Best Startup Ideas: ನಿಮಗೆ ನೀವೇ ಬಾಸ್ ಆಗಿ! ಮನೆಯಲ್ಲಿದ್ದೇ ಈ ಸ್ಟಾರ್ಟ್​ಅಪ್​ ಸ್ಥಾಪಿಸಿ

ನಿಮ್ಮ ಕನಸು ನನಸು ಮಾಡೋಕೆ ಉತ್ತಮ ದಾರಿಗಳು ಇಲ್ಲಿವೆ. ಆಲ್​ ದಿ ಬೆಸ್ಟ್, ನಿಮ್ಮ ಕನಸು ನನಸಾಗಲಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮನೆಯಲ್ಲೇ ಇರಬೇಕು, ಮನೆಯಿಂದಲೇ ಸ್ವಂತ ಉದ್ಯೋಗ ಮಾಡಬೇಕು. ಇದು ಲಕ್ಷಾಂತರ ಜನರ ಕನಸು ಈ ಕನಸನ್ನು ಹಲವು ರೀತಿಗಳಲ್ಲಿ ನೆರವೇರಿಸಬಹುದು. ನಿಮ್ಮ ಮನೆಯಿಂದಲೇ (Business in Home) ಏನಾದರೂ ಮಾಡಬೇಕು. ಸ್ವಂತ ಸ್ಟಾರ್ಟ್​ಅಪ್​ ಸ್ಥಾಪಿಸಬೇಕು. ನಮಗೆ ನಾವೇ ಬಾಸ್ ಆಗಬೇಕು. ಕೃಷಿ ಕ್ಷೇತ್ರದಲ್ಲಿ (Agri Business) ಏನಾದರೂ ಹೊಸ ಸಾಧನೆ ಮಾಡಬೇಕು. ಯಾರ ಕೈ ಕೆಳಗೂ ಕೆಲಸ ಮಾಡದೇ ಸ್ವಂತ ಉದ್ಯೋಗ ಸೃಷ್ಟಿಸಿ ಹಲವರಿಗೆ ಉದ್ಯೋಗ (Job Creation) ನೀಡಬೇಕು ಎಂಬ ಕನಸು ಹೊತ್ತ ಲಕ್ಷಾಂತರ ಜನರಿದ್ದಾರೆ.  ಹೀಗೆ ನೀವು ಬಯಸಿದರೆ ನಿಮ್ಮ ಕನಸು ನನಸು ಮಾಡೋಕೆ ಉತ್ತಮ ದಾರಿಗಳು ಇಲ್ಲಿವೆ. ಆಲ್​ ದಿ ಬೆಸ್ಟ್, ನಿಮ್ಮ ಕನಸು ನನಸಾಗಲಿ!

ಇತ್ತೀಚಿನ ದಿನಗಳಲ್ಲಿ ಜನರು ತೋಟಗಾರಿಕೆ ಅಥವಾ ವಿವಿಧ ರೀತಿಯ ಸಸ್ಯಗಳನ್ನು ಮನೆಯಲ್ಲಿ ಚಂದಕ್ಕಾಗಿ ಇಟ್ಟುಕೊಳ್ಳುತ್ತಾರೆ. ನೀವು ನಿಮ್ಮ ಹಿತ್ತಲಿನಲ್ಲಿ ಸಣ್ಣ ನರ್ಸರಿ ಆರಂಭಿಸಬಹುದು. ವಿವಿಧ ಕುಂಡಗಳಲ್ಲಿ ಸಸ್ಯಗಳನ್ನು ಬೆಳೆಸಿಸಿ ಮಾರಾಟ ಮಾಡಬಹುದು. ಇದು ಉತ್ತಮ  ಲಾಭದಾಯಕ ಉದ್ಯಮವಾಗಿದೆ. ನೀವು ಈ ಸಸ್ಯಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.

ಗಿಡಮೂಲಿಕೆ ಕೃಷಿ
ನೀವು ನಿಮ್ಮ ತೋಟದಲ್ಲಿ ಅಥವಾ ಖಾಲಿ ಜಾಗದಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳು ಅಥವಾ ಔಷಧೀಯ ಸಸ್ಯಗಳನ್ನು ಬೆಳೆಸಬಹುದು. ನಂತರ ಅವುಗಳನ್ನು ಕೊಯ್ಲು ಮಾಡಿ ಪ್ಯಾಕ್ ಮಾಡಿ ಮಾರಾಟಮಾಡಬಹುದು. ನಿಮ್ಮ ಆರಂಭ ಸರಳವಾಗಿ ಪುದೀನ, ತುಳಸಿ ಮುಂತಾದ ದಿನನಿತ್ಯ ಬಳಸುವ ಗಿಡಗಳಿಂದಲೇ ಆಗಲಿ.

ತಾಜಾ ತರಕಾರಿ ವ್ಯಾಪಾರ
ನೀವು ಸ್ವಲ್ಪ ಹೆಚ್ಚು ಸ್ಥಳವನ್ನು ಹೊಂದಿದ್ದರೆ, ನೀವು ನಿಮ್ಮ ಹಿತ್ತಲಿನಲ್ಲಿ ತರಕಾರಿಗಳನ್ನು ಬೆಳೆಯಬಹುದು ತಾಜಾ ಹಾಗೂ ಸಾವಯವ ತರಕಾರಿಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಂತ ಮಾರುಕಟ್ಟೆಯಲ್ಲೇ ದಿನವಿಡೀ ಕುಳತು ಮಾರಾಟ ಮಾಡಬೇಕಂತಿಲ್ಲ. ನಿಮ್ಮ ಮನೆಯಲ್ಲಿ ಹೀಗೆ ಸಾವಯವ ತರಕಾರಿ ಬೆಳೆಯುವ ವಿಷಯ ನಾಲ್ಕು ಜನಕ್ಕೆ ತಿಳಿದರೆ ಸಾಕು, ಅವರೇ ನಿಮ್ಮ ಬಳಿ ಬಂದು ತರಕಾರಿ ಖರೀದಿ ಮಾಡುತ್ತಾರೆ.

ಹೂ ಮಾರಾಟ
ಹೂವುಗಳಿಗೆ ಬೇಡಿಕೆ ಯಾವಾಗಲೂ ಹೆಚ್ಚಾಗಿರುತ್ತದೆ. ವಿಶೇಷವಾಗಿ ಹಬ್ಬಗಳು ಮತ್ತು ಮದುವೆಗಳ ಸಮಯದಲ್ಲಿ ನಿಮ್ಮ ಹಿತ್ತಲಿನಲ್ಲಿ ಹೂವಿನ ವ್ಯಾಪಾರವನ್ನು ಪ್ರಾರಂಭಿಸಲು ನೀವು ಯೋಚಿಸಬಹುದು. ಆರಂಭಿಕ ಹಂತದಲ್ಲಿ ನೀವು ಯಾವ ಹೂಗಿಡಗಳನ್ನು ಬೆಳೆಯಬೇಕು ಎಂದು ಮಾರುಕಟ್ಟೆ ಸಮೀಕ್ಷೆ ಮಾಡಬೇಕು. ನಿಮ್ಮ ಊರಿನಲ್ಲಿ ಯಾವ ಹೂವಿಗೆ ಹೆಚ್ಚು ಬೇಡಿಕೆ ಇದೆ? ಯಾವ ಹೂವು ಸಿಗುವುದಿಲ್ಲ? ಎಲ್ಲ ತಿಳಿದುಕೊಂಡು ಈ ವ್ಯವಹಾರ ಆರಂಭಿಸಬಹುದು.

ಬೀಜಗಳ ಮಾರಾಟ
ಇತ್ತೀಚಿನ ದಿನಗಳಲ್ಲಿ ವಿವಿಧ ಸಸ್ಯಗಳ ಗುಣಮಟ್ಟದ ಬೀಜಗಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಈ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸಬಹುದು. ಅಲ್ಲದೆ, ಈ ವ್ಯವಹಾರದಲ್ಲಿ ಹೂಡಿಕೆ ತುಂಬಾ ಕಡಿಮೆ.

ಇದನ್ನೂ ಓದಿ: Soap Factory: ಮನೆಯಲ್ಲೇ ಸಾಬೂನು ತಯಾರಿಸಿ, ನಿಮಗೆ ಸರ್ಕಾರವೇ ಕೊಡುತ್ತೆ ಲೋನ್

ಆದರೆ ನೀವು ಕಡಿಮೆ ಲಭ್ಯವಿರುವ ತಳಿಗಳ, ಗಿಡಗಳ ಬೀಜಗಳನ್ನು ಸಂಗ್ರಹಿಸಬೇಕು. ಬೇರೆ ಬೇರೆ ಪ್ರದೇಶಗಳಲ್ಲಿ ಸಸ್ಯಗಳನ್ನು ಬೆಳೆಯುವವರನ್ನು ಸಂಪರ್ಕಿಸಬೇಕು, ಅವರ ಬಳಿ ಮಾಹಿತಿ ಪಡೆಯಬೇಕು. ಈ ಬ್ಯುಸಿನೆಸ್ ಅನ್ನು ಹೆಚ್ಚಿನ ಬಂಡವಾಳ ಇಲ್ಲದೇ ಮನೆಯಲ್ಲೇ ಕುಳಿತು ಫೇಸ್​ಬುಕ್​ನಂತಹ ಸಾಮಾಜಿಕ ಜಾಲತಾಣ ಬಳಸಿಯೂ ಮಾಡಬಹುದು.

ಹೈನುಗಾರಿಕೆ
ಕೊನೆಯದಾಗಿ ಆದರೆ ನಿಮ್ಮ ಹಿತ್ತಲಿನಲ್ಲಿ ಒಂದು ಸಣ್ಣ ಡೈರಿ ಫಾರ್ಮ್ ಅನ್ನು ಪ್ರಾರಂಭಿಸುವುದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ನೀವು ಆಡು, ಹಸು ಅಥವಾ ಎಮ್ಮೆಗಳನ್ನು ಸಾಕಬಹುದು. ಸರಿಯಾಗಿ ನಿರ್ವಹಿಸಿದರೆ ಹೈನುಗಾರಿಕೆ ಬಹಳ ಲಾಭದಾಯಕವಾಗಿದೆ. ಪ್ರಸ್ತುತ ಅನೇಕ ಜನರು ಅದರಿಂದ ಉತ್ತಮ ಹಣವನ್ನು ಗಳಿಸುತ್ತಿದ್ದಾರೆ.

ಇದನ್ನೂ ಓದಿ: Alternative to Plastic: ಮೀನುಗಾರರು ಹಣ ಗಳಿಸೋಕೆ ಹೊಸ ಉಪಾಯ! ಸಮುದ್ರದಲ್ಲಿ ಸಿಕ್ತು ಪ್ಲಾಸ್ಟಿಕ್​ಗೆ ಪರ್ಯಾಯ!

ಕಾಂಪೋಸ್ಟ್ ಮಾರಾಟ
ನೀವೇ ಸ್ವಂತ ಗೊಬ್ಬರ ತಯಾರಿಸಬಹುದು! ಇದು ಅಚ್ಚರಿ ಎನಿಸಿದರೂ ಸತ್ಯ. ನೀವು ಕೆಲವು ಅಡಿಗೆ ತ್ಯಾಜ್ಯ / ಸ್ಕ್ರ್ಯಾಪ್ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ಅವುಗಳಿಂದ ಸ್ವಂತ ಗೊಬ್ಬರವನ್ನು ತಯಾರಿಸಬಹುದು. ನಂತರ ಅದನ್ನು ಸ್ಥಳೀಯ ತೋಟಗಾರರು ಅಥವಾ ರೈತರಿಗೆ ಮಾರಾಟ ಮಾಡಬಹುದು.
Published by:guruganesh bhat
First published: