• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Farmer Success Story: 6 ಸಾವಿರ ಖರ್ಚು ಮಾಡಿ, 3 ತಿಂಗಳಲ್ಲಿ 2 ಲಕ್ಷ ಸಂಪಾದಿಸಿದ 72 ವರ್ಷದ ರೈತ, ಯಾವ ಬೆಳೆಯಿಂದ ಗೊತ್ತಾ?

Farmer Success Story: 6 ಸಾವಿರ ಖರ್ಚು ಮಾಡಿ, 3 ತಿಂಗಳಲ್ಲಿ 2 ಲಕ್ಷ ಸಂಪಾದಿಸಿದ 72 ವರ್ಷದ ರೈತ, ಯಾವ ಬೆಳೆಯಿಂದ ಗೊತ್ತಾ?

90 ದಿನಗಳಲ್ಲಿ 2 ಲಕ್ಷ ಸಂಪಾದಿಸಿದ ರೈತ

90 ದಿನಗಳಲ್ಲಿ 2 ಲಕ್ಷ ಸಂಪಾದಿಸಿದ ರೈತ

ರೈತ ರಾಮಚಂದ್ರ ತೋಟಗಾರಿಕೆ ಇಲಾಖೆಯಿಂದ ತಂದಿದ್ದ ಅಣಬೆಯ ಪ್ರತಿ ಬ್ಯಾಗ್  8 ರಿಂದ 10 ದಿನಗಳಲ್ಲಿ ಸುಮಾರು 3 ರಿಂದ 4 ಕೆಜಿ ಫಸಲು ನೀಡಿವೆ. ಅಣಬೆ ತಂದಾಗಿನಿಂದ ರಾಮಚಂದ್ರ ಅವರು ಒಟ್ಟು 6 ಸಾವಿರ ರೂಪಾಯಿ ಖರ್ಚು ಮಾಡಿ, 90 ದಿನಗಳಲ್ಲಿ 200 ಚೀಲಗಳಿಂದ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಆದಾಯ ಕಂಡಿದ್ದಾರೆ.

ಮುಂದೆ ಓದಿ ...
  • Local18
  • 2-MIN READ
  • Last Updated :
  • Bihar, India
  • Share this:

ಬಿಹಾರ: ದುಡಿಯುವ ಮನಸ್ಸಿದ್ದರೆ ವಯಸ್ಸು ಅಡ್ಡಿ ಬರುವುದಿಲ್ಲ, ಅದರಲ್ಲೂ ವ್ಯವಸಾಯ (Agriculture) ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ 72 ವರ್ಷದ ರೈತನೊಬ್ಬ (Farmer) ಸರ್ಕಾರ (Government) ನೀಡುವ ಸೌಲಭ್ಯವನ್ನು ಬಳಸಿಕೊಂಡು ಲಕ್ಷಾಂತರ ಆದಾಯಗಳಿಸಿ (Income) ಯುವಕರಿಗೆ ಮಾದರಿಯಾಗಿದ್ದಾರೆ. ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಭರ್ವಾಲಿಯಾ ಗ್ರಾಮದ ರೈತರೊಬ್ಬರು ಕೇವಲ 6 ಸಾವಿರ ರೂಪಾಯಿ ವೆಚ್ಚದಲ್ಲಿ 3 ತಿಂಗಳಲ್ಲಿ ಎರಡಿರಿಂದ ಎರಡುವರೆ ಲಕ್ಷ ರೂಪಾಯಿಗಳಿಸಿದ್ದಾರೆ. ಇದು 72 ರ ವೃದ್ಧನಿಂದ ಇಷ್ಟು ಸಂಪಾದನೆ  ಹೇಗೆ ಸಾಧ್ಯ, ಯಾವುದು ಅಂತಹ ಬೆಳೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುಬಹುದು, ಈ ಸುದ್ದಿಯಲ್ಲಿ ಆ ರೈತನ ಸಾಧನೆ ಬಗ್ಗೆ ತಿಳಿದುಕೊಳ್ಳಿ.


ಭರ್ವಾಲಿಯಾ ಗ್ರಾಮದ 72 ವರ್ಷದ ರೈತ ರಾಮಚಂದ್ರ ಅವರು ಬಿಹಾರ ಸರ್ಕಾರದ ತೋಟಗಾರಿಕೆ ಮಿಷನ್ ಯೋಜನೆ ಬಗ್ಗೆ ತಿಳಿದುಕೊಂಡಿದ್ದಾರೆ.  ನಂತರ ಅಣಬೆ ಬೆಳೆ ಬೆಳೆಯಲು ಸರ್ಕಾರ ನೀಡುವ ನೆರವು ಪಡೆದು ಕೃಷಿ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಪ್ರತಿ ಚೀಲಕ್ಕೆ 6 ರೂ.ನಂತೆ ಸುಮಾರು 200 ಚೀಲ ಅಣಬೆಯನ್ನು ತೋಟಗಾರಿಕೆ ಇಲಾಖೆಯಿಂದ ಖರೀದಿಸಿ ತಂದು ಅಣಬೆ ಕೃಷಿ ಆರಂಭಿಸಿದ್ದಾರೆ.


ಪ್ರತಿ ಚೀಲದಿಂದ 3ರಿಂದ 4 ಕೆಜಿ ಅಣಬೆ ಉತ್ಪಾದನೆ


ರೈತ ರಾಮಚಂದ್ರ ತೋಟಗಾರಿಕೆ ಇಲಾಖೆಯಿಂದ ತಂದಿದ್ದ ಅಣಬೆಯ ಪ್ರತಿ ಬ್ಯಾಗ್  8 ರಿಂದ 10 ದಿನಗಳಲ್ಲಿ ಸುಮಾರು 3 ರಿಂದ 4 ಕೆಜಿ ಫಸಲು ನೀಡಿವೆ. ಅಣಬೆ ತಂದಾಗಿನಿಂದ ರಾಮಚಂದ್ರ ಅವರು ಒಟ್ಟು 6 ಸಾವಿರ ರೂಪಾಯಿ ಖರ್ಚು ಮಾಡಿ, 90 ದಿನಗಳಲ್ಲಿ 200 ಚೀಲಗಳಿಂದ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಆದಾಯ ಕಂಡಿದ್ದಾರೆ. ಪ್ರಸ್ತುತ ರಾಮಚಂದ್ರ ಅವರು ಸುಮಾರು 400 ಚೀಲ ಅಣಬೆ ಖರೀದಿಸಿ ಬೆಳೆಯನ್ನು ಜೋಪಾನ ಮಾಡುತ್ತಿದ್ದಾರೆ.


ಇದನ್ನೂ ಓದಿ: Agriculture: ವ್ಯವಸಾಯದಲ್ಲಿ ಈ ವಿಧಾನ ಅನುಸರಿಸಿದರೆ ವರ್ಷಕ್ಕೆ 5ರಿಂದ 6 ಲಕ್ಷ ಆದಾಯ ಪಕ್ಕಾ!


ಶೇ. 90 ರಷ್ಟು ಸಹಾಯಧನ


ರಾಮಚಂದ್ರ ಅವರು 2 ವರ್ಷಗಳ ಹಿಂದೆ ಮೊದಲ ಬಾರಿಗೆ ಅಣಬೆ ಉತ್ಪಾದನೆ ಪ್ರಾರಂಭಿಸಿದ್ದರು. ಅವರು ತೋಟಗಾರಿಕಾ ಮಿಷನ್ ಅಡಿಯಲ್ಲಿ ಅಣಬೆ ಉತ್ಪಾದನೆಗೆ ಸರ್ಕಾರದಿಂದ ಶೇಕಡಾ 90ರಷ್ಟು ಸಹಾಯಧನವನ್ನು ಪಡೆದು ಈ ಕೃಷಿಗೆ ಕಾಲಿಟ್ಟಿದ್ದರು. ಅಂದರೆ ಚೀಲಕ್ಕೆ 60 ರೂ.ಗೆ ಮಾರಾಟವಾಗುತ್ತಿದ್ದ ಅಣಬೆಯನ್ನು ಸಬ್ಸಿಡಿಯಲ್ಲಿ ಕೇವಲ 6 ರೂಪಾಯಿ ನೀಡಿ ಖರೀಸಿದಿದ್ದರು. ಈ ಯೋಜನೆಯಲ್ಲಿ ಮೊದಲ ಬಾರಿಗೆ 200 ಚೀಲಗಳವರೆಗೆ ಅಣಬೆಗಳನ್ನು ತೋಟಗಾರಿಕೆ ಇಲಾಖೆ ನೀಡುತ್ತದೆ. ಈ ಮೂಲಕ 12 ಸಾವಿರ ರೂಪಾಯಿ ಮೌಲ್ಯದ ಅಣಬೆ ಬೆಳೆ ಕೇವಲ 1200 ರೂಪಾಯಿಗೆ ಇವರಿಗೆ ಲಭ್ಯವಾಗಿದೆ.




70-80 ರೂಪಾಯಿಗಳಿಗೆ ಮಾರಾಟ


ತೋಟಗಾರಿಕೆ ಇಲಾಖೆ ನೀಡುವ ಪ್ರತಿ ಚೀಲವು 8 ರಿಂದ 10 ದಿನಗಳಲ್ಲಿ ಸುಮಾರು 3 ರಿಂದ 4 ಕೆಜಿ ಅಣಬೆಗಳನ್ನು ಉತ್ಪಾದಿಸುತ್ತವೆ. ಅಂಗಡಿಯವರಿಗೆ ಮಾರಿದರೆ ಕೆ.ಜಿ.ಗೆ 70ರಿಂದ 80 ರೂಪಾಯಿ ಸಿಗಲಿದೆ. ಆದರೆ ನೇರವಾಗಿ ಚಿಲ್ಲರೆ ಮಾರಾಟ ಮಾಡಿದರೆ ಕೆಜಿಗೆ 100 ರಿಂದ 150 ರೂಪಾಯಿ ಸಿಗುತ್ತದೆ ಎಂದು ರಾಮಚಂದ್ರ ತಿಳಿಸಿದ್ದಾರೆ.


ತೋಟಗಾರಿಗೆ ಇಲಾಖೆಯ ಯೋಜನೆ ಬಗ್ಗೆ ಮಾಹಿತಿ

top videos


    ಬಿಹಾರ ಸರ್ಕಾರದ ತೋಟಗಾರಿಕೆ ಮಿಷನ್‌ನ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ರಾಮಚಂದ್ರ ತಿಳಿಸಿದ್ದಾರೆ. ಇದಕ್ಕಾಗಿ, ಮೊದಲು ನೀವು ಅದರ ವೆಬ್​ಸೈಟ್ horticulture bihar.gov.in ಗೆ ಹೋಗಬೇಕು. ನಂತರ ಅಲ್ಲಿ ಈ ಯೋಜನೆಯನ್ನು ಆಯ್ಕೆ ಮಾಡಿ ಮತ್ತು ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ, ಆಧಾರ್ ಕಾರ್ಡ್, ನಿಮ್ಮ ಫೋಟೋ, ಅಣಬೆ ತರಬೇತಿ ಪ್ರಮಾಣಪತ್ರ, ಲೇಔಟ್ ಯೋಜನೆ ಅಂದಾಜನ್ನು ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ನಂತರ ಕೃಷಿ ಕೇಂದ್ರದಿಂದ ಶೇ 90ರಷ್ಟು ಸಹಾಯಧನದಲ್ಲಿ ಗರಿಷ್ಠ 200 ಚೀಲ ಸಿದ್ಧವಿರುವ ಅಣಬೆ ಬೆಳೆಯನ್ನು ನೀಡಲಿದ್ದಾರೆ. ಈ ಯೋಜನೆಯಲ್ಲಿ ಸಿಂಪಿ ಮಶ್ರೂಮ್ ಮಾತ್ರ ಸದ್ಯಕ್ಕೆ ಲಭ್ಯವಾಗುತ್ತಿದೆ ಎಂದು ರಾಮಚಂದ್ರ ತಿಳಿಸಿದ್ದಾರೆ.

    First published: