ಆರ್ಥಿಕ ಹಿಂಜರಿತ, ಅನಿಶ್ಚಿತತೆ ಹಾಗೂ ಹಣದುಬ್ಬರದ ಹಿನ್ನೆಲೆಯಲ್ಲಿ ಜಗತ್ತಿನೆಲ್ಲೆಡೆ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಿದ್ದು ಈ ಸಾಲಿಗೆ ಈಗ ಐಟಿ ಮೇಜರ್ ಆಕ್ಸೆಂಚರ್ ಕೂಡ ಸೇರಿದೆ. ಹೌದು ಅಕ್ಸೆಂಚರ್ ಕಂಪನಿ ತನ್ನ 19 ಸಾವಿರ ಉದ್ಯೋಗಿಗಳನ್ನು (Employee) ವಜಾಗೊಳಿಸುವುದಾಗಿ ಹೇಳಿದೆ. ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ತಂತ್ರಜ್ಞಾನದ (Technology) ಬಜೆಟ್‌ಗಳನ್ನು ಕಡಿತಗೊಳಿಸಲು ಆಕ್ಸೆಂಚರ್ (Accenture) ನಿಂದ ವಜಾ ಪ್ರಕ್ರಿಯೆ ಘೋಷಿಸಲಾಗಿದೆ. ಆಕ್ಸೆಂಚರ್ ತನ್ನ ವಾರ್ಷಿಕ ಆದಾಯ ಮತ್ತು ಲಾಭದ ನಿರೀಕ್ಷೆಗಳನ್ನೂ ಕಡಿಮೆ ಮಾಡಿದೆ.
ತಂತ್ರಜ್ಞಾನದ ಬಜೆಟ್‌ಅನ್ನು ಕಡಿಮೆ ಮಾಡಲು ಕ್ರಮ
ಕಂಪನಿಯು ತನ್ನ ವಾರ್ಷಿಕ ಆದಾಯದ ಬೆಳವಣಿಗೆ ಮತ್ತು ಪ್ರಾಫಿಟ್ ಫೋರ್‌ಕಾಸ್ಟ್ ಅನ್ನು ಕಡಿಮೆ ಮಾಡಿದೆ. ಅಲ್ಲದೇ ಆರ್ಥಿಕ ಹಿಂಜರಿತದ ಎಚ್ಚರಿಕೆಯಿಂದ ಉದ್ಯಮವು ತಂತ್ರಜ್ಞಾನದ ಬಜೆಟ್‌ಗಳನ್ನು ಕಡಿತಗೊಳಿಸಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ವರದಿಗಳ ಪ್ರಕಾರ, ಆಕ್ಸೆಂಚರ್ ವಜಾಗೊಳಿಸುವಿಕೆಯು ಅದರ ಬಿಲ್ ಮಾಡಲಾಗದ ಕಾರ್ಪೊರೇಟ್ ಕಾರ್ಯಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.
ಪ್ರಸ್ತುತ ವಜಾಗೊಳ್ಳುತ್ತಿರುವ 19,000 ಉದ್ಯೋಗಿಗಳ ಸಾಮರ್ಥ್ಯವು ಕಂಪನಿಯ ಒಟ್ಟು ಹೆಡ್‌ಕೌಂಟ್‌ನ ಸುಮಾರು 2.5 ಪ್ರತಿಶತದಷ್ಟಾಗಿದೆ. ಇನ್ನು, ಕಂಪನಿಯು ವಾರ್ಷಿಕ ಆದಾಯದ ಬೆಳವಣಿಗೆಯು ಈ ಹಿಂದೆ ನಿರೀಕ್ಷಿತ 8% ರಿಂದ 11% ರಷ್ಟಿತ್ತು. ಈಗ 8% ರಿಂದ 10% ರಷ್ಟಿದೆ ಎಂದು ಹೇಳಲಾಗುತ್ತಿದೆ.
ಟೆಕ್ ಲೇಆಫ್ 2023
ಇನ್ನು, 2023ರಲ್ಲಿ ಪ್ರಮುಖ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಬುಧವಾರ, ಜಾಬ್ ಲಿಸ್ಟಿಂಗ್ ಕಂಪನಿ 2200 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು.
ಕಳೆದ ವರ್ಷ ಪ್ರಾರಂಭವಾದ ವಜಾಗೊಳಿಸುವಿಕೆ 2023 ರಲ್ಲಿ ಇನ್ನಷ್ಟು ಹದಗೆಟ್ಟಿತು ಎಂದೇ ಹೇಳಬಹುದು. ಈ ವರ್ಷ ನೂರಾರು ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿವೆ. ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಇತರ ಕಂಪನಿಗಳು ಲಕ್ಷಗಟ್ಟಲೆ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಅಮೆಜಾನ್‌ನಲ್ಲಿ ಮತ್ತೆ 9 ಸಾವಿರ ಉದ್ಯೋಗ ಕಡಿತ
ಇತ್ತೀಚೆಗೆ, ಅಮೆಜಾನ್ 9,000 ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಮುಂಬರುವ ವಾರಗಳಲ್ಲಿ 9,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಸಿಇಒ ಆಂಡಿ ಜಾಸ್ಸಿ ಸಿಬ್ಬಂದಿಗೆ ನೀಡಿದ ಮೆಮೊದಲ್ಲಿ ತಿಳಿಸಿದ್ದಾರೆ.
ನವೆಂಬರ್‌ನಲ್ಲಿ ಪ್ರಾರಂಭವಾದ ವಜಾಗೊಳಿಸುವಿಕೆಯಲ್ಲಿ ಒಟ್ಟು 18,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅದರಲ್ಲೂ ಈ ವಜಾಗೊಳಿಸುವಿಕೆಯು ಮುಖ್ಯವಾಗಿ ಚಿಲ್ಲರೆ ವ್ಯಾಪಾರ, ನೇಮಕಾತಿ ಮತ್ತು ಮಾನವ ಸಂಪನ್ಮೂಲ ಗುಂಪುಗಳಲ್ಲಿ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: ITR ಫೈಲ್ ಮಾಡುವಾಗ ಸೆಕ್ಷನ್ 87ರ ಪ್ರಯೋಜನವನ್ನು ಹೀಗೆ ಪಡೆದುಕೊಳ್ಳಿ!
ಈ ಉದ್ಯೋಗ ಕಡಿತಗಳಿಂದ ಕಂಪನಿಯ ವೆಚ್ಚಗಳು ಸುಗಮಗೊಳಿಸುವಂತೆ ತೋರುತ್ತಿದೆ. ಇದರಿಂದಾಗಿ ಅಮೆಜಾನ್ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರವನ್ನು ಮಾಡಿದೆ.
ಇದು ಭವಿಷ್ಯದಲ್ಲಿನ ಆರ್ಥಿಕ ಅನಿಶ್ಚಿತತೆಯನ್ನು ಗಣನೆಗೆ ತೆಗೆದುಕೊಂಡಿದೆ ಆಂಡಿ ಜಾಸ್ಸಿ ಹೇಳಿದ್ದಾರೆ. ಕಂಪನಿಯು ತನ್ನ ವಾರ್ಷಿಕ ಬಜೆಟ್ ಪ್ರಕ್ರಿಯೆಯ ಎರಡನೇ ಹಂತವನ್ನು ಮುಕ್ತಾಯಗೊಳಿಸಿದೆ, ಇದನ್ನು ಆಂತರಿಕವಾಗಿ "OP2" ಎಂದು ಉಲ್ಲೇಖಿಸಲಾಗುತ್ತದೆ.
"ಈ ವರ್ಷ ನಮ್ಮ ವಾರ್ಷಿಕ ಯೋಜನೆಯ ಅತಿಕ್ರಮಣ ಸಿದ್ಧಾಂತವು ತೆಳ್ಳಗಿರುತ್ತದೆ, ಇದು ಪ್ರಮುಖ ದೀರ್ಘಕಾಲೀನ ಗ್ರಾಹಕರ ಅನುಭವಗಳಲ್ಲಿ ದೃಢವಾಗಿ ಹೂಡಿಕೆ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಕೈತುಂಬಾ ಸಂಬಳ ಪಡೆಯುತ್ತಿದ್ದ ಉದ್ಯೋಗಕ್ಕೆ ಗುಡ್ ಬೈ! ಮೊಳಕೆ ಬೀಜಗಳ ಕೃಷಿಯಲ್ಲಿ ಸಾಧನೆ ಮಾಡಿದ ಯುವತಿ
ಇದು ಗ್ರಾಹಕರ ಜೀವನವನ್ನು ಮತ್ತು ಒಟ್ಟಾರೆಯಾಗಿ ಅಮೆಜಾನ್ ಅನ್ನು ಅರ್ಥಪೂರ್ಣವಾಗಿ ಸುಧಾರಿಸುತ್ತದೆ ಎಂದು ನಾವು ನಂಬುತ್ತೇವೆ” ಎಂಬುದಾಗಿ ಜಾಸ್ಸಿ ಹೇಳಿದ್ದಾರೆ.
ಅಂದಹಾಗೆ ಇತ್ತೀಚಿನ ಲೇಆಫ್ ಸುತ್ತು ಪ್ರಾಥಮಿಕವಾಗಿ ಅಮೆಜಾನ್‌ನ ಕ್ಲೌಡ್ ಕಂಪ್ಯೂಟಿಂಗ್, ಮಾನವ ಸಂಪನ್ಮೂಲಗಳು, ಜಾಹೀರಾತು ಮತ್ತು ಟ್ವಿಚ್ ಲೈವ್‌ಸ್ಟ್ರೀಮಿಂಗ್ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜಾಸ್ಸಿ ಮೆಮೊದಲ್ಲಿ ತಿಳಿಸಿದ್ದಾರೆ. ಅಂದಹಾಗೆ ಅಮೆಜಾನ್ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕಂಪನಿಯ ಇತಿಹಾಸದಲ್ಲಿ ಅತಿಹೆಚ್ಚು ಲೇಆಫ್‌ಗೆ ಒಳಗಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ