ಪ್ರತಿಯೊಬ್ಬರಿಗೂ ತಾನೂ ಒಂದು ಸ್ವಂತ ಬ್ಯುಸಿನೆಸ್ (Business) ಶುರು ಮಾಡಿ ಹಣ (Money) ಸಂಪಾದಿಸಬೇಕೆಂಬ ಆಸೆ ಇರುತ್ತದೆ. ಆದರೆ, ಯಾವ ಬ್ಯುಸಿನೆಸ್ ಶುರು ಮಾಡಿದರೆ ಏನೆಲ್ಲಾ ಸಿಗುತ್ತೆ. ಹಾಗೇ ಏನೆಲ್ಲಾ ರಿಸ್ಕ್ (Risk) ಇರುತ್ತದೆ ಎಂದು ಗೊತ್ತಿರಲ್ಲ. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಲಾಭ ಮಾಡಬೇಕು ಅಂತ ಇರುತ್ತಾರೆ. ಡಾ ರಾಜ್ಕುಮಾರ್ (Dr Rajkumar) ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿ (Village) ಗಳಿಗೆ ವಾಪಸ್ ಆಗಿದ್ದರು. ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಕೆಲಸ ಬಿಟ್ಟು ಕೃಷಿಯತ್ತ (Agriculture) ಹೆಜ್ಜೆ ಹಾಕುತ್ತಿದ್ದಾರೆ.
ಸೌತೆಕಾಯಿ ವ್ಯಾಪರದಿಂದ ಹೆಚ್ಚಿನ ಲಾಭ!
ಐದಾರು ವರ್ಷಗಳ ಹಿಂದಿನವರೆಗೂಕೃಷಿ ಎಂದರೆ, ನಷ್ಟ ಎಂಬ ಅಭಿಪ್ರಾಯ ಬಲವಾಗಿ ವ್ಯಕ್ತವಾಗಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೃಷಿ ಕ್ಷೇತ್ರದಲ್ಲಿ ಯುವಕರು ಹೊಸ ಹೆಜ್ಜೆ ಇಡುತ್ತಿದ್ದಾರೆ. ಹೊಸ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ನೀವೂ ಹೊಸ ರೀತಿಯ ಕೃಷಿ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಕಡಿಮೆ ಬಂಡವಾಳದಲ್ಲಿ ಸೌತೆಕಾಯಿ ಕೃಷಿ ಆರಂಭಿಸಿ. ಈ ಕೃಷಿಯಿಂದ ಲಕ್ಷಗಟ್ಟಲೆ ಆದಾಯ ಪಡೆಯಬಹುದು. ಉತ್ತರ ಪ್ರದೇಶದ ರೈತರೊಬ್ಬರು ತಮ್ಮ ಹೊಲದಲ್ಲಿ ಸೌತೆಕಾಯಿಯನ್ನು ಬೆಳೆದಿದ್ದಾರೆ. ಕೇವಲ 4 ತಿಂಗಳಲ್ಲಿ 8 ಲಕ್ಷ ರೂಪಾಯಿ ಗಳಿಸಿದ್ದಾರೆ.
ನೆದರ್ಲೆಂಡ್ಸ್‌ನಿಂದ ಸೌತೆಕಾಯಿ ತರಿಸಿದ್ದ ರೈತ
ನೆದರ್ಲೆಂಡ್ಸ್‌ನಿಂದ ಸೌತೆಕಾಯಿಯನ್ನು ತಂದು ನೆಟ್ಟರು. ಈ ಸೌತೆಕಾಯಿಗಳಿಗೆ ಯಾವುದೇ ಬೀಜಗಳಿರಲ್ಲ. ಹಾಗಾಗಿ, ಅಂತಹ ಸೌತೆಕಾಯಿಗಳಿಗೆ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಭಾರಿ ಬೇಡಿಕೆಯಿದೆ. ಇತರ ಸೌತೆಕಾಯಿಗಳಿಗಿಂತ ಹೆಚ್ಚಿನ ಬೆಲೆಯನ್ನೂ ಪಡೆಯುತ್ತಿದ್ದಾರೆ. ಈ ದಂಧೆಗೆ ರೈತ ಸರಕಾರದಿಂದ 18 ಲಕ್ಷ ರೂ.ಅನುದಾನ ಪಡೆದು ಜಮೀನಿನಲ್ಲಿ ಶೆಡ್ ನೆಟ್ ಹೌಸ್ ನಿರ್ಮಿಸಿಕೊಂಡಿದ್ದಾನೆ. ಇದರಲ್ಲೇ ಸೌತೆಕಾಯಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿದ್ದಾರೆ.
ಇದನ್ನೂ ಓದಿ: ಕುರಿ ಮಾರಾಟ, ಖರೀದಿಗೆ ಮೊಬೈಲ್ ಆ್ಯಪ್! ಹಣ ಉಳಿಸಿ ಹಣ ಗಳಿಸಿ!
ಎಲ್ಲ ರೀತಿಯ ಮಣ್ಣಿನಲ್ಲಿ ಸೌತೆಕಾಯಿ ಬೆಳೆಯಬಹುದು!
ಈ ಸೌತೆಕಾಯಿಯನ್ನು ಯಾವುದೇ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಗ್ರಾಮೀಣ ಪ್ರದೇಶವಷ್ಟೇ ಅಲ್ಲ, ನಗರ ಪ್ರದೇಶದಲ್ಲೂ ಸೌತೆಕಾಯಿ ಕೃಷಿ ಮಾಡಬಹುದು. ಸೌತೆಕಾಯಿ ಕೊಯ್ಲು 60 ರಿಂದ 80 ದಿನಗಳಲ್ಲಿ ಲಭ್ಯವಿದೆ. ತಜ್ಞರು ಈ ತಳಿಗೆ 5.5 ರಿಂದ 6.8 ರ ಮಣ್ಣಿನ pH ಅನ್ನು ಸೂಚಿಸುತ್ತಾರೆ. ನಂತರ ಭೂಮಿಯನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಸೌತೆಕಾಯಿಯನ್ನು ನದಿಗಳು ಅಥವಾ ಸರೋವರಗಳ ದಡದಲ್ಲಿಯೂ ಬೆಳೆಯಬಹುದು.
ಬೇಸಿಗೆಯಲ್ಲಿ ಸೌತೆಕಕಾಯಿಗೆ ಹೆಚ್ಚಿನ ಡಿಮ್ಯಾಂಡ್!
ಬೇಸಿಗೆಯಲ್ಲಿ ಸೌತೆಕಾಯಿಗೆ ಹೆಚ್ಚಿನ ಬೇಡಿಕೆಯಿದೆ. ಸೌತೆಕಾಯಿಯನ್ನು ಅದರ ಆರೋಗ್ಯ ಪ್ರಯೋಜನಗಳಿಗಾಗಿ ಪ್ರತಿ ಸಲಾಡ್‌ನಲ್ಲಿ ಬಳಸಲಾಗುತ್ತದೆ. ಸೌತೆಕಾಯಿ ಇತ್ತೀಚೆಗೆ ಪಾರ್ಟಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರಿಂದಾಗಿ ಸೌತೆಕಾಯಿಗೆ ವರ್ಷವಿಡೀ ಬೇಡಿಕೆ ಇರುತ್ತದೆ.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಟೀ-ಕಾಫಿಗೆ ಎಕ್ಸ್ಟ್ರಾ ದುಡ್ಡು ಕೊಡೋ ಟೆನ್ಶನ್ ಇಲ್ಲ
ನಿಮ್ಮ ಬಳಿ ಸ್ವಲ್ಪ ಹಣವಿದ್ದರೂ, ಸೌತೆಕಾಯಿ ಕೃಷಿಯಿಂದ ಉತ್ತಮ ಲಾಭ ಗಳಿಸಬಹುದು. ಅದೂ ಅಲ್ಲದೆ ಸರಕಾರದಿಂದ ಒಂದಿಷ್ಟು ಸಹಾಯಧನ ಪಡೆದು ಈ ಕೃಷಿ ಮಾಡಬಹುದು. ಮಾರುಕಟ್ಟೆಯಲ್ಲಿ ಸಾಮಾನ್ಯ ಸೌತೆಕಾಯಿ ಕೆಜಿಗೆ 50 ರೂಪಾಯಿದೆ. ಸೌತೆಕಾಯಿ ಉತ್ಪಾದನೆಯು ರೈತರಿಗೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ನಿಮ್ಮ ಪ್ರದೇಶದಲ್ಲಿ ಮಾರುಕಟ್ಟೆಯ ಉತ್ತಮ ಅಧ್ಯಯನದ ನಂತರ ಈ ಕೃಷಿಯನ್ನು ಪ್ರಾರಂಭಿಸುವುದು ಉತ್ತಮ ಲಾಭವನ್ನು ಗಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ