ರೈತರು (Farmers) ತಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಿ ಉತ್ತಮ ಫಸಲು (Good harvest) ಬೆಳೆಯಲು ಕೆಲವೊಂದು ವ್ಯವಸಾಯ ತಂತ್ರಗಳನ್ನು ಅಳವಡಿಸಬೇಕಾಗುತ್ತದೆ. ಹೊಸ ಹೊಸ ಕೃಷಿ ವಿಧಾನಗಳು (Agricultural methods), ಬೇರೆ ಬೇರೆ ರೋಗಗಳು ಹಾಗೂ ಈ ರೋಗಗಳನ್ನು (Diseases) ಪರಿಹರಿಸುವ ವಿಧಾನಗಳನ್ನು ಅವರಿಗೆ ತಿಳಿಯಪಡಿಸಬೇಕಾಗುತ್ತದೆ. ಇದೀಗ ನಾಗ್‌ಪುರದ CICR ವಿಜ್ಞಾನಿಗಳು ಧಾರ್ಮಿಕ (Religious) ವಿಧಾನಗಳಾದ ಕೀರ್ತನೆ, ಭಜನೆಗಳ ಮೂಲಕ ರೈತರಿಗೆ ಅರ್ಥವಾಗುವ ರೀತಿಯಲ್ಲಿ ಕೃಷಿ, ಬೆಳೆ ಸಂರಕ್ಷಣೆ, ಕೀಟಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ನಾಗ್‌ಪುರದ CICR ವಿಜ್ಞಾನಿಗಳು ಭಜನೆ, ಕೀರ್ತನೆ ಹಾಗೂ ಇನ್ನಿತರ ವಿಧಾನಗಳ ಮೂಲಕ ಸರಳವಾಗಿ ಸ್ಥಳೀಯ ಭಾಷೆಯಲ್ಲಿ ರೈತರಿಗೆ ಬೆಳೆ ಸಂರಕ್ಷಣೆ ಹಾಗೂ ಕೃಷಿಯಲ್ಲಿರುವ ಅತ್ಯಾಧುನಿಕ ವಿಧಾನಗಳ ಬಗ್ಗೆ ತಿಳಿಸುತ್ತಿದ್ದಾರೆ.
ಕೀರ್ತನೆಗಳ ಮೂಲಕ ಕೃಷಿಯ ಜಾಗೃತಿ
ನಾಗ್‌ಪುರದ ಕೋಟನ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಧಾರ್ಮಿಕ ವಿಧಾನಗಳ ಮೂಲಕ ರೈತರಿಗೆ ಸುಲಭ ರೀತಿಯಲ್ಲಿ ಕೃಷಿಯ ಇನ್ನಷ್ಟು ವಿಧಾನಗಳನ್ನು ಮನಮುಟ್ಟುವಂತೆ ಪರಿಚಯಿಸುತ್ತಿದ್ದಾರೆ.
ಬಾಬಸಾಹೇಬ್ ಬಿ ಫಾಂಡ್ ಹಾಗೂ ಶೈಲೇಶ್ ಪಿ ಗಾವಂಡೆ ಇಬ್ಬರೂ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಕೃಷಿ ಕೀರ್ತನ್ ಹೆಸರಿನಲ್ಲಿ ರೈತರಲ್ಲಿ ಕೃಷಿಯ ಬಗ್ಗೆ ತಿಳುವಳಿಕೆ ಹಾಗೂ ಅರಿವು ಮೂಡಿಸುತ್ತಿದ್ದಾರೆ.
CICR ನ ನಿರ್ದೇಶಕರಾದ ವೈಜಿ ಪ್ರಸಾದ್, ರೈತರು ಈ ಕೀರ್ತನೆಗಳನ್ನು ಇಷ್ಟಪಡುತ್ತಿದ್ದು ಬೇರೆ ಬೇರೆ ವಿಭಾಗಗಳಾದ ಎನ್‌ಜಿಓಗಳು, ಖಾಸಗಿ ಸಂಸ್ಥೆಗಳು, ಕಾಟನ್ ಫೌಂಡೇಶನ್‌ಗಳು ಕೀರ್ತನೆಗಳನ್ನು ಆಯೋಜಿಸಲು CICR ನ ವಿಜ್ಞಾನಿಗಳನ್ನು ಆಹ್ವಾನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಭಾಷೆಯಲ್ಲಿ ಕೀರ್ತನೆ ರಚನೆ ಆಲಾಪನೆ
ಕೃಷಿ ಕೀರ್ತನೆಗಳನ್ನು ಹಾಡುವ ವಿಜ್ಞಾನಿಗಳು ರೈತರಿಗೆ ಅವರ ಸ್ಥಳೀಯ ಭಾಷೆಯಲ್ಲಿ ಹಾಡುತ್ತಾರೆ. ರೈತರನ್ನು ಈ ಮೂಲಕವೇ ತಲುಪಬಹುದು ಎಂಬುದು ವಿಜ್ಞಾನಿಗಳ ಹೇಳಿಕೆಯಾಗಿದೆ.
ಅದನ್ನು ಅರ್ಥಮಾಡಿಕೊಳ್ಳುವಂತಹ ವಿಧಾನದಲ್ಲಿಯೇ ರೈತರಿಗೆ ಕೃಷಿಯ ಕುರಿತು ತಂತ್ರಜ್ಞಾನಗಳು, ಔಷಧಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂಬುದು ವಿಜ್ಞಾನಿಗಳ ಹೇಳಿಕೆಯಾಗಿದೆ.
ರೈತರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ವಿಜ್ಞಾನಿಗಳು ಈ ಮೂಲಕ ವಿಜ್ಞಾನವನ್ನು ಕೃಷಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಹೇಗೆ ಅಳವಡಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬೇರೆ ಬೇರೆ ಸ್ಥಳಗಳಲ್ಲಿ ಕೀರ್ತನೆ ಆಯೋಜನೆ
ಅಮರಾವತಿ ಜಿಲ್ಲೆಯ ಮೊಜಾರಿ, ವಾರ್ಧಾ ಜಿಲ್ಲೆಯ ಗಿರದ್, ನಾಗ್‌ಪುರದ ವಾರ್ಧಾ ರಸ್ತೆಯಲ್ಲಿರುವ CICR ಕ್ಯಾಂಪಸ್, ರೆಶ್ಮಿಭಾಗ್, ಔರಂಗಾಬಾದ್‌ನ ಕೃಷಿ ವಿಗ್ಯಾನ್ ಕೇಂದ್ರದಲ್ಲಿ ಫಾಂಡ್ ಹಾಗೂ ಗಾವಂಡೆ ಐದು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಕೀರ್ತನೆಗಳನ್ನು ಇತಿಹಾಸ ಕಾಲದಿಂದಲೂ ಬಳಸಲಾಗುತ್ತಿದ್ದು ಕಥೆಯ ಸಾರಾಂಶ ತಿಳಿಸಲು ಕಥೆಯನ್ನು ಹೇಳಲು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಕೇಳುಗರ ಮನಸ್ಸಿಗೆ ಆಹ್ಲಾದವನ್ನು ನೀಡುವ ಹಾಗೂ ಅವರಿಗೆ ಅರ್ಥವಾಗುವಂತೆ ವಿವರಿಸುವ ಸಾಮರ್ಥ್ಯವನ್ನು ಕೀರ್ತನೆಗಳು ಹೊಂದಿವೆ.
ಮಹಾರಾಷ್ಟ್ರವು ಕೀರ್ತನೆಗಳ ಮಹಾನ್ ಸಂಪ್ರದಾಯವನ್ನು ಹೊಂದಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ರೈತರಿಗೆ ಮಾಹಿತಿ
ಸಂತರಾದ ಧ್ಯಾನೇಶ್ವರ, ಏಕನಾಥ, ತುಕಾರಾಮ್, ಗಡ್ಗೆ ಬಾಬಾ ಮೊದಲಾದವರು ಕೀರ್ತನೆಗಳನ್ನು ಹೆಚ್ಚಾಗಿ ಬಳಸಿದ್ದು ಮಾನವೀಯತೆ ಹಾಗೂ ಸಮಾನತೆಯ ಪಾಠವನ್ನು ಕೀರ್ತನೆಯ ಮೂಲಕ ಬೋಧಿಸಿದ್ದಾರೆ.
ಜನರಲ್ಲಿ ಅರಿವಿನಿ ಜಾಗೃತಿ ಮೂಡಿಸಲು ಹಾಗೂ ಸಾಮಾಜಿಕ ಕೆಡುಕಗಳಿಂದ ಜನರನ್ನು ರಕ್ಷಿಸಲು ಕೀರ್ತನೆಗಳನ್ನು ಸಾಧು ಸಂತರು ಬಳಸಿಕೊಳ್ಳುತ್ತಿದ್ದರು.
ಪಿಂಕ್ ಬೋಲ್‌ವರ್ಮ್ ಹಾಗೂ ಇನ್ನಿತರ ಕೀಟಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಕೀರ್ತನೆಗಳನ್ನು ರಚಿಸಿ ಹಾಡಲಾಗುತ್ತಿದೆ ಎಂದು ಗಾವಂಡೆ ತಿಳಿಸಿದ್ದಾರೆ.
ಸಂಗೀತ ಪರಿಕರಗಳೊಂದಿಗೆ ಕೀರ್ತನೆ ಹಾಡುವುದು
ಸ್ಥಳೀಯ ಭಜನಾ ತಂಡದ ಸಹಕಾರದೊಂದಿಗೆ ಹಾರ್ಮೋನ್, ತಬಲಾ, ಕಂಜಿರಿ ಮೊದಲಾದ ಸಂಗೀತ ಪರಿಕರಗಳೊಂದಿಗೆ ಕೀರ್ತನೆಗಳನ್ನು ಪ್ರಸ್ತುತಪಡಿಸಲಾಗುತ್ತದೆ ಎಂದು ಗಾವಂಡೆ ತಿಳಿಸಿದ್ದಾರೆ. ಇನ್ನೊಬ್ಬ ವಿಜ್ಞಾನಿಯಾದ ಫಾಂಡೆ ನಮ್ಮ ಕೀರ್ತನೆಗಳು ಕೃಷಿಕರನ್ನು ಇನ್ನಷ್ಟು ಮಹತ್ವಪೂರ್ಣವಾಗಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ರೈತರಿಗೆ ಅರ್ಥವಾಗುವ ರೀತಿಯಲ್ಲಿ ನಾವು ಕೃಷಿ ಸಂದೇಶಗಳನ್ನು ಸಾರುತ್ತಿದ್ದೇವೆ ಎಂದು ಫಾಂಡ್ ಹಾಗೂ ಗಾವಂಡೆ ತಿಳಿಸಿದ್ದು ಸ್ಥಳೀಯ ಭಾಷೆಯಲ್ಲಿ ಕೀರ್ತನೆಗಳನ್ನು ಹಾಡುವುದು ಅವರಿಗೆ ಕೃಷಿಯ ಸಮಸ್ಯೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿಸಿಕೊಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ