• Home
  • »
  • News
  • »
  • business
  • »
  • Traditional Pottery: ಸಾವಯವ ಕುಂಬಾರಿಕೆಯಿಂದ ಯಶಸ್ಸು ಕಂಡ ಯುವಕ; ತಿಂಗಳಿಗೆ 2 ಲಕ್ಷ ಆದಾಯ

Traditional Pottery: ಸಾವಯವ ಕುಂಬಾರಿಕೆಯಿಂದ ಯಶಸ್ಸು ಕಂಡ ಯುವಕ; ತಿಂಗಳಿಗೆ 2 ಲಕ್ಷ ಆದಾಯ

ನೀರಜ್ ಶರ್ಮಾ

ನೀರಜ್ ಶರ್ಮಾ

ಇಲ್ಲೊಬ್ಬರು ಸಾಂಪ್ರದಾಯಿಕ ಕುಂಬಾರಿಕೆಯನ್ನು ಮರಳಿ ತರಬೇಕೆಂದು ಜಜ್ಜರ್ (ಹರಿಯಾಣ) ದ ದವ್ಲಾ ಗ್ರಾಮದ ನಿವಾಸಿ ನೀರಜ್ ಶರ್ಮಾ ಅವರು 'ಮಿಟ್ಟಿ, ಆಪ್ ಔರ್ ಮೈನ್' (ಮಣ್ಣು, ನೀವು ಮತ್ತು ನಾನು) ಎಂಬ ಹೆಸರಿನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈಗ ಅವರ ಈ ಕುಂಬಾರಿಕೆ ವ್ಯಾಪಾರವು ಮಾಸಿಕ 2 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ.

ಮುಂದೆ ಓದಿ ...
  • Share this:

ಪ್ರತಿ ಮನೆಯ ಆರೋಗ್ಯದ (Health) ಖಜಾನೆಯೆಂದ್ರೆ ಅದು ಅಡುಗೆ ಮನೆ. ಏಕೆಂದರೆ ಆಹಾರವೇ ಔಷಧಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಇತ್ತೀಚಿಗೆ ಅಡುಗೆ ಮನೆಯಲ್ಲಿ ಹೆಚ್ಚಿನ ನಾನ್‌ ಸ್ಟಿಕ್ (Non Stick) ಪಾತ್ರೆಗಳನ್ನು ಬಳಸುವುದರಿಂದ ಉಂಟಾಗುವ ಅಪಾಯಗಳು ಕೆಲವರಿಗೆ ತಿಳಿದಿರಬಹುದು. ಈ ಪಾತ್ರೆಗಳು ಅಡುಗೆ ಮಾಡುವುದನ್ನು ಸುಲಭಗೊಳಿಸುತ್ತವೆ ಆದರೆ ಅವುಗಳ ಹೆಚ್ಚಿನ ಬಳಕೆಯು ಪರಿಸರ ಮತ್ತು ನಮ್ಮ ಆರೋಗ್ಯಕ್ಕೆ ಬಹಳ ಹಾನಿಕಾರಕವೆಂದು (Harmful) ಕಂಡುಬಂದಿದೆ. ಆದರೆ, ಇವುಗಳಿಗೆ ಪರ್ಯಾಯ ವಿಧಾನವೇನು? ಮಾರುಕಟ್ಟೆಯ (Market) ತುಂಬಾ ಈ ನಾನ್‌ ಸ್ಟಿಕ್‌ ಪಾತ್ರೆಗಳೇ ತುಂಬಿ ಹೋಗಿವೆ. ಆದರೆ ಇವುಗಳು ಪರಿಸರಕ್ಕೆ ಮಾರಕ ವಸ್ತುಗಳಾಗಿವೆ. ಇದರ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ. ಯಾರಾದರೂ ಒಬ್ಬರು ಇದರ ಬಗ್ಗೆ ಎಚ್ಚರ ವಹಿಸುವುದು ಅತಿ ಅಗತ್ಯ ಕ್ರಮವಾಗಿದೆ.


ಈ ನಾನ್‌ ಸ್ಟಿಕ್‌ ಪಾತ್ರೆಗಳಿಗೆ ಪರ್ಯಾಯವಾಗಿ ಮಣ್ಣಿನ ಪಾತ್ರೆಗಳು ಸುರಕ್ಷಿತ ಪಾತ್ರೆಗಳು ಎಂದು ತೋರುತ್ತವೆ. ಆದರೆ ಸಾಂಪ್ರದಾಯಿಕವಲ್ಲದ ವಿಧಾನಗಳನ್ನು ಬಳಸಿ ತಯಾರಿಸಿದ ನಕಲಿ ಉತ್ಪನ್ನಗಳು ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ. ಹಲವಾರು ಜೇಡಿ ಮಣ್ಣಿನ ಪಾತ್ರೆ ಉತ್ಪನ್ನಗಳನ್ನು ಡೈ-ಕ್ಯಾಸ್ಟ್ ಮೋಲ್ಡ್‌ನೊಂದಿಗೆ ರಾಸಾಯನಿಕ ಲೇಪನದೊಂದಿಗೆ ತಯಾರಿಸಲಾಗುತ್ತಿದೆ. ಇಂತಹ ಪಾತ್ರೆಗಳು ಸಹ ಆರೋಗ್ಯಕ್ಕೆ ಮಾರಕ ವಸ್ತುಗಳು ಆಗಿವೆ. ಅಂತಹ ಮಣ್ಣಿನ ಪಾತ್ರೆಗಳು ನಮಗೆ ತಿಳಿದಿರುವುದಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು.


ಸಾಂಪ್ರದಾಯಿಕ ಕುಂಬಾರಿಕೆಯ ಆರಂಭ
ಇಲ್ಲೊಬ್ಬರು ಸಾಂಪ್ರದಾಯಿಕ ಕುಂಬಾರಿಕೆಯನ್ನು ಮರಳಿ ತರಬೇಕೆಂದು ಜಜ್ಜರ್ (ಹರಿಯಾಣ) ದ ದವ್ಲಾ ಗ್ರಾಮದ ನಿವಾಸಿ ನೀರಜ್ ಶರ್ಮಾ ಅವರು 'ಮಿಟ್ಟಿ, ಆಪ್ ಔರ್ ಮೈನ್' (ಮಣ್ಣು, ನೀವು ಮತ್ತು ನಾನು) ಎಂಬ ಹೆಸರಿನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈಗ ಅವರ ಈ ಕುಂಬಾರಿಕೆ ವ್ಯಾಪಾರವು ಮಾಸಿಕ 2 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ.


ಇದನ್ನೂ ಓದಿ:  Thai Guava: ಉದ್ಯೋಗ ತೊರೆದು ಥಾಯ್ ಪೇರಳೆ ಬೆಳೆಸಿ ಯಶಸ್ಸು ಕಂಡ ಎಂಬಿಎ ಪದವೀಧರ! ಈಗ ಈತನ ಆದಾಯ ಎಷ್ಟು ಕೋಟಿ ಗೊತ್ತಾ?


ವೃತಿಯಲ್ಲಿ ಇಂಜಿನಿಯರ್‌ ಪ್ರವೃತ್ತಿಯಲ್ಲಿ ಕುಂಬಾರಿಕೆ ವ್ಯಾಪಾರಿ
ವಿದ್ಯಾರ್ಹತೆಯಲ್ಲಿ ಇಂಜಿನಿಯರ್ ಆಗಿರುವ ನೀರಜ್ ಅವರು ಎರಡು ವರ್ಷಗಳನ್ನು ತಮ್ಮ ಸ್ವಗ್ರಾಮದಲ್ಲಿ ಕಳೆದರು. ಈ ಸಮಯವನ್ನು ಯಾವುದೇ ಡೈ-ಕಾಸ್ಟ್ ಅಚ್ಚು ಅಥವಾ ರಾಸಾಯನಿಕಗಳನ್ನು ಬಳಸದೆ ಸಾಂಪ್ರದಾಯಿಕ ಪಾತ್ರೆಗಳನ್ನು ಹೇಗೆ ತಯಾರಿಸಬೇಕೆಂದು ಅವರು ಇಲ್ಲಿ ಕಲಿತರು. ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, “ನಾನು ಮತ್ತು ನನ್ನ ಹಳ್ಳಿಯ ಇಬ್ಬರು ಕುಂಬಾರರೊಂದಿಗೆ ಕೆಲಸ ಮಾಡುವ ಮೂಲಕ ಈ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ. ಇಂದು ಈ ಸಂಸ್ಥೆಯಲ್ಲಿ ಎಂಟಕ್ಕೂ ಹೆಚ್ಚು ಕುಂಬಾರರಿದ್ದಾರೆ. ನಾವು ತಯಾರಿಸುವ ಉತ್ಪನ್ನಗಳು ಪ್ಯಾನ್-ಇಂಡಿಯಾದುದ್ದಕ್ಕೂ ಮಾರಾಟವಾಗುತ್ತಿವೆ.
"ಈಗ ನಾನ್-ಸ್ಟಿಕ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿಯೊಂದಿಗೆ, ಜನರು ಸಾಂಪ್ರದಾಯಿಕ ಉತ್ಪನ್ನಗಳನ್ನು ಖರೀದಿ ಮಾಡಬೇಕೆಂದು ಸಕ್ರಿಯವಾಗಿ ಹುಡುಕುತ್ತಿದ್ದಾರೆ. ಅದು ನಮಗೆ ಅಪಾರವಾದ ಸಹಾಯವನ್ನು ಮಾಡಿದೆ. ನಮ್ಮ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು, ಈ ಪಾತ್ರೆಗಳ ಪ್ರಯೋಜನಗಳು ಮತ್ತು ದೀರ್ಘಾವಧಿಯಲ್ಲಿ ಇತರ ಪಾತ್ರೆಗಳು ನಮಗೆ ಉಂಟುಮಾಡುವ ಹಾನಿಯ ಬಗ್ಗೆ ಆಗಾಗ ಪೌಷ್ಟಿಕತಜ್ಞರು ಮತ್ತು ವೈದ್ಯರೊಂದಿಗೆ ನಾನು ಒಪ್ಪಂದವನ್ನು ಮಾಡಿಕೊಂಡಿದ್ದೇನೆ” ಎಂದು ಶರ್ಮಾ ಅವರು ವಿವರಿಸಿದರು.


ನೀರಜ್ 2016 ರಲ್ಲಿ ರೋಹ್ಟಕ್‌ನ ಕಾಲೇಜ್‌ನಿಂದ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ಅದರ ನಂತರ, ಗುರ್‌ಗಾಂವ್‌ನಲ್ಲಿ ಕಾರ್ಪೊರೇಟ್‌ನಲ್ಲಿ ಕೆಲಸ ಪಡೆದರು. ಅಲ್ಲಿ ಅವರು 2019 ರವರೆಗೆ ಕೆಲಸವನ್ನು ಮಾಡಿದರು.


ಆರಂಭಿಕ ದಿನಗಳು
“ನಾನು ಗುರ್‌ಗಾಂವ್‌ನಲ್ಲಿದ್ದಾಗ ಯಾವಾಗಲೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೆ. ಆದರೆ ನಾನು ನನ್ನ ಕುಟುಂಬದ ಹಿತದೃಷ್ಟಿಯಿಂದ ನಾನು ಗುರಗಾಂವ್‌ನಲ್ಲಿಯೇ ಮುಂದುವರಿದೆ. ಆದರೆ ನಾನು ನನ್ನ ಹಳ್ಳಿಗೆ ಹಿಂತಿರುಗಿ ನನ್ನ ಪೋಷಕರಿಗೆ ಈ ಕೆಲಸ ಬಿಟ್ಟು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತೇನೆ” ಎಂದು ಭರವಸೆ ನೀಡಿದ್ದೆ.


ಇದನ್ನೂ ಓದಿ: Bitcoin: ಶಿಕ್ಷಣ ಮುಗಿಸಿ ಕ್ರಿಪ್ಟೋ ಉದ್ಯಮದಲ್ಲಿ ತೊಡಗಿಕೊಂಡ ಸೈನಿ! ಚಹಾದ ಅಂಗಡಿಯಿಂದ ಆರಂಭವಾದ ಉದ್ಯಮವಿದು


ನೀರಜ್ ಮತ್ತೆ ನಗರಕ್ಕೆ ಮತ್ತೆ ಹಿಂತಿರುಗಬಾರದೆಂದು ಮನಸ್ಸು ಮಾಡಿದ್ದರು. ಅವರು ಹಳ್ಳಿಯಲ್ಲಿ ಯಾವುದಾದರೂ ವ್ಯಾಪಾರ ಮಾಡಬೇಕೆಂದು ನಿರ್ಧರಿಸಿದರು. ಅವರು ಮನೆಯಲ್ಲಿ ಬಗೆಬಗೆಯ ಮಣ್ಣಿನ ಪಾತ್ರೆಗಳನ್ನು ಗಮನಿಸತೊಡಗಿದರು. ಕೆಲವು ಸುಲಭವಾಗಿ ಒಡೆಯುತ್ತವೆ ಆದರೆ ಇನ್ನು ಹೆಚ್ಚಿನ ಪಾತ್ರೆಗಳು ಗಟ್ಟಿಯಾಗಿದ್ದು ಮತ್ತು ದೀರ್ಘಕಾಲ ಉಳಿಯುತ್ತವೆ. ಕುತೂಹಲದಿಂದ ಅವರು ತಮ್ಮ ಮನೆಯ ಸಮೀಪವಿರುವ ಈ ಮಣ್ಣಿನ ಉತ್ಪನ್ನಗಳನ್ನು ತಯಾರಿಸಿದ ಕಾರ್ಖಾನೆಗೆ ಭೇಟಿ ನೀಡಿದರು. ಇಲ್ಲಿ ಕೆಲಸ ಮಾಡುವ ಅನೇಕ ಕುಶಲಕರ್ಮಿಗಳನ್ನು ಸಹ ಅವರು ಭೇಟಿಯಾಗುತ್ತಾರೆ.


ತನ್ನ ಹಳೆಯ ದಿನಗಳನ್ನು ನೆನೆಸಿಕೊಂಡ ನೀರಜ್
“ನಾನು ಈ ಕಾರ್ಖಾನೆಯನ್ನು ಪ್ರವೇಶಿಸಿದ ಕೂಡಲೇ ಅಲ್ಲಿ ಹಲವಾರು ಡೈ-ಕಾಸ್ಟ್ ಅಚ್ಚುಗಳನ್ನು ಬಳಸಲಾಗುತ್ತಿತ್ತು. ಅಲ್ಲಿ ಯಾವುದೇ ಮಾನವ ಸ್ನೇಹಿ ವಸ್ತುಗಳು ಇರಲಿಲ್ಲ. ಅಂತಹ ಮಾನವ ಸ್ನೇಹಿ ಮಣ್ಣಿನ ಪಾತ್ರೆಗಳನ್ನು ನಾವು ತಯಾರಿಸಿದರೆ ಅದಕ್ಕೆ ಉತ್ತಮ ವ್ಯವಹಾರದ ಬೇಡಿಕೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ನೀರಜ್ ಅವರು ಈ ಸಾವಯವ ಮಣ್ಣಿನ ಪಾತ್ರೆಗಳ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದೆ” ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.
“ಆರಂಭದಲ್ಲಿ, ನಾನು ಉತ್ಪನ್ನಗಳನ್ನು ತಯಾರಿಸಲು ಅಚ್ಚು ಮತ್ತು ಬಣ್ಣಗಳನ್ನು ಸಹ ಬಳಸುತ್ತಿದ್ದೆ. ಆದಾಗ್ಯೂ, ಈ ಉತ್ಪನ್ನಗಳನ್ನು ತಯಾರಿಸಲು ಕೂಡ ಕಾಸ್ಟಿಕ್ ಸೋಡಾ ಮತ್ತು ಸೋಡಾ ಸಿಲಿಕೇಟ್‌ನಂತಹ ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂದು ನನಗೆ ಬೇಗನೆ ತಿಳಿಯಿತು. ಕೆಲವು ಮೂಲಭೂತ ಸಂಶೋಧನೆಗಳೊಂದಿಗೆ, ಇವು ಹಾನಿಕಾರಕ ರಾಸಾಯನಿಕಗಳು” ಎಂದು ನಾನು ಕಂಡುಕೊಂಡೆ ಎನ್ನುತ್ತಾರೆ ನೀರಜ್‌ ಶರ್ಮಾ.


ಹೀಗೆ ಕುಂಬಾರಿಕೆಯ ಸಾಂಪ್ರದಾಯಿಕ ವಿಧಾನಕ್ಕೆ ಮರಳುವ ಮಾರ್ಗವನ್ನು ಹುಡುಕುವ ಅವರ ಪ್ರಯಾಣ ಪ್ರಾರಂಭವಾಯಿತು. “ಇದು ಮಡಕೆ ತಯಾರಿಸುವ ಯಂತ್ರಗಳ ಆಗಮನದಿಂದ ಕೆಲಸ ಕಳೆದುಕೊಂಡಿದ್ದ ಹಳ್ಳಿಯ ಕೆಲವು ಸಾಂಪ್ರದಾಯಿಕ ಕುಂಬಾರರಿಗೆ ಮತ್ತೆ ಕೆಲಸ ಸಿಗುವ ಭರವಸೆ ಆಯಿತು. "ನಾನು ಈ ಕುಂಬಾರರ ಹತ್ತಿರ ಮಾತನಾಡಿದಾಗ ನನಗೆ ತಿಳಿದು ಬಂದ ವಿಷಯವೆಂದರೆ ಅವರಲ್ಲಿ ಅನೇಕರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದರೂ, ಅವರೆಲ್ಲರೂ ತಮ್ಮ ಕೌಶಲ್ಯವನ್ನು ಮತ್ತೆ ಬಳಸಲು ಅವಕಾಶವನ್ನು ಹುಡುಕುತ್ತಿದ್ದಾರೆ ಎಂದು ನಾನು ಅರಿತುಕೊಂಡೆ” ಎಂದು ನೀರಜ್‌ ಅವರು ವಿವರಿಸಿದರು.


ರಾಸಾಯನಿಕಗಳನ್ನು ಬಳಸದೇ ತಯಾರಿಸಲಾಗುವ ಮಡಕೆಗಳು 
“ನಾವು ತಯಾರಿಸುತ್ತಿದ್ದ ಪಾತ್ರೆಗಳು ವರ್ಣಮಯ ಮತ್ತು ನೋಡಲು ಆಕರ್ಷಕವಾಗಿಲ್ಲದಿದ್ದರೂ, ಅವುಗಳಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೇ ತಯಾರಿಸಲಾಗುತ್ತದೆ ಎಂಬುದು ನಮಗೆ ತಿಳಿದಿತ್ತು. ಈ ರೀತಿಯ ಮಣ್ಣಿನ ಮಡಕೆಗಳನ್ನು ತಯಾರಿಸಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ಆದರೆ ನಾವು ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂದು ಜನರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು ಮತ್ತು ಎಲ್ಲಕ್ಕಿಂತ ಹೆಚ್ಚು ಅನೇಕರು ಈ ನಮ್ಮ ಕೆಲಸವನ್ನು ಹೆಚ್ಚು ಕುತೂಹಲದಿಂದ ವೀಕ್ಷಿಸಲು ಬರುತ್ತಿದ್ದರು. ಈಗಲೂ ಬರುತ್ತಾರೆ” ಎಂದು ನೀರಜ್‌ ಹೇಳಿದರು.


ಇದನ್ನೂ ಓದಿ:  Bounce Story: 1 ಬುಲೆಟ್​ನಿಂದ 6 ಸಾವಿರ ಎಲೆಕ್ಟ್ರಿಕ್​ ಬೈಕ್​, ಹಾಸನದ ಈ 3 ಯುವಕರ ಅಸಲಿ ಕಹಾನಿ ಇದು!


ಈ ಸಾವಯವ ಮಣ್ಣಿನ ಪಾತ್ರೆಗಳ ಬಗ್ಗೆ ಹೇಳಲು ನೀರಜ್‌ ಅವರು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಲಾರಂಭಿಸಿದರು. "ಅಮೆಜಾನ್‌ನಲ್ಲಿ ಗ್ರಾಹಕರನ್ನು ಹುಡುಕುವುದು ಕಷ್ಟಕರವಾಗಿತ್ತು, ಏಕೆಂದರೆ ಅವರಲ್ಲಿ ಹೆಚ್ಚಿನವರು ಉತ್ತಮವಾಗಿ ಕಾಣುವ ಮತ್ತು ಹೊಳೆಯುವ ಪಾತ್ರೆಗಳತ್ತ ಆಕರ್ಷಿತರಾಗಿದ್ದಾರೆ" ಎಂದು ಅವರು ಹೇಳುತ್ತಾರೆ. ಆದರೆ, ಈ ಕಾರಣ ನೀರಜ್ ಮತ್ತು ಅವರ ತಂಡಕ್ಕೆ ಯಾವ ಅಡ್ಡಿಯನ್ನುಂಟು ಮಾಡಲಿಲ್ಲ. ಅವರು ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದರು.


ಉತ್ಸವಗಳು ಮತ್ತು ಸಾವಯವ ಮೇಳಗಳಲ್ಲಿ ಉತ್ಪನ್ನಗಳ ಮಾರಾಟ 
ಸ್ಥಳೀಯ ಉತ್ಸವಗಳು ಮತ್ತು ಸಾವಯವ ಮೇಳಗಳಿಗೆ ಹಾಜರಾಗುವುದು ಸಹ ಪ್ರಚಾರಕ್ಕೆ ಸಹಾಯ ಮಾಡಿತು. ಈ ಕಾರ್ಯಕ್ರಮಗಳಲ್ಲಿ, ನೀರಜ್ ವೈದ್ಯರು ಮತ್ತು ಪೌಷ್ಟಿಕತಜ್ಞರನ್ನು ಭೇಟಿಯಾದರು, ಅವರು ಉತ್ಪನ್ನಗಳಿಂದ ಪ್ರಭಾವಿತರಾದರು ಮತ್ತು ಅವರ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.


ನಿಧಾನವಾಗಿ, ನಗರದ ಜನರು ನೇರವಾಗಿ ನೀರಜ್ ಅವರಿಂದ ಖರೀದಿಸಲು ಘಟಕಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಯೂಟ್ಯೂಬ್‌ನಲ್ಲಿನ ತನ್ನ ಚಾನೆಲ್‌ನಲ್ಲಿ 'ಮಿಟ್ಟಿ, ಆಪ್ ಔರ್ ಮಿ' ಎಂದು ಕರೆಯುವ ವೀಡಿಯೊಗಳಿಂದ ತನ್ನ ವ್ಯಾಪಾರವನ್ನು ಅಪಾರ ಮನ್ನಣೆಯನ್ನು ಪಡೆಯುತ್ತಿದೆ” ಎಂದು ನೀರಜ್‌ ಅವರು ಹೇಳುತ್ತಾರೆ.


1,34,000 ಚಂದಾದಾರರನ್ನು ಹೊಂದಿರುವ ಈ ಸಾಮಾಜಿಕ ವೇದಿಕೆಯನ್ನು ನೀರಜ್ ಅವರು ಜಾಗೃತಿ ಮೂಡಿಸಲು, ಮಣ್ಣಿನ ಮಡಿಕೆಗಳ ಪ್ರಯೋಜನಗಳ ಬಗ್ಗೆ ಮಾತನಾಡಲು ಮತ್ತು ಉತ್ತಮ ಗುಣಮಟ್ಟದ ಮಣ್ಣಿನ ಉತ್ಪನ್ನಗಳನ್ನು ವಿಶೇಷವಾಗಿ ಅಡುಗೆಗೆ ಬಳಸುವ ಬಗ್ಗೆ ಜನರಿಗೆ ತಿಳಿಸಲು ಬಳಸುತ್ತಿದ್ದಾರೆ. ರೂ 250 ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ಪ್ಲಾಂಟರ್‌ಗಳು, ಅಡಿಗೆ ಪಾತ್ರೆಗಳು ಮತ್ತು ಅಡುಗೆ ಸಾಮಾನುಗಳನ್ನು ಸಹ ಖರೀದಿಸಬಹುದು.


ಇದನ್ನೂ ಓದಿ: Plant Based Meat: ಭಾರತದ ಮೊದಲ ಸಸ್ಯ ಆಧಾರಿತ ಮಾಂಸ ಗುಜರಾತ್‌ನಿಂದ ಅಮೆರಿಕಾಕ್ಕೆ ರಫ್ತು


ಈ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುವ ಕೆಲವು ಕ್ರಮಗಳು


  1. ಈ ಉತ್ಪನ್ನಗಳನ್ನು ತಯಾರಿಸಲು ಬಳಸುವ ಜೇಡಿಮಣ್ಣನ್ನು ರಾಜಸ್ಥಾನ ಮತ್ತು ಹರಿಯಾಣದ ತಪ್ಪಲಿನಿಂದ ಪಡೆಯಲಾಗುತ್ತದೆ.

  2. ಹೊಲಗಳ ಮಣ್ಣನ್ನು ಯಾವುದೇ ಉತ್ಪನ್ನ ಮಾಡಲು ಬಳಸುವುದಿಲ್ಲ. ಏಕೆಂದರೆ ರೈತರು ತಮ್ಮ ಹೊಲಗಳಲ್ಲಿ ಬಳಸುವ ರಸಗೊಬ್ಬರಗಳಿಂದ ಉತ್ಪನ್ನಗಳ ಮಾಲಿನ್ಯವನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ.

  3. ಯಾವುದೇ ರಾಸಾಯನಿಕಗಳು ಅಥವಾ ಅಚ್ಚುಗಳನ್ನು ಬಳಸದೆಯೇ ಮಣ್ಣಿನ ಬಳಸುವ ಸಾಂಪ್ರದಾಯಿಕ ವಿಧಾನವನ್ನು ಇಲ್ಲಿ ಬಳಸಲಾಗುತ್ತದೆ.

Published by:Ashwini Prabhu
First published: