• Home
  • »
  • News
  • »
  • business
  • »
  • Organic Arrowroot: 7 ವರ್ಷ ಹಾಸಿಗೆಯಲ್ಲೇ ಮಲಗಿದ್ದ ಮಹಿಳೆ, ಈಗ ಕೋಟಿ ಕೋಟಿ ಒಡತಿ!

Organic Arrowroot: 7 ವರ್ಷ ಹಾಸಿಗೆಯಲ್ಲೇ ಮಲಗಿದ್ದ ಮಹಿಳೆ, ಈಗ ಕೋಟಿ ಕೋಟಿ ಒಡತಿ!

ಜುಮೈಲಾ ಬಾನು

ಜುಮೈಲಾ ಬಾನು

ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ನಡೆದ ಒಂದು ಅಪಘಾತದ ನಂತರ ಪಾರ್ಶ್ವವಾಯುವಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಅದರ ನಂತರವೂ ಸಹ ಇದೆಲ್ಲದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆಕೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಸುದೀರ್ಘ ವರ್ಷಗಳನ್ನೇ ತೆಗೆದುಕೊಂಡಿತು. ಈಗ ಈಕೆ ಕೃಷಿ ಉದ್ಯಮಿ ಆಗಿದ್ದು, ಅವರ ಭೂಮಿಯಲ್ಲಿ ಅರಿಶಿನ ಮತ್ತು ಕೂವೆ ಬೇರು (ಅರೋರೂಟ್) ಅನ್ನು ಬೆಳೆಯುತ್ತಾರೆ.

ಮುಂದೆ ಓದಿ ...
  • Share this:

ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಅಹಿತಕರ ಘಟನೆಗಳು (incident) ನಮಗೆ ಆ ಕ್ಷಣಕ್ಕೆ ತುಂಬಾ ಬೇಸರವನ್ನು ಮೂಡಿಸಬಹುದು, ಆದರೆ ಪ್ರತಿಯೊಂದು ಕಠಿಣವಾದ ಸನ್ನಿವೇಶಗಳೂ ನಮಗೆ ಜೀವನದಲ್ಲಿ (Life) ಒಂದು ಪಾಠವನ್ನು ಹೇಳಿಕೊಡುತ್ತದೆ. ಹೀಗೆ ಇಲ್ಲೊಬ್ಬ ಮಹಿಳೆ ತನ್ನ ಜೀವನದಲ್ಲಿ ನಡೆದ ಒಂದು ಅಪಘಾತದ ನಂತರ ಪಾರ್ಶ್ವವಾಯುವಿಗೆ ಒಳಗಾಗಿ ಆಸ್ಪತ್ರೆ (Hospital) ಸೇರಿದ್ದರು. ಅದರ ನಂತರವೂ ಸಹ ಇದೆಲ್ಲದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆಕೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಸುದೀರ್ಘ ವರ್ಷಗಳನ್ನೇ ತೆಗೆದುಕೊಂಡಿತು. ಈ ಏಳು ವರ್ಷಗಳಲ್ಲಿ ಆಕೆಯ ದೈಹಿಕ ಸ್ಥಿತಿ (Physical Condition) ಜೊತೆಗೆ ಮಾನಸಿಕ ಸ್ಥಿತಿ ಎಷ್ಟು ಕುಗ್ಗಿ ಹೋಗಿರಬಹುದು ಅಂತ ಯಾರೂ ಸಹ ಊಹಿಸಲು ಸಾಧ್ಯವಿಲ್ಲ .


ಇಂತಹ ಒಂದು ಅಹಿತಕರವಾದ ಘಟನೆಯ ನಂತರ ಜುಮೈಲಾ ಬಾನು ತಾನು ಮತ್ತೊಮ್ಮೆ ಸಾಮಾನ್ಯವಾದ ಜೀವನವನ್ನು ನಡೆಸಲು ಮತ್ತು ತನ್ನ ಕುಟುಂಬವನ್ನು ಪೋಷಿಸಲು ಸಾಧ್ಯವಾಗುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ಅಪಘಾತದ ನಂತರ 29 ವರ್ಷ ವಯಸ್ಸಿನ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು, ಇದರ ಪರಿಣಾಮವಾಗಿ ಹಾಸಿಗೆಯಲ್ಲಿಯೇ ಏಳು ವರ್ಷಗಳನ್ನು ಕಳೆದರು.


ಬದುಕಿನಲ್ಲಿ ಮತ್ತೊಮ್ಮೆ ಏನಾದರೂ ಮಾಡಲೇಬೇಕು ಎನ್ನುವ ಹಂಬಲ 
ಆದಾಗ್ಯೂ, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಡಿಪ್ಲೊಮಾ ಪದವೀಧರೆ ತನ್ನ ಕನಸುಗಳನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ವೈದ್ಯಕೀಯ ಬೆಂಬಲ ಮತ್ತು ತನ್ನ ಅಸಾಧಾರಣ ದೃಢ ನಿಶ್ಚಯದಿಂದ, ಜುಮೈಲಾ ತನ್ನ ಬದುಕಿನಲ್ಲಿ ಮತ್ತೊಮ್ಮೆ ಏನಾದರೂ ಮಾಡಲೇಬೇಕು ಅನ್ನೋ ಒಂದು ದೃಢ ನಿಶ್ಚಯದೊಂದಿಗೆ ಮತ್ತೆ ಜೀವನ ಪ್ರಯಾಣವನ್ನು ಶುರು ಮಾಡಿದರು. ಆದರೆ ಅವಳ ಚಿಕಿತ್ಸೆಗಾಗಿ ಕುಟುಂಬವು ಈಗಾಗಲೇ ತಮ್ಮ ಮನೆ ಮತ್ತು ಭೂಮಿಯನ್ನು ಕಳೆದುಕೊಂಡಿತ್ತು. ಅವರು ಬಾಡಿಗೆ ಮನೆಗೆ ತೆರಳಿದರು ಮತ್ತು ಅಲ್ಲಿ ತಮ್ಮ ಜೀವನವನ್ನು ಮತ್ತೊಮ್ಮೆ ಹೊಸದಾಗಿ ಶುರು ಮಾಡಿದರು.


ಕೂವೆ ಬೇರುಗಳ ಕೃಷಿ
"ಇದು ನಮಗೆ ತುಂಬಾ ಕಠಿಣವಾದ ಸಮಯವಾಗಿತ್ತು, ನಾವು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಜೀವನವನ್ನು ಮತ್ತೊಮ್ಮೆ ಶುರು ಮಾಡಿದೆವು" ಎಂದು 39 ವರ್ಷದ ಜುಮೈಲಾ ಹೇಳುತ್ತಾರೆ, ಅವರು ಈಗ ಎರಡು ಮಕ್ಕಳ ತಾಯಿ ಮತ್ತು 20 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವ ಕೃಷಿ ಉದ್ಯಮಿ ಆಗಿದ್ದು, ಅವರ ಭೂಮಿಯಲ್ಲಿ ಅರಿಶಿನ ಮತ್ತು ಕೂವೆ ಬೇರು (ಅರೋರೂಟ್) ಅನ್ನು ಬೆಳೆಯುತ್ತಾರೆ.


ಇದನ್ನೂ ಓದಿ:  Coconut Husk: ತೆಂಗಿನ ಸಿಪ್ಪೆಗೂ ಡಿಮ್ಯಾಂಡ್! ರೈತರಿಗೆ ಮತ್ತು ಉದ್ಯಮಗಳಿಗೆ ಹೊಸ ದಾರಿ


ಅಪಘಾತಕ್ಕೆ ಮೊದಲು, ಇವರು ಒಬ್ಬ ಗೃಹಿಣಿಯಾಗಿದ್ದರು, ಆದರೆ ಯಾವಾಗಲೂ ತನ್ನ ಜೀವನೋಪಾಯವನ್ನು ಸುಧಾರಿಸಿಕೊಳ್ಳಲು ತನ್ನ ಗಂಡನಿಗೆ ಸಹಾಯ ಮಾಡಲು ಬಯಸುತ್ತಿದ್ದಳು. "ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗ ನಾನು ಇಡೀ ದಿನ ನಿರಾಶೆಯಿಂದ ಕಳೆಯುವ ಬದಲು, ನಾನು ಕೃಷಿ ಉದ್ಯಮವನ್ನು ಪ್ರಾರಂಭಿಸಲು ಯೋಜನೆಗಳನ್ನು ರೂಪಿಸುತ್ತಿದ್ದೆ. ನಮಗೆ ಯಾವುದೇ ಸ್ವಂತವಾದ ಭೂಮಿ ಇರಲಿಲ್ಲ, ಆದರೆ ಇದನ್ನು ಹೇಗೆ ಶುರು ಮಾಡಬೇಕು ಎಂಬುದರ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು. ನಾನು ಆಸ್ಪತ್ರೆಯಿಂದ ಹೊರ ಬಂದ ಕೂಡಲೇ, ನಾವು ಕೋಳಿಕ್ಕೋಡ್ ನಲ್ಲಿ ಐದು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದೆವು ಮತ್ತು ಅಲ್ಲಿ ಕೂವೆ ಬೇರುಗಳನ್ನು ಬೆಳೆಯಲು ಪ್ರಾರಂಭಿಸಿದೆವು" ಎಂದು ಅವರು ಹೇಳುತ್ತಾರೆ.


ಮೊದಲ ಪ್ರಯತ್ನದಲ್ಲಿ ಅವಳ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಕೃಷಿ ವ್ಯವಹಾರವು ವಿಫಲವಾಯಿತು ಮತ್ತು ದಂಪತಿಗಳು ತುಂಬಾ ನಷ್ಟವನ್ನು ಸಹ ಅನುಭವಿಸಿದರು. ತಪ್ಪಾದ ನಾಟಿ ವಿಧಾನಗಳಿಂದಾಗಿ ಹೆಚ್ಚಿನ ಕೂವೆ ಬೇರುಗಳ ಬೀಜಗಳು ಮೊಳಕೆಯೊಡೆಯಲಿಲ್ಲ. ಆಗ ಅವರಿಗೆ ತುಂಬಾನೇ ನಿರಾಶೆಯಾಯಿತು, ಆದರೆ ಅವರು ಕೃಷಿಯನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡಲು ಸಿದ್ಧಳಾಗಿರಲಿಲ್ಲ. ತನ್ನ ಕುಟುಂಬದ ಬೆಂಬಲದೊಂದಿಗೆ, ಅವಳು ಮಲಪ್ಪುರಂನ ವಂಡೂರಿನಲ್ಲಿ ಇನ್ನೂ ಐದು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಳು. ಈ ಬಾರಿ, ಅವಳು ಬೀಜಗಳನ್ನು ನೆಡುವಲ್ಲಿ ಮೊದಲಿಗಿಂತಲೂ ಹೆಚ್ಚು ಜಾಗರೂಕಳಾಗಿದ್ದಳು.


ಇದಲ್ಲದೆ, ಹಿರಿಯ ರೈತರ ಸಲಹೆಯು ಈ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡಿತು ಮತ್ತು ಒಂದು ಎಕರೆ ಭೂಮಿಯಲ್ಲಿ ಐದು ಟನ್ ಗಳಷ್ಟು ಕೂವೆ ಬೇರುಗಳನ್ನು ಯಶಸ್ವಿಯಾಗಿ ಬೆಳೆದರು.


ಕೂವೆ ಬೇರುಗಳ ಪುಡಿ ಹೇಗೆ ಮಾಡಬೇಕು ಅಂತ ಮೊದಲೇ ತಿಳಿದಿದ್ದ ಜುಮೈಲಾ
ಕೋಳಿಕ್ಕೋಡ್ ನಲ್ಲಿರುವ ತನ್ನ ಪೂರ್ವಜರ ಮನೆಯಲ್ಲಿ, ಜುಮೈಲಾ ತನ್ನ ಹಿರಿಯರು ವರ್ಷಕ್ಕೊಮ್ಮೆ ಕೂವೆ ಬೇರುಗಳ ಪುಡಿಯನ್ನು ತಯಾರಿಸುವುದನ್ನು ನೋಡಿದ್ದರು. ಅವಳು ಅದರ ಕೊಯ್ಲು, ಸಂಸ್ಕರಣೆಯಲ್ಲಿ ಅನೇಕ ಬಾರಿ ತನ್ನನ್ನು ತೊಡಗಿಸಿಕೊಂಡಿದ್ದಳು ಮತ್ತು ಇಡೀ ಪ್ರಕ್ರಿಯೆಯನ್ನು ಆಕೆ ತುಂಬಾನೇ ಇಷ್ಟ ಸಹ ಪಡುತ್ತಿದ್ದಳು.


"ನಾನು ಕೂವೆ ಬೇರುಗಳ ಬೆಳೆಯನ್ನು ಬೆಳೆಯಲು ಆಯ್ಕೆ ಮಾಡಿಕೊಳ್ಳಲು ಇದೂ ಒಂದು ಕಾರಣವಾಗಿತ್ತು ಮತ್ತು ಸಹಜವಾಗಿ, ಇದು ಮಾರುಕಟ್ಟೆಯಲ್ಲಿ ದುಬಾರಿ ಉತ್ಪನ್ನವಾಗಿದ್ದು, ಪ್ರತಿ ಕಿಲೋಗ್ರಾಂಗೆ ಕನಿಷ್ಠ 1,000 ರೂಪಾಯಿ ಆಗಿದೆ. ಇದಲ್ಲದೆ, ಸ್ನೇಹಿತರೊಬ್ಬರು ಕೂವೆ ಬೇರುಗಳ ಪುಡಿಯನ್ನು ಸಂಸ್ಕರಿಸಲು ಮತ್ತು ರಫ್ತು ಮಾಡಲು ನನಗೆ ಸಹಾಯ ಮಾಡಿದರು. ಸುಗ್ಗಿಯ ನಂತರ ಅವಳು ಉತ್ಪನ್ನವನ್ನು ತನ್ನ ಸ್ನೇಹಿತರಿಗೆ ಮಾರಾಟ ಮಾಡಿದಳು ಮತ್ತು ಇಂದು, ಉತ್ತಮ ಪುಡಿಯನ್ನು ಜರ್ಮನಿ, ಆಸ್ಟ್ರೇಲಿಯಾ ಮತ್ತು ಯುಎಸ್ ಗೆ ರಫ್ತು ಮಾಡಲಾಗುತ್ತದೆ” ಎಂದು ಜುಮೈಲಾ ಹೇಳಿದರು.


ಇದನ್ನೂ ಓದಿ: Vegetable Grafting: ತರಕಾರಿ ಸಸಿಗಳನ್ನು ನಾಟಿ ಮಾಡುವುದು ಹೇಗೆ? ಇವರು ಹೇಳಿದಂತೆ ಮಾಡಿ ದಿನಕ್ಕೆ 4 ಸಾವಿರ ಗಳಿಸಿ


ಆದರೆ ಅವರು ಇಂದು ಕೃಷಿ ನಡೆಸುತ್ತಿರುವ ಭೂಮಿ 20 ಕ್ಕೂ ಹೆಚ್ಚು ವರ್ಷಗಳಿಂದ ಬಂಜರು ಭೂಮಿಯಾಗಿತ್ತು. ಅನೇಕ ವರ್ಷಗಳವರೆಗೆ ಈ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬಹುದು ಅಂತ ಪ್ರಯೋಗಗಳನ್ನು ಮಾಡಿದ ನಂತರವೇ ಅವಳು ಯಶಸ್ಸನ್ನು ಸಾಧಿಸಿದಳು. "ಕೂವೆ ಬೇರುಗಳನ್ನು ನೆಡಲು ನಾನು ಆರಂಭದಲ್ಲಿ ಆಳವಿಲ್ಲದ ರಂಧ್ರಗಳನ್ನು ಮಾಡಿದೆ. ಆದಾಗ್ಯೂ, ಈ ಬೆಳೆ ಒಂದು ಅಡಿಯಷ್ಟು ಭೂಗರ್ಭದಲ್ಲಿ ಬೆಳೆಯುತ್ತದೆ, ಇದನ್ನು ಬೇಸಿಗೆಯಲ್ಲಿ ಕೊಯ್ಲು ಮಾಡಲು ಕಷ್ಟವಾಗುತ್ತದೆ. ಆದ್ದರಿಂದ, ನಾವು ಆಳವಾಗಿ ಅಗೆದಿದ್ದೇವೆ, ಇದು ಇಡೀ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸಿತು" ಎಂದು ಅವರು ಹೇಳುತ್ತಾರೆ, ಅವರು ಪ್ರಸ್ತುತ ಆರು ಎಕರೆಗಳಲ್ಲಿ ಅರೋರೂಟ್ ಗಳನ್ನು ಬೆಳೆಯುತ್ತಾರೆ.


ಸಾವಯವ ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ 
ಜುಮೈಲಾ ಅವರು ಕೋಳಿಯ ಮಲ ಮತ್ತು ಸಗಣಿಯನ್ನು ಬೆಳೆಗೆ ಗೊಬ್ಬರವಾಗಿ ಬಳಸುತ್ತಾರೆ ಮತ್ತು ಕೀಟನಾಶಕಗಳಿಂದ ದೂರವಿರುತ್ತಾರೆ. ಕಳೆಗಳು ಮತ್ತು ಕೀಟಗಳನ್ನು ತೆಗೆದು ಹಾಕಲು ಅವಳು ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ ಎಂದು ಆಕೆ ಹೇಳಿಕೊಂಡರು. ಅರಿಶಿನದ ವಿಷಯದಲ್ಲಿ, ಅವರು ಹೊಲವನ್ನು ಸಂಪೂರ್ಣವಾಗಿ ಉಳುಮೆ ಮಾಡಲು ಗಡಿಗಳನ್ನು ಮಾಡುವ ಸಾಂಪ್ರದಾಯಿಕ ವಿಧಾನದಿಂದ ದೂರ ಸರಿದರು. ಈಗ, ಪ್ರತಿ ಬೀಜದ ನಡುವೆ 1.5 ಅಡಿಗಳ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯು ವೇಗವಾಗಿ ಮತ್ತು ಸುಲಭವಾಗಿದೆ ಆದರೆ ಸಾಂಪ್ರದಾಯಿಕ ಕೃಷಿಯಂತೆಯೇ ಅದೇ ಫಲಿತಾಂಶವನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ.


ನಂತರ 1,500 ಲೀಟರ್ ಸಾಮರ್ಥ್ಯದ ಬಾಯ್ಲರ್ ಅನ್ನು ಕಟಾವು ಮಾಡಿದ ಅರಿಶಿನವನ್ನು ಒಣಗಿಸುವ ಮೊದಲು ಕುದಿಸಲು ಬಳಸಲಾಗುತ್ತದೆ. ಬಾಯ್ಲರ್ ನಲ್ಲಿ ನೀರನ್ನು 110 ಡಿಗ್ರಿ ಸೆಲ್ಸಿಯಸ್ ನಲ್ಲಿ ಬಿಸಿ ಮಾಡಲಾಗುತ್ತದೆ ಮತ್ತು ಬಿಸಿ ಆವಿಯನ್ನು ಅರಿಶಿನದಿಂದ ತುಂಬಿದ ಟ್ರಾಲಿಗೆ ವರ್ಗಾಯಿಸಲಾಗುತ್ತದೆ, ಅದು ಕೆಲವೇ ನಿಮಿಷಗಳಲ್ಲಿ ಕುದಿಯುತ್ತದೆ.


ನಂತರ ಅದನ್ನು ಸೌರ ಟಾರ್ಪಾಲಿನ್ ಹಾಳೆಗಳಿಗೆ ವರ್ಗಾಯಿಸಲಾಗುತ್ತದೆ, ಇದು "ಸಾಮಾನ್ಯ ಹಾಳೆಗಳಿಗಿಂತ ಉತ್ತಮವಾಗಿ ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಬೆಳೆಗಳು ಅಗತ್ಯವಿರುವ ನೈಜ ಸಮಯದ ಅರ್ಧದಷ್ಟು ಸಮಯದೊಳಗೆ ಒಣಗುತ್ತವೆ" ಎಂದು ಜುಮೈಲಾ ವಿವರಿಸುತ್ತಾರೆ.


ಅವರ ಸಾವಯವ ವಿಧಾನಗಳು ಅವರಿಗೆ ಒಳ್ಳೆಯ ಫಲಿತಾಂಶವನ್ನೆ ನೀಡಿದವು, "ಐದು ವರ್ಷಗಳಲ್ಲಿ, ನಾವು ನಮ್ಮದೇ ಆದ ಸ್ವಂತ ಭೂಮಿಯನ್ನು ಖರೀದಿಸಿದ್ದೇವೆ, ಮನೆಯನ್ನು ನಿರ್ಮಿಸಿಕೊಂಡಿದ್ದೇವೆ ಮತ್ತು ನಮ್ಮ ಮಕ್ಕಳನ್ನು ಹೆಚ್ಚಿನ ಶಿಕ್ಷಣ ಪಡೆಯಲು ವಿದೇಶಕ್ಕೆ ಕಳುಹಿಸಿದ್ದೇವೆ, ಇವೆಲ್ಲವೂ ಕೃಷಿ ವ್ಯವಹಾರದಿಂದಾಗಿಯೇ ಸಾಧ್ಯವಾಯಿತು. ನಾವು ಇತರ ಅನೇಕ ಕಂಪನಿಗಳೊಂದಿಗೆ ಸಂಪರ್ಕಕ್ಕೆ ಬಂದೆವು ಮತ್ತು 16 ಎಕರೆ ಭೂಮಿಯಲ್ಲಿ ಅರಿಶಿನ ಕೃಷಿಯನ್ನು ಪ್ರಾರಂಭಿಸುವ ಯೋಚನೆಯಲ್ಲಿದ್ದೇವೆ" ಎಂದು ಅವರು ಹೇಳಿದರು.


ಜುಮೈಲಾ ಸಾವಯವ ಕೃಷಿಯ ಜೊತೆಗೆ ಏನೆಲ್ಲಾ ಮಾಡುತ್ತಾರೆ ಗೊತ್ತೇ?
ವ್ಯವಸಾಯದ ಹೊರತಾಗಿ, ಜುಮೈಲಾ ಅವರು ತನ್ನ ನೆರೆಹೊರೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. "ನಾನು ಉತ್ತಮ ಸ್ಥಾನವನ್ನು ತಲುಪಿದಾಗ, ನಾನು ಕೆಲವು ವರ್ಷಗಳ ಹಿಂದೆ ಇದ್ದಂತೆ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಸಹ ಮಹಿಳೆಯರನ್ನು ಬೆಂಬಲಿಸುತ್ತೇನೆ ಎಂದು ನಾನು ನಿರ್ಧರಿಸಿದ್ದೆ. ಅರಿಶಿನ ಮತ್ತು ಕೂವೆ ಬೇರುಗಳ ಪುಡಿಯನ್ನು ರಫ್ತು ಮಾಡುವ ಮೊದಲು ಚೆನ್ನಾಗಿ ಅದನ್ನೆಲ್ಲಾ ಸ್ವಚ್ಛಗೊಳಿಸಬೇಕು. ಆದ್ದರಿಂದ, ನಾನು ಉತ್ಪನ್ನದ ಮೂಟೆಗಳನ್ನು ನೆರೆಹೊರೆಯ ಮಹಿಳೆಯರಿಗೆ ಕಳುಹಿಸುತ್ತೇನೆ, ಅವರು ಅದನ್ನು ಸ್ವಚ್ಛಗೊಳಿಸುತ್ತಾರೆ, ಅವರಿಗೆ ಪ್ರತಿ ಚೀಲಕ್ಕೆ ನಾನು 100 ರೂಪಾಯಿ ನೀಡುತ್ತೇನೆ. ಈ ರೀತಿಯಾಗಿ, ಅವರು ವರ್ಷದಲ್ಲಿ ಕನಿಷ್ಠ 100 ದಿನಗಳವರೆಗೆ ಸ್ಥಿರವಾದ ಆದಾಯವನ್ನು ಪಡೆಯುತ್ತಾರೆ" ಎಂದು ಅವರು ಹೇಳುತ್ತಾರೆ.


ಜುಮೈಲಾ ಅವರೊಂದಿಗೆ ಕೆಲಸ ಮಾಡುವ ಮಹಿಳೆಯರಲ್ಲಿ ಒಬ್ಬರಾದ ಸುಬೈದಾ "ಲಾಕ್ಡೌನ್ ಸಮಯದಲ್ಲಿ, ಎಲ್ಲವೂ ಸ್ಥಗಿತಗೊಂಡಿದ್ದರಿಂದ ನನಗೆ ಸಿಕ್ಕ ಏಕೈಕ ಕೆಲಸ ಇದು. ಇದರ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ನಾವು ನಮ್ಮ ಮನೆಗಳಿಂದ ಹೊರಬರಬೇಕಾಗಿಲ್ಲ. ಕೆಲಸ ಮತ್ತು ಕೂಲಿ ಎರಡು ನಮ್ಮ ಮನೆಗೆ ಬರುತ್ತವೆ" ಎಂದು ಹೇಳಿದರು.


ಇದನ್ನೂ ಓದಿ:  Gac Fruit: ಅಪರೂಪದ ಗ್ಯಾಕ್ ಹಣ್ಣನ್ನು ಬೆಳೆಸಿ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ ಕೇರಳದ ಕೃಷಿಕ


ಜುಮೈಲಾ ತನ್ನ ಉತ್ಪನ್ನಗಳನ್ನು ಬಹ್ರೇನ್ ಗೆ ಕೊಂಡೊಯ್ಯಲು ಯೋಜಿಸುತ್ತಿದ್ದಾರೆ. "ಉತ್ಪನ್ನವನ್ನು ರಫ್ತು ಮಾಡುವ ವಿಷಯಕ್ಕೆ ಬಂದಾಗ ಗುಣಮಟ್ಟದಲ್ಲಿ ಯಾವುದೇ ರಾಜಿಗಳಿಲ್ಲ. ನಾವು ಬೆಳೆಗಳನ್ನು ಬೆಳೆಯಲು ಸಾವಯವ ಕೃಷಿ ಪದ್ಧತಿಗಳನ್ನು ಬಳಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಏಕೆಂದರೆ ಇದು ಹಣವನ್ನು ಉಳಿಸುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು" ಎಂದು ಹೇಳುತ್ತಾರೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು