• Home
  • »
  • News
  • »
  • business
  • »
  • Farming Tips: ಓದಿದ್ದು Mtech-ಕೈ ಹಿಡಿದಿದ್ದು ಮಾತ್ರ ಕೃಷಿ, ಇನ್​ಸ್ಟಾಗ್ರಾಮ್​ನಲ್ಲಿ ಪಾಠ ಮಾಡೋ ಯುವಕ!

Farming Tips: ಓದಿದ್ದು Mtech-ಕೈ ಹಿಡಿದಿದ್ದು ಮಾತ್ರ ಕೃಷಿ, ಇನ್​ಸ್ಟಾಗ್ರಾಮ್​ನಲ್ಲಿ ಪಾಠ ಮಾಡೋ ಯುವಕ!

ಸಾವಯುವ ಕೃಷಿ

ಸಾವಯುವ ಕೃಷಿ

ಇದೀಗ ಅವರು ಸ್ಪ್ರೌಟೆಡ್ ಜಂಗಲ್ ಎಂಬ ಕೃಷಿ ಸಲಹಾ ಕಂಪನಿಯನ್ನು ಹೊಂದಿದ್ದಾರೆ. ಅಲ್ದೇ ಇನ್‌ ಸ್ಟಾಗ್ರಾಂ ನಲ್ಲಿ (@iamsatyamjha)2.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು ಸುಮಾರು 7 ಲಕ್ಷ ರೂ ಗಳಿಸುತ್ತಾರೆ.

  • Trending Desk
  • 2-MIN READ
  • Last Updated :
  • Share this:

ಇತ್ತೀಚಿಗೆ ಸಾಮಾಜಿಕ ಮಾಧ್ಯಮ (Social Media) ಅನ್ನೋದು ಜನರಿಗೆ ಚಿರಪರಿಚಿತ. ಈ ಮಾಧ್ಯಮದಿಂದಲೇ ಅನೇಕರು ಉದ್ಯೋಗ ಮಾಡುತ್ತಾರೆ. ಇದರ ಮೂಲಕವೇ ಜನರಿಗೆ ಪರಿಚಿತರಾಗಿ ಜನಪ್ರಿಯರಾಗುತ್ತಾರೆ. ತಮ್ಮ ಅಪರೂಪದ ಕೆಲಸಗಳನ್ನು ಫೇಸ್‌ ಬುಕ್‌  (Facebook) , ಇನ್‌ ಸ್ಟಾ (Insta) , ಯುಟ್ಯೂಬ್‌ (YouTube) ಗಳ ಮೂಲಕ ಹಂಚಿಕೊಂಡು ಆದಾಯವನ್ನೂ ಗಳಿಸುತ್ತಾರೆ. ಹೀಗೆಯೇ ಇಲ್ಲೊಬ್ಬ ಯುವಕ ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ಸಾವಯವ ಕೃಷಿ (Organic Farming) ಹೇಳಿಕೊಡುತ್ತಾರೆ ಜೊತೆಗೆ ಆದಾಯವನ್ನೂ ಗಳಿಸುತ್ತಿದ್ದಾರೆ. ಅವರ ಹೆಸರು ಸತ್ಯಂ ಝಾ ಅಂತ. ಇಂಡಿಯಾ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ನಿಂದ ಕೃಷಿ ಇಂಜಿನಿಯರಿಂಗ್‌ನಲ್ಲಿ MTech ಮುಗಿಸಿದ ನಂತರ, 29 ವರ್ಷದ ಸತ್ಯಂ ಝಾ ಜೀವನವು ಬೇರೆಯದೇ ತಿರುವು ಪಡೆಯಿತು.


ಜಾಬ್‌ ಹುಡುಕಿ ಜೀವನ ರೂಪಿಸಿಕೊಳ್ಳುವ ಬದಲು ಅವರು “ಗ್ರೀನ್‌ ಇನ್ಸ್ಟಾಗ್ರಾಮರ್" ಆಗಲು ನಿರ್ಧರಿಸಿದರು.


ಗ್ರೀನ್‌ ಇನ್‌ಸ್ಟಾಗ್ರಾಮರ್‌ ನಿಂದ ಸ್ಪ್ರೌಟೆಡ್‌ ಜಂಗಲ್‌ ಕಂಪನಿ!


2017 ರಲ್ಲಿ ಸತ್ಯಂ ಅವರು ಮನೆಯಲ್ಲಿ ಸಾವಯವ ವಿಧಾನದಲ್ಲಿ ಸಸ್ಯಗಳನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು Instagram ವೀಡಿಯೊಗಳನ್ನು ಪೋಸ್ಟ್‌ ಮಾಡೋದಿಕ್ಕೆ ಆರಂಭಿಸಿದರು.


‘ಸ್ಪ್ರೌಟೆಡ್ ಜಂಗಲ್’ ನಲ್ಲಿ ಪಾಠ!


ಇದೀಗ ಅವರು ಸ್ಪ್ರೌಟೆಡ್ ಜಂಗಲ್ ಎಂಬ ಕೃಷಿ ಸಲಹಾ ಕಂಪನಿಯನ್ನು ಹೊಂದಿದ್ದಾರೆ. ಅಲ್ದೇ ಇನ್‌ ಸ್ಟಾಗ್ರಾಂ ನಲ್ಲಿ (@iamsatyamjha)2.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು ಸುಮಾರು 7 ಲಕ್ಷ ರೂ ಗಳಿಸುತ್ತಾರೆ. ಸತ್ಯಂ ಅವರು ‘ಸ್ಪ್ರೌಟೆಡ್ ಜಂಗಲ್’ ಮೂಲಕ ತಮ್ಮ ತೋಟದಲ್ಲಿ ತಮ್ಮದೇ ಆದ ಸಾವಯವ ಬೆಳೆಗಳನ್ನು ಬೆಳೆಯಲು ಬಯಸುವ ಜನರಿಗೆ ಸಹಾಯ ಮಾಡುತ್ತಾರೆ. ಕುಂಡಗಳಲ್ಲಿ ಗಾಳಿಯನ್ನು ಶುದ್ಧೀಕರಿಸುವ ಸಸ್ಯಗಳನ್ನು ಬೆಳೆಸುವುದು ಹೇಗೆ ಅನ್ನೋದನ್ನೂ ಹೇಳಿಕೊಡುತ್ತಾರೆ.


“ಸಾವಯವ ಕೃಷಿ ಆಯ್ಕೆ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು”


ಬಿಹಾರದ ದರ್ಬಂಗಾ ಜಿಲ್ಲೆಯವರಾದ ಸತ್ಯಂ ಮೂಲತಃ ಕೃಷಿ ಕುಟುಂಬದವರು. “ಚಿಕ್ಕವನಾಗಿದ್ದಾಗ ಸಸ್ಯಗಳು ಹೇಗೆ ಬೆಳೆಯುತ್ತವೆ, ಬೀಜಗಳು ಹೇಗೆ ಮೊಳಕೆಯೊಡೆಯುತ್ತವೆ ಅನ್ನೋದ್ರ ಬಗ್ಗೆ ನನಗೆ ಕುತೂಹಲವಿತ್ತು.ಚಿಕ್ಕ ವಯಸ್ಸಿನಲ್ಲಿಯೇ, ನಾನು ಕೃಷಿ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹೊಂದಿದ್ದೇನೆ" ಎಂದು ನನಗೆ ತಿಳಿದಿತ್ತು ಎಂಬುದಾಗಿ ಹೇಳುತ್ತಾರೆ ಸತ್ಯಂ.


ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಕಮಾಲ್​ ಮಾಡಿದ ವ್ಯಕ್ತಿ! ಇದ್ರಿಂದಲೇ 30 ಲಕ್ಷ ಆದಾಯ ಅಂದ್ರೆ ಸುಮ್ನೆನಾ?


ನೈಸರ್ಗಿಕ ಗೊಬ್ಬರ ಬಳಸುತ್ತಾರೆ ಸತ್ಯಂ!


ಸಾವಯವ ಕೃಷಿಯ ಆಯ್ಕೆಯ ಕುರಿತು ಮಾತನಾಡುವ ಅವರು, “ರಾಸಾಯನಿಕ ಮಿಶ್ರಿತ ತರಕಾರಿಗಳನ್ನು ಸೇವಿಸಿ ಜನರು ಸಾಯುವುದನ್ನು ನಾನು ನೋಡಿದ್ದೇನೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಪೌಷ್ಟಿಕಾಂಶವನ್ನು ಕಳೆದುಕೊಂಡ ಎಕರೆಗಟ್ಟಲೆ ಜಮೀನು ಕೂಡ ನನ್ನಲ್ಲಿದೆ. ನಮ್ಮ ಪೂರ್ವಜರು ನಮಗಿಂತ ಹೆಚ್ಚು ಸಮರ್ಥರಾಗಿದ್ದರು.ಅವರು ಕೃಷಿಯಲ್ಲಿ ಗೋಬರ್ ಖಡ್ (ಸಗಣಿ ಗೊಬ್ಬರ) ನಂತಹ ನೈಸರ್ಗಿಕ ಗೊಬ್ಬರಗಳನ್ನು ಬಳಸುತ್ತಿದ್ದರು. ಆದ್ರೆ ಈಗ ನಾವು ನಮ್ಮ ಆಹಾರ ಮತ್ತು ದೇಹವನ್ನು ರಾಸಾಯನಿಕಗಳಿಂದ ತುಂಬಿಸಿದ್ದೇವೆ ಎಂಬುದಾಗಿ ಹೇಳುತ್ತಾರೆ.


ಸಾವಯವ ಕೃಷಿ ಜ್ಞಾನವನ್ನು ಎಲ್ಲರಿಗೂ, ವಿಶೇಷವಾಗಿ ಮಕ್ಕಳಿಗೆ ಸುಲಭವಾಗಿ ತಲುಪುವಂತೆ ಮಾಡುವುದು ತಮ್ಮ ಗುರಿಯಾಗಿದೆ ಎಂಬುದಾಗಿ ಅವರು ಹೇಳುತ್ತಾರೆ.
ಸಾವಯವ ಕೃಷಿಯ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಗುರಿ


ನಾವು ಈಗ ಯುವಕರಿಗೆ ಸಾವಯವ ಕೃಷಿಯ ಬಗ್ಗೆ ಶಿಕ್ಷಣ ನೀಡಿದರೆ, ಅವರು ಮುಂದಿನ ಪೀಳಿಗೆಗೆ ಆರೋಗ್ಯಕರ ಆಹಾರವನ್ನು ಬೆಳೆಯುವ ಬಗ್ಗೆ ಕಲಿಸುತ್ತಾರೆ. ಆದ್ದರಿಂದ, ನಾನು ಇದನ್ನು ನನ್ನ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದೇನೆ. ಸಾವಯವ ಕೃಷಿ, ಸುಸ್ಥಿರ ಜೀವನ ಮತ್ತು ಪರಿಸರ ಸಂರಕ್ಷಣೆಯ ಪ್ರಯೋಜನಗಳ ಬಗ್ಗೆ ಸಾಮಾನ್ಯರಿಗೆ ಶಿಕ್ಷಣ ನೀಡುತ್ತೇನೆ ಎಂಬುದಾಗಿ ಸತ್ಯಂ ಹೇಳುತ್ತಾರೆ.


ಹೀಗೆ ಯುವಕರನ್ನು ತಲುಪಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮದ ಬಗ್ಗೆ ಅದರಲ್ಲೂ ವಿಶೇಷವಾಗಿ Instagram ನ ಶಕ್ತಿಯನ್ನು ಸತ್ಯಂ ಅರಿತುಕೊಂಡರು. ಅವರು ಸಾವಯವವಾಗಿ ಸಸ್ಯಗಳನ್ನು ಬೆಳೆಸುವ ಬಗ್ಗೆ ಟ್ಯುಟೋರಿಯಲ್ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಈ ವೇದಿಕೆಯಲ್ಲಿ ತಿಳಿವಳಿಕೆ ಮೂಡಿಸುವಂಥ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.


ಇದನ್ನೂ ಓದಿ: ಅಬ್ಬಾ, ಈ ರೈತರದ್ದು ಏನ್ ತಲೆ ಅಂತೀರಾ? ಬಾವಲಿಯಿಂದ ದ್ರಾಕ್ಷಿ ಕಾಪಾಡೋಕೆ ಏನ್​ ಮಾಡಿದ್ದಾರೆ ನೋಡಿ!


ಅಂದಹಾಗೆ ಟೆಟ್ರಾ ಪ್ಯಾಕ್‌ಗಳು, ಹಳೆಯ ಪ್ಲಾಸ್ಟಿಕ್ ಬಾಕ್ಸ್‌ಗಳು, ಗಾಜಿನ ಪಾತ್ರೆಗಳು ಮುಂತಾದ ತ್ಯಾಜ್ಯ ಪಾತ್ರೆಗಳಲ್ಲಿ ಮನೆಯಲ್ಲಿ ತಯಾರಿಸಿದ ಕಾಂಪೋಸ್ಟ್ ಬಳಸಿ ಸಸ್ಯಗಳನ್ನು ಬೆಳೆಸುವ ಬಗ್ಗೆ ಸತ್ಯಂ ವಿಡಿಯೋಗಳನ್ನು ಮಾಡುತ್ತಾರೆ. ಈ ಮೂಲಕ ತಮ್ಮ ಅನುಯಾಯಿಗಳಿಗೆ ಬೆಳೆ ಬೆಳೆಯೋದ್ರಲ್ಲಿ ಸಹಾಯ ಮಾಡುತ್ತಾರೆ.


ಆರೋಗ್ಯಕರವಾಗಿ ಬೆಳೆಯಿರಿ, ಆರೋಗ್ಯಕರವಾದ್ದನ್ನು ತಿನ್ನಿರಿ!


2018 ರಲ್ಲಿ, ಸತ್ಯಂ ಸ್ಪ್ರೌಟೆಡ್ ಜಂಗಲ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು, ಇದು ಸುಸ್ಥಿರ ಸಸ್ಯಗಳಲ್ಲಿ ಗಾಳಿಯನ್ನು ಶುದ್ಧೀಕರಿಸುವ ಸಸ್ಯಗಳನ್ನು ಬೆಳೆಯಲು ಜನರಿಗೆ ಸಹಾಯ ಮಾಡುತ್ತದೆ.


ಆನ್‌ಲೈನ್‌ ಹಾಗೂ ಆಫ್‌ ಲೈನ್‌ ತರಬೇತಿ


ಸಾವಯವ ಕೃಷಿಯ ಬಗ್ಗೆ ಯುವಕರಿಗೆ ಶಿಕ್ಷಣ ನೀಡಲು, ಸತ್ಯಂ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಲೋನಾವಾಲಾದ ಕ್ರೈಸ್ಟ್ ಯೂನಿವರ್ಸಿಟಿ, ವಿಕಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ಗಳು ಮತ್ತು ವಿಜಯವಾಡದ ವಿಕಾಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಂತಹ ಕಾಲೇಜುಗಳಲ್ಲಿ ಅವರು ಉಪನ್ಯಾಸಗಳನ್ನು ನೀಡಿದ್ದಾರೆ. ಇಲ್ಲಿಯವರೆಗೆ, ಅವರು ಆನ್‌ಲೈನ್ ತರಗತಿಗಳ ಮೂಲಕ 500 ಕ್ಕೂ ಹೆಚ್ಚು ಉತ್ಸಾಹಿಗಳನ್ನು ತಲುಪಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು