Covid ನಂತರ ಉದ್ಯಮವಾದ ಯೋಗ, ಲಾಭದಾಯಕ ಹಾದಿಯಲ್ಲಿದೆ ಈ ʻಹ್ಯಾಬಿಲ್ಡ್ʼ ಕಂಪನಿ!

ಸಕ್ಸಸ್​ ಮ್ಯಾನ್​

ಸಕ್ಸಸ್​ ಮ್ಯಾನ್​

ಹಲವಾರು ಯೋಗ ತರಬೇತುದಾರರು ಈಗ ತಮ್ಮದೇ ಯೋಗ ಸ್ಟಾರ್ಟ್‌ಅಪ್‌ ಅನ್ನು ಆರಂಭಿಸುತ್ತಿದ್ದಾರೆ.

  • Share this:

ಕೊರೋನಾದ (Covid - 19) ನಂತರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ದೈಹಿಕವಾಗಿ ಚಟುವಟಿಕೆ ಇಂದಿರಲು ಯೋಗ, ಧ್ಯಾನ, ಜಿಮ್‌ ಅಂತೆಲ್ಲಾ ಉತ್ತಮ ಅಭ್ಯಾಸಗಳು ಗಣನೀಯವಾಗಿ ಏರಿಕೆಯಾಗಿದೆ. ಮೊದಲೆಲ್ಲಾ ಸಣ್ಣ ಮಕ್ಕಳಿಗೆ ಯೋಗ, ಧ್ಯಾನ ಹೇಳಿಕೊಡುವ ಸಣ್ಣ ಸಣ್ಣ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಪ್ರವೃತ್ತಿ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಹೌದು, 2020ರಲ್ಲಿ ಆರಂಭವಾದ ಆನ್‌ಲೈನ್ ಯೋಗ (Online Exercise), ತರಬೇತಿ‌ ತರಗತಿಗಳು ಹಲವಾರು ಯೋಗ ಪಟುಗಳಿಗೆ ಇಂದು ಲಾಭದಾಯಕ ವೃತ್ತಿಜೀವನವಾಗಿದೆ. ಹವ್ಯಾಸವಾಗಿ (Hobby) ಹೇಳಿಕೊಡುತ್ತಿದ್ದ ಹಲವರು ಇದನ್ನೇ ಪ್ರಮುಖ ವೃತ್ತಿ ಆಯ್ಕೆಯಾನ್ನಾಗಿಸಿಕೊಂಡಿದ್ದಾರೆ. ಹೌದು, ಹಲವಾರು ಯೋಗ ತರಬೇತುದಾರರು ಈಗ ತಮ್ಮದೇ ಯೋಗ ಸ್ಟಾರ್ಟ್‌ಅಪ್‌ (Startup) ಅನ್ನು ಆರಂಭಿಸುತ್ತಿದ್ದಾರೆ.


ಐಐಟಿ-ಬಿಎಚ್‌ಯು ಇಂಜಿನಿಯರ್ ಸೌರಭ್ ಬೋತ್ರಾ ಮತ್ತು ನಾಗ್ಪುರದ ಫಿಟ್‌ನೆಸ್ ಬಫ್ ಪ್ರಮೋದ್ ಯಾದವ್ ಎಂಬುವವರು ಸದ್ಯ ಇದೇ ಹಾದಿಯಲ್ಲಿ ಮುಂದುವರಿದಿದ್ದಾರೆ.


ಲಾಕ್‌ಡೌನ್‌ ಸಮಯದಲ್ಲಿ ಆನ್‌ಲೈನ್‌ನಲ್ಲಿ ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಯೋಗ ಹೇಳಿಕೊಡುತ್ತಿದ್ದ ಇವರು ಪ್ರಸಕ್ತ ಯೋಗಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ. ಅಂದರೆ ಇದನ್ನೇ ಮುಖ್ಯ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.


ಸೌರಭ್ ಬೋತ್ರಾ ಮತ್ತು ಪ್ರಮೋದ್ ಯಾದವ್ ಮೇ ಅಂತ್ಯದ ವೇಳೆಗೆ, 1,500 ಗ್ರಾಹಕರನ್ನು ಹೊಂದಿದ್ದರು. ಮೊದಲಿಗೆ ಆನ್‌ಲೈನ್‌ನಲ್ಲಿ ಉಚಿತವಾಗಿ ಹೇಳಿಕೊಡುತ್ತಿದ್ದರು.


ಕಾಲಕ್ರಮೇಣ ಶುಲ್ಕ ಪಡೆದುಕೊಂಡು ತರಗತಿ ಆರಂಭಿಸಿದರು. ಶುಲ್ಕ ವಿಧಿಸಿದರೂ ಸಹ ಯೋಗ ಕಲಿಯಲು ಹೆಸರು ನೊಂದಾಯಿಸಿಕೊಳ್ಳುತ್ತಿದ್ದರು ಎಂದು ಬೋತ್ರಾ ಮತ್ತು ಯಾದವ್‌ ಹೇಳಿದರು.


ಹ್ಯಾಬಿಲ್ಡ್ ಕಂಪನಿ


ಹೀಗೆ ಯೋಗ ಕಲಿಸಿಕೊಡುವ ಈ ಉಪಕ್ರಮವು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇಮ ವೇದಿಕೆಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಇದನ್ನೇ ಉದ್ಯಮವಾಗಿಸಿಕೊಂಡು Habuild ಎಂಬ ಕಂಪನಿಯನ್ನು ಕೆಲವರು ಸೇರಿ ಸ್ಥಾಪಿಸಿದ್ದಾರೆ.


ಇದು ಪ್ರಪಂಚದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದೆ ಮತ್ತು ಪ್ರಸ್ತುತ 42,000 ಸಕ್ರಿಯ ಸದಸ್ಯರನ್ನು ಹೊಂದಿದೆ. ಇದರ ಒಟ್ಟು ಗಳಿಕೆ ಸುಮಾರು $2 ಮಿಲಿಯನ್ ಅನ್ನು ತಲುಪಿದೆ.


ಆರೋಗ್ಯಕರ ಅಭ್ಯಾಸಗಳನ್ನು ರೂಪಿಸುವ ಕಂಪನಿ


ಹ್ಯಾಬಿಲ್ಡ್ ಪ್ರೋಗ್ರಾಂ ಬಲವಾದ ಆರೋಗ್ಯಕರ ಅಭ್ಯಾಸಗಳನ್ನು ನಿರ್ಮಿಸಲು ಮತ್ತು ನಿಮ್ಮ ಜೀವನಶೈಲಿಯಲ್ಲಿ ನೀವು ತರಲು ಪ್ರಯತ್ನಿಸುತ್ತಿರುವ ಬದಲಾವಣೆಯು ಪ್ರಾಯೋಗಿಕ ಮತ್ತು ಸಮರ್ಥನೀಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ಅನನ್ಯ ಯೋಜನೆಯನ್ನು ರಚಿಸುತ್ತದೆ.


ಇದನ್ನೂ ಓದಿ: ಜಸ್ಟ್ 58 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗುತ್ತೆ 8 ಲಕ್ಷ, ಮಹಿಳೆಯರಿಗೆ ಹೇಳಿ ಮಾಡಿಸಿದ ಪಾಲಿಸಿ!


ಇದನ್ನು ಬೋತ್ರಾ, ಶೀತಲ್ ಪುಂಗ್ಲಿಯಾ, ತ್ರಿಶಾಲಾ ಬೋತ್ರಾ ಮತ್ತು ಅನ್ಶುಲ್ ಅಗರ್ವಾಲ್‌ ಸ್ಥಾಪಿಸಿದರು. ಇದು ಪುಣೆ ಮತ್ತು ನಾಗ್ಪುರದಲ್ಲಿ ಕಾರ್ಯನಿರ್ವಹಿಸುತ್ತಿದೆ.


ಬಹುಪಾಲು ಸಂಸ್ಥಾಪಕರು ಐಐಟಿ ವಿದ್ಯಾರ್ಥಿಗಳಾಗಿದ್ದು, ವಿಭಿನ್ನ ಸ್ಟಾರ್ಟ್‌ಅಪ್‌ ಜೊತೆಗೆ ಹೊರಹೊಮ್ಮಿದ್ದಾರೆ. ಜನ ಹತ್ತು ನಿಮಿಷ ಆದರೂ ದಿನನಿತ್ಯ ಯೋಗಭ್ಯಾಸ ಮಾಡಬೇಕು ಎಂಬುವುದು ಇವರ ಗುರಿ.


ಕೋಟಿ ಮೌಲ್ಯದ ಕಂಪನಿ


ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಪ್ರಕಾರ, ಈ ವಲಯವು 2017ರಲ್ಲಿ 1,10,000 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು, ಕೋವಿಡ್ ಪೂರ್ವದ ಅಂದಾಜು ಬೆಳವಣಿಗೆ ದರವು ಶೇಕಡಾ 13 ರಿಂದ ಶೇಕಡಾ 15 ರಷ್ಟಿದೆ.


ಇದನ್ನೂ ಓದಿ: 24 ಗಂಟೆ ಎಸಿ ಬಳಸಿದರೂ ಕರೆಂಟ್ ಬಿಲ್ ಸೊನ್ನೆ, ಮಾರುಕಟ್ಟೆಗೆ ಕಾಲಿಡುತ್ತಿದೆ ಹೊಸ ಮಾದರಿ!


ತೀರಾ ಇತ್ತೀಚೆಗೆ, ಇಂಟರ್ನ್ಯಾಷನಲ್ ಮಾರ್ಕೆಟ್ ಅನಾಲಿಸಿಸ್ ರಿಸರ್ಚ್ ಅಂಡ್ ಕನ್ಸಲ್ಟಿಂಗ್ ಗ್ರೂಪ್ 2023-2028 ರ ಅವಧಿಯಲ್ಲಿ ಭಾರತದ ಆರೋಗ್ಯ ಮತ್ತು ಕ್ಷೇಮ ಮಾರುಕಟ್ಟೆಯು ಶೇಕಡಾ 5.55 ರಷ್ಟು ಬೆಳೆಯುವ ಸಾಧ್ಯತೆಯಿದೆ ಎಂದು ಹೇಳಿದೆ.


ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಮತ್ತಿತ್ತರ ತರಬೇತಿಗಳಿಗೆ ನೊಂದಾಯಿಸಿಕೊಂಡಿದ್ದಾರೆ. ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಹ್ಯಾಬಿಲ್ಡ್ ಸೆಷನ್‌ಗಳನ್ನು ನಿರ್ದಿಷ್ಟ ಸಮಯಗಳಲ್ಲಿ ನಡೆಸಲಾಗುತ್ತದೆ ಮತ್ತು ಯಾವುದೇ ರೆಕಾರ್ಡಿಂಗ್‌ಗಳನ್ನು ನೀಡಲಾಗುವುದಿಲ್ಲ, ನಿಯಮವು ಅನಾನುಕೂಲವಾಗಿದ್ದರೂ ಫಲಿತಾಂಶ ಉತ್ತಮವಾಗಿರುತ್ತದೆ ಕಂಪನಿ ಹೇಳಿದೆ.
ವರ್ಲ್ಡ್ ರೆಕಾರ್ಡ್ಸ್ ಪ್ರಯತ್ನದಲ್ಲಿ ಹ್ಯಾಬಿಲ್ಡ್
ಜೂನ್ 21, ಅಂತರಾಷ್ಟ್ರೀಯ ಯೋಗ ದಿನದಂದು, ಹ್ಯಾಬಿಲ್ಡ್ 21-ದಿನದ ಉಚಿತ ಆನ್‌ಲೈನ್ ಯೋಗ ಸವಾಲನ್ನು ಪ್ರಾರಂಭಿಸುವ ಮೂಲಕ ಲೈವ್ ಯೋಗ ಸೆಷನ್‌ಗಳಲ್ಲಿ ಗರಿಷ್ಠ ಏಕಕಾಲಿಕ ವೀಕ್ಷಕರಿಗಾಗಿ ವರ್ಲ್ಡ್ ರೆಕಾರ್ಡ್ಸ್ ಯೂನಿಯನ್‌ನೊಂದಿಗೆ ವಿಶ್ವ ದಾಖಲೆ ಬರೆಯಲು ಮುಂದಾಗಿದೆ. ಕಂಪನಿಯು ಜನವರಿ 2024ರ ವೇಳೆಗೆ 1 ಲಕ್ಷ ಸದಸ್ಯರನ್ನು ತಲುಪುವ ಗುರಿಯನ್ನು ಹೊಂದಿದೆ.

First published: