• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Rekha Jhunjhunwala: ಕೇವಲ 15 ದಿನದಲ್ಲಿ 1 ಸಾವಿರ ಕೋಟಿ ಗಳಿಸಿದ ಮಹಿಳೆ! ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ರೇಖಾ ಹೆಸರು

Rekha Jhunjhunwala: ಕೇವಲ 15 ದಿನದಲ್ಲಿ 1 ಸಾವಿರ ಕೋಟಿ ಗಳಿಸಿದ ಮಹಿಳೆ! ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ರೇಖಾ ಹೆಸರು

ರೇಖಾ ಮತ್ತು ರಾಕೇಶ್​ ಜುಂಜುನ್ವಾಲಾ

ರೇಖಾ ಮತ್ತು ರಾಕೇಶ್​ ಜುಂಜುನ್ವಾಲಾ

ಷೇರು ಮಾರುಕಟ್ಟೆಯನ್ನೇ ಆಳಿದ ವ್ಯಕ್ತಿ ರಾಕೇಶ್ ಜುಂಜುನ್ವಾಲಾ. ಸ್ಟಾಕ್‌ ಮಾರ್ಕೆಟಿಂಗ್‌ ಕಿಂಗ್‌ ಅಂತಾನೇ ಫೇಮಸ್‌ ಆಗಿದ್ದ ರಾಕೇಶ್ ಜುಂಜುನ್ವಾಲಾ ಆಗಸ್ಟ್ 14, 2022 ರಂದು ಕೊನೆಯುಸಿರೆಳೆದರು. ಪ್ರಸ್ತುತ ಉದ್ಯಮಿಯ ಸಂಪೂರ್ಣ ಸಾಮ್ರಾಜ್ಯವನ್ನು ಅವರ ಪತ್ನಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಮುಂದೆ ಓದಿ ...
 • Share this:

ಷೇರು ಮಾರುಕಟ್ಟೆಯನ್ನೇ (Stock Market) ಆಳಿದ ವ್ಯಕ್ತಿ ರಾಕೇಶ್ ಜುಂಜುನ್ವಾಲಾ. ಸ್ಟಾಕ್‌ ಮಾರ್ಕೆಟಿಂಗ್‌ ಕಿಂಗ್‌ ಅಂತಾನೇ ಫೇಮಸ್‌ ಆಗಿದ್ದ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಆಗಸ್ಟ್ 14, 2022 ರಂದು ಕೊನೆಯುಸಿರೆಳೆದರು. ಪ್ರಸ್ತುತ ಉದ್ಯಮಿಯ (Employee) ಸಂಪೂರ್ಣ ಸಾಮ್ರಾಜ್ಯವನ್ನು ಅವರ ಪತ್ನಿ ನಡೆಸಿಕೊಂಡು ಹೋಗುತ್ತಿದ್ದಾರೆ.


ಫೋರ್ಬ್ಸ್ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ರೇಖಾ ಹೆಸರು
ಪತಿ ರಾಕೇಶ್‌ರಂತೆ ರೇಖಾ ಕೂಡ ವ್ಯವಹಾರದಲ್ಲಿ ಚಾಣಾಕ್ಷರು. ಇದಕ್ಕೆ ಸಾಕ್ಷಿಯಾಗಿ 2023ರಲ್ಲಿ ಫೋರ್ಬ್ಸ್ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ 16 ಹೊಸಬರಲ್ಲಿ, ಮೂವರು ಮಹಿಳೆಯರಲ್ಲಿ ರೇಖಾ ಜುಂಜುನ್ವಾಲಾ ಅವರ ಹೆಸರು ಕೂಡ ಸೇರಿದೆ. ಅಷ್ಟೇ ಅಲ್ಲದೇ ರೇಖಾ ಅವರು 2023 ರ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅಗ್ರ ಭಾರತೀಯರಾಗಿ ಹೊರಹೊಮ್ಮಿದ್ದಾರೆ.


ರೇಖಾ ಜುಂಜುನ್ವಾಲಾ ವ್ಯಾಪಾರಗಳು ಮತ್ತು ನಿವ್ವಳ ಮೌಲ್ಯ
ಭಾರತದ ಬಿಗ್ ಬುಲ್ ಎಂದೂ ಕರೆಯಲ್ಪಡುವ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಅವರ ಒಟ್ಟು ನಿವ್ವಳ ಮೌಲ್ಯ $ 5.1 ಬಿಲಿಯನ್. ಇವರ ಪೋರ್ಟ್‌ಫೋಲಿಯೊದಲ್ಲಿ ಪಟ್ಟಿ ಮಾಡಲಾದ ಅತ್ಯಂತ ಮೌಲ್ಯಯುತವಾದ ಹಿಡುವಳಿ ಎಂದರೆ ಟಾಟಾ ಸಮೂಹದ ಭಾಗವಾಗಿರುವ ವಾಚ್ ಮತ್ತು ಆಭರಣ ತಯಾರಕ ಟೈಟಾನ್. ಖಾಸಗಿ ಒಡೆತನದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ರೇರ್ ಎಂಟರ್‌ಪ್ರೈಸಸ್‌ನಲ್ಲೂ ಆದಾಯ ಗಳಿಸುತ್ತಿದ್ದಾರೆ.


ಇದನ್ನೂ ಓದಿ: ಭಾರತದ ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆಯೇ ಈ ದೇಶಗಳಿಗೆ ನೀವು ಭೇಟಿ ನೀಡಬಹುದು


29 ಕಂಪನಿಗಳಲ್ಲಿ ಹೂಡಿಕೆ
ಟೈಟಾನ್, ಟಾಟಾ ಮೋಟಾರ್ಸ್ ಮತ್ತು ಕ್ರಿಸಿಲ್ ಸೇರಿದಂತೆ 29 ಕಂಪನಿಗಳಲ್ಲಿ ಹೂಡಿಕೆಗಳನ್ನು ಹೊಂದಿರುವ ರೇಖಾ ಅವರ ನಿವ್ವಳ ಮೌಲ್ಯವು $ 5.1 ಬಿಲಿಯನ್ ಆಗಿದೆ.


15 ದಿನಗಳಲ್ಲಿ 1,000 ಕೋಟಿ ಲಾಭ
ಇತ್ತೀಚೆಗೆ, ಜುಂಜುನ್ವಾಲಾ ಅವರು ಕೇವಲ 15 ದಿನಗಳಲ್ಲಿ 1,000 ಕೋಟಿ ರೂಪಾಯಿಗಳ ಲಾಭ ಗಳಿಸಿ ಸುದ್ದಿಯಾಗಿದ್ದರು. ರೇಖಾ ಜುಂಜುನ್ವಾಲಾ ಅವರು ಜನವರಿಯಿಂದ ಮಾರ್ಚ್ 2023 ರವರೆಗೆ ಟೈಟಾನ್ ಕಂಪನಿಯಲ್ಲಿ ಷೇರುಗಳನ್ನು 0.12 ಪ್ರತಿಶತದಷ್ಟು ಹೆಚ್ಚಿಸಿದರು ಮತ್ತು Q4FY23 ಸಮಯದಲ್ಲಿ 10.50 ಲಕ್ಷ ಟೈಟಾನ್ ಷೇರುಗಳನ್ನು ಖರೀದಿಸಿದರು. ಟೈಟಾನ್‌ನ ಷೇರಿನ ಬೆಲೆಯು ಸುಮಾರು 2460 ರೂ.ಗಳಿಂದ 2590 ರೂ.ಗಳ ಪ್ರತಿ ಹಂತಗಳ ಏರಿಕೆಯಿಂದಾಗಿ, ರೇಖಾ ಜುಂಜುನ್ವಾಲಾ ಅವರ ನಿವ್ವಳ ಮೌಲ್ಯವೂ ಸಹ ಏರಿಕೆ ಕಂಡಿತು.
ಟಾಟಾ ಗ್ರೂಪ್‌ಗೆ ಸೇರಿದ ಈ ಕಂಪನಿಯಲ್ಲಿರುವ ತನ್ನ ಪಾಲನ್ನು ಕಡಿಮೆ ಮಾಡದೇ ಇದ್ದಲ್ಲಿ ರೇಖಾ ಜುಂಜುನ್ವಾಲಾ ಅವರ ನಿವ್ವಳ ಆಸ್ತಿ ಮೌಲ್ಯವು ಏರಿಕೆ ಕಾಣಲು ಕಾರಣವಾಗಿತ್ತು.


ರೇಖಾ ಮತ್ತು ರಾಕೇಶ್​ ಜುಂಜುನ್ವಾಲಾ


2021ರಿಂದ ನಷ್ಟ ಅನುಭವಿಸಿದ್ದ ರೇಖಾ
ಈ ವರ್ಷ ರೇಖಾ ಅವರ ಹೂಡಿಕೆಯು ಲಾಭ ತಂದುಕೊಡುತ್ತಿದೆ. ಆದರೆ ಟಾಟಾ ಗ್ರೂಪ್ ಕಂಪನಿ ಟೈಟಾನ್ ಷೇರುಗಳು ಶೇಕಡಾ 29 ರಷ್ಟು ಕುಸಿತ ಕಂಡಿದ್ದವು. ಮಾರ್ಚ್ 17, 2022 ರಿಂದ ಟೈಟಾನ್ ಕಂಪನಿಯಲ್ಲಿ ಜುಂಜುನ್ವಾಲಾ ಅವರ ಹಿಡುವಳಿ ಮೌಲ್ಯವು ರೂ 3,489 ಕೋಟಿಗಳಷ್ಟು ಕುಸಿದಿತ್ತು. ಈ ಕಂಪನಿಯ ಷೇರುಗಳು ಒಂಬತ್ತು ತಿಂಗಳಲ್ಲಿ ಕನಿಷ್ಠ ರೂ. 2,767.55 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಸ್ಟಾಕ್ ಸೆಪ್ಟೆಂಬರ್ 2021 ರಿಂದ ಅದರ ಅತ್ಯಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸಿತು.


top videos  25.25 ಕೋಟಿ ಮೌಲ್ಯದ ಮನೆ ಖರೀದಿ
  ರೇಖಾ ಅವರು ಸಹ ಪತಿಯಂತೆ ಬಹಳ ಸಮಯದಿಂದ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಜುಂಜುನ್ವಾಲಾ ಕುಟುಂಬವು ದಕ್ಷಿಣ ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿ 4,500 ಚದರ ಅಡಿ ವಿಸ್ತೀರ್ಣದ ಡ್ಯೂಪ್ಲೆಕ್ಸ್ ಅನ್ನು 25.25 ಕೋಟಿಗೆ ಖರೀದಿಸಿದೆ. ಹಾಲಿಡೇ ಹೋಮ್ ಜೊತೆಗೆ ಏಳು ಮಲಗುವ ಕೋಣೆಗಳು, ಒಂದು ಪೂಲ್, ಜಕುಝಿ, ಜಿಮ್ ಮತ್ತು ಲೋನಾವಾಲಾದಲ್ಲಿ ಡಿಸ್ಕೋ ಸೇರಿ ಈ ಮನೆಯು ಹಲವಾರು ವಿಶೇಷತೆಗಳನ್ನು ಹೊಂದಿದೆ.

  First published: