ಪ್ರತಿಯೊಬ್ಬರಿಗೂ ತಾನೂ ಒಂದು ಸ್ವಂತ ಬ್ಯುಸಿನೆಸ್ (Business) ಶುರು ಮಾಡಿ ಹಣ (Money) ಸಂಪಾದಿಸಬೇಕೆಂಬ ಆಸೆ ಇರುತ್ತದೆ. ಆದರೆ, ಯಾವ ಬ್ಯುಸಿನೆಸ್ ಶುರು ಮಾಡಿದರೆ ಏನೆಲ್ಲಾ ಸಿಗುತ್ತೆ. ಹಾಗೇ ಏನೆಲ್ಲಾ ರಿಸ್ಕ್ (Risk) ಇರುತ್ತದೆ ಎಂದು ಗೊತ್ತಿರಲ್ಲ. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಲಾಭ ಮಾಡಬೇಕು ಅಂತ ಇರುತ್ತಾರೆ. ಡಾ ರಾಜ್ಕುಮಾರ್ (Dr Rajkumar) ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿಗಳಿಗೆ ವಾಪಸ್ ಆಗಿದ್ದರು. ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ಕೆಲವು ರೈತರು ಹೊಸದನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದು ಯಶಸ್ವಿಯಾದ ರೈತ!
ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದಿರುವುದು ಕಾಣಸಿಗುವುದು ಅತೀ ವಿರಳ. ಚಿಕ್ಕಬಳ್ಳಾಪುರದ ಈ ರೈತ ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದು ಯಶಸ್ವಿಯಾಗಿದ್ದಾರೆ. ಜೊತೆಗೆ ಕೈ ತುಂಬಾ ಹಣ ಕೂಡ ಗಳಿಸುತ್ತಿದ್ದಾರೆ. ಕೇವಲ ಸಾವಿರ ರೂಪಾಯಿ ಕೊಟ್ಟು ಈ ಬಳ್ಳಿಯನ್ನು ಚಿಕ್ಕಬಳ್ಳಾಪುರದ ರೈತ ತಂದಿದ್ದರು. ಇದೀಗ ಆ ಸಾವಿರ ರೂಪಾಯಿಯಿಂದ ಲಕ್ಷ ಲಕ್ಷ ಗಳಿಸುವ ಅವಕಾಶ ಸಿಕ್ಕಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ರೈತ ಕುಟುಂಬದ ನಿವಾಸಿ ಎ ಎಂ ತ್ಯಾಗರಾಜು ಬಿನ್ ಮುನಿಯಪ್ಪ ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದು ಯಶಸ್ವಿಯಾಗಿದ್ದಾರೆ.
ಇತರರಿಗೆ ಮಾದರಿಯಾದ ಎ ಎಂ ತ್ಯಾಗರಾಜು!
ಮೊದಲಿನಿಂದಲೂ ಎ.ಎಂ ತ್ಯಾಗರಾಜು ಅವರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಜೊತೆಗೆ ಕೃಷಿ ಮೇಲೂ ಆಸಕ್ತಿ ಹೆಚ್ಚಿತ್ತುಆಲೂಗಡ್ಡೆ ಯನ್ನು ಭೂಮಿಯ ಕೆಳಗೆ ಬೆಳೆಯುವುದನ್ನು ನೀವು ನೋಡಿದ್ದೀರಾ. ಆದರೆ, ಇಲ್ಲಿ ಈ ರೈತ ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದಿದ್ದಾರೆ. ಕಾಡು ಪ್ರದೇಶದ ಜನ ಪ್ರತಿನಿತ್ಯ ಬಳಸುವ ಸಲುವಾಗಿ ಕಾಡುಗಾಡಿನಲ್ಲಿಯೇ ಬೆಳೆಯುತ್ತಿದ್ದ ಬಳ್ಳಿ ಆಲೂಗಡ್ಡೆಯನ್ನು ಬೆಳೆಯಲು ಯಾವುದೇ ನೀರಿಲ್ಲದೆ ಹಾಗೂ ಯಾವುದೇ ರಾಸಾಯನಿಕ ಇಲ್ಲದೆ ಉತ್ತಮ ಇಳುವಳಿ ಪಡೆಯಬಹುದು. ಇದನ್ನು ಅರಿತ ರೈತ ತ್ಯಾಗರಾಜು ಈ ಬೆಳೆ ಬೆಳೆದು ಇತರರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ದಿಢೀರ್ ಬೇಡಿಕೆ ಕಳೆದುಕೊಂಡ ತೆಂಗು, ಅರ್ಧಕರ್ಧದಷ್ಟು ಬೆಲೆ ಕುಸಿತ!
ವಿವಿಧ ಬೆಳೆ ಬೆಳೆದು ಸೈ ಎನಿಸಿಕೊಂಡಿರುವ ತ್ಯಾಗರಾಜು!
ಈ ರೀತಿ ಬಳ್ಳಿಯಲ್ಲಿ ಆಲೂಗಡ್ಡೆ ಬೆಳೆದಿರುವ ತ್ಯಾಗರಾಜು ಈ ಹಿಂದೆಯೂ ಹಲವಾರು ವಿವಿಧ ರೀತಿಯ ಗೆಡ್ಡೆ, ಗೆಣಸು ಬೆಳೆದು ಸೈ ಎನಿಸಿಕೊಂಡಿದ್ದರು. ದ್ರಾಕ್ಷಿ ಬೆಳೆಯುವ ಚಪ್ಪರಕ್ಕೆ ಬಳ್ಳಿ ಆಲೂಗಡ್ಡೆ ಯನ್ನು ನಾಟಿ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆಲೂಗಡ್ಡೆಗೆ ಹೆಚ್ಚಿನ ಬೇಡಿಕೆ ಇದ್ದರೂ, ಅದನ್ನು ಮಾರಾಟ ಮಾಡದೇ ಬಳ್ಳಿ ಆಲುಗಡ್ಡೆಯ ಬಗ್ಗೆ ಯುವ ರೈತರಿಗೆ ತಿಳಿಸಿಕೊಡುವಲ್ಲಿ ತ್ಯಾಗರಾಜು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಈ ಹೂವಿನ ಕೃಷಿ ಮಾಡಿ, 1 ಎಕರೆಯಲ್ಲಿ 20 ಲಕ್ಷ ಆದಾಯ ಗಳಿಸಿ!
ಶಾಲೆಗಳಿಗೆ ಉಚಿತವಾಗಿ ಬಳ್ಳಿ ಆಲುಗಡ್ಡೆ ನೀಡುತ್ತಿದ್ದಾರೆ!
ಇದೇ ಗ್ರಾಮದ ಸರ್ಕಾರಿ ಶಾಲೆಗಳಿಗೆ ಬಿಸಿ ಊಟದಲ್ಲಿ ಬಳಿಸಿಕೊಳ್ಳಲು ಉಚಿತವಾಗಿ ಬಳ್ಳಿ ಆಲೂಗಡ್ಡೆಗಳನ್ನು ನೀಡುತ್ತಿದ್ದಾರೆ. ಇನ್ನೂ ಬಳ್ಳಿ ಆಲೂಗಡ್ಡೆಯಲ್ಲಿ ಉತ್ತಮ ಔಷಧಿ ಗುಣಗಳಿರುವ ಹಿನ್ನಲೇ ಆರೋಗ್ಯಕ್ಕೂ ಉತ್ತಮ. ಮಧುಮೇಹ,ಆಸ್ತಾಮ,ಬಿಪಿ ಸೇರಿದಂತೆ ಹಲವಾರು ಖಾಯಿಲೆಗಳಿಗೆ ರಾಮಬಾಣ ಈ ಬಳ್ಳಿ ಆಲೂಗಡ್ಡೆ. ಈ ಗ್ರಾಮದ ಹಲವು ಮಧುಮೇಹಿಗಳು ಆಲೂಗಡ್ಡೆಯನ್ನು ಬಳಿಸಿ ತಮ್ಮ ಶುಗರ್ ಲೇವಲ್ ಕಡಿಮೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಬಳ್ಳಿ ಆಲೂಗಡ್ಡೆಯ ಬಗ್ಗೆ ಯುವ ರೈತರಿಗೆ ತಿಳಿಸಿಕೊಡುವಲ್ಲಿ ತ್ಯಾಗರಾಜು ಬ್ಯುಸಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ