ಏನಾದರೂ ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು, ಮನುಷ್ಯ (Human) ಏನು ಬೇಕಾದರೂ ಸಾಧನೆ ಮಾಡ್ತಾನೆ. ಓದು (Education) ಮುಗಿದ ಕೂಡಲೇ ಯಾವುದೋ ಒಂದು ಕೆಲಸ (Job) ಸಿಕ್ಕಿದ್ರೆ ಸಾಕು ಒಂದಿಷ್ಟು ಸಂಬಳ (Salary) ಅಂತ ಬಂದ್ರೆ ಸಾಕು ಅಂತ ಅಂದುಕೊಂಡಾಗಲೇ, ನಮ್ಮ ಅರ್ಧ ಕನಸುಗಳು (Dream) ನಿಂತಲ್ಲೇ ನಿಂತುಬಿಡುತ್ತವೆ. ಬೆರಳಣಿಕೆಯಷ್ಟು ಜನರಿಗೆ ಮಾತ್ರ ಚೆನ್ನಾಗಿ ಸಂಬಳ ಬರುತ್ತಿದ್ರೂ ತಾನು ಕಂಡ ಕನಸನ್ನು ನನಸು ಮಾಡುವವರೆಗೂ ಸುಮ್ಮನೆ ಕೂರುವುದಿಲ್ಲ. ಅಂಥವರಲ್ಲಿ ಈ ಯುವಕ ಕೂಡ ಒಬ್ಬರು ಎಂದರೆ ತಪ್ಪಾಗಲ್ಲ. ಯಾಕೆಂದ್ರೆ ಕೃಷಿ (Agriculture) ಮೇಲಿದ್ದ ಒಲವಿನಿಂದ ಇನ್ಫೋಸಿಸ್ ಕೆಲಸ ಬಿಟ್ಟಿದ್ದರು.
ಕೃಷಿಯಲ್ಲೇ ಏನಾದರೂ ಮಾಡಬೇಕು ಅಂದುಕೊಂಡಿದ್ದ ಈತ ಈಗ ಈ ಕೃಷಿಯಿಂದಲೇ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. 40 ಸಾವಿರ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಈಗ ದುಪ್ಪಟ್ಟು ಮೊತ್ತವನ್ನು ಗಳಿಸುತ್ತಿದ್ದಾರೆ.
ಕೃಷಿಗಾಗಿ ಇನ್ಫೋಸಿಸ್ ಕೆಲಸ ಬಿಟ್ಟ ಯುವಕ!
ಇನ್ಫೋಸಿಸ್ ಟೆಕ್ಕಿಯಾಗಿದ್ದ ವೆಂಕಟಸಾಮಿ ವಿಘ್ನೇಶ್ ತಿಂಗಳಿಗೆ 40 ಸಾವಿರ ಸಂಬಳ ಪಡೆಯುತ್ತಿದ್ದರು. ಆದರೆ ಇವರ ಮನಸ್ಸು ಯಾಕೋ ಕೃಷಿ ಕಡೆಗೆ ವಾಲಿತ್ತು. ಹೀಗಾಗಿ ಈ ಕೆಲಸ ಬಿಟ್ಟು ಜಪಾನ್‌ಗೆ ಹೋದರು. ಅಲ್ಲಿ ಬದನೆಕಾಯಿ ಬೆಳೆಸುವ ಮೂಲಕ ಇಂದು ಇತರರಿಗೆ ಮಾದರಿಯಾಗಿದ್ದಾರೆ. ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ ವಿಘ್ನೇಶ್ ತನ್ನ ಪೋಷಕರ ಜಮೀನಿನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದ್ದರು. ಅಲ್ಲಿಂದಲೇ ಸ್ಫೂರ್ತಿ ಪಡೆದುಕೊಂಡು ಕೆಲಸವನ್ನೇ ಬಿಟ್ಟಿದ್ದರು.
ಜಪಾನ್ನಲ್ಲಿ ಬದನೆಕಾಯಿ ಕೃಷಿ ಆರಂಭ!
ವಿಘ್ನೇಶ್ ಮೊದಲಿಗೆ ಚೆನ್ನೈ ಮೂಲದ ನಿಹಾನ್ ಎಡ್ಯುಟೆಕ್‌ಗೆ ಸೇರಿಕೊಂಡರು. ಇದು ಜಪಾನೀಸ್ ಸಂಸ್ಕೃತಿ ಮತ್ತು ಭಾಷೆಯಲ್ಲಿ ಜನರಿಗೆ ದೇಶದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡುವ ಮೊದಲು ತರಬೇತಿ ನೀಡುತ್ತದೆ.ಜಪಾನ್ ಜನಸಂಖ್ಯೆಯ ಕಾರಣದಿಂದಾಗಿ ರೈತರಿಗೆ ಬೇಡಿಕೆಯನ್ನು ಹೊಂದಿದೆ. ಜಪಾನ್ನಲ್ಲಿರುವ ಯುವಪೀಳಿಗೆಗೆ ಕೃಷಿ ಮೇಲೆ ಹೆಚ್ಚಿನ ಆಸಕ್ತಿ ಇರಲಿಲ್ಲ. ವಿಘ್ನೇಶ್ ಆರು ತಿಂಗಳಲ್ಲಿ ತನ್ನ ತರಬೇತಿಯನ್ನು ಮುಗಿಸಿ ಜಪಾನ್‌ಗೆ ತೆರಳಿದರು.
ಇದನ್ನೂ ಓದಿ: ಭತ್ತ, ಗೋಧಿ ಬಿಟ್ಟು ಬೀಟ್ರೂಟ್ ಬೆಳೆಯುತ್ತಿರುವ ರೈತರು! ದುಪ್ಪಟ್ಟು ಆದಾಯ
ಜಪಾನಿನ ಪ್ರಿಫೆಕ್ಚರ್‌ನಲ್ಲಿರುವ ಬದನೆ ಫಾರ್ಮ್‌ನಲ್ಲಿ ವಿಘ್ನೇಶ್ ಕೆಲಸ ಮಾಡಲು ಶುರು ಮಾಡಿದರು. ಈಗ ವಿಘ್ನೇಶ್ ತಿಂಗಳಿಗೆ 80 ಸಾವಿರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಈ ಬದನೆ ಫಾರ್ಮ್‌ನಲ್ಲಿ ವಿಘ್ನೇಶ್ ಅವರ ಕೆಲಸ ಏನೂ ಅಂದ್ರೆ, ಬೆಳೆಗನ್ನು ನೋಡಿಕೊಳ್ಳಬೇಕು. ಜೊತೆಗೆ ಕೊಯ್ಲಿಗೆ ಬಂದ ನಂತರ ಅದನ್ನು ಸ್ವಚ್ಛಗೊಳಿಸಬೇಕು. ಅಲ್ಲಿನ ಬಹಳಷ್ಟು ಕೃಷಿ ಕೆಲಸಗಳು ಯಾಂತ್ರೀಕೃತವಾಗಿದ್ದು, ಇದರಿಂದ ಕೂಲಿ ಕಾರ್ಮಿಕರು ಕಡಿಮೆಯಾಗುತ್ತಾರೆ.
ಮರಳಿ ದೇಶ ಸೇರುವ ತವಕದಲ್ಲಿ ವಿಘ್ನೇಶ್!
ವಿಘ್ನೇಶ್ ತನ್ನ ಕಲಿಕೆಯೊಂದಿಗೆ ಭಾರತಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರಂತೆ. ಅವರು ಈ ದೇಶದಲ್ಲಿ ನವೀನ ಕೃಷಿ ವಿಧಾನಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದ್ದಾರೆ. ನಾನು ಕೃಷಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವಾಗ ಇನ್ಫೋಸಿಸ್‌ನಲ್ಲಿ ನನ್ನ ಕೊನೆಯ ಕೆಲಸಕ್ಕಿಂತ ಹೆಚ್ಚು ಹಣವನ್ನು ಗಳಿಸುತ್ತಿದ್ದೇನೆ ಎಂದು ವಿಘ್ನೇಶ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ