ಡ್ರ್ಯಾಗನ್ ಫ್ರೂಟ್ (Dragon Fruit) ಅಂತಹ ಒಂದು ಬೆಳೆಯಾಗಿದ್ದು, ರೈತರು (Farmers) ಕೃಷಿ (Agriculture) ಮಾಡುವ ಮೂಲಕ ಶ್ರೀಮಂತರಾಗಬಹುದು. ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಹೆಸರು ಹೈಲೋಸೆರೆಸುಂಡಾಟಸ್(Hyloceresundatus) , ಇದನ್ನು ಮುಖ್ಯವಾಗಿ ಮಲೇಷ್ಯಾ(Malaysia) , ಥೈಲ್ಯಾಂಡ್(Thailand) , ಫಿಲಿಪೈನ್ಸ್ (Philippines) , ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (USA) ಮತ್ತು ವಿಯೆಟ್ನಾಂ (Vietnam) ದೇಶಗಳಲ್ಲಿ ಬೆಳೆಯಲಾಗುತ್ತದೆ.ನಿಗದಿತ ಮಾನದಂಡಗಳ ಪ್ರಕಾರ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಸಿದರೆ, ನಂತರ ಬಂಪರ್ ಗಳಿಕೆಯನ್ನು ಪಡೆಯಬಹುದು. ಒಂದು ಎಕರೆ ಜಮೀನಿನಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಆದಾಯ ಪಡೆಯಬಹುದು. ಆರಂಭದ ಅವಧಿಯಲ್ಲಿ ಇದರ ಬೇಸಾಯಕ್ಕೆ ನಾಲ್ಕೈದು ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗಬಹುದು. ದಾವಣಗೆರೆಯ ರೈತ ರೊಬ್ಬರು ಡ್ರ್ಯಾಗನ್ ಫ್ರೂಟ್ ಬೆಳೆದು 5 ವರ್ಷದಲ್ಲಿ 25 ಲಕ್ಷ ಆದಾಯ ಗಳಿಸಿದ್ದಾರೆ.
1 ಎಕರೆಯಲ್ಲಿ ಡ್ರ್ಯಾಗನ್ ಬೆಳೆದು ಯಶಸ್ಸು ಕಂಡ ರೈತ!
ಕೇವಲ ಒಂದು ಎಕರೆ ಜಮೀನಿನಲ್ಲಿ ಅಪರೂಪದ ಬೆಳೆ ಬೆಳೆದು ಎಸ್ಸೆಸ್ಸೆಲ್ಸಿ ಓದಿದ ಯುವ ರೈತರೊಬ್ಬರು ಸಾಧನೆ ಮಾಡಿದ್ದಾರೆ. ಕೇವಲ 5 ವರ್ಷದಲ್ಲಿ 25 ಲಕ್ಷ ಆದಾಯ ಗಳಿಸಿ, ಇತರ ರೈತರಿಗೂ ಮಾದರಿಯಾಗಿದ್ದಾರೆ. ಕೇವಲ ನಾಲ್ಕು ಲಕ್ಷ ರೂಪಾಯಿ ಬಂಡವಾಳ ಹಾಕಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆದಿದ್ದಾರೆ. 5 ವರ್ಷದಲ್ಲಿ ಈ ಹಣ್ಣನ್ನು ನಂಬಿಕೊಂಡು 25 ಲಕ್ಷ ಆದಾಯಗಳಿಸಿದ್ದಾರೆ. ನೀವೂ ಕೂಡ ಇವರ ಸೂತ್ರಗಳನ್ನು ಅನುಸರಿಸಿ ಈ ಹಣ್ಣನ್ನು ಬೆಳೆದು ಕೈ ತುಂಬಾ ಆದಾಯ ಗಳಿಸಿದ್ದಾರೆ. ದಾವಣಗೆರೆ ತಾಲೂಕಿನ ಸಿದ್ದನೂರು ಗ್ರಾಮದ ರೈತ ಮಂಜಣ್ಣ ಅವರೇ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದವರು.
ಎಕರೆಗೆ 400 ಗಿಡ ನೆಟ್ಟಬೇಕು!
ಮಂಜಣ್ಣ ಅವರು ತಮ್ಮ 1 ಎಕರೆ ಜಮೀನಿನಲ್ಲಿ ಏನು ಬೆಳೆಯಬೇಕು ಎಂಬ ಗೊಂದಲದಲ್ಲಿದ್ದರಂತೆ. ಎಲ್ಲಾ ಯೋಚನೆ ಮಾಡಿದ ಬಳಿಕ ಇವರಿಗೆ ಡ್ರ್ಯಾಗನ್ ಫ್ರೂಟ್ ಬೆಳೆಯಬೇಕು ಅಂತ ಅನ್ನಿಸುತ್ತು. ಡ್ರ್ಯಾಗನ್ ಫ್ರೂಟ್ ನೋಡುವುದಕ್ಕೆ ವಿಚಿತ್ರವಾಗಿ ಕಂಡರು, ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸದ್ಯ ಹುಬ್ಬಳ್ಳಿ, ಬೆಂಗಳೂರು, ಮುಂಬಯಿ, ದಾವಣಗೆರೆ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಈ ರೈತ ಬೆಳೆದ ಹಣ್ಣುಗಳು ಮಾರಾಟ ಆಗುತ್ತದೆ.
ಇದನ್ನೂ ಓದಿ: ಅಪರೂಪದ ಬಳ್ಳಿ ಆಲೂಗಡ್ಡೆ ಬೆಳೆದ ಚಿಕ್ಕಬಳ್ಳಾಪುರದ ರೈತ! ಇದಕ್ಕಿದೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಒಂದು ಗಿಡಕ್ಕೆ 600 ರೂಪಾಯಿ ಖರ್ಚು!
ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ಹಾಕಿ ದಾಯ ಮಾಡಿ ಡ್ರೀಪ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಂದು ಗಿಡಕ್ಕೆ 600ಕ್ಕೂ ಅಧಿಕ ವೆಚ್ಚ ಮಾಡಿದ್ದು, ಎಕರೆಗೆ 400 ಗಿಡಗಳು ಕೂತುಕೊಳ್ಳುತ್ತವೆ. ಇದಕ್ಕೆ ಹೆಚ್ಚಾಗಿ ಪ್ರಾಮುಖ್ಯತೆ ಕೊಟ್ಟು ನೋಡಿಕೊಳ್ಳಬೇಕು ಅಂತೇನಿಲ್ಲ. ಗಿಡ ನೆಟ್ಟು ಅದಕ್ಕೆ ನೀರು, ಗೊಬ್ಬರ ಹಾಕಿ ಪೋಷಿಸಿದರೆ ಸಾಕು.
ಪಾಪಸ್ಕಳ್ಳಿ ಜಾತಿಗೆ ಸೇರಿದ ಡ್ರ್ಯಾಗನ್ ಫ್ರೂಟ್ ಗಿಡ!
ಈ ಡ್ರ್ಯಾಗನ್ ಫ್ರೂಟ್ ಗಿಡ ಪಾಪಾಸ್ ಕಳ್ಳಿ ಜಾತಿಗೆ ಸೇರಿದ್ದು, ಹೀಗಾಗಿ ಇದನ್ನು ಒಮ್ಮೆ ನೆಟ್ಟರೆ ಸಾಕು. ಈ ಗಿಡಿ ಸಾಯುವುದಿಲ್ಲ. ಮೊದಲ ಬಾರಿಗೆ ಗಿಡ ನೆಡುವಾಗ ಮಾತ್ರ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಇದಾದ ಬಳಿಕ ಪ್ರತಿ ವರ್ಷ ಎಕರೆಗೆ ಹೆಚ್ಚೆಂದರೆ 15 ಸಾವಿರ ವೆಚ್ಚವಾಗಬಹುದು. ಈ ಹಣ್ಣಿನಿಂದ ನಿರಂತರ 20 ವರ್ಷದವರೆಗೂ ಆದಾಯ ಸಿಗುತ್ತೆ.
ಇದನ್ನೂ ಓದಿ: ಈ ಹೂವಿನ ಕೃಷಿ ಮಾಡಿ, 1 ಎಕರೆಯಲ್ಲಿ 20 ಲಕ್ಷ ಆದಾಯ ಗಳಿಸಿ!
ಬಯಲು ಸೀಮೆಯಲ್ಲೂ ಡ್ರ್ಯಾಗನ್ ಫ್ರೂಟ್ ಬೆಳೆಯಬಹುದು!
ಈ ಹಣ್ಣಿಗೆ ಇಂಥದ್ದೇ ಮಣ್ಣು ಬೇಕಂತ ಏನಿಲ್ಲ. ಬಯಲು ಸೀಮೆಯಲ್ಲೂ ಈ ಬೆಳೆಯನ್ನು ಬೆಳೆಯಬಹುದು. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಡ್ರ್ಯಾಗನ್ ಫ್ರೂಟ್ಸ್‌ನ್ನು ಬೆಳೆದು ಹೆಚ್ಚು ಆದಾಯ ಪಡೆಯಬಹುದಾಗಿದೆ. ಪ್ರತಿಯೊಂದು ಗಿಡಕ್ಕೆ 25 ರಿಂದ 30 ಕೆಜಿ ಹಣ್ಣು ದೊರೆಯುತ್ತದೆ. ಪ್ರತಿ ಹಣ್ಣಿಗೆ ಗರಿಷ್ಟ 80 ರಿಂದ 100 ರೂ. ಸಿಗಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ