Knitting Business: ಹೆಣಿಗೆಯೊಂದೇ ಮೂಲ ಕಸುಬನ್ನಾಗಿ ಮಾಡಿಕೊಂಡು ಹಲವರಿಗೆ ಪ್ರೇರಣಾಶಕ್ತಿಯಾದ ಕರ್ನಾಟಕದ ಯುವಕ

ಆತಂಕ ಅಥವಾ ವ್ಯಾಕುಲತೆಯ ಮನಸ್ಥಿತಿಯಿಂದ ಬಳಲುತ್ತಿದ್ದ 28ರ ಪ್ರಾಯದ ಯುವಕನೊಬ್ಬ ಆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿಕೊಂಡಿರುವುದಲ್ಲದೆ ಆದಾಯದ ಮೂಲವೊಂದನ್ನೂ ಸಹ ಸೃಷ್ಟಿಸಿಕೊಂಡಿರುವುದು ಸಾಮಾನ್ಯ ಸಂಗತಿಯೇನಲ್ಲ.

ಸೊಹೇಲ್ ನರಗುಂದ್

ಸೊಹೇಲ್ ನರಗುಂದ್

  • Share this:
ಹಾಗೇ ನೋಡಿದರೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಜನರು ತಮ್ಮ ಜೀವನದ ಪಥವನ್ನೇ ಬದಲಾಯಿಸಿಕೊಂಡಿದ್ದಾರೆ ಹಾಗೂ ಇದಕ್ಕೆ ಮುಖ್ಯ ಕಾರಣ ಕೋವಿಡ್ ಎಂದರೂ ತಪ್ಪಾಗಲಿಕ್ಕಿಲ್ಲ. ಕೋವಿಡ್ (Covid) ನಿಜಕ್ಕೂ ಸಂಕಷ್ಟದ ಸಮಯ, ಲಕ್ಷಾನುಗಟ್ಟಲೆ ಜನರ ಬದುಕನ್ನೇ (Life of the people) ಕಸಿಕೊಂಡಿತು, ಆದರೂ ಎಲ್ಲೋ ಒಂದು ಕಡೆ ಈ ಬಿಕ್ಕಟ್ಟು ಹಲವರಲ್ಲಿ ಅಡಗಿದ್ದ ಹೊಸ ಪ್ರತಿಭೆ (New talent) ಅನಾವರಣಗೊಳಿಸಿದ್ದೂ ಇದೆ. ಅದರಂತೆ ಕೆಲವೊಮ್ಮೆ ಮನುಷ್ಯನು ತಾನು ಅನುಭವಿಸುವ ಕೆಲ ಮಾನಸಿಕ ಅಸ್ವಸ್ಥತೆಗಳನ್ನು (Mental illness) ತೊಲಗಿಸಲು ಯಾವುದೋ ಒಂದು ಹವ್ಯಾಸದಲ್ಲಿ ತೊಡಗಿಸಿಕೊಂಡು ಆ ಸಮಸ್ಯೆಯಿಂದ ಹೊರಬಂದ ಉದಾಹರಣೆಗಳೂ ಇವೆ.

ಇಂದು ನಾವು ಹೇಳುತ್ತಿರುವುದು ಸಹ ಅಂತಹ ಒಂದು ವಿಷಯದ ಕುರಿತಾಗಿಯೇ ಇದೆ. ಆತಂಕ ಅಥವಾ ವ್ಯಾಕುಲತೆಯ ಮನಸ್ಥಿತಿಯಿಂದ ಬಳಲುತ್ತಿದ್ದ 28ರ ಪ್ರಾಯದ ಯುವಕನೊಬ್ಬ ಆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿಕೊಂಡಿರುವುದಲ್ಲದೆ ಆದಾಯದ ಮೂಲವೊಂದನ್ನೂ ಸಹ ಸೃಷ್ಟಿಸಿಕೊಂಡಿರುವುದು ಸಾಮಾನ್ಯ ಸಂಗತಿಯೇನಲ್ಲ.

ಯಾರಿದು ಸೊಹೇಲ್ ನರಗುಂದ್?

ಸೊಹೇಲ್ ನರಗುಂದ್ ಎಂಬ ಯುವಕ ಕರ್ನಾಟಕದ ಹುಬ್ಬಳ್ಳಿ ಮೂಲದವನು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಯುವಕ ಆತಂಕದ ಮನೋಸ್ಥಿತಿಯನ್ನು ಹೊಂದಿದ್ದ. ತನ್ನ ದೈನಂದಿನ ಜೀವನದ ಮೇಲೆ ಆತನ ಈ ಸ್ಥಿತಿ ಸಾಕಷ್ಟು ಪರಿಣಾಮ ಬೀರುತ್ತಿದ್ದರಿಂದ ಅದನ್ನು ನಿಗ್ರಹಿಸುವ ಬಗ್ಗೆ ಯೋಚಿಸುತ್ತಿದ್ದ. ಈ ಸಂದರ್ಭದಲ್ಲಿ ಅವನಿಗೆ ಯಾರಿಂದಲೋ ಹೆಣಿಗೆ ಮಾಡುವ ಹವ್ಯಾಸ ರೂಢಿಸಿಕೊಂಡರೆ ಈ ರೀತಿಯ ಆತಂಕ ಮನಸ್ಥಿತಿಯನ್ನು ನಿಗ್ರಹಿಸಲು ಅದು ಸಹಾಯ ಮಾಡುತ್ತದೆ ಎಂಬ ವಿಷಯ ಗೊತ್ತಾಗಿದ್ದೆ ತಡ ತಕ್ಷಣ ಸೋಹೆಲ್ ಯುಟ್ಯೂಬ್ ನಲ್ಲಿ ಹೆಣಿಗೆಯ ಕುರಿತಾದ ಹಾಗೂ ಅದನ್ನು ಹೇಗೆ ಮಾಡಬೇಕೆಂಬುದರ ಕುರಿತಾದ ವಿಡಿಯೋಗಳನ್ನು ವೀಕ್ಷಿಸಲು ಪ್ರಾರಂಭಿಸಿದ.

ಯುವಕನಿಗೆ ಒಲಿದ ಹೆಣಿಗೆಯ ಕಲೆ

ಅದೃಷ್ಟವೆಂಬಂತೆ ಆತನಿಗೆ ಆ ಹೆಣಿಗೆಯ ಕಲೆ ಅತ್ಯಂತ ಬೇಗನೇ ಒಲಿದೇ ಬಿಟ್ಟಿತು. ಅಲ್ಪ ಸಮಯದಲ್ಲೇ ಸೋಹೆಲ್ ಅದನ್ನು ಕರಗತ ಮಾಡಿಕೊಂಡ. ಹೀಗಿರುವಾಗ ಒಂದೊಮ್ಮೆ ಅವನು ತನ್ನ ಸಹೋದರಿಗಾಗಿ ಒಂದು ಸ್ವೆಟರ್ ಹೆಣಿದು ಅವಳಿಗೆ ನೀಡಿದ್ದ, ಇದು ಎಷ್ಟು ಚೆನ್ನಾಗಿತ್ತೆಂದರೆ ಅವನ ಸಹೋದರಿಯಲ್ಲದೆ ಅವಳ ಸ್ನೇಹಿತೆಯೊಬ್ಬಳಿಗೂ ಸಹ ಇದು ಸಾಕಷ್ಟು ಇಷ್ಟವಾಯಿತು.

ಇದನ್ನೂ ಓದಿ:Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ!

ಕೂಡಲೇ ಆ ಸ್ನೇಹಿತೆ ತನಗೂ ಒಂದು ಸ್ವೆಟರ್ ಹೆಣಿದು ಕೊಡಲು ವಿನಂತಿಸಿದಳು ಹಾಗೂ ಅದಕ್ಕಾಗಿ ಬೆಲೆ ಪಾವತಿಸುವುದಾಗಿಯೂ ಹೇಳಿದಳು. ಇಲ್ಲಿಂದಲೇ ಸೋಹೆಲ್ ತಲೆಯಲ್ಲಿ ಈ ಬಗ್ಗೆ ಆಲೋಚನೆ ಬಂದು, ಯಾಕೆ ತಾನು ಈ ಕಲೆಯ ಮೂಲಕ ಇನ್ನೊಂದು ಆದಾಯದ ಮೂಲ ಕಂಡುಕೊಳ್ಳಬಾರದೆಂದು ನಿರ್ಧರಿಸಿ ಆ ದಿಶೆಯಲ್ಲಿ ಕೆಲಸ ಪ್ರಾರಂಭಿಸಿಯೇ ಬಿಟ್ಟ.

ಹೆಣಿಗೆಯನ್ನೇ ವೃತ್ತಿಯನ್ನಾಗಿ ಮಾಡಿದ ಸೋಹೆಲ್

ಅಂದಿನಿಂದ ಸೋಹೆಲ್ ಹೆಣಿಗೆಯನ್ನೂ ಸಹ ತನ್ನ ಇನ್ನೊಂದು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾನೆ. ಸೋಹೆಲ್ ಕ್ಯಾಬ್ ಒಂದರಲ್ಲಿ ಕುಳಿತು ಪ್ರಯಾಣಿಸುವಾಗ ಹೆಣಿಗೆ ಕಾಯಕದಲ್ಲಿ ತೊಡಗಿರುವ ಅವನ ಒಂದು ವಿಡಿಯೋ ಮೂರು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಸದ್ಯ ಸೋಹೆಲ್ ತನ್ನ ಇನ್ಸ್ಟಾಗ್ರಾಮ್ ಖಾತೆಗೆ 13,000 ಅನುಯಾಯಿಗಳನ್ನು ಹೊಂದಿದ್ದಾನೆ.
ಈ ಬಗ್ಗೆ ಮಾತನಾಡುವ ಸೋಹೆಲ್ "ನನಗೆ ನನ್ನ ಸಹೋದರಿ ಹಾಗೂ ನನ್ನ ಅಪ್ಪ ಯಾವಾಗಲೂ ಬೆಂಬಲಿಸಿದ್ದಾರೆ, ನನ್ನ ಅಪ್ಪ ನನಗೆ ಅಂಕುಡೊಂಕಾದ ನೂಲುಗಳನ್ನು ಸರಿ ಮಾಡುವಲ್ಲಿ ಸಹಕರಿಸಿದರೆ ನನ್ನ ಸಹೋದರಿ ಆರ್ಡರ್ ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾಳೆ" ಎಂದು ಹೇಳುತ್ತಾನೆ.

ಹೆಣಿಗೆಯ ಬಗ್ಗೆ ಸೊಹೇಲ್ ಹೇಳಿದ್ದು ಹೀಗೆ

ಇನ್ನು, ಸೋಹೆಲ್ ತನ್ನ ಈ ಹವ್ಯಾಸ ಹಾಗೂ ಅದರಿಂದ ತನ್ನ ಮನಸ್ಥಿತಿಯ ಮೇಲೆ ಆದ ಪರಿಣಾಮದ ಬಗ್ಗೆ ಇದು ತನ್ನ ಮನಸ್ಥಿತಿಯನ್ನು ಶಾಂತವಾಗಿಟ್ಟುಕೊಳ್ಳಲು ಸಾಕಷ್ಟು ನೆರವು ನೀಡಿರುವುದಾಗಿ ನುಡಿಯುತ್ತಾನೆ. ಅವನು ಹೇಳುವಂತೆ ಸೋಹೆಲ್ ದಿನಕ್ಕೆ ಮೂರು ಗಂಟೆಯಾದರೂ ಈ ಹೆಣಿಗೆ ಕೆಲಸಕ್ಕೆಂದು ಮೀಸಲಿಡುತ್ತಾನಂತೆ.

ವಯಸ್ಕರು ಹಾಗೂ ಮಕ್ಕಳಿಗೆ ಸ್ವೆಟರ್ ತಯಾರಿಸುವ ಬಗ್ಗೆ ಸೋಹೆಲ್ ಹೇಳುತ್ತಾನೆ, ವಯಸ್ಕರಿಗಾಗಿ ಸ್ವೆಟರ್ ತಯಾರಿಸಲು ಅವನಿಗೆ 16-17 ದಿನಗಳು ತಗುಲಿದರೆ ಮಕ್ಕಳಿಗಾಗಿ ಸ್ವೆಟರ್ ತಯಾರಿಸಲು ಸುಮಾರು 10-12 ದಿನಗಳು ಬೇಕಾಗುತ್ತದೆ ಎಂದು.

ಇದನ್ನೂ ಓದಿ:  Donkey Milk Business: ಕತ್ತೆ ಹಾಲಿನಿಂದ ಕೋಟ್ಯಾಧಿಪತಿ ಆದ ಯುವಕ! ಕತ್ತೆ ಎಂದು ಮೂದಲಿಸುವ ಮುನ್ನ ಎಚ್ಚರ

ಪ್ರತಿದಿನ ಹೊರಾಂಗಣದಲ್ಲಿ ಕುಳಿತು ತಾನು ಹೆಣಿಗೆ ಮಾಡುವುದನ್ನು ನೋಡುವ ಜನರು ಅವನ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ನೀಡುತ್ತಿರುವುದು ಅವನಿಗೆ ಹೆಚ್ಚು ಸಂತಸ ತಂದುಕೊಟ್ಟಿದೆ ಎಂದು ಹೇಳುವ ಸೋಹೆಲ್ ತಮ್ಮ ತಾಯಿಯಿಂದ ಈ ವಿದ್ಯೆಯನ್ನು ಕಲಿಯಲು ಸಾಧ್ಯವಾಗಲಿಲ್ಲ ಎಂಬ ಒಂದು ಕೊರತೆ ಹಾಗೂ ದುಖ ತೋಡಿಕೊಳ್ಳುತ್ತಾರೆ, ಏಕೆಂದರೆ ಸೋಹೆಲ್ ಈ ವಿದ್ಯೆ ಕಲಿಯುವುದಕ್ಕಿಂತ ಮುಂಚೆಯೇ ಕೆಲ ವರ್ಷಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾನೆ.
Published by:Ashwini Prabhu
First published: