• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Business Idea: ಖಾಲಿ ಭೂಮಿಯಲ್ಲಿ ತರಕಾರಿ-ಹಣ್ಣು ಬೆಳೆದ ದಂಪತಿ! ಇವರ ಫಾರ್ಮ್​ ನೋಡೋಕೆ ಹರಿದುಬರುತ್ತಿದೆ ಜನಸಾಗರ!

Business Idea: ಖಾಲಿ ಭೂಮಿಯಲ್ಲಿ ತರಕಾರಿ-ಹಣ್ಣು ಬೆಳೆದ ದಂಪತಿ! ಇವರ ಫಾರ್ಮ್​ ನೋಡೋಕೆ ಹರಿದುಬರುತ್ತಿದೆ ಜನಸಾಗರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಜೋಧಪುರದ ಮನೈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದರೆ, ನೀವು ‘ಮಾರೋಖೇತ್’ ಎಂಬ ಫಾರ್ಮ್ ನಲ್ಲಿ ಸ್ವಲ್ಪ ನಿಂತುಕೊಂಡು ಒಮ್ಮೆ ಒಳಗೆ ಹೋಗಿ ನೋಡುವುದು ನಿಮಗೆ ಒಂದೊಳ್ಳೆ ಅನುಭವವನ್ನು ನೀಡಬಹುದು

  • Trending Desk
  • 4-MIN READ
  • Last Updated :
  • Share this:

ಎಷ್ಟೋ ಜನರ ಬಳಿ ತಮ್ಮ ಪೂರ್ವಜರು (Ancestors) ಮಾಡಿಟ್ಟ ತುಂಬಾ ಆಸ್ತಿ (Property) ಇದ್ದರೂ ಸಹ ಅದರಲ್ಲಿ ಏನು ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದರ ಬಗ್ಗೆ ಅನೇಕ ರೀತಿಯ ಗೊಂದಲಗಳು ಇರುವುದನ್ನು ನಾವು ನೋಡಿರುತ್ತೇವೆ. ಆದರೆ ಇನ್ನೂ ಕೆಲವರು ಇದ್ದ ಸ್ವಲ್ಪ ಭೂಮಿಯನ್ನು ತುಂಬಾನೇ ಚೆನ್ನಾಗಿ ಕೃಷಿ (Agriculture) ಮಾಡಿ ಅದನ್ನು ಒಂದು ಆದಾಯ ಬರುವ ಆಸ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ ಅಂತ ಹೇಳಬಹುದು. ಇಲ್ಲಿಯೂ ಸಹ ದಂಪತಿ (Couple) ಗಳಿಬ್ಬರು ತಮ್ಮ ಪೂರ್ವಜರ ಖಾಲಿ ಭೂಮಿಯಲ್ಲಿ ತಾಜಾ ತಾಜಾ ತರಕಾರಿ (Fresh Vegetables) ಗಳನ್ನು ಬೆಳೆಯುವ ಮೂಲಕ ಮತ್ತು ಬೆಳೆಗಳನ್ನು ಕಟಾವು ಮಾಡಿದ 4 ಗಂಟೆಗಳಲ್ಲಿಯೇ ಮಾರುಕಟ್ಟೆಗೆ ತಲುಪಿಸುವ ಒಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ ನೋಡಿ.


ನೀವು ಜೋಧಪುರದ ಮನೈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದರೆ, ನೀವು ‘ಮಾರೋಖೇತ್’ ಎಂಬ ಫಾರ್ಮ್ ನಲ್ಲಿ ಸ್ವಲ್ಪ ನಿಂತುಕೊಂಡು ಒಮ್ಮೆ ಒಳಗೆ ಹೋಗಿ ನೋಡುವುದು ನಿಮಗೆ ಒಂದೊಳ್ಳೆ ಅನುಭವವನ್ನು ನೀಡಬಹುದು ಎಂದು ಹೇಳಬಹುದು.


ಹೇಗಿದೆ ಈ ಮಾರೋಖೇತ್ ಫಾರ್ಮ್ ಗೊತ್ತೇ?


ಮಾರೋಖೇತ್ - ಒಂದು ಪ್ರಾಯೋಗಿಕ ಕೃಷಿ ಭೂಮಿಯಾಗಿದ್ದು, ಇಲ್ಲಿ ಕೃಷಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಿ ತಿಳಿದುಕೊಳ್ಳುವುದಕ್ಕೆ ತುಂಬಾನೇ ಒಳ್ಳೆಯ ಅನುಭವ ಸಿಗುವುದಂತೂ ನಿಜ. ಈ ಫಾರ್ಮ್ ನಲ್ಲಿ ಕಳೆದ ಎರಡು ವರ್ಷಗಳಿಂದ ಜೋಧಪುರ್ ದ ಸುತ್ತಲೂ ತಾಜಾ ಮತ್ತು ಸಾವಯವ ತರಕಾರಿಗಳನ್ನು ಬೆಳೆಸುತ್ತಿದೆ ಮತ್ತು ಜನರಿಗೆ ಪೂರೈಸುತ್ತಿದೆ ಅಂತ ಹೇಳಬಹುದು.


ಖಾಲಿ ಜಾಗದಲ್ಲಿ ದುಡ್ಡು ಮಾಡ್ತಿರೋ ದಂಪತಿ!


ಈ ಉಪಕ್ರಮದ ಹಿಂದಿರುವ ದಂಪತಿಗಳು ರಾಜನುಷ್ ಮತ್ತು ವೇದಿಕಾ ಅಗರ್ವಾಲ್ ಅಂತ ಹೇಳಬಹುದು. ಅವರಿಬ್ಬರು ತಮ್ಮ 30 ವರ್ಷ ಹಳೆಯ ಪೂರ್ವಜರ ಭೂಮಿಯನ್ನು 'ಫಾರ್ಮ್-ಟು-ಟೇಬಲ್' ಅನುಭವವನ್ನು ನೀಡುವ ಒಂದು ವಿಶಿಷ್ಟ ವಿಷಯವಾಗಿ ಪರಿವರ್ತಿಸುವ ಆಲೋಚನೆಯನ್ನು ಹೊಂದಿದ್ದರು. ಮಿದಲೇ ಇಬ್ಬರೂ ಪ್ರಕೃತಿ ಪ್ರೇಮಿಗಳಾಗಿದ್ದರಿಂದ ಈ ಕೆಲಸಕ್ಕೆ ಇನ್ನಷ್ಟು ಆಸಕ್ತಿ ವಹಿಸಿದರು.


ಪ್ರತಿದಿನ ಮಾರೋಖೇತ್ ನ 40 ಎಕರೆ ಆವರಣಕ್ಕೆ ವೀಕ್ಷಕರು ಮತ್ತು ಗ್ರಾಹಕು ಭೇಟಿ ನೀಡುತ್ತಾರೆ. ಕೆಲವರು ಹೊಲಕ್ಕೆ ಕೇವಲ ನೋಡುವುದಕ್ಕೆ ಅಂತ ಬಂದರೆ ಮತ್ತು ಇನ್ನೂ ಕೆಲವರು ಅಲ್ಲಿ ಬೆಳೆದಿರುವಂತಹ ಹೊಸ ಉತ್ಪನ್ನಗಳನ್ನು ಖರೀದಿ ಮಾಡಲು ಬರುತ್ತಾರೆ. ಅಗರ್ವಾಲ್ ದಂಪತಿಗಳು ಇದೆಲ್ಲವನ್ನೂ ಹೇಗೆ ಪ್ರಾರಂಭವಾಯಿತು ಎಂದು ವಿವರಿಸಿದ್ದಾರೆ ನೋಡಿ.


ಇದನ್ನೂ ಓದಿ: ಭಾರತದಲ್ಲಿರುವ ಎಲಾನ್ ಮಸ್ಕ್ ಬೆಸ್ಟ್ ಫ್ರೆಂಡ್ ಯಾರು? ಇಲ್ಲಿದೆ ವಿವರ


ಜಪಾನ್​ಗೆ ಹೋದಾಗ ಬಂದಿತ್ತು ಕೃಷಿ ಐಡಿಯಾ!


2019 ರಲ್ಲಿ, ಈ ದಂಪತಿಗಳು ಜಪಾನ್ ನ ಕ್ಯೋಟೋಗೆ ಪ್ರವಾಸ ಕೈಗೊಂಡರು. ಹಲವಾರು ವರ್ಷಗಳಿಂದ ತನ್ನ ಕುಟುಂಬ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎಂಜಿನಿಯರ್ ರಾಜನುಷ್ ಅವರು “ಕ್ಯೋಟೋದಲ್ಲಿ ಬೆಳೆದ ತರಕಾರಿಗಳು ಜಪಾನಿನಾದ್ಯಂತ ಪ್ರಸಿದ್ಧವಾಗಿವೆ ಎಂದು ನಾವು ಅರಿತುಕೊಂಡಿದ್ದರಿಂದ, ಪ್ರವಾಸವು ಸಾಕಷ್ಟು ಅನುಭವವನ್ನು ನಮಗೆ ಕಟ್ಟಿಕೊಟ್ಟಿತು. ಏಕೆಂದರೆ ಕೇವಲ ಆ ತರಕಾರಿಗಳ ತಾಜಾತನಕ್ಕಾಗಿ ಅಲ್ಲದೆ, ಈ ತರಕಾರಿಗಳನ್ನು ಮಿಚೆಲಿನ್-ಸ್ಟಾರ್ ರೆಸ್ಟೋರೆಂಟ್ ಗಳು ಸಹ ಬಳಸುತ್ತವೆ ಎಂದು ನಾವು ತಿಳಿದುಕೊಂಡೆವು" ಎಂದು ಹೇಳಿದರು.

ಫಾರ್ಮ್-ಟು-ಡೋರ್ ಶುರುವಾಗಿದ್ದು 2020 ರಲ್ಲಿ ಅಂತೆ!


ಫಾರ್ಮ್-ಟು-ಡೋರ್ ಉದ್ಯಮವು ನವೆಂಬರ್ 2020 ರಲ್ಲಿ ಪ್ರಾರಂಭವಾಯಿತು. ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾದ ಅದೇ ಸಮಯದಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾಗಿತ್ತು. ಅಗರ್ವಾಲ್ ದಂಪತಿಗಳು ವ್ಯಾಪಾರದಲ್ಲಿ ಮತ್ತು ಹೊಸ ಉತ್ಪನ್ನಗಳನ್ನು ಸೇವಿಸುವಲ್ಲಿ ಜನರ ಆಸಕ್ತಿಯಲ್ಲಿ ಹೆಚ್ಚಳವನ್ನು ಕಂಡರು. ಇವರ ಈ ಮಾದರಿ ತುಂಬಾನೇ ಜನಪ್ರಿಯವಾಯಿತು, ಆದರೆ ರಾಜನುಷ್ ಅವರಿಗೆ ತೃಪ್ತಿ ಆಗಿರಲಿಲ್ಲ.


ಈ ತಾಜಾ ತರಕಾರಿಗಳ ಹೇರಳತೆ!


"ನೀವು ನಿಮ್ಮ ಗ್ರಾಹಕರಿಗೆ ಬೇರೆ ಎಲ್ಲಿಯೂ ಸಿಗದೇ ಇರುವ ಉತ್ಪನ್ನಗಳನ್ನು ನೀಡಿದರೆ, ನೀವು ಉತ್ತಮ ಗ್ರಾಹಕ ನೆಲೆಯನ್ನು ಪಡೆಯುತ್ತೀರಿ. ತಾಜಾ ತರಕಾರಿಗಳ ವಿಷಯದಲ್ಲೂ ಇದೇ ರೀತಿ ಇದೆ" ಎಂದು ರಾಜನುಷ್ ಅವರು ಹೇಳಿದರು.


ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ಲಾಗಿ ಈ ಬ್ಯುಸಿನೆಸ್ ಆರಂಭಿಸಿ! ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಿ!


ದಂಪತಿಗಳು ಈ ಉತ್ಪನ್ನವನ್ನು ತಮ್ಮ ಫಾರ್ಮ್-ಟು-ಟೇಬಲ್ ಅನುಭವಕ್ಕಾಗಿ ಬಳಸುವುದು ಮಾತ್ರವಲ್ಲದೆ, ಅದನ್ನು ಜೋಧಪುರ್ ದಾದ್ಯಂತದ ಮನೆಗಳು ಮತ್ತು ರೆಸ್ಟೋರೆಂಟ್ ಗಳಿಗೆ ಮಾರಾಟ ಮಾಡುತ್ತಾರೆ.

Published by:ವಾಸುದೇವ್ ಎಂ
First published: