿಯಿಂದ ನೆರೆ ಹಾವಳಿಗೆ (Flood) ತುತ್ತಾಗಿ ಕೈಸುಟ್ಟುಕೊಂಡ ರೈತ ಬಾಂಧವರು (Farmers) ಈ ವರ್ಷ ಕೃಷಿ ಚಟುವಟಿಕೆಗೆ ಮುಂದಾಗುವರೇ ಅಥವಾ ಪಡಿತರ ವ್ಯವಸ್ಥೆಯಲ್ಲಿ ಸಿಗುವ ಉಚಿತ ಅಕ್ಕಿಯನ್ನೇ ನಂಬಿಕೊಂಡು ಸುಮ್ಮನಿರುವುದೇ ಎಂಬ ಗೊಂದಲದಲ್ಲಿದ್ದಾರೆ. ಕಳೆದ ವರ್ಷ ಅತಿವೃಷ್ಠಿಯಿಂದ ರೈತರು ಎಂದೂ ಕಾಣದ ನಷ್ಟ ಹಾಗೂ ತಾಪತ್ರಯವನ್ನು ಅನುಭವಿಸುವಂತಾಗಿದೆ. ಕೋವಿಡ್-19 ಕಾರಣ ಎರಡು ವರ್ಷ ಕೃಷಿ ಕ್ಷೇತ್ರದಲ್ಲಿ ಅಪಾರ ನೋವು ಅನುಭವಿಸಿದ ರೈತರಿಗೆ, ಅತಿವೃಷ್ಠಿ ಮಹಾಕಂಟಕವಾಗಿ ಪರಿಣಮಿಸಿತ್ತು.


ಕಳೆದ ವರ್ಷ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆಯಾದ 187 ಮಿ.ಮೀ. ಬದಲು ವಾಸ್ತವಿಕವಾಗಿ 407 ಮಿ.ಮೀ. ಅಂದರೆ ಶೇ.118ರಷ್ಟು ಮಳೆಯಾಗಿತ್ತು. ಅದರಲ್ಲೂ ಕಳೆದ ವರ್ಷ ಜು. 22 ರಂದು ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ವಾಡಿಕೆ ಮಳೆಗಿಂತ 3.4 ರಷ್ಟು ಜಾಸ್ತಿ ಹಾಗೂ ಘಟ್ಟದ ಮೇಲಿನ ಪ್ರದೇಶದಲ್ಲಿ 10 ಪಟ್ಟು ಜಾಸ್ತಿ ಮಳೆಯಾಗಿ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು. ಇದರಿಂದ ತತ್ತರಿಸಿ ಹೋಗಿರುವ ಅನ್ನದಾತರು ಈ ವರ್ಷ ಬೇಸಾಯದತ್ತ ಮುಖ ಮಾಡಲು ಸಹ ಹಿಂಜರಿಯುವಂತಾಗಿದೆ.


ಜಲಾವೃತಗೊಳ್ಳುವ ಪ್ರದೇಶದ ಗುರುತು


ಅದರಲ್ಲೂ ಜಿಲ್ಲಾಡಳಿತ ಹಾಗೂ ಕೆಪಿಟಿಸಿಎಲ್‌ ನವರು ಕಾಳಿನದಿ ತೀರಪ್ರದೇಶದಲ್ಲಿ ಕದ್ರಾ ಡ್ಯಾಂನಿಂದ ಎಷ್ಟು ನೀರು ಬಿಟ್ಟರೆ ಎಷ್ಟೆಲ್ಲಾ ಪ್ರದೇಶ ಜಲಾವೃತಗೊಳ್ಳಲಿದೆ ಎಂಬುದರ ಬಗ್ಗೆ ನಾಮಫಲಕಗಳನ್ನು ಅಳವಡಿಸಿದ್ದಾರೆ. ಕಾರವಾರ ತಾಲೂಕಿನ ಬಹುತೇಕ ಕೃಷಿ ಭೂಮಿ ಈ ಭಾಗದಲ್ಲಿ ಬರುವದರಿಂದ ರೈತ ಬಾಂಧವರು ಕಂಗಾಲಾಗುವಂತಾಗಿದೆ.


ಇದನ್ನೂ ಓದಿ:  Kolara: ಮಕ್ಕಳನ್ನು ಬಿಟ್ಟು ಹೋದ ಪೋಷಕರು! ತಮ್ಮನ ಓದಿಸಲು ಈ ಬಾಲಕಿ ಪಡುತ್ತಿರೋ ಕಷ್ಟ ನೋಡಿ


ಒಂದು ವೇಳೆ ಗಟ್ಟಿ ಮನಸ್ಸು ಮಾಡಿ ಕೃಷಿಗೆ ಮುಂದಾದರೂ, ಕಳೆದೆರಡು ವರ್ಷಗಳಂತೆ ನೆರೆಹಾವಳಿಗೆ ತುತ್ತಾದರೆ ಮುಂದಿನ ಗತಿ ಏನು? ಎಂಬ ಆತಂಕ ರೈತ ಬಾಂಧವರನ್ನು ಕಾಡಲಾರಂಭಿಸಿದೆ. ಆದ್ದರಿಂದ ಈ ವರ್ಷ ನಾವು ಕೃಷಿ ಮಾಡಬೇಕೊ? ಅಥವಾ ಕೈಬಿಡಬೇಕೊ? ಎಂಬುದನ್ನು ಸರಕಾರವೇ ತಿಳಿಸಿದರೆ ಒಳ್ಳೆಯದು ಎಂದು ರೈತರು ಅಭಿಪ್ರಾಯಪಡುತ್ತಾರೆ.


ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ


ಕೋವಿಡ್-19 ಕಾರಣ ಎರಡು ವರ್ಷ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ಪರದಾಡಿದ ರೈತರಿಗೆ, ಎರಡು ವರ್ಷದ ನೆರೆಹಾವಳಿ ‘ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ’ ಎನ್ನುವಂತಹ ಸ್ಥಿತಿ ಉಂಟು ಮಾಡಿತ್ತು. ನೆರೆಹಾವಳಿ ಕಳೆದ ವರ್ಷ ಎಲ್ಲಿಲ್ಲದ ಹಾನಿಯನ್ನು ಬೇಸಾಯ ಹಾಗೂ ತೋಟಗಾರಿಕೆಯನ್ನೆ ಅವಲಂಬಿಸಿದ ರೈತರಿಗೆ ಮಾಡಿತ್ತು.


ಜಿಲ್ಲೆಯಲ್ಲಿ ಕಳೆದ ವರ್ಷ ಅತಿವೃಷ್ಠಿಯಿಂದ ಒಟ್ಟು 3762.72 ಹೆಕ್ಟೇರ್‌ನಷ್ಟು ಕೃಷಿ ಕ್ಷೇತ್ರ ಹಾಗೂ 280.14 ಹೆಕ್ಟೇರ್‌ನಷ್ಟು ತೋಟಗಾರಿಕೆ ಕ್ಷೇತ್ರಕ್ಕೆ ಹಾನಿ ಮಾಡಿದರೆ, ಜಿಲ್ಲೆಯಲ್ಲಿ 1009.52 ಹೆಕ್ಟೇರ್ ಕೃಷಿ ಕ್ಷೇತ್ರ ಹಾಗೂ 43.92 ಹೆಕ್ಟೇರ್‌ನಷ್ಟು ತೋಟಗಾರಿಕೆ ಕ್ಷೇತ್ರದಲ್ಲಿ ಹೂಳು ಮತ್ತು ಮಣ್ಣು ತುಂಬುವ ಮೂಲಕ ಅಪಾರ ಹಾನಿಗೆ ಕಾರಣವಾಗಿತ್ತು.


ಅನಿಶ್ಚಿತತೆಯ ಪರಿಸ್ಥಿತಿ


ಸರ್ಕಾರ ಜಿಲ್ಲೆಯಲ್ಲಿ ಒಟ್ಟು 8641 ರೈತರಿಗೆ, 538.45 ಲಕ್ಷ ರು. ಪರಿಹಾರವನ್ನು ವಿತರಿಸಿದರೂ ಇದು ‘ಆನೆ ಹೊಟ್ಟೆಗೆ ಸಾಸಿವೆ’ ಎನ್ನುವಂತ ಭಾವನೆ ರೈತಬಾಂಧವರಲ್ಲಿ ಮೂಡುವಂತಾಯಿತು. ಅದರಲ್ಲೂ ಸಣ್ಣ-ಸಣ್ಣ ರೈತರು ನೆರೆಹಾವಳಿಯಿಂದ ಸಂಪೂರ್ಣವಾಗಿ ತತ್ತರಿಸಿ ಹೋಗುವಂತಾಗಿದ್ದು, ಅನಿಶ್ಚಿತತೆಯ ಪರಿಸ್ಥಿತಿಯಲ್ಲಿ ಈ ವರ್ಷ ಮತ್ತೆ ಕೃಷಿ ಮಾಡಿ ಬೆವರು ಸುರಿಸಲು ಬಹುತೇಕ ರೈತರು ಹಿಂದೇಟು ಹಾಕುತ್ತಿರುವುದು ಜಿಲ್ಲೆಯಲ್ಲೆಡೆ ಕಾಣಬಹುದಾಗಿದೆ.


ಇದನ್ನೂ ಓದಿ:  Mantri Group ನಿರ್ದೇಶಕ ಸುಶೀಲ್ ಪಾಂಡುರಂಗ ಅರೆಸ್ಟ್; ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಆರೋಪ


ನಂಬಿಕೆ ಹುಟ್ಟಿಸುವ ಕೆಲಸವಾಗಲಿ


ಕಳೆದ ಸತತ ಎರಡು ವರ್ಷಗಳಿಂದ ಅತಿವೃಷ್ಠಿಯಿಂದ ಅಪಾರವಾದ ಹಾನಿ ಅನುಭವಿಸಿದ ರೈತರು ಈ ವರ್ಷ ಕೃಷಿ ಮಾಡಲು ಹಿಂಜರಿಯುವಂತಾಗಿದೆ. ಕೃಷಿ ಮಾಡಿ ನಷ್ಟ ಅನುಭವಿಸಿದರೆ, ಪರಿಹಾರಕ್ಕಾಗಿ ತರಹೇವಾರಿ ದಾಖಲೆಗಳನ್ನು ಒದಗಿಸಿದರೂ ಸರ್ಕಾರದಿಂದ ಸಿಗುವ ಸಹಾಯದ ಬಗ್ಗೆ ಜನರಲ್ಲಿ ಅನುಮಾನವಿದೆ. ಆದ್ದರಿಂದ ರೈತರಲ್ಲಿ ಮತ್ತೆ ಕೃಷಿ ಬಗ್ಗೆ ನಂಬಿಕೆ ಹುಟ್ಟಿಸುವ ಪ್ರಯತ್ನ ವ್ಯವಸ್ಥೆಯಿಂದ ಆಗಬೇಕಾಗಿದೆ.

top videos
    First published: