• Home
 • »
 • News
 • »
 • business
 • »
 • Agriculture: ಆಸ್ಟ್ರೇಲಿಯಾದಲ್ಲಿ ನುಗ್ಗೆಸೊಪ್ಪು ಬೆಳೆದು ಯಶಸ್ಸು ಕಂಡ ಭಾರತೀಯ, ಬೇರೆ ದೇಶಗಳಿಗೂ ರಫ್ತು

Agriculture: ಆಸ್ಟ್ರೇಲಿಯಾದಲ್ಲಿ ನುಗ್ಗೆಸೊಪ್ಪು ಬೆಳೆದು ಯಶಸ್ಸು ಕಂಡ ಭಾರತೀಯ, ಬೇರೆ ದೇಶಗಳಿಗೂ ರಫ್ತು

ಕೇರಳದ ಎಂಜಿನಿಯರ್

ಕೇರಳದ ಎಂಜಿನಿಯರ್

ನಾನು ಕೇವಲ ಹಣಕ್ಕಾಗಿ ಕೃಷಿಯನ್ನು ಪ್ರಾರಂಭಿಸಲಿಲ್ಲ, ಬದಲಿಗೆ ನಾನು ಇಷ್ಟಪಡುವದನ್ನು ತಿನ್ನಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು. ನಾನು ಕೃಷಿ ಮಾಡುತ್ತಿದ್ದೇನೆ ಎಂದು ಸಜನ್ ಹೇಳಿದ್ದಾರೆ.

 • Trending Desk
 • Last Updated :
 • Kerala, India
 • Share this:

  ನುಗ್ಗೆಸೊಪ್ಪು(Moringa Leaves) ಹೆಚ್ಚಿನ ಪೋಶಕಾಂಶಗಳನ್ನೊಳಗೊಂಡ ಹಸಿರು ಸೊಪ್ಪು. ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹೀಗೆ ಹಲವಾರು ಪೋಶಕಾಂಶಗಳ ಆಗರವಾದ ನುಗ್ಗೆಸೊಪ್ಪು ಹಲವು ರೋಗಗಳನ್ನು ನಿವಾರಿಸುತ್ತದೆ. ಭಾರತದಲ್ಲಿ ಹಳ್ಳಿ ಸೇರಿ ನಗರಗಳಲ್ಲೂ ಈ ನುಗ್ಗೆ ಮರಗಳನ್ನು ಬೆಳೆಸುತ್ತಾರೆ. ಈ ಸೊಪ್ಪಿಗೆ ಮಾರುಕಟ್ಟೆಯಲ್ಲಿ(Market) ಹೆಚ್ಚಿನ ಬೇಡಿಕೆ(Demand) ಇದೆ ಕೂಡ. ಇನ್ನೂ ವಿದೇಶಗಳಲ್ಲೂ ಸಹ ಈ ಸೊಪ್ಪಿಗೆ ಉತ್ತಮ ಮಾರುಕಟ್ಟೆ ಇದೆ ಮತ್ತು ಅಲ್ಲಿ ಸಾಕಷ್ಟು ದುಬಾರಿಯಾಗಿದೆ.


  ವಿದೇಶದಲ್ಲಿ ನುಗ್ಗೆಸೊಪ್ಪು ಬೆಳೆದು ಯಶಸ್ವಿಯಾದ ಇಂಜಿನಿಯರ್


  ಮಾರುಕಟ್ಟೆ ಮತ್ತು ದುಬಾರಿತನ ಈ ಎರಡೂ ಅಂಶಗಳನ್ನೇ ಬಂಡವಾಳ ಮಾಡಿಕೊಂಡ ಕೇರಳದ ಮೂಲದ ವ್ಯಕ್ತಿಯೊಬ್ಬರು ಮೊರಿಂಗಾ ಅಥವಾ ನುಗ್ಗೆಸೊಪ್ಪನ್ನು ವಿದೇಶದಲ್ಲಿ ಬೆಳೆದು ಇಂದು ಉತ್ತಮ ಕೃಷಿಕ ಎನಿಸಿಕೊಂಡಿದ್ದಾರೆ.


  ಕೃಷಿಗೆ ಮತ್ತಷ್ಟು ಪ್ರೇರಣೆ ನೀಡಿದ ಐರ್ ಹಳ್ಳಿ


  ಕೇರಳದ ಕೊಟ್ಟಾಯಂ ನಿವಾಸಿ ಸಜನ್ ಸಾಸಿ‌ 15 ವರ್ಷಗಳ ಹಿಂದೆ ಇಂಜಿನಿಯರ್ ಆಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ತೆರಳಿದ್ದರು. ಸಜನ್‌ ಸಾಸಿ ಉತ್ತಮ ಸಂಬಳವಿರುವ ಉದ್ಯೋಗದಲ್ಲಿದ್ದರೂ ಅವರು ಸ್ವಂತವಾಗಿ ಏನನ್ನಾದರು ಮಾಡಲು ಯೋಚಿಸುತ್ತಿದ್ದರು. ಇದೇ ವೇಳೆ ಸಜನ್‌ ಕ್ವೀನ್ಸ್‌ಲ್ಯಾಂಡ್‌ನ ಉತ್ತರ ಭಾಗದಲ್ಲಿರುವ ಐರ್ ಎಂಬ ಹಳ್ಳಿಗೆ ಕುಟುಂಬ ಪ್ರವಾಸಕ್ಕೆ ತೆರಳಿದರು. ಆ ಹಳ್ಳಿಯು ಕೃಷಿ ಪ್ರಧಾನವಾಗಿತ್ತು. ಅಲ್ಲಿನ ಹವಮಾನ, ಮಣ್ಣಿಗೆ ಮನಸೋತ ಸಜನ್‌ ಅಲ್ಲೇ ಜಮೀನು ಖರೀದಿಸಿ ಕೃಷಿ ಮಾಡುವ ಇಚ್ಛೆ ವ್ಯಕ್ತಪಡಿಸಿದರು.


  ಇದನ್ನೂ ಓದಿ: Business Idea: ದಾವಣಗೆರೆ ರೈತನ ಬದುಕು ಬದಲಾಯಿಸಿತು ಈ ಹಣ್ಣು! 5 ವರ್ಷದಲ್ಲಿ 25 ಲಕ್ಷ ಆದಾಯ ಅಂದ್ರೆ ಸುಮ್ನೆನಾ?


  “ನನ್ನ ಕುಟುಂಬವು ಯಾವಾಗಲೂ ಕೃಷಿಯತ್ತ ಒಲವು ತೋರಿದ್ದರಿಂದ, ನನಗೂ ಅದರ ಅಭಿರುಚಿ ಬೆಳೆಯಿತು. ಮೆಲ್ಬೋರ್ನ್‌ನಲ್ಲಿ ಹವಾಮಾನ ವೈಪರೀತ್ಯದ ಹೊರತಾಗಿಯೂ, ನಾನು ನನ್ನ ಹೊಲದಲ್ಲಿ ಮೆಣಸಿನಕಾಯಿ ಮತ್ತು ಟಪಿಯೋಕಾವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೆ. ಆದರೆ ಹವಮಾನದ ಕಾರಣ ಪ್ರತಿ ಭಾರಿ ವಿಫಲವಾಗುತ್ತಿದೆ” ಎಂದು 40 ರ ಹರೆಯದ ರೈತ ಹೇಳುತ್ತಾರೆ.


  ಐರ್‌ ಹಳ್ಳಿಯಲ್ಲಿ ಭೂಮಿ ಖರೀದಿ.. ಕೃಷಿ ಆರಂಭ


  ಹೀಗೆ ತಮ್ಮ ಕನಸನ್ನು ನನಸು ಮಾಡುವ ಹಾದಿಯಲ್ಲಿ ಸಜನ್‌ ಐರ್‌ ಹಳ್ಳಿಯಲ್ಲಿ ಜಮೀನು ಖರೀದಿಸಿ ಕೃಷಿ ಮಾಡಲು ಆರಂಭಿಸಿದರು. ತಮ್ಮ ಕೃಷಿಯಲ್ಲಿ ಸಜನ್‌ ಮೊದಲಿಗೆ ಮೊರಿಂಗಾ ಬೆಳೆಯಲು ನಿರ್ಧರಿಸಿದರು. "ನನ್ನ ತಾಯಿ ಯಾವಾಗಲೂ ಹೆಚ್ಚಿನ ಅಡುಗೆಗಳಲ್ಲಿ ಈ ಸೊಪ್ಪನ್ನು ಬಳಸುತ್ತಿದ್ದರು. ವಿದೇಶಕ್ಕೆ ಬಂದ ಮೇಲೆ ನಾನು ಆ ಅನುಭವವನ್ನು ಕಳೆದುಕೊಂಡೆ. ಇಲ್ಲಿ ಈ ಸೊಪ್ಪಿಗೆ ತುಂಬಾ ಬೇಡಿಕೆ ಇದೆ ಮತ್ತು ಇಲ್ಲಿ ಇದು ದುಬಾರಿ ಕೂಡ. ಹೀಗಾಗಿ ಇದನ್ನೇ ಕೃಷಿ ಮಾಡಲು ನಾನು ನಿರ್ಧರಿಸಿದೆ" ಎನ್ನುತ್ತಾರೆ ಸಜನ್‌ ಸಾಸಿಗೆ.


  ಐದು ವರ್ಷಗಳಿಂದ ಕೃಷಿ


  "ಕೇರಳದ ಅನುಭವಿ ರೈತರಿಂದ ಸಲಹೆ ಪಡೆದು 20 ಎಕರೆ ಜಮೀನು ಖರೀದಿಸಿ ಫಾರ್ಮ್ ಮಾಡಿದೆ. ನಾನು ಐರ್‌ ಹಳ್ಳಿಗೆ ಸ್ಥಳಾಂತರಗೊಂಡು ಫಾರ್ಮ್ ಆರಂಭಿಸಿ ಐದು ವರ್ಷಗಳಾಗಿವೆ. ಇದು ಯಶಸ್ವಿಯಾಗಿದೆ ಮತ್ತು ನಾನು ಈಗ ಅಮೇರಿಕನ್ ಮತ್ತು ಯುರೋಪಿಯನ್ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತೇನೆ” ಎಂದು ಸಜನ್‌ ವಿವರಿಸಿದ್ದಾರೆ.


  ಜನಪ್ರಿಯ ಮೊರಿಂಗಾ ಪುಡಿ


  ಮೆಲ್ಬೋರ್ನ್ ಮತ್ತು ಸಿಡ್ನಿ ಮಾರುಕಟ್ಟೆಗಳಲ್ಲಿ ಕೋಮಲ ಮತ್ತು ಬಲಿತ ನುಗ್ಗೆಕಾಯಿಗಳನ್ನು ಬಂಡಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡುವುದರ ಹೊರತಾಗಿ, ಸಜನ್ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಾರೆ, ಅದು ಹೆಚ್ಚು ದಿನಗಳವರೆಗೆ ಉಳಿಯುತ್ತದೆ.


  ಅವರ ಮುಖ್ಯ ಉತ್ಪನ್ನವೆಂದರೆ ಒಣಗಿದ ಎಲೆಗಳನ್ನು ಪುಡಿಮಾಡಿ ಮಾಡಿದ ಮೊರಿಂಗಾ ಪುಡಿ. "ಪೌಡರ್ ಅನ್ನು 50 ಗ್ರಾಂ, 100 ಗ್ರಾಂ ಮತ್ತು 500 ಗ್ರಾಂ ಪ್ಯಾಕೆಟ್‌ಗಳಲ್ಲಿ $ 50 ಮತ್ತು $ 70 ರ ನಡುವಿನ ಬೆಲೆ ಶ್ರೇಣಿಗೆ ಮಾರಾಟ ಮಾಡಲಾಗುತ್ತದೆ" ಎಂದು ಸಜನ್ ಹೇಳುತ್ತಾರೆ.


  ನುಗ್ಗೆಯ ಎಲೆಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್‌ಗಳಲ್ಲಿ ಸಮೃದ್ಧವಾಗಿವೆ, ಇದು ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮತ್ತು ಆಲ್ಝೈಮರ್ ಸೇರಿದಂತೆ ಅನೇಕ ದೀರ್ಘಕಾಲದ ಆಕ್ಸಿಡೇಟಿವ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನುಗ್ಗೆಸೊಪ್ಪನ್ನು ಹೆಚ್ಚಾಗಿ ಗ್ರಾಹಕರು ಖರೀದಿಸುತ್ತಾರೆ ಎನ್ನುತ್ತಾರೆ ಸಜನ್‌.


  ಭಾರತೀಯ ತಳಿ ಮಾವು ಕೃಷಿ


  ಸಜನ್‌ ಕೃಷಿ ಮಾರ್ಗ ಉತ್ತಮವಾಗಿದ್ದು, ಇದರಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಮೊರಿಂಗಾ ವ್ಯಾಪಾರದಿಂದ ಗಳಿಸಿದ ಲಾಭದಿಂದ, ಅವರು ಜಮೀನಿನ ಬಳಿ 34 ಎಕರೆ ಭೂಮಿಯನ್ನು ಖರೀದಿ ಮಾಡಿದ್ದಾರೆ. ಈ ಕೃಷಿ ಭೂಮಿಯಲ್ಲಿ ಸಜನ್‌ ಒಟ್ಟು 1,000 ಭಾರತೀಯ ತಳಿ ಮಾವಿನ ಮರಗಳನ್ನು ನೆಟ್ಟಿದ್ದಾರೆ. ಭಾರತೀಯ ಮಾವಿನ ಹಣ್ಣುಗಳನ್ನು ಸಹ ಕೊಯ್ಲು ಮಾಡಿ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ.


  ಸಾವಯವ ಗೊಬ್ಬರ ಬಳಕೆ


  ಸಜನ್‌ ತಮ್ಮ ಕೃಷಿಗೆ ಹಸುವಿನ ಸಗಣಿಯನ್ನು ಬಳಸುವುದಾಗಿ ಹೇಳಿಕೊಂಡಿದ್ದಾರೆ. “ನಾವು ಜೀವಾಮೃತ ಮಿಶ್ರಣವನ್ನು ಅಭಿವೃದ್ಧಿಪಡಿಸುತ್ತೇವೆ, ಇದರಲ್ಲಿ ಗೋವಿನ ಸಗಣಿ, ಗೋಮೂತ್ರ, ಬೆಲ್ಲ, ಬೇಳೆ ಹಿಟ್ಟು ಮತ್ತು ಕಾಡಿನ ಮಣ್ಣು ಸೇರಿವೆ. ಮಿಶ್ರಣವನ್ನು ಏಳು ದಿನಗಳವರೆಗೆ ಇಡಲಾಗುತ್ತದೆ, ಈ ಸಮಯದಲ್ಲಿ ಕಾಡಿನ ಮಣ್ಣಿನಿಂದ ಸೂಕ್ಷ್ಮಜೀವಿಗಳು ಇತರ ಪದಾರ್ಥಗಳೊಂದಿಗೆ ಪ್ರತಿಕ್ರಿಯಿಸಿ ಉತ್ತಮ ಗೊಬ್ಬರವನ್ನು ರೂಪಿಸುತ್ತವೆ. ಇದು ದ್ರವ ರೂಪದಲ್ಲಿ ಬರುತ್ತದೆ, ಸಸ್ಯಗಳಿಗೆ ನೀಡುವ ಮೊದಲು ಫಿಲ್ಟರ್ ಮಾಡಿ ನಂತರ ಹಾಕಲಾಗುತ್ತದೆ” ಎಂದು ಸಜನ್‌ ವಿವರಿಸಿದ್ದಾರೆ.


  ಇದನ್ನೂ ಓದಿ: Business Idea: ಅಪರೂಪದ ಬಳ್ಳಿ ಆಲೂಗಡ್ಡೆ ಬೆಳೆದ ಚಿಕ್ಕಬಳ್ಳಾಪುರದ ರೈತ! ಇದಕ್ಕಿದೆ ಸಿಕ್ಕಾಪಟ್ಟೆ ಡಿಮ್ಯಾಂಡ್!


  ಮೊರಿಂಗಾ ಮತ್ತು ಮಾವು ಹೊರತುಪಡಿಸಿ, ಸಜನ್ ಅವರು ಮೆಣಸಿನಕಾಯಿ, ಬೆಂಡೆಕಾಯಿ, ಬದನೆ, ಟಪಿಯೋಕಾ ಮತ್ತು ಇತರ ಗೆಡ್ಡೆಗಳನ್ನು ಮರಗಳ ನಡುವೆ ಕೃಷಿ ಮಾಡಿದ್ದಾರೆ. ಉತ್ಪನ್ನಗಳನ್ನು ಕೊಯ್ಲು ಮಾಡಲು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಷ್ಟಕರವಾದ ಕಾರಣ ಈ ವಸ್ತುಗಳನ್ನು ಮಾರಾಟ ಮಾಡಲಾಗುವುದಿಲ್ಲ.


  "ಇಲ್ಲಿ ಕಾರ್ಮಿಕರು ತುಂಬಾ ದುಬಾರಿಯಾಗಿರುವುದರಿಂದ, ನಾನು ವಸ್ತುಗಳನ್ನು ಕೊಯ್ಲು ಮಾಡಲು ಮತ್ತು ಸಂಸ್ಕರಿಸಲು ಹೆಚ್ಚು ಯಂತ್ರೋಪಕರಣಗಳನ್ನು ಬಳಸುತ್ತೇನೆ" ಎಂದಿದ್ದಾರೆ.


  "ಭವಿಷ್ಯದಲ್ಲೂ ಕೃಷಿಯನ್ನೇ ಮಾಡುತ್ತೇನೆ"


  "ನಾನು ಕೇವಲ ಹಣಕ್ಕಾಗಿ ಕೃಷಿಯನ್ನು ಪ್ರಾರಂಭಿಸಲಿಲ್ಲ, ಬದಲಿಗೆ ನಾನು ಇಷ್ಟಪಡುವದನ್ನು ತಿನ್ನಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು. ನಾನು ಕೃಷಿ ಮಾಡುತ್ತಿದ್ದೇನೆ ಎಂದು ತಿಳಿದ ಕೇರಳದಲ್ಲಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಸಂತೋಷದ ಜೊತೆ ಆಶ್ಚರ್ಯವಾಗಿದೆ. ನನಗೆ ಅವರೆಲ್ಲಾ ಬೆಂಬಲ ನೀಡಿದ್ದಾರೆ. ಅವರ ಬೆಂಬಲ ಸಲಹೆಗೆ ನಾನು ಋಣಿ" ಎಂದಿದ್ದಾರೆ ಸಜನ್. ‌


  ಕೃಷಿ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವ ಸಜನ್‌ ಭವಿಷ್ಯದಲ್ಲಿ ತಮ್ಮ ಕೃಷಿಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಹೆಚ್ಚಿನ ಬೆಳೆಗಳನ್ನು ಬೆಳೆಯುವ ಇಚ್ಛೆ ಹೊಂದಿದ್ದಾರೆ. 

  Published by:Latha CG
  First published: