Business: ಕಾರ್ಪೊರೇಟ್ ಉದ್ಯೋಗಕ್ಕಿಂತ ಈ ಉದ್ಯಮವೇ ಬೆಸ್ಟ್; MBA ಪದವಿ ಪಡೆದು ಆಹಾರೋದ್ಯಮದಲ್ಲಿ ಯಶಸ್ಸು ಕಂಡವರಿವರು

ಎಂಬಿಎ, ಎಂಜಿನಿಯರಿಂಗ್‌ ಹೀಗೆ ಅನೇಕ ಉತ್ತಮ ಪದವಿ ಹೊಂದಿದವರು ಹೋಟೆಲ್‌, ಕೃಷಿ ಅಂತಾ ಬೇರೆ ಬೇರೆ ಕ್ಷೇತ್ರಗಳ ಕಡೆ ವಾಲುತ್ತಿದ್ದಾರೆ ಮತ್ತು ಅದರಲ್ಲಿ ಯಶಸ್ಸನ್ನು ಸಹ ಪಡೆಯುತ್ತಿದ್ದಾರೆ. ಹೀಗೆ ಪದವಿಯ ಗಡಿಯನ್ನು ಮೀರಿ ಕನಸು ಕಾಣಲು ಧೈರ್ಯಮಾಡಿದ ಐದು ಎಂಬಿಎ ಪದವೀಧರರ ಕಥೆ ಇಲ್ಲಿದೆ.

ಆಹಾರೋದ್ಯಮದಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರರು

ಆಹಾರೋದ್ಯಮದಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರರು

  • Share this:
ಇತ್ತೀಚಿನ ದಿನಗಳಲ್ಲಿ ಸಂಬಳ (Salary) ಪಡೆಯುವ ಕೆಲಸಕ್ಕಿಂತ ಹೆಚ್ಚಾಗಿ ಉದ್ಯಮದ (Business) ಕಡೆ ಯುವ ಪೀಳಿಗೆ ಒಲವು ತೋರುತ್ತಿದೆ. ಆಸಕ್ತಿ ಇರುವಂತಹ ಉದ್ಯಮವನ್ನು ಆರಂಭಿಸಲು ಉತ್ತಮ ವೇತನ ಪಡೆಯುವ ಕೆಲಸವನ್ನೇ ತೊರೆಯುತ್ತಿರುವ ಹಲವಾರು ನಿದರ್ಶನಗಳು ಕಣ್ಣಮುಂದಿವೆ. ಎಂಬಿಎ (MBA), ಎಂಜಿನಿಯರಿಂಗ್‌ (Engineering) ಹೀಗೆ ಅನೇಕ ಉತ್ತಮ ಪದವಿ ಹೊಂದಿದವರು ಹೋಟೆಲ್‌, ಕೃಷಿ ಅಂತಾ ಬೇರೆ ಬೇರೆ ಕ್ಷೇತ್ರಗಳ ಕಡೆ ವಾಲುತ್ತಿದ್ದಾರೆ ಮತ್ತು ಅದರಲ್ಲಿ ಯಶಸ್ಸನ್ನು (Success) ಸಹ ಪಡೆಯುತ್ತಿದ್ದಾರೆ. ಹೀಗೆ ಪದವಿಯ ಗಡಿಯನ್ನು ಮೀರಿ ಕನಸು ಕಾಣಲು ಧೈರ್ಯಮಾಡಿದ ಐದು ಎಂಬಿಎ ಪದವೀಧರರ (Graduates) ಕಥೆ ಇಲ್ಲಿದೆ.

1. ಎಂಬಿಎ ಲಿಂಬು ಪಾನಿ ವಾಲಾ
ಎಂಬಿಎ ಪದವೀಧರ ಮೊಹಮ್ಮದ್ ಆರಿಫ್ ಹುಸೇನ್ ಸಾಂಪ್ರದಾಯಿಕ ಉದ್ಯೋಗದ ಮಾರ್ಗವನ್ನು ತ್ಯಜಿಸಿ ನಿಂಬು ಪಾನಿ ವ್ಯಾಪಾರವನ್ನು ಆರಂಭಿಸಿದ್ದಾರೆ. ಇವರ ಈ ನಿರ್ಧಾರಕ್ಕೆ ಹಲವಾರು ಅವಮಾನಗಳು, ಟೀಕೆಗಳು ವ್ಯಕ್ತವಾಗಿದ್ದವಂತೆ. ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು "ನೀವು ಕುಟುಂಬದ ಹೆಸರನ್ನು ಹಾಳು ಮಾಡುತ್ತಿದ್ದೀರಿ, ಇಂತಹ ಕೆಲಸಗಳು ಕುಟುಂಬದ ಗೌರವವನ್ನು ಕಡಿಮೆ ಮಾಡುತ್ತವೆ ಹೀಗೆ ಮುಂತಾದ ವಿಷಯಗಳಿಂದ ನನ್ನನ್ನು ಅವಮಾನಿಸಿದ್ದರು" ಎಂದು ಹೇಳಿದ್ದರು.

ಪದವಿ ಮುಗಿಸಿದ ಅವರು ಫೆಬ್ರವರಿ 2021 ರಲ್ಲಿ ಹೈದರಾಬಾದ್‌ನಲ್ಲಿ ʼಎಂಬಿಎ ಲಿಂಬು ಪಾನಿ ವಾಲಾ', ಎಂಬ ಸೋಡಾ ನಿಂಬು ಪಾನಿ, ಸಾದಾ ನಿಂಬು ಪಾನಿ ಮತ್ತು ಡ್ರೈ ಐಸ್ ನಿಂಬು ಪಾನಿ ಮತ್ತು ಮಾಕ್‌ಟೇಲ್‌ ಒದಗಿಸುವ ಪಾನೀಯ ಸ್ಟಾಲ್‌ ತೆರೆದು, 30 ರಿಂದ 60 ರೂ.ವರೆಗೆ ಈ ಪಾನೀಯಗಳನ್ನು ಮಾರಾಟ ಮಾಡುತ್ತಿದ್ದಾರೆ. ನಮ್ಮ ಅಂಗಡಿ ಆರೋಗ್ಯಕರ ಪಾನೀಯಗಳನ್ನು ಒದಗಿಸುವ ಮೂಲಕ ಇತರೆ ಪಾನೀಯ ಅಂಗಡಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಮೊಹಮ್ಮದ್.

2. ರಾಮ್ ಕಿ ಬಂದಿ
ರಾಮ್ ಕುಮಾರ್ ಶಿಂಧೆ ಎಂಬ ಎಂಬಿಎ ಪದವೀಧರ ಹೈದರಾಬಾದ್‌ನಲ್ಲಿ ತಮ್ಮ ಎಂಬಿಎ ಮುಗಿಸಿ, ಕೆಲಸಕ್ಕೆ ಹೋಗದೆ ತಮ್ಮ ತಂದೆಯಂತೆ ಆಹಾರೋದ್ಯಮ ಶುರು ಮಾಡಲು ನಿರ್ಧರಿಸಿದರು, ರಾಮ್‌ ಕುಮಾರ್‌ ತಂದೆ ಲಕ್ಷ್ಮಣ್‌ ದೋಸೆ, ಇಡ್ಲಿ ಮಾರುವ ತಳ್ಳುಗಾಡಿ ವ್ಯವಹಾರವನ್ನು ನಡೆಸುತ್ತಿದ್ದರು.

ಇದೇ ವ್ಯವಹಾರವನ್ನು ಮುಂದುವರೆಸಲು ಬಯಸಿದ ರಾಮ್‌ ಕುಮಾರ್‌ ಕೊಂಚ ಉತ್ತಮವಾದ ಹೋಟೆಲ್‌ ಅನ್ನು ಆರಂಭಿಸಿದರು. ತಮ್ಮ ಆಹಾರ ವ್ಯವಹಾರದಲ್ಲಿ ಪಿಜ್ಜಾವನ್ನು ಸೇರಿಸಿಕೊಂಡು ಆಹಾರೋದ್ಯಮ ಆರಂಭಿಸಿದರು. ನಂತರ ಸುಮಾರು 70 ಜನರನ್ನು ನೇಮಿಸಿಕೊಂಡರು. ಇವರ ಈ ಉದ್ಯಮವು ಈಗ 1,000 ಗ್ರಾಹಕರ ಬಳಗವನ್ನು ಹೊಂದಿದೆ.

ಇದನ್ನೂ ಓದಿ: Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

"ಜನರು ನಮ್ಮ ಆಹಾರದ ರುಚಿಯನ್ನು ಮಾತ್ರವಲ್ಲದೆ ಒಂದು ಅನನ್ಯ ಅನುಭವಕ್ಕಾಗಿ ಸ್ಟಾಲ್‌ಗೆ ಭೇಟಿ ನೀಡುತ್ತಾರೆ. ನಗರಕ್ಕೆ ಭೇಟಿ ನೀಡುವ ವಿದೇಶಿಗರು ಸಹ ಗರಿಗರಿಯಾದ ಚೀಸ್ ದೋಸೆಗಳನ್ನು ಸವಿಯಲು ಇಲ್ಲಿಗೆ ಬರುತ್ತಾರೆ. ಬಿಸಿ ಬಿಸಿಯಾದ ಆಹಾರ, ಹಲವಾರು ವೈವಿಧ್ಯಗಳ ಮೆನು ಮತ್ತು ಕಡಿಮೆ ಬೆಲೆಗಳು ಗ್ರಾಹಕರನ್ನು ಆಕರ್ಷಿಸುತ್ತವೆ ಎಂದು ರಾಮ್‌ ಕುಮಾರ್‌ ಹೇಳಿದರು.

3. ವಾಟ್ ಎ ಸ್ಯಾಂಡ್ವಿಚ್
33 ವರ್ಷ ವಯಸ್ಸಿನ ಎಂಬಿಎ ಪದವೀಧರರಾದ ಹುಸೇನ್ ಜುಜರ್ ಲೋಖಂಡವಾಲಾ ಅವರು ಸ್ಯಾಂಡ್‌ವಿಚ್‌ ಮಾರುವ 'ವಾಟ್ ಎ ಸ್ಯಾಂಡ್ವಿಚ್' ಸ್ಟಾಲ್‌ ಅನ್ನು ಆರಂಭಿಸಿದರು. 2013ರಲ್ಲಿ ಪುಣೆಯಲ್ಲಿ 1.5 ಲಕ್ಷದ ಆರಂಭಿಕ ಹೂಡಿಕೆಯೊಂದಿಗೆ ಆರಂಭವಾದ ಈ ಆಹಾರೋದ್ಯಮ 50ಕ್ಕೂ ಹೆಚ್ಚು ಡೆಲಿವರಿ ಕಿಚನ್‌ಗಳೊಂದಿಗೆ ಬಹುಕೋಟಿ ಸಾಮ್ರಾಜ್ಯವಾಗಿ ಬೆಳೆದಿದೆ.

4. ಬಿಯಾಂಡ್‌ ಸ್ನ್ಯಾಕ್ಸ್
2018 ರಲ್ಲಿ, ಅಲಪ್ಪುಳ ಮೂಲದ ಮಾನಸ್ ಮಧು ಅವರು ಎಂಬಿಎ ಮುಗಿಸಿ ಕೆಲಸಕ್ಕೆ ಸೇರಿದ್ದರು. ನಂತರ ಉನ್ನತ ಹುದ್ದೆ ತೊರೆದು ಆಹಾರೋದ್ಯಮ ಆರಂಭಿಸಿದರು. ನಾಲ್ಕು ವಿಭಿನ್ನ ರುಚಿಗಳಲ್ಲಿ ಬಾಳೆಹಣ್ಣಿನ ಚಿಪ್ಸ್ ಅನ್ನು ಮಾರಾಟ ಮಾಡುವ ಬಿಯಾಂಡ್ ಸ್ನಾಕ್ಸ್ ಅನ್ನು ಪ್ರಾರಂಭಿಸಿದರು.

ಮಾನಸ್‌ ಮಧು ಅವರ ಈ ವ್ಯಾಪಾರ ಯಶಸ್ಸನ್ನು ಪಡೆದಿದ್ದು, ಈಕ್ವಿಟಿಯಲ್ಲಿ 2.5 ಪ್ರತಿಶತ ಷೇರಿಗೆ ಪ್ರತಿಯಾಗಿ 50 ಲಕ್ಷ ರೂ ಪಡೆಯುತ್ತಿದ್ದಾರೆ. ಮುಂಬೈ ಮತ್ತು ಪುಣೆಯ 3,500 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳು ಲಭ್ಯವಿದೆ ಎಂದು ಮಾನಸ್ ಹೇಳುತ್ತಾರೆ.

5. ಚೀವ್ ಎನ್ ಬ್ರೂ - ಈಟ್‌ ಆನ್‌ ದಿ ಗೋ
ಕಾಶ್ಮೀರ, ಪ್ರವಾಸ ಮತ್ತು ಆಹಾರ ಎರಡಕ್ಕೂ ಪ್ರಸಿದ್ಧಿಯಾದ ತಾಣ. ಇಲ್ಲಿನ ಆಹಾರವನ್ನು ಇತರೆಡೆ ಪರಿಚಯಿಸುವ ಸಲುವಾಗಿ ಪುಣೆಯ ಭಾರತೀಯ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿರುವ ಸಾಜದ್ ಅಹ್ಮದ್ ಭಟ್ ಅವರು ಚೀವ್ ಎನ್ ಬ್ರೂ - ಈಟ್‌ ಆನ್‌ ದಿ ಗೋ ಅನ್ನು ಆರಂಭಿಸಿದರು. ರುಚಿಕರವಾದ ಕಾಶ್ಮೀರಿ ತಿಂಡಿಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಪದವಿ ಮುಗಿಸಿ ಇದನ್ನು ಆರಂಭಿಸಿದರು.

ಇದನ್ನೂ ಓದಿ:  Online Business: ಕೇವಲ 2 ಲಕ್ಷದಿಂದ ಉದ್ಯಮ ಆರಂಭಿಸಿದ ಸ್ನೇಹಿತರು! ಈಗ 135 ಕೋಟಿ ಒಡೆಯರು

"ನಾವು ಒಂದು ದಿನದಲ್ಲಿ 80 ಡೆಲಿವರಿ ಆರ್ಡರ್‌ಗಳನ್ನು ಪಡೆಯುತ್ತೇವೆ, ಆದರೆ ವ್ಯಾನ್ ಕೌಂಟರ್‌ನಲ್ಲಿ ನಾವು ದಿನಕ್ಕೆ 150 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆಯುತ್ತೇವೆ" ಎಂದು ಸಾಜದ್‌ ತಿಳಿಸಿದರು.
Published by:Ashwini Prabhu
First published: