ನಿವೃತ್ತಿ (Retirment) ಯೋಜನೆ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಭವಿಷ್ಯಕ್ಕಾಗಿ (Future) ಬುದ್ಧಿವಂತಿಕೆಯಿಂದ ಹಣವನ್ನು ಉಳಿಸುವುದು ಮತ್ತು ಹೂಡಿಕೆ (Investment) ಮಾಡುವುದು ಬಹಳ ಮುಖ್ಯ. ಅಂತಹ ಅಗತ್ಯಗಳನ್ನು ಪೂರೈಸಲು ಭಾರತ ಸರ್ಕಾರವು ಉದ್ಯೋಗಿಗಳ (Employee) ಭವಿಷ್ಯ ನಿಧಿ (EPFO) ಯೋಜನೆಯನ್ನು ಪ್ರಾರಂಭಿಸಿದೆ. ಖಾಸಗಿ ವಲಯದ ಉದ್ಯೋಗಿಗಳು ಇಪಿಎಫ್ ನಿವೃತ್ತಿ ಪ್ರಯೋಜನಗಳನ್ನು ಪಡೆಯಬಹುದು. ಸರ್ಕಾರಿ ನೌಕರರೂ ಪಿಂಚಣಿ (Pension) ಪಡೆಯಬಹುದು. ಇಪಿಎಫ್ ಭವಿಷ್ಯಕ್ಕಾಗಿ ಉಳಿಸಲು ಉತ್ತಮ ಮಾರ್ಗವಾಗಿದೆ. ಇದು ಚಂದಾದಾರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ನಿವೃತ್ತಿಯಾದ್ಮೇಲೆ ಚೆನ್ನಾಗಿರಬೇಕು ಅಂದ್ರೆ ಹೀಗೆ ಮಾಡಿ!
ನಿಮ್ಮ ಉಳಿತಾಯದಿಂದ ಹೆಚ್ಚಿನದನ್ನು ಪಡೆಯಲು ಇಪಿಎಫ್ ಯೋಜನೆ, ಕೊಡುಗೆಗಳು ಮತ್ತು ಬಡ್ಡಿದರಗಳನ್ನು ಅರ್ಥಮಾಡಿಕೊಳ್ಳಿ. ಇಪಿಎಫ್ ಕ್ಯಾಲ್ಕುಲೇಟರ್ ಇದಕ್ಕೆ ಉಪಯುಕ್ತವಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) EPF ಯೋಜನೆಯನ್ನು ನಿರ್ವಹಿಸುತ್ತದೆ. ಪ್ರತಿ ಚಂದಾದಾರರಿಗೆ ವಿಶಿಷ್ಟ ಖಾತೆ ಸಂಖ್ಯೆ (UAN) ಅನ್ನು ನಿಗದಿಪಡಿಸುತ್ತದೆ. ಈ ಖಾತೆಗೆ ಉದ್ಯೋಗದಾತ ಮತ್ತು ಉದ್ಯೋಗಿ ಮಾಡಿದ ಮಾಸಿಕ ಕೊಡುಗೆಗಳನ್ನು ಇದು ನಿರ್ವಹಿಸುತ್ತದೆ. ಇಪಿಎಫ್ ಖಾತೆಯಲ್ಲಿರುವ ಹಣದ ಬಗ್ಗೆ ನಿಗಾ ಇಡುವ ಮೂಲಕ ಭವಿಷ್ಯಕ್ಕಾಗಿ ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಯಾರಿಂದ ಎಷ್ಟು ಕೊಡುಗೆ ಸಿಗುತ್ತೆ?
ಭವಿಷ್ಯ ನಿಧಿ ಯೋಜನೆಯಡಿ ಬರುವ ಉದ್ಯೋಗಿಗಳು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.12ರಷ್ಟು ಕೊಡುಗೆಯನ್ನು ಠೇವಣಿ ಇಡಬೇಕು. ಅವರ ಉದ್ಯೋಗದಾತರೂ ಸಹ 12% ಕೊಡುಗೆ ನೀಡಬೇಕು. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಅದರಲ್ಲಿ 8.33% ಉದ್ಯೋಗಿಗಳುಪಿಂಚಣಿ ಯೋಜನೆ (ಇಪಿಎಸ್), ಉಳಿದ 3.67% ಉದ್ಯೋಗಿಯ ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತನು ಉದ್ಯೋಗಿಯ ಪಾಲಿಗೆ ಸಮನಾದ ಇಪಿಎಫ್ ಯೋಜನೆಗೆ ಕೊಡುಗೆ ನೀಡಬೇಕು.
ಇದನ್ನೂ ಓದಿ: ಇಪಿಎಫ್ ಅಕೌಂಟ್ ಹೊಂದಿರುವವರಿಗೆ ಎಚ್ಚರಿಕೆ, ಹೊಸ ನಿಯಮ ಜಾರಿಯಾಗಿದೆ!
ಸದ್ಯಕ್ಕೆ ಇಪಿಎಫ್ನಲ್ಲಿರುವ ಬಡ್ಡಿದರವೆಷ್ಟು?
ಇಪಿಎಫ್ ಬಡ್ಡಿ ದರಗಳು ಆಗಾಗ ಬದಲಾಗುತ್ತಿರುತ್ತವೆ. EPF ಮೇಲಿನ ಬಡ್ಡಿ ದರವನ್ನು EPFO ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚಿಸಿದ ನಂತರ ನಿಗದಿಪಡಿಸುತ್ತದೆ. 2022-2023ರ ಆರ್ಥಿಕ ವರ್ಷದ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇಕಡಾ 8.15 ಕ್ಕೆ ನಿಗದಿಪಡಿಸಲಾಗಿದೆ.
EPF ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಉದಾಹರಣೆಯೊಂದಿಗೆ ನೋಡೋಣ. ಉದ್ಯೋಗಿಯ ಮಾಸಿಕ ವೇತನವು ಡಿಎ ಸೇರಿದಂತೆ ರೂ.1,00,000 ಎಂದು ಭಾವಿಸೋಣ. ಅವರ EPF ಖಾತೆಗೆ ಉದ್ಯೋಗಿಯ ಕೊಡುಗೆ 12%, ಅಂದರೆ ರೂ.12,000 ಕಡಿತವಾಗುತ್ತೆ. ಉದ್ಯೋಗಿಯ EPF ಖಾತೆಗೆ ಉದ್ಯೋಗದಾತರ ಕೊಡುಗೆಯು 3.67% ಆಗಿದೆ, ಇದು ರೂ.3,670 ಆಗಿದೆ.
EPS ಗೆ ಮಾಲೀಕರ ಕೊಡುಗೆಯು ರೂ.40,000 ರಲ್ಲಿ 8.33% ಆಗಿದೆ, ಅಂದರೆ ರೂ.8,330. ಉದ್ಯೋಗಿಯ ಇಪಿಎಫ್ ಖಾತೆಗೆ ಒಟ್ಟು ರೂ.15,670 ಜಮಾ ಆಗುತ್ತದೆ. ತಿಂಗಳಿಗೆ ಅನ್ವಯವಾಗುವ ಬಡ್ಡಿ ದರವು 8.15%/12= 0.679% ಆಗಿದೆ. ಬಡ್ಡಿ ದರವು ಏರಿಳಿತಗೊಂಡಾಗ, ಇಪಿಎಫ್ ಕ್ಯಾಲ್ಕುಲೇಟರ್ ಉಳಿತಾಯವನ್ನು ಪತ್ತೆಹಚ್ಚಲು ಮತ್ತು ನಿವೃತ್ತಿಯ ಸಮಯದಲ್ಲಿ ನೀವು ಎಷ್ಟು ಸ್ವೀಕರಿಸುತ್ತೀರಿ ಎಂದು ಊಹಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ