ವರ್ಷದಿಂದ ವರ್ಷಕ್ಕೆ ಈ ಬೇಸಿಗೆಕಾಲದಲ್ಲಿ (Summer) ಬಿಸಿಲಿನ ತಾಪಮಾನ (Temperature) ಹೆಚ್ಚುತ್ತಲೇ ಇದೆ, ಹೊರತು ಕಿಂಚಿತ್ತೂ ಕಡಿಮೆ ಆಗುತ್ತಿಲ್ಲವೆಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಬಿಸಿಲಿನ ವಾತಾವರಣ (Atmosphere) ಯಾರಿಗೆ ತಾನೇ ಖುಷಿ ನೀಡುತ್ತೆ ಹೇಳಿ? ಆದರೆ ಈ ಬೇಸಿಗೆಕಾಲ ಏರ್ ಕಂಡೀಷನರ್ (ಎಸಿ) ತಯಾರಕರಿಗೆ ಒಂದು ವರದಾನವಾಗಿದೆ. ಎರಡು ವರ್ಷಗಳ ಕೋವಿಡ್-19 (Covide-19) ಸಾಂಕ್ರಾಮಿಕ ರೋಗದ ಹಾವಳಿಯ ನಂತರ ಬಂಪರ್ ಋತುವಿಗೆ ಸಜ್ಜಾಗಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ದಾಖಲೆಯ ಮಾರಾಟವನ್ನು (sale) ವರದಿ ಮಾಡಿದ್ದಾರೆ, ಏಕೆಂದರೆ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ತುಂಬಾನೇ ಹೆಚ್ಚಾಗಿದ್ದು, ಜನರು ಮನೆಯಲ್ಲಿ ಕೂತರೂ ಅವರ ಮೈಯಿಂದ ಬೆವರು ಸುರಿಯುತ್ತಿದೆ.
ಈ ಉದ್ಯಮಕ್ಕೆ ಹಲವಾರು ಪ್ರಮುಖ ಘಟಕಗಳ ಪೂರೈಕೆದಾರ ಚೀನಾದಲ್ಲಿ ಲಾಕ್‌ಡೌನ್ ಗಳಿಂದಾಗಿ ಎಸಿ ತಯಾರಕರು ಪೂರೈಕೆ ಸರಪಳಿ ನಿರ್ಬಂಧಗಳೊಂದಿಗೆ ಹೋರಾಡುತ್ತಿರುವಾಗಲೂ ಹೆಚ್ಚಿನ ಮಾರಾಟವಾಗಿದೆ.
ಬಿಸಿಲಿನ ಬಗ್ಗೆ ಸಿಇಎಎಂಎ ಅಧ್ಯಕ್ಷ ಎರಿಕ್ ಬ್ರಗಾಂಜಾ ಹೇಳಿದ್ದೇನು?
ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲೈಯನ್ಸಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಸಿಇಎಎಂಎ) ಅಧ್ಯಕ್ಷ ಎರಿಕ್ ಬ್ರಗಾಂಜಾ ಅವರು ಮಾತನಾಡುತ್ತಾ “ಈ ವರ್ಷ ಅಭೂತಪೂರ್ವ ಬೇಸಿಗೆಯನ್ನು ನಾವು ನೋಡಿದ್ದೇವೆ. ಏಪ್ರಿಲ್ ನಲ್ಲಿ ನಾವು ಸಾಮಾನ್ಯವಾಗಿ ಕಾಣುವ ಬಿಸಿಲು ಮತ್ತು ಶಾಖವನ್ನು ಈ ವರ್ಷದ ಮಾರ್ಚ್ ನಲ್ಲಿಯೇ ನಾವು ನೋಡಿದ್ದೇವೆ" ಎಂದು ಹೇಳಿದ್ದಾರೆ.
"ಇದರ ಪರಿಣಾಮವಾಗಿ, ಎಸಿ ಮಾರಾಟದಲ್ಲಿ ದೊಡ್ಡ ಹೆಚ್ಚಳವನ್ನು ನಾವು ನೋಡಿದ್ದೇವೆ ಮತ್ತು ಈ ವರ್ಷದ ಜನವರಿಯಿಂದ ಜೂನ್ ವರೆಗೆ ಆಗುವ ಮಾರಾಟವು ಕಳೆದ ವರ್ಷಕ್ಕಿಂತ ತುಂಬಾನೇ ಹೆಚ್ಚಾಗಿದೆ" ಎಂದು ಹೇಳಿದರು. ಏಪ್ರಿಲ್ ನಲ್ಲಿ ಈ ಉದ್ಯಮವು 1.75 ಮಿಲಿಯನ್ ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ, ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಆದ ಮಾರಾಟದ ದ್ವಿಗುಣವಾಗಿದೆ ಎಂದು ಸಿಇಎಎಂಎ ಹೇಳಿದೆ.
ಇದನ್ನೂ ಓದಿ: Facebook ಬಳಕೆದಾರರಿಗೆ ಬ್ಯಾಡ್ ನ್ಯೂಸ್! ಇವೆರಡು ಫೀಚರ್ಸ್ ಮೇ 31ರಿಂದ ಸಿಗಲ್ಲ!
ಬ್ರಗಾಂಜಾ ಅವರ ಪ್ರಕಾರ, ಈ ಉದ್ಯಮವು ಕಳೆದ ವರ್ಷಕ್ಕಿಂತ ಶೇಕಡಾ 50 ರಿಂದ 60 ರಷ್ಟು ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಮತ್ತು ಕೋವಿಡ್ ಪೂರ್ವ ಅವಧಿಗೆ ಹೋಲಿಸಿದರೆ ಸುಮಾರು 25 ರಿಂದ 30 ಪ್ರತಿಶತದಷ್ಟು ಹೆಚ್ಚಳವಾಗಲಿದೆ. "ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಾವು ಕಳೆದ ಗರಿಷ್ಠ ಋತುಗಳನ್ನು ಕಳೆದುಕೊಂಡಿದ್ದೇವೆ, ಆದರೆ ಈ ಬಾರಿ ಯಾವುದೇ ಅಡೆತಡೆಗಳನ್ನು ನಾವು ನಿರೀಕ್ಷಿಸುವುದಿಲ್ಲ" ಎಂದು ಅವರು ಹೇಳಿದರು.
122 ವರ್ಷಗಳಲ್ಲಿಯೇ ಅತ್ಯಂತ ತಾಪಮಾನ
ಭಾರತದ ಹಲವಾರು ರಾಜ್ಯಗಳು ತೀವ್ರ ತಾಪಮಾನದಲ್ಲಿ ಒಣಗಿವೆ, ಏಪ್ರಿಲ್ ತಿಂಗಳು ಕಳೆದ 122 ವರ್ಷಗಳಲ್ಲಿ ದಾಖಲಾದ ಅತ್ಯಂತ ಹೆಚ್ಚು ತಾಪಮಾನವಿರುವ ತಿಂಗಳು ಆಗಿದೆ. ಭಾರತೀಯ ಹವಾಮಾನ ಇಲಾಖೆ ಬೇಸಿಗೆಯ ಉಳಿದ ದಿನಗಳಲ್ಲಿ ಇಂತಹ ಹೆಚ್ಚಿನ ಸ್ಪೆಲ್ ಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಹ್ಯಾವೆಲ್ಸ್ ಇಂಡಿಯಾ, ವೋಲ್ಟಾಸ್ ಮತ್ತು ಗೋಡ್ರೆಜ್ ಅಪ್ಲೈಯನ್ಸಸ್ ನಂತಹ ಎಸಿ ತಯಾರಕರು ಇತ್ತೀಚಿನ ತಿಂಗಳುಗಳಲ್ಲಿ ದಾಖಲೆಯ ಮಾರಾಟವನ್ನು ವರದಿ ಮಾಡಿದ್ದಾರೆ. ಉದಾಹರಣೆಗೆ, ಹ್ಯಾವೆಲ್ಸ್ ಏಪ್ರಿಲ್ ನಲ್ಲಿ 250,000 ಯುನಿಟ್ ಗಳನ್ನು ಮಾರಾಟ ಮಾಡಿದೆ, ಇದು ಒಂದು ತಿಂಗಳಲ್ಲಿ ಇದುವರೆಗಿನ ಅತ್ಯಧಿಕ ಮಾರಾಟವಾಗಿದೆ.
ಇದನ್ನೂ ಓದಿ: Apple Foldable Phone: ಸ್ಯಾಮ್ಸಂಗ್ ಫೋಲ್ಡೆಬಲ್ಗಿಂತ ಆ್ಯಪಲ್ ಮಡಚುವ ಫೋನ್ ಇಷ್ಟೊಂದು ಗ್ರ್ಯಾಂಡ್ ಆಗಿ ಬರಲಿದ್ಯಾ?
ಕಳೆದ ಋತುಗಳಲ್ಲಿ ಶಾಲೆಗಳು ಮತ್ತು ಕಚೇರಿಗಳು ತೆರೆದಿರಲಿಲ್ಲ ಆದರೆ ಈಗ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತಿರುವುದರಿಂದ ಗ್ರಾಹಕರಿಂದ ಮಾತ್ರವಲ್ಲದೆ ಅನೇಕ ವ್ಯವಹಾರಗಳಿಂದಲೂ ಸಹ ಕೋವಿಡ್-ಸಂಬಂಧಿತ ಚಲನಶೀಲತೆ ನಿರ್ಬಂಧಗಳಿಂದಾಗಿ ಸಾಕಷ್ಟು ಬೇಡಿಕೆ ಇದೆ ಎಂದು ಹ್ಯಾವೆಲ್ಸ್ ಮಾಲೀಕತ್ವದ ಲಾಯ್ಡ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಲೋಕ್ ಟಿಕೂ ಹೇಳಿದ್ದಾರೆ.
ಅಂತೆಯೇ, ವೋಲ್ಟಾಸ್ ಈ ಋತುವಿನಲ್ಲಿ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ವೋಲ್ಟಾಸ್ ವಕ್ತಾರರ ಪ್ರಕಾರ, ಮಾರಾಟವು ಹೆಚ್ಚಾಗಿದೆ ಮತ್ತು ಏಪ್ರಿಲ್ 2019 ರಲ್ಲಿನ ಅದೇ ಪ್ರಮಾಣವನ್ನು ಮುಟ್ಟಿದೆ, ಇದು ದಶಕದ ಅತ್ಯಂತ ಬಿಸಿಯಾದ ಬೇಸಿಗೆಯನ್ನು ದಾಖಲಿಸಿದೆ.
ಘಟಕಗಳ ಪೂರೈಕೆಯಲ್ಲಿ ಕೊರತೆಗಳು
ಚೀನಾದಲ್ಲಿ ಕೋವಿಡ್ ಸಂಬಂಧಿತ ಲಾಕ್ಡೌನ್ ಗಳಿಂದಾಗಿ ಸೆಮಿಕಂಡಕ್ಟರ್ ಗಳು, ಕಂಟ್ರೋಲರ್ ಗಳು ಮತ್ತು ಕಂಪ್ರೆಸರ್ ಗಳಂತಹ ಹಲವಾರು ಪ್ರಮುಖ ಘಟಕಗಳ ಪೂರೈಕೆಯಲ್ಲಿ ಉದ್ಯಮವು ಅದೇ ಸಮಯದಲ್ಲಿ ಕೊರತೆಯನ್ನು ಎದುರಿಸುತ್ತಿದೆ.
"ಘಟಕ ಪರಿಸರ ವ್ಯವಸ್ಥೆಯು ಚೀನಾದ ಮೇಲಿನ ಅವಲಂಬನೆಯನ್ನು ಗಮನದಲ್ಲಿಟ್ಟುಕೊಂಡು, ಪೂರೈಕೆ ಸರಪಳಿ ಒತ್ತಡದಲ್ಲಿದೆ. ನಾವು ಕೆಲವು ಘಟಕಗಳಲ್ಲಿ ಕಡಿಮೆ ಪೂರೈಕೆ ಸನ್ನಿವೇಶವನ್ನು ನೋಡುತ್ತಿದ್ದೇವೆ, ಮತ್ತು ಲಾಕ್ಡೌನ್ ಜೂನ್ ನಲ್ಲಿಯೂ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಚೀನಾ ತನ್ನ ಲಾಕ್ಡೌನ್ ನಿರ್ಬಂಧಗಳನ್ನು ತೆಗೆದು ಹಾಕಿದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಹೆಚ್ಚು ಸಮಯ ತೆಗೆದು ಕೊಳ್ಳಬಹುದು" ಎಂದು ಗೋಡ್ರೆಜ್ ಅಪ್ಲೈಯನ್ಸಸ್ ನ ವ್ಯವಹಾರ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ಹೇಳಿದ್ದಾರೆ.
ಬೆಲೆ ಏರಿಕೆ
ಉತ್ಪನ್ನಗಳ ಕೊರತೆ ಮತ್ತು ಪೂರೈಕೆ ಸರಪಳಿ ನಿರ್ಬಂಧಗಳು ಸಹ ಬೆಲೆ ಏರಿಕೆಗೆ ಕಾರಣವಾಗಿವೆ. ಸಿಇಎಎಂಎ ಪ್ರಕಾರ, ಹಣದುಬ್ಬರದ ಒತ್ತಡಗಳೊಂದಿಗೆ ಹೋರಾಡುತ್ತಿರುವ ಕಾರಣ ಈ ವಿಭಾಗದಾದ್ಯಂತದ ಉತ್ಪಾದಕರು ಜನವರಿಯಿಂದ ಸುಮಾರು 10 ರಿಂದ 12 ಪ್ರತಿಶತದಷ್ಟು ಬೆಲೆಗಳನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: Elon Musk Twitter: ಸದ್ಯ ಟ್ವಿಟರ್ ಖರೀದಿಸಲ್ಲ ಎಂದ ಎಲಾನ್ ಮಸ್ಕ್! ಶಾಕಿಂಗ್ ಹೇಳಿಕೆಗೆ ಏನು ಕಾರಣ?
ಆದಾಗ್ಯೂ, ಬೆಲೆ ಏರಿಕೆ ಮತ್ತು ಅಂಗಡಿಗಳಿಂದ ಕೆಲವು ಮಾದರಿಗಳ ಅನುಪಸ್ಥಿತಿಯು ಗ್ರಾಹಕರನ್ನು ಎಸಿಗಳನ್ನು ಖರೀದಿಸುವುದರಿಂದ ತಡೆಯಲಿಲ್ಲ ಎಂದು ವಿಜಯ್ ಸೇಲ್ಸ್ ಅವರು ವರದಿ ಮಾಡಿದ್ದಾರೆ.
ಬ್ರ್ಯಾಂಡ್ ಗಳ ಕೆಲವು ಮಾದರಿಗಳ ಕೊರತೆ
"ಕೆಲವು ಬ್ರ್ಯಾಂಡ್ ಗಳ ಕೆಲವು ಮಾದರಿಗಳು ಕೊರತೆಯಲ್ಲಿವೆ, ಆದರೆ ಶಾಖವನ್ನು ಗಮನಿಸಿದರೆ, ಗ್ರಾಹಕರು ಮಾದರಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಪರ್ಯಾಯಗಳನ್ನು ಖರೀದಿಸಲು ಮುಕ್ತರಾಗಿದ್ದಾರೆ" ಎಂದು ವಿಜಯ್ ಸೇಲ್ಸ್ ನ ನಿರ್ದೇಶಕ ನಿಲೇಶ್ ಗುಪ್ತಾ ಹೇಳಿದರು.
ಇದನ್ನೂ ಓದಿ: Work From Home: ಕೊರೊನಾ 4ನೇ ಅಲೆ ಆತಂಕ: ಮುಂದುವರಿಯುತ್ತಾ ವರ್ಕ್ ಫ್ರಂ ಹೋಮ್?
ಬೆಲೆ ಏರಿಕೆಯಿಂದ ಗ್ರಾಹಕರು ಹೆಚ್ಚು ವಿಚಲಿತರಾಗುವುದಿಲ್ಲ. "ನಮ್ಮ ಮೂಲಕ ಖರೀದಿಸುವ ಸುಮಾರು 70 ಪ್ರತಿಶತದಷ್ಟು ಗ್ರಾಹಕರು ಹೇಗಾದರೂ ಇಎಂಐ ಆಯ್ಕೆಯನ್ನು ಪಡೆಯುತ್ತಾರೆ, ಆದ್ದರಿಂದ ಬೆಲೆ ಏರಿಕೆಯು ಅವರಿಗೆ ಹೆಚ್ಚು ಮುಖ್ಯವಲ್ಲ" ಎಂದು ಗುಪ್ತಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ