• Home
  • »
  • News
  • »
  • business
  • »
  • Farming Tips: ಕೃಷಿ ಕ್ಷೇತ್ರದಲ್ಲಿ ಕಮಾಲ್​ ಮಾಡಿದ ವ್ಯಕ್ತಿ! ಇದ್ರಿಂದಲೇ 30 ಲಕ್ಷ ಆದಾಯ ಅಂದ್ರೆ ಸುಮ್ನೆನಾ?

Farming Tips: ಕೃಷಿ ಕ್ಷೇತ್ರದಲ್ಲಿ ಕಮಾಲ್​ ಮಾಡಿದ ವ್ಯಕ್ತಿ! ಇದ್ರಿಂದಲೇ 30 ಲಕ್ಷ ಆದಾಯ ಅಂದ್ರೆ ಸುಮ್ನೆನಾ?

ಹಿಂದೊಮ್ಮೆ, ಕೃಷಿ ಎಂಬುದು ಒಂದೇ ರೀತಿಯ ವಿಧಾನವನ್ನು ಒಳಗೊಂಡಿತ್ತು ಹಾಗೂ ಅದು ಸಾಂಪ್ರದಾಯಿಕ ರೀತಿಯದ್ದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ.

ಹಿಂದೊಮ್ಮೆ, ಕೃಷಿ ಎಂಬುದು ಒಂದೇ ರೀತಿಯ ವಿಧಾನವನ್ನು ಒಳಗೊಂಡಿತ್ತು ಹಾಗೂ ಅದು ಸಾಂಪ್ರದಾಯಿಕ ರೀತಿಯದ್ದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ.

ಹಿಂದೊಮ್ಮೆ, ಕೃಷಿ ಎಂಬುದು ಒಂದೇ ರೀತಿಯ ವಿಧಾನವನ್ನು ಒಳಗೊಂಡಿತ್ತು ಹಾಗೂ ಅದು ಸಾಂಪ್ರದಾಯಿಕ ರೀತಿಯದ್ದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ.

  • Trending Desk
  • 2-MIN READ
  • Last Updated :
  • Share this:

ಇತ್ತೀಚೆಗೆ ಯುವಜನಾಂಗವು  (Youth) ನಾವೀನ್ಯತೆ (Innovation) ಯನ್ನು ತರುವಲ್ಲಿ ಹೆಚ್ಚು ಹೆಚ್ಚು ಮುಂದಾಗುತ್ತಿದ್ದಾರೆ. ಆ ಕಾರಣವಾಗಿಯೇ ಸಾಕಷ್ಟು ನವೋದ್ಯಮಗಳು ಇಂದು ಭಾರತ (India) ದಾದ್ಯಂತ ತಲೆ ಎತ್ತುತ್ತಿವೆ ಎನ್ನಬಹುದು. ಯಾವುದೇ ಕ್ಷೇತ್ರವಿರಲಿ ನಾವೀನ್ಯತೆಯಿಂದ ಕೂಡಿದ ಪರಿಹಾರ ಮಾರ್ಗವು ಸಾಕಷ್ಟು ಯಶಸ್ಸ (Success) ನ್ನು ಗಳಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಿಂದೊಮ್ಮೆ, ಕೃಷಿ ಎಂಬುದು ಒಂದೇ ರೀತಿಯ ವಿಧಾನವನ್ನು ಒಳಗೊಂಡಿತ್ತು ಹಾಗೂ ಅದು ಸಾಂಪ್ರದಾಯಿಕ ರೀತಿಯದ್ದಾಗಿತ್ತು.


ಕೃಷಿ ಕ್ಷೇತ್ರದಲ್ಲಿ ಕಮಾಲ್​ ಮಾಡಿದ ಯುವಕ!


ಆದರೆ, ತಂತ್ರಜ್ಞಾನ ಬೆಳೆದಂತೆ ಬುದ್ಧಿಮತ್ತೆ, ಕೌಶಲ್ಯಗಳು ಬೆಳೆದು ಇತ್ತೀಚಿನ ವಯಸ್ಕರು ಅಥವಾ ತರುಣರು ಹೊಸ ಹೊಸ ತಂತ್ರಜ್ಞಾನಗಳನ್ನು ಕೃಷಿ ಕ್ಷೇತ್ರದಲ್ಲೂ ಸಹ ಅಳವಡಿಸುತ್ತ ತ್ವರಿತವಾಗಿ ಯಶಸ್ಸನ್ನು ಗಳಿಸುತ್ತಿರುವುದನ್ನು ನೋಡಬಹುದು.


ಪ್ರಸ್ತುತ ಬುಂದೇಲ್ಖಂಡ್ ಪ್ರಾಂತ್ಯದ 32ರ ಪ್ರಾಯದ ಆಕಾಶ್ ಚೌರಾಸಿಯಾ ಅವರ ಕಥೆಯನ್ನೇ ತೆಗೆದುಕೊಳ್ಳಿ. ಅವರು ಅಭಿವೃದ್ಧಿಪಡಿಸಿದ ವಿಶಿಷ್ಟ ಕೃಷಿ ವಿಧಾನದಿಂದಾಗಿ ಅವರು ವರ್ಷಕ್ಕೆ 30 ಲಕ್ಷ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.


ವಿನೂತನ ವಿಧಾನ ಅಭಿವೃದ್ಧಿಪಡಿಸಿದ ಆಕಾಶ್!


ಹೌದು, ಬಹುಮಹಡಿ ಕಟಡಗಳ ರಚನೆಯ ಮಾದರಿಯಿಂದ ಪ್ರಭಾವಿತರಾಗಿ ಆಕಾಶ್ ಕೃಷಿಗಾಗಿ ತಮ್ಮದೆ ಆದ ವಿನೂತನ ವಿಧಾನ ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಇದರಿಂದಾಗಿ ಸ್ಥಳ ಹಾಗೂ ನೀರಿನ ಉಳಿತಾಯ ಎರಡೂ ಆಗುವುದಾಗಿ ಆಕಾಶ್ ಹೇಳುತ್ತಾರೆ.


ಇದನ್ನು ಬಹು ಪದರುಗಳ ಕೃಷಿ ಎನ್ನಲಾಗಿದ್ದು ಆಕಾಶ್ ಅವರ ವಿಧಾನದ ಮೂಲಕ ರೈತನೊಬ್ಬ ತನಗಿರುವ ಕಡಿಮೆ ಜಾಗದಲ್ಲೂ ಸಹ ಬಹುಬೆಗಳನ್ನು ಬೆಳೆಯಬಹುದಾಗಿದೆ.


ಆಕಾಶ್ ಚೌರಾಸಿಯಾ ಕನಸು!


ಆಕಾಶ್ ಚೌರಾಸಿಯಾ ಅವರು ಚಿಕ್ಕವರಾಗಿದ್ದಾಗಿನಿಂದಲೂ ಮುಂದೆ ಅವರು ವೈದ್ಯರಾಗಬೇಕೆಂಬ ಕನಸು ಕಾಣುತ್ತಿದ್ದರು. ಆದರೆ, ಅವರು ಬೆಳೆದಂತೆ ಅವರ ವೃತ್ತಿಯು ತಿರುವನ್ನು ಪಡೆಯಿತು. ಈ ಸಂದರ್ಭದಲ್ಲಿ ಆಕಾಶ್, "ನಾನು ಬೆಳೆದಂತೆ, ಈ ಎಲ್ಲ ಅನಾರೋಗ್ಯದ ಸಮಸ್ಯೆಗಳಿಗೆ ಮೂಲ ಕಾರಣ ನಾವು ತಿನ್ನುವ ಆಹಾರ ಹಾಗು ಕುಡಿಯುವ ನೀರು ಎಂಬ ಅರಿವು ಮೂಡಿತು. ಹಾಗಾಗಿ ಈ ಮೂಲವನ್ನು ನಾನು ಬೇರುಗಳ ಮೂಲಕವೇ ತೆಗೆದು ಹಾಕಬೇಕೆಂದು ನಿರ್ಧರಿಸಿದೆ" ಎಂದು ಹೇಳುತ್ತಾರೆ.


ಇದನ್ನೂ ಓದಿ: ಅಬ್ಬಾ, ಈ ರೈತರದ್ದು ಏನ್ ತಲೆ ಅಂತೀರಾ? ಬಾವಲಿಯಿಂದ ದ್ರಾಕ್ಷಿ ಕಾಪಾಡೋಕೆ ಏನ್​ ಮಾಡಿದ್ದಾರೆ ನೋಡಿ!


ಹೀಗೆ ತಮ್ಮ ಕೆಲಸಾಅರಂಭಿಸಿದ ಆಕಾಶ್ ಹಲವು ರೈತರನ್ನು ಭೇಟಿ ಮಾಡಿ ಚರ್ಚಿಸಿದರು. ಅವರಿಗೆ ತಿಳಿದುಬಂದ ಒಂದು ಅಂಶವೆಂದರೆ ಅಥವಾ ಸಾಕಷ್ಟು ರೈತರು ಅನುಭವಿಸುವ ಸಮಸ್ಯೆ ಎಂದರೆ ಸ್ಥಳಾವಕಾಶ ಇಲ್ಲದಿರುವುದು, ನೀರಿನ ಕೊರತೆ ಹಾಗೂ ಕಳೆಗಳು ಬೆಳೆಯುವುದು.
2014 ರಲ್ಲಿ ಆಕಾಶ್ ಅವರು ಒಂದೇ ಭೂಮಿಯಲ್ಲಿ ಎರಡು ಪದರುಗಳಲ್ಲಿ ಎರಡು ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಆರುವರಿ ಅಡಿಯ ಬಾಂಬೂ ಕಟ್ಟಿಗೆಯಿಂದ ನಿರ್ಮಿತ ರಚನೆಯೊಂದನ್ನು ಮಾಡಿ ಅದರ ಮೇಲೆ ಮೆಶ್ ಅನ್ನು ಹಾಕಿದರು. ಇದರ ಹಿಂದಿನ ಉದ್ದೇಶ ಸೂರ್ಯನ ಬಿಸಿಲು ಭಾಗಶಃ ಬೀಳುವಂತಾಗಲಿ ಇನ್ನರ್ಧ ನೆರಳಿರಲಿ, ಏಕೆಂದರೆ ಇದರಿಂದ ಆವಿಯಾಗುವಿಕೆ ಕುಂಠಿತವಾಗಿ ಸಾಕಷ್ಟು ನೀರು ಉಳಿಯುತ್ತದೆ ಎಂಬುದಾಗಿತ್ತು. ಇದರಿಂದ ಏನಿಲ್ಲವೆಂದರೂ 80 ಪ್ರತಿಶತದಷ್ಟು ನೀರಿನ ಉಳಿತಾಯವಾಗುತ್ತದೆ ಎನ್ನಲಾಗುತ್ತದೆ.


ಆಕಾಶ್ ಚೌರಾಸಿಯಾ ಸಾಧನೆ


ಸದ್ಯ ಆಕಾಶ್ ಚೌರಾಸಿಯಾ ಸಾಕಷ್ಟು ನುರಿತ ಹಾಗೂ ಪರಿಣಿತರಾಗಿದ್ದು ತಮ್ಮ ಬಹುಪದರದ ಕೃಷಿಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇವರ ಈ ಸಾಧನೆಯನ್ನು ಮೆಚ್ಚಿ ಇಲ್ಲಿಯವರೆಗೆ ಅವರಿಗೆ 20ಕ್ಕೂ ಹೆಚ್ಚು ವಿವಿಧ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇಲ್ಲಿಯವರೆಗೆ ಚೌರಾಸಿಯಾ ಅವರು 80,000 ರೈತರಿಗೆ ತರಬೇತಿ ನೀಡಿದ್ದಲ್ಲದೆ 12 ಲಕ್ಷ ಇತರೆ ಜನರಿಗೆ ತಮ್ಮ ವಿಧಾನದ ಕುರಿತು ಜ್ಞಾನವನ್ನು ಹಂಚಿದ್ದಾರೆ.


ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್, ರಸಗೊಬ್ಬರ ಬೆಲೆ ಬಗ್ಗೆ ಕೇಂದ್ರದ ಪ್ರಮುಖ ನಿರ್ಧಾರ!


ಆಕಾಶ್ ಚೌರಾಸಿಯಾ ಅವರು ತಮ್ಮದೆ ಆದ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದು ಅದರ ಮೂಲಕ ಆಗಾಗ ರೈತರಿಗೆ ಜ್ಞಾನ ನೀಡುವಂತಹ ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಅವರ ಯುಟ್ಯೂಬ್ ಚಾನೆಲ್ ಅನ್ನು ವೀಕ್ಷಿಸಬಹುದಾಗಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು