Cooking Oil Price Down: ಪೆಟ್ರೋಲ್​-ಡೀಸೆಲ್​ ಬಳಿಕ ಅಡುಗೆ ಎಣ್ಣೆ ಬೆಲೆ ಇಳಿಸಿದ ಕೇಂದ್ರ ಸರ್ಕಾರ

Cooking Oil Price Down: ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದೀಗ ಈ ಸಂಭ್ರಮದ ಬೆನ್ನಲ್ಲೇ ಕೇಂದ್ರ ಮತ್ತೊಂದು ಗಿಫ್ಟ್ ನೀಡಿದೆ. ದುಬಾರಿಯಾಗಿದ್ದ ಅಡುಗೆ ಎಣ್ಣೆ ಬೆಲೆ ಕೂಡ ಇಳಿಕೆ ಮಾಡಲಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Cooking Oil Price Down: ಕೊರೋನಾ(Corona)ದಿಂದಾಗಿ ಎಲ್ಲ ವಸ್ತುಗಳ ಮೇಲೆ ಬೆಲೆ ಏರಿಕೆಯಾಗಿ ಜನಸಾಮನ್ಯರು ಪರದಾಡುವಂತಾಗಿತ್ತು. ಪೆಟ್ರೋಲ್​, ಡೀಸೆಲ್​(Petrol-Diesel) ಬೆಲೆ ಗಗನಕ್ಕೇರಿತ್ತು. ಆದರೆ ಕೇಂದ್ರ ಸರ್ಕಾರ(Central Government) ಪೆಟ್ರೋಲ್​-ಡೀಸೆಲ್ ಬೆಲೆ ಇಳಿಸಿ ಜನರಿಗೆ ದೀಪಾವಳಿ ಗಿಫ್ಟ್(Deepavali Gift)​ ನೀಡಿತ್ತು. ಜನಸಾಮನ್ಯರು ಬೆಲೆ ಇಳಿಕೆಯಿಂದ ಕೊಂಚ ರಿಲ್ಯಾಕ್ಸ್​ ಆಗಿದ್ದರು. ಇದೀಗ ಕೇಂದ್ರ ಸರ್ಕಾರ ಜನಸಾಮನ್ಯರಿಗೆ ಹಬ್ಬಕ್ಕೆ ಡಬಲ್​ ಧಮಾಕ  ನೀಡಿದೆ. ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದೀಗ ಈ ಸಂಭ್ರಮದ ಬೆನ್ನಲ್ಲೇ ಕೇಂದ್ರ ಮತ್ತೊಂದು ಗಿಫ್ಟ್ ನೀಡಿದೆ. ದುಬಾರಿಯಾಗಿದ್ದ ಅಡುಗೆ ಎಣ್ಣೆ(Cooking Oil) ಬೆಲೆ ಕೂಡ ಇಳಿಕೆ ಮಾಡಲಾಗಿದೆ.  ಅಡುಗೆ ಎಣ್ಣೆ ಬೆಲೆ ಹಲವು ರಾಜ್ಯಗಳಲ್ಲಿ ಇಳಿಕೆಯಾಗಿದೆ. ಗರಿಷ್ಠ 20 ರೂಪಾಯಿ ವರೆಗೆ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕಾ ವಿತರಣಾ ಇಲಾಖೆ ಕಾರ್ಯದರ್ಶಿ(Secretary of the Department of Food and Public Distribution) ಸುಧಾಂಶು ಪಾಂಡೆ( Sudhanshu Pandey)ಹೇಳಿದ್ದಾರೆ.

ಸೆಸ್​, ಕೃಷಿ ಸೆಸ್​ ಇಳಿಸಿದ ಕೇಂದ್ರ ಸರ್ಕಾರ

ಅಡುಗೆ ಎಣ್ಣೆ ಮೇಲಿನ ಮೂಲ ಸೆಸ್ ಹಾಗೂ ಕೃಷಿ ಸೆಸ್ ಕೇಂದ್ರ ಸರ್ಕಾರ ಇಳಿಸಿದೆ, ಇದರ ಪರಿಣಾಮ ದೇಶದಲ್ಲಿ ಅಡುಗೆ ಎಣ್ಣೆ ದರ ಇಳಿಕೆಯಾಗಿದೆ. ರಾಜ್ಯದಿಂದ ರಾಜ್ಯಕ್ಕೆ ದರಗಳಲ್ಲಿ ವ್ಯತ್ಯಾಸವಾಗಲಿದೆ. ಅಡುಗೆ ಎಣ್ಣೆಗಳಾದ ಸೂರ್ಯಕಾಂತಿ, ಸೊಯಾಬಿನ್ ಎಣ್ಣೆ ಮೇಲಿದ್ದ ಶೇಕಡಾ 2.5 ರಷ್ಟಿದ್ದ ಮೂಲ ಕರವನ್ನು ಶೂನ್ಯಕ್ಕೆ ಇಳಿಸಲಾಗಿದೆ.ಸೂರ್ಯಕಾಂತಿ ಎಣ್ಣೆ ಮೇಲಿದ್ದ ಶೇಕಡಾ 5ಕ್ಕ ಇಳಿಸಲಾಗಿದೆ.  ತಾಳೆ ಎಣ್ಣೆ ಮೇಲಿದ್ದ ಶೇಕಡಾ 20 ರಷ್ಟಿದ್ದ ಕೃಷಿ ಕರವನ್ನು 7.5ಕ್ಕೆ ಇಳಿಸಲಾಗಿದೆ.  ಇದರಿಂದ ಅಡುಗೆ ಎಣ್ಣೆ ಮೇಲಿನ ದರ ಕೆಲ ರಾಜ್ಯಗಳಲ್ಲಿ ಗರಿಷ್ಠ 20 ರೂಪಾಯಿ ಇಳಿಕೆಯಾಗಿದೆ. ಪೆಟ್ರೋಲ್​-ಡೀಸೆಲ್ ದರ ಇಳಿಕೆಯಾಗಿದ್ದಕ್ಕೆ ಸಂತಸ ಪಟ್ಟ ಜನಸಾಮನ್ಯರಿಗೆ ಮತ್ತೆ ಈಗ ಖುಷಿ ತಂದಿದೆ.

ಇದನ್ನು ಓದಿ : ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತ: ಕೇಂದ್ರ ಸರ್ಕಾರಕ್ಕೆ 45,000 ಕೋಟಿ ರೂ. ಹೊರೆ!

ಇನ್ನು ಯಾವ ಎಣ್ಣೆಗೆ ಯಾವ ರಾಜ್ಯದಲ್ಲಿ ಎಷ್ಟು ಬೆಲೆ ಕಡಿತಗೊಂಡಿದೆ ಅಂತ ಇಲ್ಲಿದೆ.

ಶೇಂಗಾ ಎಣ್ಣೆ ಬೆಲೆ ಇಳಿಕೆ
- ಸಾಗರ್ , ಮಧ್ಯಪ್ರದೇಶ - 10 ರೂ.
- ಜೊವಾಯಿ  ಮೇಘಾಲಯ- 10 ರೂ.
- ಕಡಲೂರು, ತಮಿಳುನಾಡು - 10 ರೂ.
- ಆಲಿಗಢ್, ಉತ್ತರ ಪ್ರದೇಶ -  5 ರೂ.
- ದೆಹಲಿ -  7 ರೂ.
- ಕರೀಂನಗರ, ತೆಲಂಗಣಾ- 5 ರೂ.

ತಾಳೆ ಎಣ್ಣೆಬೆಲೆ ಇಳಿಕೆ
- ಆಲಿಘಡ್  - 18 ರೂ.
- ಜೊವಾಯಿ, ಮೇಘಾಲಯ-10 ರೂ.
- ಕಡಲೂರು, ತಮಿಳುನಾಡು -7 ರೂ.
- ದೆಹಲಿ – 6 ರೂ.
- ದಿಂಡಿಗಲ್, ತಮಿಳುನಾಡು - 5 ರೂ.

ಸೋಯಾ ಎಣ್ಣೆ ದರ ಇಳಿಕೆ
- ದುರ್ಗಾ, ಛತ್ತೀಸ್ ಗಢ -11 ರೂ.
- ಸಾಗರ್ , ಮಧ್ಯಪ್ರದೇಶ - 7 ರೂ.
- ನಾಗ್ಪುರ , ಮಹಾರಾಷ್ಟ್ರ -  7 ರೂ.
- ದೆಹಲಿ- 5 ರೂ.
- ಲೂಧಿಯಾನ, ಪಂಜಾಬ್ -  5 ರೂ.
- ಆಲಿಘಡ್, ಉತ್ತರ ಪ್ರದೇಶ -  5 ರೂ.
- ಜೊವಾಯಿ, ಮೇಘಾಲಯ - 5 ರೂ.

ಸೂರ್ಯಕಾಂತಿ ಎಣ್ಣೆ ದರ  ಇಳಿಕೆ
- ಜೊವಾಯಿ , ಮೇಘಾಲಯ -20 ರೂ.
- ದೆಹಲಿ – 10 ರೂ.
- ರೂರ್ಕೆಲಾ, ಒಡಿಶಾ -  5 ರೂ.

ಇದನ್ನು ಓದಿ : ದೀಪಾವಳಿ‌ ದಿನ ಇಂಧನ ಬೆಲೆ ಭಾರೀ ಇಳಿಕೆ, ಯಾವ್ಯಾವ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ?

ಸಗಟು ಮಾರಾಟ ದರ ಇಳಿಕೆ

ಪ್ರಮುಖ ಅಡುಗೆ ಎಣ್ಣೆ ಮಾರಾಟಗಾರರಾದ ಅದಾನಿ ವಿಲ್ಮರ್ ಮತ್ತು ರುಚಿ ಇಂಡಸ್ಟ್ರೀಸ್ ಸಗಟು ಮಾರಾಟ ದರವನ್ನು ಪ್ರತಿ ಲೀಟರ್ ಗೆ 4 ರಿಂದ 7 ರೂ. ಕಡಿತಗೊಳಿಸಿವೆ. ಹೈದರಾಬಾದ್​​ನ ಜೆಮಿನಿ ಇಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ದೆಹಲಿಯ ಮೋದಿ ನ್ಯಾಚುರಲ್ಸ್, ಗೋಕುಲ್ ರಿಫಾಯಿಲ್ಸ್ ಅಂಡ್ ಸಾಲ್ವೆಂಟ್, ವಿಜಯ್ ಸೋಲ್ ವೆಕ್ಸ್, ಗೋಕುಲ್ ಅಗ್ರೋ ರಿಸೋಸರ್ಸ್ ಮತ್ತು ಎನ್ .ಕೆ ಪ್ರೊಟೀನ್ಸ್ ಸೇರಿ ಇತರೆ ಹಲವು ಪ್ರಮುಖ ಮಾರಾಟಗಾರರು  ಅಡುಗೆ ಎಣ್ಣೆಗಳ ಸಗಟು ಮಾರಾಟ ದರವನ್ನು ಇಳಿಕೆ ಮಾಡಿವೆ.
Published by:Vasudeva M
First published: