• ಹೋಂ
  • »
  • ನ್ಯೂಸ್
  • »
  • business
  • »
  • Good News: ಹಳ್ಳಿಗೆ ಬಂದ 101 ವಿದ್ಯಾರ್ಥಿಗಳು; ಇದರಿಂದ ರೈತರಿಗೆ ಏನು ಲಾಭ?

Good News: ಹಳ್ಳಿಗೆ ಬಂದ 101 ವಿದ್ಯಾರ್ಥಿಗಳು; ಇದರಿಂದ ರೈತರಿಗೆ ಏನು ಲಾಭ?

ಹಳ್ಳಿಲಿ ಏನ್ಮಾಡ್ತಿದ್ದಾರೆ ಇವರು!?

ಹಳ್ಳಿಲಿ ಏನ್ಮಾಡ್ತಿದ್ದಾರೆ ಇವರು!?

ಹಳ್ಳಿ ವಾಸ್ತವ್ಯದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ರೈತರ ಹೊಲದಲ್ಲೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಬೆಳೆ ಮಾದರಿಯನ್ನು ಅಧ್ಯಯನ ಮಾಡುತ್ತಾರೆ.

  • Trending Desk
  • 5-MIN READ
  • Last Updated :
  • Share this:

ಹಾಸನ: ಕೃಷಿ ಕ್ಷೇತ್ರದ ಜ್ಞಾನ ಸಂಪಾದನೆಗಾಗಿ ಮತ್ತು ಅನುಭವ ಪಡೆಯಲು ಹಾಸನದ (Hassan News) ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಏಳನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹಳ್ಳಿ ವಾಸ್ತವ್ಯ ಹೂಡಿದ್ದಾರೆ. ಗ್ರಾಮೀಣ ಕೃಷಿ ಕೆಲಸದ ಅನುಭವ (RAWE) ಕಾರ್ಯಕ್ರಮದ ಅಂಗವಾಗಿ ಅರಸೀಕೆರೆ ತಾಲ್ಲೂಕಿನ (Arasikere Taluk) ಆರು ಗ್ರಾಮಗಳಲ್ಲಿ 101 ಕೃಷಿ ಬಿಎಸ್​ಸಿ ವಿದ್ಯಾರ್ಥಿಗಳು ತಂಗಿದ್ದಾರೆ. ಇನ್ನೂ ಎರಡು ತಿಂಗಳು ಇಲ್ಲಿಯೇ ಇದ್ದು, ಗ್ರಾಮೀಣ ಜನರೊಂದಿಗೆ (Village People) ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿ ಗುಂಪಿಗೆ ಒಂದು ಗ್ರಾಮವನ್ನು ನಿಗದಿಪಡಿಸಲಾಗಿದೆ. ಈಗ ಅರಸೀಕೆರೆ ತಾಲೂಕಿನ ಟಿ.ಕೋಡಿಹಳ್ಳಿ, ಜ್ಯೋತಿ ಮಲ್ಲಾಪುರ, ತಲಲಾತೂರು, ಕುಣಿಘಟ್ಟಹಳ್ಳಿ, ತಾಳಲೂರು, ಎಂ.ಹಬ್ಬನಘಟ್ಟದಲ್ಲಿ ವಿದ್ಯಾರ್ಥಿಗಳು ತಂಗಿದ್ದಾರೆ. ಅಧ್ಯಾಪಕರ ಮಾರ್ಗದರ್ಶನದ ಮೆರೆಗೆ ವಿದ್ಯಾರ್ಥಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.


ಹಳ್ಳಿಯಲ್ಲಿದ್ದು ಕೃಷಿ ಅನುಭವ ಪಡೆಯುತ್ತಿರುವ ವಿದ್ಯಾರ್ಥಿಯೊಬ್ಬರು ಮಾತನಾಡಿ “ಇಷ್ಟು ದಿನ ನಾವು ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕೃಷಿಯನ್ನು ಕಲಿತಿದ್ದೇವೆ. ಈಗ, RAWE ಕಾರ್ಯಕ್ರಮವು ಜಮೀನಿನಲ್ಲಿ ರೈತನ ನಿಜವಾದ ಜೀವನವನ್ನು ನೋಡುವ ಅವಕಾಶವನ್ನು ನಮಗೆ ಒದಗಿಸಿದೆ” ಎಂದು ಟಿ.ಕೋಡಿಹಳ್ಳಿಯಲ್ಲಿ ಕೆಲಸ ಕೃಷಿ ಮಾಡುತ್ತಿರುವ ವಿದ್ಯಾರ್ಥಿ ಕುಶಾಲ್‌ ಸಾಗರ್‌ ತಿಳಿಸಿದರು.


ರೈತರ ಜೊತೆ ಕೃಷಿ ಭೂಮಿಯಲ್ಲಿ ವಿದ್ಯಾರ್ಥಿಗಳು
ಹಳ್ಳಿ ವಾಸ್ತವ್ಯದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ರೈತರ ಹೊಲದಲ್ಲೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಬೆಳೆ ಮಾದರಿಯನ್ನು ಅಧ್ಯಯನ ಮಾಡುತ್ತಾರೆ. ಅಲ್ಲಿನ ರೈತರು ಅಳವಡಿಸಿಕೊಂಡ ಸಾಂಪ್ರದಾಯಿಕ ಕೃಷಿ ವಿಧಾನಗಳು ಮತ್ತು ಇತರ ವಿಷಯಗಳ ಜೊತೆಗೆ ಕ್ಷೇತ್ರದಲ್ಲಿ ಇರುವ ಕೃಷಿ ಸಮಸ್ಯೆಗಳನ್ನು ಸಹ ಅಧ್ಯಯನ ಮಾಡುತ್ತಿದ್ದಾರೆ.


ಅರಸೀಕೆರೆ ತಾಲೂಕಿನ ಈ ಪ್ರದೇಶದಲ್ಲಿ ತೆಂಗಿನ ತೋಟಗಳಲ್ಲಿ ತೆಂಗಿನ ಮರದ ಕಾಂಡದ ರಕ್ತಸ್ರಾವ ಹೆಚ್ಚಾಗಿ ಕಂಡು ಬಂದಿದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು.


ಮಣ್ಣು ಪರೀಕ್ಷೆಯ ಅಗತ್ಯತೆ ಬಗ್ಗೆ ಹಳ್ಳಿ ಕೃಷಿಕರಿಗೆ ಮಾಹಿತಿ
ಕೆಲ ವಿದ್ಯಾರ್ಥಿಗಳು ಹಳ್ಳಿ ನೆಲೆಯಿಂದ ಬಂದಿದ್ದಾರೆ, ಇನ್ನು ಕೆಲವರು ಯಾವುದೇ ಕೃಷಿ ಮತ್ತು ಹಳ್ಳಿ ಹಿನ್ನೆಲೆ ಹೊಂದದೇ ಇರುವವರು ಸಹ ಇದ್ದಾರೆ. ಯಾವುದೇ ಕೃಷಿ ಹಿನ್ನೆಲೆಯಿಲ್ಲದ ತೇಜ ಎಂಬ ವಿದ್ಯಾರ್ಥಿ ಮಾತನಾಡಿ “ನಾವು ರೈತರಿಗೆ ಕಾಂಡದ ರಕ್ತಸ್ರಾವವನ್ನು ಹೇಗೆ ಎದುರಿಸಬೇಕೆಂದು ಸಲಹೆ ನೀಡುತ್ತಿದ್ದೇವೆ. ಅದೂ ಅಲ್ಲದೆ, ಇಷ್ಟು ವರ್ಷ ರೈತರು ತಮ್ಮ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿದ್ದು ತುಂಬಾ ವಿರಳ. ಹೀಗಾಗಿ ಮಣ್ಣು ಪರೀಕ್ಷೆ ಏಕೆ ಅತ್ಯಗತ್ಯ ಎಂಬುದನ್ನು ಅವರಿಗೆ ತಿಳಿಸುತ್ತಿದ್ದೇವೆ" ಎಂದರು.


ಪ್ರತಿ ಗ್ರಾಮದಲ್ಲೂ ಡೆಮೊ ಫಾರ್ಮ್ ಅಭಿವೃದ್ಧಿಗೆ ಪ್ಲ್ಯಾನ್
ಇನ್ನೂ ತಾವಿದ್ದ ಪ್ರತಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಡೆಮೊ ಫಾರ್ಮ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಅಲ್ಲಿ 48 ತಳಿಗಳ ಬೆಳೆಗಳನ್ನು ಬೆಳೆಯಲಿದ್ದಾರೆ. “ನಾವು ಡೆಮೊ ಫಾರ್ಮ್‌ನಲ್ಲಿ ವಿವಿಧ ತಳಿಯ ರಾಗಿ, ಭತ್ತ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಡೆಮೊ ಫಾರ್ಮ್‌ಗಾಗಿ ಗ್ರಾಮಸ್ಥರು ಐದು ಗುಂಟೆ ಜಮೀನು ನೀಡಿದ್ದಾರೆ" ಎಂದು ವಿದ್ಯಾರ್ಥಿನಿ ಮಲ್ಲಮ್ಮ ಹೇಳಿದರು.


ಇದನ್ನೂ ಓದಿ: Vaishno Devi Temple: ಕರ್ನಾಟಕದಲ್ಲೇ ಇದೆ ವೈಷ್ಣೋದೇವಿ‌ ದೇಗುಲ!


ವಿದ್ಯಾರ್ಥಿಗಳು ಎರಡು ತಿಂಗಳ ಅವಧಿಯಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ ಶಿಬಿರಗಳು ಮತ್ತು ಮಾಹಿತಿ ಕೇಂದ್ರವನ್ನು ನಡೆಸುತ್ತಾರೆ. ಇಲ್ಲಿ ವಿದ್ಯಾರ್ಥಿಗಳ ಮುಖೇನ ಗ್ರಾಮಸ್ಥರು ಅಗತ್ಯ ಮಾರ್ಗದರ್ಶನವನ್ನು ಪಡೆಯಬಹುದು.


ರೈತರಿಂದಲೂ ‌ಕೃಷಿ ಬಗ್ಗೆ ತಿಳಿಯುತ್ತಿರುವ ವಿದ್ಯಾರ್ಥಿಗಳು
“ಇದು ಏಕಮುಖ ಕಲಿಕೆಯಲ್ಲ. ರೈತರಿಂದಲೂ ಹಲವು ವಿಷಯಗಳನ್ನು ಕಲಿತಿದ್ದೇವೆ. ಹೊಲಗಳಿಗೆ ಬಾಧಿಸುವ ವಿವಿಧ ರೋಗಗಳನ್ನು ನಿಭಾಯಿಸಲು ಅವರು ಅನುಸರಿಸುವ ಅನೇಕ ದೇಶೀಯ ತಂತ್ರಗಳನ್ನು ನಾವು ಸಹ ಕಂಡುಕೊಂಡಿದ್ದೇವೆ" ಎಂದು ಟಿ.ಕೋಡಿಹಳ್ಳಿಯಲ್ಲಿ ತಂಗಿರುವ ಇನ್ನೊಬ್ಬ ವಿದ್ಯಾರ್ಥಿನಿ ಪೂರ್ವಿಕಾ ಗೌಡ ಹೇಳಿದರು.


ತಮ್ಮ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಸಿಗುತ್ತಿರುವ ಸಹಕಾರದಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಿದ್ದಾರೆ. ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಊಟ, ವಸತಿ ಕಲ್ಪಿಸುತ್ತಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಸಮಾನವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ: HD Deve Gowda Health: ಹೇಗಿದೆ ದೇವೇಗೌಡರ ಆರೋಗ್ಯ? ಅವರೇ ಕೊಟ್ರು ಅಪ್​ಡೇಟ್


ಮಲ್ಲಾಪುರದ ರೈತ ಚಿದಾನಂದಮೂರ್ತಿ ಮಾತನಾಡಿ, ಆಗಿನಿಂದಲೂ ಪೂರ್ವಜರಿಂದ ಕಲಿತ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದೇನೆ. ಆದರೆ ಈಗ, ನಾವು ಈ ವಿದ್ಯಾರ್ಥಿಗಳಿಂದ ಕೃಷಿಯಲ್ಲಿನ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು.

First published: