ದೇಶದಲ್ಲಿ ಮೇಕೆ ಸಾಕಾಣಿ (Goat Farming) ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಣ್ಣ ಬಂಡವಾಳದಿಂದ ಈ ವ್ಯಾಪಾರವನ್ನು ಪ್ರಾರಂಭಿಸಲು ಸಾಧ್ಯವಿರುವುದರಿಂದ ಹೆಚ್ಚಿನ ಜನರು ಆಸಕ್ತಿವಹಿಸುತ್ತಿದ್ದಾರೆ. ಪಶುಸಂಗೋಪನೆಯಲ್ಲಿ (Animal husbandry) ಆಸಕ್ತಿ ಇರುವವರು ಕಡಿಮೆ ಊಡಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಿರುವ ಈ ಉದ್ಯಮದಲ್ಲಿ ಕೆಲವೊಂದಿಷ್ಟು ಜ್ಞಾನದ ಅವಶ್ಯತಕತೆಯಿದೆ. ದೇಶದಲ್ಲಿ ಮೇಕೆ ಸಾಕಾಣಿಕೆ ಹೊಸದೇನಲ್ಲ, ಗ್ರಾಮೀಣ ಭಾಗದಲ್ಲಿ ಅನಾದಿ ಕಾಲದಿಂದಲೂ ಮೇಕೆಗಳನ್ನು ಸಾಕುತ್ತಿದ್ದಾರೆ. ಆದರೆ ಪ್ರಸ್ತುತ ಫಾರ್ಮ್ ಮಾಡಿ ಮೇಕೆ ಸಾಕಾಣಿಕೆಯನ್ನೇ ಉದ್ಯಮವಾಗಿ ನಡೆಸುವವರಿಗೆ ಮೇಕೆಗಳ ತಳಿಗಳ ಬಗ್ಗೆ ತಳಿಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.
ಮೇಕೆ ಸಾಕಾಣಿಕೆಯಲ್ಲಿ ಹೆಚ್ಚು ಲಾಭ ತಂದುಕೊಡುವ ತಳಿಗಳೆಂದರೆ ದುಂಬಾ ಮೇಕೆ, ಉಸ್ಮಾನಾಬಾದಿ ತಳಿ, ಬೀಟಲ್, ಶಿರೋಹಿ ಹಾಗೂ ಸೋಜತ್ ಮೇಕೆ ತಳಿಗಳು. ಈ ಮೂರು ತಳಿಗಳನ್ನು ಸಾಕಿದರೆ ರೈತರು ಹೆಚ್ಚಿನ ಲಾಭಗಳಿಸಬಹುದು
ದುಂಬಾ ಮೇಕೆ ತಳಿ
ದುಂಬಾ ಮೇಕೆ ತಳಿ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈದ್ ಸಮಯದಲ್ಲಿ ಈ ತಳಿಯ ಮೇಕೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮೇಕೆಯ ಮರಿ ಕೇವಲ ಎರಡೇ ತಿಂಗಳಿಗೆ 25 ಕೆಜಿ ತೂಗುತ್ತದೆ, ಇದು 25000 ದಿಂದ 30000 ದವರೆಗೆ ಮಾರಾಟವಾಗುತ್ತದೆ. 3ರಿಂದ 4 ತಿಂಗಳಾದರೆ 70 ಸಾವಿರದವರೆಗೂ ಮಾರಾಟ ಮಾಡಬಹುದು.
ಇದನ್ನೂ ಓದಿ: Farming Tips: ಹೂವಿನ ತೋಟದಲ್ಲಿ ಕಳೆ ಹೆಚ್ಚಾಗ್ತಿದೆಯೇ? ನಿವಾರಿಸಲು ಈ 4 ಟಿಪ್ಸ್ ಫಾಲೋ ಮಾಡಿ!
ಶಿರೋಹಿ ತಳಿ
ಈ ತಳಿ ಕೂಡ ಲಾಭದಾಯಕ ತಳಿಗಳಲ್ಲಿ ಒಂದಾಗಿದೆ. ರಾಜಸ್ಥಾನದ ಮೂಲದ ತಳಿ. ಇದಕ್ಕೆ ಚಿರತೆಯಂತೆ ಬೈಬಣ್ಣವನ್ನು ಹೊಂದಿದೆ. ಮಾಂಸದ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಗಂಡು ಮೇಕೆ ಒಂದೇ ವರ್ಷದಲ್ಲಿ 80ರಿಂದ 100 ಕೆಜಿ ತೂಗುತ್ತದೆ. ಹೆಣ್ಣು ಶಿರೋಹಿ ಮೇಕೆ 50ರಿಂದ70 ಕೆಜಿವರೆಗೆ ತೂಗುತ್ತದೆ. ಇದು ವೇಗದಲ್ಲಿ ತೂಕ ಹೆಚ್ಚಿಸಿಕೊಳ್ಳುವುದರಿಂದ ಈ ತಳಿಗೆ ಹೆಚ್ಚಿನ ಬೇಡಿಕೆಯಿದೆ. ಶಿರೋಹಿ ತಳಿ ಮೇಕೆಗಳು ಹಸುಗಳಂತೆ ಹಾಲು ಕೊಡುತ್ತವೆ ಮತ್ತು ಹೆಚ್ಚು ದಪ್ಪಗೆ ಬೆಳೆಯುತ್ತವೆ. ರೇಷ್ಮೆ ಸಾಕುವವರು ಇಂಥ ಮೇಕೆಗಳನ್ನು ಸಾಕುವುದರಿಂದ ಹೆಚ್ಚುವರಿ ಆದಾಯ ಗಳಿಸಬಹುದು.
ಬೀಟಲ್ ತಳಿ
ಈ ತಳಿ ದೊಡ್ಡ ಗಾತ್ರದ ದೇಹ ಉದ್ದವಾದ ಕಿವಿ ಮತ್ತು ಸಣ್ಣ ಮುಖವನ್ನು ಹೊಂದಿರುತ್ತದೆ. ಈ ತಳಿ ಹೆಚ್ಚು ಹಾಲು ಕೊಡುವ ಮೇಕೆ ತಳಿಯಾಗಿದೆ. ಮಾಂಸಕ್ಕೂ ಹೆಚ್ಚಾಗಿ ಬಳಸಲಾಗುತ್ತದೆ. ಬೀಟಲ್ ಮೇಕೆ ಭಾತ ಮತ್ತು ಪಾಕಿಸ್ತಾನದ ನಡುವಿನ ಪಂಜಾಬ್ ಪ್ರಾಂತ್ಯದ ತಳಿಯಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಇದನ್ನು ಹೆಚ್ಚು ಸಾಕಲಾಗುತ್ತಿದೆ. ಇವು ಎಲ್ಲಾ ರೀತಿಯ ಪರಿಸರಕ್ಕೂ ಹೊಂದಿಕೊಳ್ಳುತ್ತವೆ. ಲಾಹೋರಿ ಎಂದು ಕರೆಯಲ್ಪಡು ಈ ಆಡು 6 ಅಡಿ ಎತ್ತರದವರೆಗೆ ಬೆಳೆಯಬಲ್ಲವು. ಬೀಟಲ್ ತಳಿಯ ಮರಿಗಳು ಏಳೆಂಟು ತಿಂಗಳಲ್ಲಿ 40 ಕೆಜಿ ವರೆಗೆ ತೂಗುತ್ತವೆ. ಒಂದು ಮರಿಗೆ 20ರಿಂದ 22 ಸಾವಿರದವರೆಗೆ ಮಾರಾಟ ಮಾಡಬಹುದಾಗಿದೆ. ಒಂದು ವರ್ಷದ ಮೇಕೆ 100 ಕೆಜಿವರೆಗೂ ತೂಗುವುದರಿಂದ 50 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.
ಸೋಜತ್ ಮೇಕೆ
ಈ ತಳಿ ಕೂಡ ರಾಜಸ್ಥಾನ ಮೂಲದ್ದಾಗಿದೆ. ಆದರೆ ಕರ್ನಾಟಕದ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಸೋಜತ್ ಮೇಕೆಗಳು ಅತೀ ಬೇಗ ಬೆಳವಣಿಗೆ ಹೊಂದುತ್ತವೆ. ಮರಿ 12ರಿಂದ 15 ಸಾವಿರದವರೆಗೆ ಇರುತ್ತದೆ. ಒಂದು ವರ್ಷದ ಮೇಕೆ 50-52 ಕೆಜಿ ತೂಗಲಿದ್ದು, 60-70 ಸಾವಿರ ಬೆಲೆ ಬಾಳುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ