Monk Fruit: ಈ ರೈತನ ಕೃಷಿಯೇ ಇಲ್ಲಿನ ಆರ್ಥಿಕತೆಯ ಆಧಾರಸ್ತಂಭ, ಬಡತನ ನೀಗಿಸಿದ ಮಾಂಕ್‌ ಹಣ್ಣಿನ ಬೆಳೆ!

ಮಾಂಕ್​ ಫ್ರೂಟ್​​

ಮಾಂಕ್​ ಫ್ರೂಟ್​​

ಈ ಹಣ್ಣಿನ ಮೂಲ ಎಂದರೆ ಅದು ಚೀನಾ. ನೂರಾರು ವರ್ಷಗಳಿಂದ, ಸಿರೈಟಿಯಾ ಹಣ್ಣುಗಳು ಅಥವಾ ಸನ್ಯಾಸಿ ಹಣ್ಣುಗಳ ಇಳುವರಿಯ ದೊಡ್ಡ ಪಾಲು ನೈಋತ್ಯ ಚೀನಾದ ಗುವಾಂಗ್ಕ್ಸಿ ಜುವಾಂಗ್ ಪ್ರದೇಶ. ಅಲ್ಲಿಂದ ಮಾರುಕಟ್ಟೆಗೆ ಬರುತ್ತಿತ್ತು.

  • Trending Desk
  • 5-MIN READ
  • Last Updated :
  • New Delhi, India
  • Share this:

ಇದೇಸನ್ಯಾಸಿ ಹಣ್ಣು ಅಥವಾ ಮಾಂಕ್‌ ಫ್ರೂಟ್‌ (Monk Fruit) ಆರೋಗ್ಯ (Health) ದೃಷ್ಟಿಯಿಂದ ಉತ್ತಮ ಹಣ್ಣು. ಮಾಂಕ್ ಹಣ್ಣುಗಳನ್ನು ಮಧುಮೇಹಿಗಳು (Daibities Patients) ಯಾವುದೇ ಚಿಂತೆಯಿಲ್ಲದೆ ಸೇವಿಸಬಹುದು. ಈ ಹಣ್ಣುಗಳು ರಕ್ತದಲ್ಲಿ ಗ್ಲೂಕೋಸ್ (Glucose) ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಇದು ನೈಸರ್ಗಿಕವಾಗಿ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಮತ್ತು ಜೀರೋ ಕ್ಯಾಲೋರಿ  (Zero Calaries) ಹೊಂದಿರುತ್ತದೆ. ಹೀಗಾಗಿ ಈ ಮಾಂಕ್‌ ಫ್ರೂಟ್‌ಗೆ ಹಣ್ಣಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ.


ಚೀನಾದ ನೈಋತ್ಯ ಭಾಗಕ್ಕೆ ಸೀಮಿತವಾಗಿದ್ದ ಹಣ್ಣು


ಈ ಹಣ್ಣಿನ ಮೂಲ ಎಂದರೆ ಅದು ಚೀನಾ. ನೂರಾರು ವರ್ಷಗಳಿಂದ, ಸಿರೈಟಿಯಾ ಹಣ್ಣುಗಳು ಅಥವಾ ಸನ್ಯಾಸಿ ಹಣ್ಣುಗಳ ಇಳುವರಿಯ ದೊಡ್ಡ ಪಾಲು ನೈಋತ್ಯ ಚೀನಾದ ಗುವಾಂಗ್ಕ್ಸಿ ಜುವಾಂಗ್ ಪ್ರದೇಶ. ಅಲ್ಲಿಂದ ಮಾರುಕಟ್ಟೆಗೆ ಬರುತ್ತಿತ್ತು.


ಈ ಸ್ಥಳದಲ್ಲಿಯೇ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜಾಗತಿಕವಾಗಿ ಮಾರಾಟವಾಗುವ ಹಣ್ಣಿನಲ್ಲಿ ಶೇಕಡ 90 ರಷ್ಟು ಹಣ್ಣು ಇದೇ ಸ್ಥಳದಿಂದ ಬರುತ್ತಿತ್ತು. ಇದೇ ಕಾರಣಕ್ಕೆ ಹಲವಾರು ಈ ಹಣ್ಣುಗಳನ್ನು ಇಲ್ಲಿ ಮಾತ್ರ ಬೆಳೆಯಲು ಸಾಧ್ಯ, ಬೇರೆ ಯಾವ ಕಡೆಗೂ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದರು.


ಮಾಂಕ್‌ ಹಣ್ಣಿನ ಗಿಡ ಬೆಳೆದು ಕೃಷಿ ಆರಂಭಿಸಿದ ರೈತರು


ಮನಸ್ಸು ಮಾಡಿದರೆ, ಹವಮಾನ ಸಹಕರಿಸಿದರೆ ಎಲ್ಲವೂ ಸಾಧ್ಯ. ಇದೇ ಮಂತ್ರವನ್ನು ಅನುಸರಿಸಿದ ಆ ಪ್ರದೇಶದ ಸುತ್ತಮುತ್ತಲಿನ ಜನ ಮಾಂಕ್‌ ಹಣ್ಣಿನ ಗಿಡಗಳನ್ನು ಬೇರೆ ಕಡೆ ಬೆಳೆಸಲು ಮುಂದಾದರು. ನೈಋತ್ಯ ಚೀನಾದ ಗುವಾಂಗ್ಕ್ಸಿ ಜುವಾಂಗ್‌ನಲ್ಲಿ ಒಳ್ಳೆಯ ಮಾಂಕ್‌ ಗಿಡಗಳ ಸಸಿಗಳನ್ನು ಅರಸಿ ತಂದು ತಮ್ಮ ಮನೆಯಲ್ಲಿ ಅವುಗಳನ್ನು ಪೋಷಿಸುವ ಕೆಲಸ ಆರಂಭಿಸಿದರು.


ಇದೇ ನೋಡಿ ಮಾಂಕ್‌ ಹಣ್ಣಗಳ ಕೃಷಿಗೆ ಮೊದಲ ಹೆಜ್ಜೆ. ಹೀಗೆ ಕಾಡಿನಿಂದ ತಂದ ಗಿಡಗಳನ್ನು ಪೋಷಿಸಿ, ಬೆಳೆಸಿ ಇಂದು ಲಾಭದ ಕೃಷಿಯಾಗಿ ಇಲ್ಲಿನ ಜನ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ದಾವಣಗೆರೆ ರೈತನ ಬದುಕು ಬದಲಾಯಿಸಿತು ಈ ಹಣ್ಣು! 5 ವರ್ಷದಲ್ಲಿ 25 ಲಕ್ಷ ಆದಾಯ ಅಂದ್ರೆ ಸುಮ್ನೆನಾ?


ಆರೋಗ್ಯ ದೃಷ್ಟಿಯಿಂದ ಈ ಹಣ್ಣು ಹೆಚ್ಚು ಉಪಯೋಗಕ್ಕೆ ಬರುವುದರಿಂದ ಮಾರುಕಟ್ಟೆಯಲ್ಲಿ ಮಾಂಕ್‌ ಹಣ್ಣಿಗೆ ಬೇಡಿಕೆ ಹೆಚ್ಚು. ಹಣ್ಣಿನ ಸಾರಗಳನ್ನು ಶ್ವಾಸಕೋಶ-ರಕ್ಷಿಸುವ ಚೀನೀ ಮೂಲಿಕೆ ಔಷಧಿ, ಚಹಾಕ್ಕೆ ಸೇರ್ಪಡೆಗಳು, ಕಡಿಮೆ ಕ್ಯಾಲೋರಿ ಆಹಾರದ ಸಿಹಿಕಾರಕಗಳು ಇತ್ಯಾದಿಗಳಾಗಿ ಬಳಸಲಾಗುತ್ತದೆ. ಪ್ರಸ್ತುತ ಈ ಕೃಷಿ ಜನರಿಗೆ ಆರ್ಥಿಕವಾಗಿ ಸಬಲವಾಗಲು ಸಹಕರಿಸಿದೆ.


ರೈತರನ್ನು ಆರ್ಥಿಕವಾಗಿ ಸಬಲ ಮಾಡಿದ ಮಾಂಕ್‌ ಹಣ್ಣಿನ ಕೃಷಿ


ಹಣ್ಣು ಸ್ಥಳೀಯ ರೈತರಿಗೆ ಆದಾಯದ ಬೆಳೆಯಾಗಿದೆ. ಕ್ವಾನ್‌ಝೌ ಕೌಂಟಿಯ ರೈತ ವು ಯೋಂಗ್‌ಪಿಂಗ್ ಎಂಬಾತ, 2,800 ಮಾಂಕ್ ಹಣ್ಣಿನ ಮರಗಳನ್ನು ಬೆಳೆದು ಮತ್ತು 2016 ರಲ್ಲಿ ಸುಮಾರು 70,000 ಯುವಾನ್ (ಸುಮಾರು $10133) ಕ್ಕಿಂತ ಹೆಚ್ಚು ಲಾಭ ಗಳಿಸಿದ್ದಾರೆ. ಅದೇ ವರ್ಷ, ಡೆಂಗ್ ಚುನ್ಫಾ ಎಂಬ ಮತ್ತೊಬ್ಬ ರೈತ 800 ಮರಗಳನ್ನು ಬೆಳೆಸಿದರು ಮತ್ತು ಸುಮಾರು 30,000 ಗುವಾನ್‌ ($4342) ಆದಾಯ ಪಡೆದುಕೊಂಡಿದ್ದಾರೆ.


ಬಡತನ ನೀಗಿಸಿದ ಮಾಂಕ್‌ ಹಣ್ಣಿನ ಬೆಳೆ


ಕೌಂಟಿಯ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ರೈತರು ಮಾಂಕ್‌ ಹಣ್ಣಿನ ಬೆಳೆ ಬೆಳೆಯುತ್ತಿದ್ದು, ತಲಾ ಸರಾಸರಿ ಆದಾಯವು 2017 ರಲ್ಲಿ 13,651 ಯುವಾನ್ (ಸುಮಾರು $1976) ಎಂದು ಅಂಕಿಅಂಶಗಳು ತೋರಿಸುತ್ತವೆ. ಸಮೀಪದ ಲಾಂಗ್‌ಶೆಂಗ್ ಕೌಂಟಿಯಲ್ಲಿ, 2018 ರ ವೇಳೆಗೆ ಹಣ್ಣಿನ ಕಾರಣದಿಂದಾಗಿ 3,000 ಕ್ಕೂ ಹೆಚ್ಚು ಬಡ ಕುಟುಂಬಗಳು ಬಡತನದ ರೇಖೆಯಿಂದ ಮೇಲಕ್ಕೆ ಬಂದಿವೆ.


ಇಂದು, ಸರ್ಕಾರ ಮತ್ತು ವ್ಯಾಪಾರ ವಲಯದ ಬೆಂಬಲದೊಂದಿಗೆ, ಹಣ್ಣಿನ ಉದ್ಯಮವು ಹೆಚ್ಚು ಬೆಳೆಯುತ್ತಿದೆ ಮತ್ತು ಪ್ರಮಾಣಿತವಾಗಿದೆ. ರೈತರು ಸ್ಥಿರವಾದ ಲಾಭವನ್ನು ಗಳಿಸಲು ಆರ್ಥಿಕ ಮತ್ತು ತಾಂತ್ರಿಕ ಸಹಾಯ ಮತ್ತು ವಿಮೆಯನ್ನು ಪಡೆಯಲು ಸಮರ್ಥರಾಗಿದ್ದಾರೆ.



ರೈತರಿಗೆ ಹೆಚ್ಚಿನ ಹಣ್ಣುಗಳನ್ನು ಮಾರಾಟ ಮಾಡಲು ಸಹಾಯ ಮಾಡಲು ಕೆಲವು ಅಧಿಕಾರಿಗಳು ಕೆಲವು ಲೈವ್-ಸ್ಟ್ರೀಮಿಂಗ್ ಮಾರಾಟ ಕಾರ್ಯಕ್ರಮಗಳನ್ನು ಪರಿಚಯಿಸಿದ್ದಾರೆ.

Published by:ವಾಸುದೇವ್ ಎಂ
First published: