Savings: 40 ವರ್ಷ ವಯಸ್ಸಾದ್ರೂ ಸೇವಿಂಗ್ಸ್ ಇಲ್ಲ ಅಂತ ಚಿಂತೇನಾ? ಹೀಗೆ ಮಾಡಿ ಮಿಲಿಯನೇರ್ ಆಗಿ

ಅದೆಷ್ಟೋ ಜನರು ನಲವತ್ತಕ್ಕೆ ಬಂದ ನಂತರವೂ ಯಾವ ಉಳಿತಾಯವನ್ನೂ ಹೊಂದಿರುವುದಿಲ್ಲ, ಹಾಗಿದ್ದರೆ ಅವರು ಏನು ಮಾಡಬೇಕು? ಅವರು ಮುಂದೆಂದೂ ಸಿರಿವಂತರಾಗಿ ಹೊರಹೊಮ್ಮಲಾರರೆ? ಎಂಬೆಲ್ಲ ಪ್ರಶ್ನೆಗಳು ಮೂಡಬಹುದು. ಆದರೆ, ಚಿಂತಿಸದಿರಿ ನೀವು ನಲವತ್ತಕ್ಕೆ ಕಾಲಿಟ್ಟರೂ ಸಹ ಮಿಲಿಯನೇರ್‍ ಆಗಿ ನಿವೃತ್ತಿ ಹೊಂದಬಹುದು. ಆದರೆ, ಅದಕ್ಕೆ ಕೆಲವು ಶಿಸ್ತಿನ ನಡೆಗಳನ್ನು ನೀವು ಪಾಲಿಸಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ 20 ಅಥವಾ ಅದಕ್ಕಿಂತ ಕೆಲ ವರ್ಷಗಳ ನಂತರ ನಂತರ ವೃತ್ತಿ ಆರಂಭಿಸುವ ಅನೇಕ ವ್ಯಕ್ತಿಗಳು (Person) ತಮ್ಮ ಮುಂದಿನ ಹಲವು ಅಂದರೆ 15-20 ವರ್ಷಗಳ ಕಾಲ ದುಡಿದು ಸಾಧ್ಯವಾದಷ್ಟು ಹಣಗಳಿಸುವಲ್ಲಿ (Money) ನಿರತರಾಗುತ್ತಾರೆ. ಒಂದೊಮ್ಮೆ 40 ವಯಸ್ಸಿಗೆ ಕಾಲಿಟ್ಟ ಮೇಲೆ ಅವರ ಹಿಂದಿನ ಅನೇಕ ವರ್ಷಗಳ ಶ್ರಮಪಟ್ಟ ದುಡಿತವು ಈಗ ಹೆಚ್ಚು ಹೆಚ್ಚು ಆದಾಯ (Income) ತಂದುಕೊಡುತ್ತಿರುತ್ತದೆ. ಈಗ ಏನಿದ್ದರೂ ಅವರು ತಮ್ಮ ನಿವೃತ್ತಿ (Retirement) ನಂತರದ ಜೀವನದ ಬಗ್ಗೆ ಉಳಿತಾಯಗಳಲ್ಲಿ (Saving) ಹೆಚ್ಚು ಹೂಡಿಕೆ ಮಾಡಲು ಬಯಸುತ್ತಿರುತ್ತಾರೆ. ಆದರೆ, ಈ ವಿಷಯ ಪ್ರತಿಯೊಬ್ಬರಿಗೂ ಹೀಗೆ ಇರುತ್ತದೆ ಎನ್ನಲಾಗುವುದಿಲ್ಲ.

ಅದೆಷ್ಟೋ ಜನರು ನಲವತ್ತಕ್ಕೆ ಬಂದ ನಂತರವೂ ಯಾವ ಉಳಿತಾಯವನ್ನೂ ಹೊಂದಿರುವುದಿಲ್ಲ, ಹಾಗಿದ್ದರೆ ಅವರು ಏನು ಮಾಡಬೇಕು? ಅವರು ಮುಂದೆಂದೂ ಸಿರಿವಂತರಾಗಿ ಹೊರಹೊಮ್ಮಲಾರರೆ? ಎಂಬೆಲ್ಲ ಪ್ರಶ್ನೆಗಳು ಮೂಡಬಹುದು. ಆದರೆ, ಚಿಂತಿಸದಿರಿ ನೀವು ನಲವತ್ತಕ್ಕೆ ಕಾಲಿಟ್ಟರೂ ಸಹ ಮಿಲಿಯನೇರ್‍ ಆಗಿ ನಿವೃತ್ತಿ ಹೊಂದಬಹುದು. ಆದರೆ, ಅದಕ್ಕೆ ಕೆಲವು ಶಿಸ್ತಿನ ನಡೆಗಳನ್ನು ನೀವು ಪಾಲಿಸಬೇಕಾಗುತ್ತದೆ.

ಹಾಗಾದರೆ ಬನ್ನಿ, ಈ ಲೇಖನದ ಮೂಲಕ 40ರ ವಯೋಮಾನ ಹೊಂದಿದವರೂ ಸಹ ಹೇಗೆ ಉತ್ತಮ ಆದಾಯ ಅಥವಾ ಸಂಪತ್ತುಗಳಿಸಬಹುದೆಂಬುದರ ಬಗ್ಗೆ ಕೆಲವು ಸಲಹೆಗಳನ್ನು ತಿಳಿಯಿರಿ.

ನಿಮ್ಮ ಕಂಪನಿಯ ನಿವೃತ್ತಿ ಯೋಜನೆಯಲ್ಲಿ ಹಣ ತೊಡಗಿಸಿ
ಇದು ಸರಳ ಹಾಗೂ ಪರಿಣಾಮಕಾರಿಯಾದ ಮಾರ್ಗವಾಗಿದೆ. ಅದೆಷ್ಟೋ ಕಂಪನಿಗಳು ತಮ್ಮ ಉದ್ಯೋಗಿಗಳ ಅನುಕೂಲಕ್ಕಾಗಿ ನಿವೃತ್ತಿ ಯೋಜನೆಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ 401K ಯಲ್ಲಿ ತೊಡಗಿಸುವಿಕೆ. ಇದು ಅಮೆರಿಕದಲ್ಲಿ ಇದೆಯಾದರೂ ಇದಕ್ಕೆ ಸಮಾನವಾಗಿ ಭಾರತದಲ್ಲಿ ಇರುವುದೆಂದರೆ ಭಾರತೀಯ ಪ್ರಾವಿಡೆಂಟ್ ಫಂಡ್ ಅಥವಾ ಭವಿಷ್ಯ ನಿಧಿ. ನೀವು 24 ಅಥವಾ 42 ವಯಸ್ಸಿನವರೇ ಆಗಿರಲಿ ಮೊದಲಿಗೆ ನಿಮ್ಮ ಆದಾಯದ ಒಂದು ಭಾಗವನ್ನು ಈ ರೀತಿಯ ಭವಿಷ್ಯ ನಿಧಿ ಯೋಜನೆಯಲ್ಲಿ ತೊಡಗಿಸಲು ಪ್ರಾರಂಭಿಸಿ.

ಸಾಲದ ಶೂಲದಿಂದ ಸಂಪೂರ್ಣವಾಗಿ ಹೊರಬನ್ನಿ
ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿದ್ದಾಗ ಅದಕ್ಕೆಂದು, ಇದಕ್ಕೆಂದು ಸಾಲ ತೆಗೆದುಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಒಂದೆಡೆ ಮಾಸಿಕ ಆದಾಯವಿದೆ, ಸಾಲವನ್ನು ನಿಧಾನವಾಗಿ ತೀರಿಸಿದರಾಯಿತು ಎಂಬ ಧೋರಣೆಯಿಂದ ಬಹಳಷ್ಟು ಜನರು ಸುಮ್ಮನಾಗಿ ಬಿಡುತ್ತಾರೆ. ಆದರೆ, ಹಾಗೆ ಮಾಡದಿರಿ, ನೀವು ನಲವತ್ತನೇ ವಯಸ್ಸಿನಲ್ಲಿದ್ದಾಗ ನಿಮ್ಮ ಮೇಲೆ ಸಾಲ ಇತ್ತೆಂದರೆ ಮೊದಲಿಗೆ ಅದರಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಿರಿ. ಸಾಲದ ಮೊತ್ತ ಇರುವವರೆಗೂ ನಿವೃತ್ತಿಗೆಂದು ಹಣ ಕೂಡಿಡುವುದು ಬಲು ಕಷ್ಟವಾಗುತ್ತದೆ.

ಇದನ್ನೂ ಓದಿ:  Savings Account: ಉಳಿತಾಯ ಖಾತೆದಾರರಿಗೆ ಶುಭ ಸುದ್ದಿ! 10 ಸಾವಿರದವರೆಗೂ ಲಾಭ

ಅಮೆರಿಕದ ಒಂದು ಅಧ್ಯಯನದ ಪ್ರಕಾರ, ಅಲ್ಲಿನ ಸರಾಸರಿ ಉದ್ಯೋಗಿಯೊಬ್ಬ ಕನಿಷ್ಠ ತನ್ನ ಗಳಿಕೆಯ ಶೇ. 30 ರಷ್ಟು ಹಣವನ್ನು ಸಾಲ ಹಿಂತಿರುಗಿಸಲು ವ್ಯಯಿಸುತ್ತಾನೆ. ಈ ರೀತಿ ಮರುಪಾವತಿಯ ಹಣ ಪಾವತಿಸುವಾಗ ನಿವೃತ್ತಿಗೆಂದು ಎಲ್ಲಿಂದ ಹಣ ಉಳಿಸಲು ಸಾಧ್ಯವಾಗುತ್ತದೆ? ಹಾಗಾಗಿ ಮೊದಲಿಗೆ ಸಾಲವಿದ್ದರೆ ಅದನ್ನು ತುಂಬಿ ಅದರ ಹೊರೆಯಿಂದ ಮುಕ್ತರಾಗಿ ಇಲ್ಲವೆ ಯಾವುದೇ ಹೊಸ ಸಾಲದ ಬಗ್ಗೆ ಹಟಾತ್ತನೆ ನಿರ್ಧರಿಸಬೇಡಿ.

ನಿಮ್ಮ ಬಜೆಟ್‍ನಲ್ಲಿ ನಿವೃತ್ತಿ ನಿಧಿಗೆ ಪ್ರಾಧಾನ್ಯತೆ ನೀಡಿ
ಸಾಮಾನ್ಯವಾಗಿ ನೀವು ನಿಮ್ಮದೆ ಆದ ಬಜೆಟ್ ಹೊಂದಿರುತ್ತೀರಿ. ಆ ಬಜೆಟ್ ಎಂಬುದು ಹಲವು ಬಗೆಯ ಕೊಳ್ಳುವಿಕೆಗಳನ್ನು ಒಳಗೊಂಡಿರಬಹುದು. ಹಾಗಾಗಿ ಅನವಶ್ಯಕವಾದ ವಸ್ತುಗಳ ಖರೀದಿಯನ್ನು ಬದಿಗಿಟ್ಟು ಪ್ರತಿ ಬಾರಿ ನೀವು ಬಜೆಟ್ ರೂಪಿಸಿದಾಗ ಅದರಲ್ಲಿ ನಿವೃತ್ತಿ ನಿಧಿಗೆಂದಿರುವ ಯೋಜನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ.

ಪ್ರತಿ ತಿಂಗಳು ನೀವು ಗಳಿಸುವ ಆದಾಯವನ್ನು ನಿರ್ದಿಷ್ಟ ಚಟುವಟಿಕೆಗಳಿಗೆ ವ್ಯಯ ಮಾಡುತ್ತಿರುತ್ತೀರಿ. ಹಾಗಾಗಿ ಪ್ರತಿ ತಿಂಗಳು ನಿಮಗೆ ಅವಶ್ಯಕವಾಗಿ ಮಾಡಲೇ ಬೇಕಾಗಿರುವ ವ್ಯಯಗಳನ್ನು ಹೊರತುಪಡಿಸಿ ಉಳಿದ ಹಣವನ್ನು ಯಾವ ರೀತಿ ಸದುಪಯೋಗ ಮಾಡಿಕೊಳ್ಳಬಹುದೆಂದು ಯೋಜಿಸಿ ಹಾಗೂ ನಿವೃತ್ತಿಗಾಗಿ ಹಣ ಹೂಡಿಕೆ ಮಾಡುವುದು ಇದರಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಡಲಿ.

ಗಟ್ಟಿಯಾದ ನಿರ್ಧಾರ ಮಾಡಿ
ನೀವು ನಿಮ್ಮ ಆರಂಭಿಕ ಇಪ್ಪತ್ತು ವರ್ಷಗಳ ಕಾಲ ಹಾಯಾಗಿ ಹಣಗಳಿಸುತ್ತ, ಆನಂದಿಸುತ್ತ ಯಾವುದೇ ಭವಿಷ್ಯದ ಚಿಂತೆಯಿಲ್ಲದೆ ಕಳೆದಿರಬಹುದು. ಅದು ಈಗಾಗಲೇ ಆಗಿ ಹೋದ ಘಟನೆಯಾಗಿದ್ದು ಅದನ್ನು ಹಿಂಪಡೆಯುವುದು ಅಸಾಧ್ಯ. ಹಾಗೆಂದ ಮಾತ್ರಕ್ಕೆ ಈಗ ನೀವು ನಲವತ್ತು ವಯಸ್ಸಿನಲ್ಲಿದ್ದರೂ ಸಹ ಮುಂದಿನ ಇಪ್ಪತ್ತು ವರ್ಷಗಳನ್ನು ಮೊದಲಿನಂತೆಯೇ ಕಳೆಯಬೇಕೆಂದೇನಿಲ್ಲ. ಹಾಗಾಗಿ, "ಬೆಟರ್ ಲೇಟ್ ದ್ಯಾನ್ ನೆವರ್" ಎನ್ನುವಂತೆ ಲೇಟಾಗಿ ಪ್ರಾರಂಭಿಸಿದರೂ ಭವಿಷ್ಯಕ್ಕಾಗಿ ಅಥವಾ ನಿವೃತ್ತಿ ನಂತರದ ಜೀವನಕ್ಕಾಗಿ ಈಗಿನಿಂದಲೇ ಹಣ ಹೂಡಿಕೆ ಮಾಡುವ ಗಟ್ಟಿ ನಿರ್ಧಾರವನ್ನು ಮೊದಲು ಮಾಡಿಕೊಳ್ಳಿ.

ಇದನ್ನೂ ಓದಿ:  Stock Market: ಲಕ್ಷಕ್ಕೆ ಎರಡೂವರೆ ಕೋಟಿ ರಿಟರ್ನ್ಸ್! ಅಂದು ಈ ಷೇರು ಖರೀದಿಸಿದ್ದವರು ಈಗ ಮಿಲಿಯನೇರ್

ಈಗಂತೂ ಸಾಕಷ್ಟು ಹೂಡಿಕೆ ಅವಕಾಶಗಳು ಲಭ್ಯವಿದ್ದು ನಿಮ್ಮ ಮನಸ್ಥಿತಿ, ಸ್ಥಿತಿಗತಿ, ವಯಸ್ಸಿಗನುಸಾರವಾಗಿ ನಿಮಗೆ ಬಲು ಸೂಕ್ತವಾಗುವ ಹಾಗೂ ಇದ್ದುದರಲ್ಲೇ ದೀರ್ಘಾವಧಿಯ ಅಧಿಕ ಲಾಭ ನೀಡುವ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಆರ್ಥಿಕ ಸಲಹೆಗಾರರ ಸಲಹೆಗಳನ್ನು ಕೇಳಿ ಹಾಗೂ ನಿಮಗೆ ಸೂಕ್ತವಾದ ಯಾವುದಾದರೂ ಒಂದು ಯೋಜನೆಯಲ್ಲಿ ಹಣ ತೊಡಗಿಸಲು ಪ್ರಾರಂಭಿಸಿ. ಒಟ್ಟಿನಲ್ಲಿ ಇದನ್ನು ಮಾಡಲು ಮೊದಲಿಗೆ ನಿಮ್ಮನ್ನು ನೀವೇ ಮಾನಸಿಕವಾಗಿ ಗಟ್ಟಿಯಾದ ನಿರ್ಧಾರ ಮಾಡಿಕೊಳ್ಳುವುದು ಸಹಾಯಕವಾಗುತ್ತದೆ.

ಈ ಮೇಲಿನ ಎಲ್ಲ ಕ್ರಮಗಳನ್ನು ಬಲು ಶಿಸ್ತಿನಿಂದ ಪಾಲಿಸಿದಾಗ ನೀವು ನಲವತ್ತರಿಂದ ಅರವತ್ತು ವಯಸ್ಸಿನವರೆಗೆ ಪ್ರವೇಶಿಸುವವರೆಗೆ ನಿಮ್ಮ ಹಣವು ಸಾಕಷ್ಟು ಬೆಳೆದಿರುತ್ತದೆ ಹಾಗೂ ನೀವು ಲಕ್ಷಾಧೀಶ್ವರರಾಗಿ ನಿವೃತ್ತಿ ಹೊಂದಬಹುದಾಗಿದೆ.
Published by:Ashwini Prabhu
First published: