Aeroponics Farming: ಭಾರತದಲ್ಲೂ ವೇಗ ಪಡೆಯುತ್ತಿದೆ ಆಧುನಿಕ ಏರೋಪೋನಿಕ್ಸ್‌ ಕೃಷಿ ಪದ್ಧತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನರು ಸಾಮಾನ್ಯವಾಗಿ ಏರೋಪೋನಿಕ್ಸ್‌ ಕೃಷಿ ಮತ್ತು ಹೈಡ್ರೋಪೋನಿಕ್ ಕೃಷಿಯ ನಡುವೆ ಗೊಂದಲಕ್ಕೊಳಗಾಗುತ್ತಾರೆ. ಹೈಡ್ರೋಪೋನಿಕ್ಸ್‌ ಕೃಷಿ ವಿಧಾನ ಇತ್ತೀಚಿನ ವರ್ಷಗಳಲ್ಲಿ ನಂಬಲಾಗದಷ್ಟು ಜನಪ್ರಿಯವಾಗಿದೆ.

  • Trending Desk
  • 5-MIN READ
  • Last Updated :
  • Share this:

ಕೃಷಿಯಲ್ಲಿ ಹಳೆಯ ಸಾಂಪ್ರದಾಯಿಕ ವಿಧಾನಕ್ಕೆ ಬದಲಾಗಿ ಸಾಕಷ್ಟು ವೈವಿಧ್ಯಮಯ ಪ್ರಯೋಗಗಳಾಗುತ್ತಿವೆ. ಜಗತ್ತಿನಾದ್ಯಂತ ಕೃಷಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ರಾಸಾಯನಿಕಯುಕ್ತ ಬೆಳೆಗಳನ್ನು ತಿಂದು ಆರೋಗ್ಯ ಹದಗೆಡುವುದು ಹೆಚ್ಚಾಗುತ್ತಿದ್ದಂತೆ ಜನರು ಸಾವಯವ ಬೆಳೆಗಳತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅದರಂತೆ ಇಂದು ಸಾವಯವ ವಿಧಾನದಲ್ಲಿ ಕೃಷಿ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಮಧ್ಯೆ ಜಗತ್ತಿನಾದ್ಯಂತ ಹೈಡ್ರೋಪೋನಿಕ್ಸ್‌ ಹಾಗೂ ಏರೋಪೋನಿಕ್ಸ್‌ ನಂಥ ಕೃಷಿ ವಿಧಾನಗಳೂ ಜನಪ್ರಿಯವಾಗುತ್ತಿವೆ.


ಹೆಚ್ಚುತ್ತಿದೆ ಏರೋಪೋನಿಕ್ಸ್ ಕೃಷಿ ಪದ್ದತಿ!


ನೀವು ಹೈಡ್ರೋಪೋನಿಕ್ಸ್‌ ಅಥವಾ ಮಣ್ಣುರಹಿತ ಜಲಕೃಷಿಯ ಬಗ್ಗೆ ಕೇಳಿರಬಹುದು. ಬೆಳೆಗೆ ಬೇಕಾಗುವ ಪೋಷಕಾಂಶಗಳನ್ನು ನೀರಿನಿಂದಲೇ ಪೂರೈಕೆ ಮಾಡಿ ಮಣ್ಣಿಲ್ಲದೇ ನೀರಿನಲ್ಲಿ ಗಿಡಗಳನ್ನು ಬೆಳೆಸಿ ಬೆಳೆ ಬೆಳೆಯುವ ವಿಧಾನವಿದು. ಆದ್ರೆ ಏರೋಪೋನಿಕ್ಸ್‌ ಒಂದು ಹೊಸ ತಂತ್ರಜ್ಞಾನವಾಗಿದ್ದು, ಕೃಷಿಗಾಗಿ ದೊಡ್ಡ ಪ್ರಮಾಣದ ಭೂಮಿ ಅಗತ್ಯವಿಲ್ಲದೇ ನಿಮ್ಮ ಬೆಳೆಗಳನ್ನು ಬೆಳೆಯಬಹುದು.


ಪ್ರಪಂಚದಾದ್ಯಂತ ಇಂದು ಫಲವತ್ತಾದ ಭೂಮಿ ಕಣ್ಮರೆಯಾಗುತ್ತಿದೆ. ಇದರ ಜೊತೆಗೆ ಆಹಾರದ ಕೊರತೆಯು ಪ್ರಪಂಚದಾದ್ಯಂತದ ಪರಿಣಾಮ ಬೀರುತ್ತಿರುವುದರಿಂದ ಏರೋಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್‌ನಂತಹ ಹೊಸ ಕೃಷಿ ತಂತ್ರಗಳು ಸಾಂಪ್ರದಾಯಿಕ ಕೃಷಿಗಿಂತ ಹೆಚ್ಚು ಬೆಳೆಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ.


ಏರೋಪೋನಿಕ್ಸ್ ಎಂದರೇನು?


ಇದೊಂದು ಹೊಸ ರೀತಿ ಕೃಷಿ ವಿಧಾನವಾಗಿದ್ದು ಇಲ್ಲಿ ಬೆಳೆಗಳನ್ನು ಗಾಳಿಯಲ್ಲಿಯೇ ಬೆಳೆಯಲಾಗುತ್ತದೆ. ಸಸ್ಯದ ಬೇರುಗಳು ತೆರೆದ ಬೇರು-ವಲಯ ಪರಿಸರದಲ್ಲಿ ಮುಕ್ತವಾಗಿ ತೂಗುಹಾಕಲ್ಪಟ್ಟಿರುತ್ತವೆ.


ಏರೋಪೋನಿಕ್ಸ್ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಗಿಡಗಳಿಗೆ ಸರಿಯಾದ ಪ್ರಮಾಣದ ನೀರು ಜೊತೆಗೆ ಪೋಷಕಾಂಶಗಳು ಮತ್ತು ಗಾಳಿಯನ್ನು ಒದಗಿಸಲಾಗುತ್ತದೆ. ಏರೋಪೋನಿಕ್ಸ್ ಎನ್ನುವುದು ಗಾಳಿಯ ಉಪಸ್ಥಿತಿಯಲ್ಲಿ ಅಥವಾ ಮಂಜಿನಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಕ್ರಿಯೆಯಾಗಿದೆ.


ಏರೋಪೋನಿಕ್ಸ್ ಹೈಡ್ರೋಪೋನಿಕ್ಸ್‌ಗಿಂತ ಹೇಗೆ ಭಿನ್ನವಾಗಿದೆ?


ಜನರು ಸಾಮಾನ್ಯವಾಗಿ ಏರೋಪೋನಿಕ್ಸ್‌ ಕೃಷಿ ಮತ್ತು ಹೈಡ್ರೋಪೋನಿಕ್ ಕೃಷಿಯ ನಡುವೆ ಗೊಂದಲಕ್ಕೊಳಗಾಗುತ್ತಾರೆ. ಹೈಡ್ರೋಪೋನಿಕ್ಸ್‌ ಕೃಷಿ ವಿಧಾನ ಇತ್ತೀಚಿನ ವರ್ಷಗಳಲ್ಲಿ ನಂಬಲಾಗದಷ್ಟು ಜನಪ್ರಿಯವಾಗಿದೆ. ಇದರಲ್ಲಿ ಮಣ್ಣಿನ ಅಗತ್ಯವಿಲ್ಲದೆ ವಿಭಿನ್ನ ರೀತಿಯಲ್ಲಿ ಸಸ್ಯಗಳಿಗೆ ಪೋಷಕಾಂಶಗಳನ್ನು ನೀಡಲಾಗುತ್ತದೆ. ಈ ಜಲಕೃಷಿಯಲ್ಲಿ, ಸಸ್ಯಗಳಿಗೆ ನಿರಂತರವಾಗಿ ನೀರಿನ ಮೂಲಕ ಪೋಷಕಾಂಶಗಳನ್ನು ನೀಡಲಾಗುತ್ತದೆ.


ಆದರೆ ಏರೋಪೋನಿಕ್ ವ್ಯವಸ್ಥೆಯಲ್ಲಿ ನೀರೂ ಅಷ್ಟೊಂದು ಬೇಕಾಗುವುದಿಲ್ಲ. ಇಲ್ಲಿ ಬೆಳೆದ ಸಸ್ಯಗಳು ಎಂದಿಗೂ ನೀರಿನಲ್ಲಿ ಮುಳುಗುವುದಿಲ್ಲ. ಬದಲಿಗೆ, ಒಂದು ಮಂಜನ್ನು ಅವುಗಳ ಬೇರುಗಳಿಗೆ ಸಿಂಪಡಿಸಲಾಗುತ್ತದೆ ಅಷ್ಟೇ. ಅದು ಅವುಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ.


ಇದನ್ನೂ ಓದಿ: 'ಕಪ್ಪು ಚಿನ್ನ' ಬೆಳೆದು ಕೋಟ್ಯಧಿಪತಿಯಾಗಿ, ನಷ್ಟದ ಮಾತು ಇಲ್ಲಿ ಇಲ್ಲವೇ ಇಲ್ಲ!


ಗ್ರೀಕ್ ಮೂಲದಿಂದಾಗಿ ಏರೋಪೋನಿಕ್ಸ್‌ ಎಂಬ ಹೆಸರು ಬಂದಿದೆ. ಏರೋ, ಅಂದರೆ "ಗಾಳಿ" ಮತ್ತು ಪೋನೋಸ್ ಅಂದರೆ "ಕೆಲಸ" ಎಂಬುದರಿಂದ "ಏರೋಪೋನಿಕ್ಸ್" ಪದ ಹುಟ್ಟಿಕೊಂಡಿದೆ. ಇನ್ನು, ಹೈಡ್ರೋಪೋನಿಕ್ಸ್ ಎನ್ನುವುದು ಕೂಡ ಗ್ರೀಕ್‌ ಮೂಲವಾಗಿದ್ದು ಇಲ್ಲಿ ಹೈಡ್ರೋ ಎಂದರೆ ನೀರು ಎಂದರ್ಥ. ಹಾಗಾಗಿ "ಕೆಲಸ ಮಾಡುವ ನೀರು" ಎಂಬ ಅರ್ಥ ಕೊಡುತ್ತದೆ.


ಏರೋಪೋನಿಕ್ಸ್‌ನ ಪ್ರಯೋಜನಗಳು


*ಮಣ್ಣಿನ ಆಧಾರಿತ ಕೃಷಿಗೆ ಹೋಲಿಸಿದರೆ, ಲಂಬ ಕೃಷಿಯು 80-90% ಕಡಿಮೆ ನೀರನ್ನು ಬಳಸುತ್ತದೆ. ಅಲ್ಲದೇ ಹೆಚ್ಚು ಪೌಷ್ಟಿಕ ಆಹಾರವನ್ನು ಉತ್ಪಾದಿಸುತ್ತದೆ. ಮಣ್ಣಿನಲ್ಲಿ ಬೆಳೆ ಬೆಳೆಯಲು ತೆಗೆದುಕೊಳ್ಳುವ ಅದೇ ಸಮಯದಲ್ಲಿ ಹೆಚ್ಚಿನ ಸಸ್ಯಗಳನ್ನು ಬೆಳೆಸಬಹುದು.


*ಅಂದಹಾಗೆ ಏರೋಪೋನಿಕ್ಸ್ ಒಂದು ಹೊಸ ತಂತ್ರಜ್ಞಾನವಾಗಿದ್ದು, ಕೃಷಿ ಅಡಿಯಲ್ಲಿ ದೊಡ್ಡ ಪ್ರಮಾಣದ ಭೂಮಿ ಅಗತ್ಯವಿಲ್ಲದೇ ನಿಮ್ಮ ಸ್ವಂತ ಆಹಾರವನ್ನು ಬೆಳೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಏರೋಪೋನಿಕ್ಸ್‌ನ ಸೌಂದರ್ಯವನ್ನು ಅನುಭವಿಸಲು ಮತ್ತು ನಿಮ್ಮ ದೈನಂದಿನ ಆಹಾರದ ಅಗತ್ಯಗಳನ್ನು ಪೂರೈಸಲು, ನಿಮ್ಮ ಲಿವಿಂಗ್ ರೂಮ್ ಅಥವಾ ಬಾಲ್ಕನಿಯಲ್ಲಿ ನೀವು ಸಣ್ಣ ಏರೋಪೋನಿಕ್ ಘಟಕಗಳನ್ನು ಸಹ ನಿರ್ಮಿಸಬಹುದು.


*ಇದು ಪರಿಸರದಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತದೆ. ಸಸ್ಯಗಳು ತಮ್ಮ ಎಲೆಗಳಲ್ಲಿ ಆಮ್ಲಜನಕವನ್ನು ಎಷ್ಟು ವೇಗವಾಗಿ ಉತ್ಪಾದಿಸುತ್ತವೆ ಎಂಬುದರ ಮೇಲೆ ಏರೋಪೋನಿಕ್ಸ್ ಸಹ ಪ್ರಭಾವ ಬೀರುತ್ತದೆ. ಅವು ಬೆಳೆಯಲು ಅನುವು ಮಾಡಿಕೊಡುತ್ತದೆ.


ವಿಶ್ವದಾದ್ಯಂತ ಜನಪ್ರಿಯವಾಗುತ್ತಿದೆ ಏರೋಪೋನಿಕ್ಸ್‌


ಈ ಕೃಷಿ ವಿಧಾನವು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಈ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಲಾಗಿದೆ.


ಸಾವಯವ ಆಹಾರಕ್ಕೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಜನಪ್ರಿಯತೆಯ ಜೊತೆಗೆ ಕೃಷಿಯಲ್ಲಿ ರೋಗ-ಮುಕ್ತ ವಾತಾವರಣದ ಅಗತ್ಯತೆಯಿಂದಾಗಿ, ಏರೋಪೋನಿಕ್ಸ್ ವಿಧಾನ ಇನ್ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. ಬೆಳೆಗಳನ್ನು ಬೆಳೆಯುವುದು ಮತ್ತು ಕೊಯ್ಲು ಮಾಡುವುದನ್ನು ಮೇಲ್ವಿಚಾರಣೆ ಮಾಡಲು ಕೃಷಿಯಲ್ಲಿನ ತಂತ್ರಜ್ಞಾನ ಹೆಚ್ಚು ಸಹಾಯಕವಾಗಿದೆ. ಇದು ಮಾರುಕಟ್ಟೆ ವಿಸ್ತರಣೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.


ಭಾರತವು ಈ ಕೃಷಿ ತಂತ್ರವನ್ನು ಹೇಗೆ ಅಳವಡಿಸಿಕೊಂಡಿತು?


ಪ್ರಪಂಚದಾದ್ಯಂತ ಈ ಆಧುನಿಕ ಕೃಷಿ ತಂತ್ರವನ್ನು ಭಾರತೀಯ ಕಂಪನಿಗಳು ಮತ್ತು ರೈತರು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಏರೋಪೋನಿಕ್ಸ್ ವಿಧಾನವನ್ನು ಬಳಸಿಕೊಂಡು ಆಲೂಗಡ್ಡೆ ಬೀಜಗಳನ್ನು (ಟ್ಯೂಬರ್‌ಗಳು) ಬೆಳೆಯುವ ಮೂಲಕ ಪ್ರಯತ್ನಿಸಿಲಾಯಿತು. ಈಗ ಆಲೂಗಡ್ಡೆ ಬೆಳೆಯುವ ಈ ತಂತ್ರವನ್ನು ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.


ಸಸ್ಯಕ್ಕೆ ಪೋಷಕಾಂಶಗಳನ್ನು ಪೂರೈಸಲು ಆಲೂಗಡ್ಡೆ ಕೃಷಿ ತಂತ್ರಜ್ಞಾನದಲ್ಲಿ ಗಾಳಿಯಲ್ಲಿ ನೇತಾಡುವ ಬೇರುಗಳನ್ನು ಬಳಸಲಾಗುತ್ತದೆ.ಆಲೂಗಡ್ಡೆ ಸಸ್ಯದ ಬೇರುಗಳು ಸೀಲ್ಡ್‌ ಪರಿಸರದಲ್ಲಿ ಮಣ್ಣಿನ ಮೇಲ್ಮೈ ಕೆಳಗೆ ಬೆಳೆಯುತ್ತವೆ.


ಭಾರತದಲ್ಲಿ ಏರೋಪೋನಿಕ್ಸ್ ಕಡಿಮೆ ಅಳವಡಿಕೆಗೆ ಕಾರಣಗಳು


ಯಾವುದೇ ವ್ಯವಸ್ಥೆಗಾದರೂ ಕೆಲವಷ್ಟು ಅನಾನುಕೂಲತೆಗಳಿರುತ್ತವೆ. ಇದಕ್ಕೆ ಏರೋಪೋನಿಕ್ಸ್ ಕೂಡ ಹೊರತಾಗಿಲ್ಲ. ದೇಶವು ಏರೋಪೋನಿಕ್ಸ್‌ ಕೃಷಿ ತಂತ್ರವನ್ನು ವ್ಯಾಪಕವಾಗಿ ಬಳಸದಿರಲು ಕೆಲವು ಕಾರಣಗಳಿವೆ.


ಇದನ್ನು ಪ್ರಾರಂಭಿಸಲು ಸರಿಯಾದ ಮಾಹಿತಿ ಮತ್ತು ತರಬೇತಿಯ ಜೊತೆಗೆ ಸಾಕಷ್ಟು ವೆಚ್ಚವಾಗುತ್ತದೆ. ಏರೋಪೋನಿಕ್ಸ್ ಅನ್ನು ಬಳಸಲು ಯೋಜಿಸುವ ಯಾರಾದರೂ ವ್ಯವಸ್ಥೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ವ್ಯಾಪಕವಾದ ತರಬೇತಿಯನ್ನು ಹೊಂದಿರಬೇಕು.


ವಿಶೇಷವಾಗಿ ಗಾಳಿಯಲ್ಲಿ ಲಂಬವಾದ ಕೃಷಿಯು ಹೆಚ್ಚು ಉತ್ಪಾದಿಸುವ ಮಾರ್ಗವಾಗಿದೆ. ಈ ಹಂತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃತಕ ಬೆಳಕು ಬೇಕಾಗುತ್ತದೆ.


ಸಿಟಿಗ್ರೀನ್ಸ್‌ ಸ್ಟಾರ್ಟಪ್‌


ಸಿಟಿಗ್ರೀನ್ಸ್... ಇದು ಭಾರತದಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಸಮೃದ್ಧ ಹೈಹೈಡ್ರೋಪೋನಿಕ್/ಏರೋಪೋನಿಕ್ ಸ್ಟಾರ್ಟ್‌ಅಪ್ ಆಗಿದೆ. ವಸತಿ ಮತ್ತು ನಗರ ವ್ಯವಹಾರಗಳು, ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಸಚಿವಾಲಯ ಇವರಿಗೆ ಸಹಾಯ ಮಾಡುತ್ತಿದೆ.


ಗಡ್ಡೆಯೇತರ ಬೆಳೆಗಳಿಗೆ ಸಿಟಿಗ್ರೀನ್ಸ್ ಭಾರತದಲ್ಲಿ ಏರೋಪೋನಿಕ್ ಕೃಷಿಯ ಪ್ರವರ್ತಕವಾಗಿದೆ. 2022 ರ ಆರಂಭದಲ್ಲಿ, ಅವರು ಉತ್ತರಾಖಂಡದಲ್ಲಿ ಔಷಧೀಯ ಸೆಣಬಿನ ಉತ್ಪಾದನೆಗಾಗಿ ಸಂಪೂರ್ಣ ಸ್ವಯಂಚಾಲಿತ ಏರೋಪೋನಿಕ್ ಫಾರ್ಮ್ ಅನ್ನು ಸ್ಥಾಪಿಸಿದರು.


www.CityGreens.in ಭೇಟಿ ನೀಡಿ!


ಸಿಟಿಗ್ರೀನ್ಸ್ ಏರೋಪೋನಿಕ್ಸ್ ಟೆಕ್ ಪಾರ್ಕ್ ಅನ್ನು ಸ್ಥಾಪಿಸಲು ಪ್ರಾರಂಭಿಸಿದೆ. ಒಮ್ಮೆ ಪೂರ್ಣಗೊಂಡ ನಂತರ, ಇದು ವಾಣಿಜ್ಯ ತೋಟಗಾರಿಕೆ ಬೆಳೆಗಳ ಕೃಷಿಗೆ ಮೀಸಲಾಗಿರುವ ಭಾರತದ ಅತಿದೊಡ್ಡ ಮತ್ತು ಏಕೈಕ ಏರೋಪೋನಿಕ್ ಟೆಕ್ ಪಾರ್ಕ್ ಆಗಲಿದೆ. ಸಿಟಿಗ್ರೀನ್ಸ್ ಮತ್ತು ಅವರ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು www.CityGreens.in ಗೆ ಭೇಟಿ ನೀಡಬಹುದು.


ಒಟ್ಟಾರೆ.. ಕೃಷಿಯಲ್ಲಿ ಕೂಡ ಅನೇಕ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿರುವುದು ಹಾಗೂ ಇದರಲ್ಲಿ ಕೂಡ ಅನೇಕ ಪ್ರಯೋಗಗಳು ನಡೆಯುತ್ತಿರುವುದು ಖುಷಿಯ ಸಂಗತಿ.

Published by:ವಾಸುದೇವ್ ಎಂ
First published: