Billionaire: ಕೇವಲ ಒಂದು ತಿಂಗಳಲ್ಲಿ 600 ಕೋಟಿ ರುಪಾಯಿ ಒಡೆಯನಾದ 20 ವರ್ಷದ ಯುವಕ! ಇದು ಹೇಗೆ ಸಾಧ್ಯ

ಯೂನಿವರ್ಸಿಟೀ ಆಫ್ ಸೌತ್ ಕ್ಯಾಲಿಫೋರ್ನಿಯಾದ 21 ವರ್ಷದ ವಿದ್ಯಾರ್ಥಿ ಜೇಕ್ ಫ್ರೀಮನ್, ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ ಷೇರುಗಳನ್ನು ಖರೀದಿಸಿದ್ದರು, ಅದರ ಮೂಲಕ ಅವರು ಕೋಟಿ ರೂಪಾಯಿಗಳನ್ನು ಗಳಿಸಿದರು. ಒಂದು ತಿಂಗಳಲ್ಲಿ, ಅವರು ಸುಮಾರು 878 ಕೋಟಿ ರೂಪಾಯಿಗಳನ್ನು ಗಳಿಸಿದರು. ಎಂದರೆ ಈ ವಿದ್ಯಾರ್ಥಿ ಕೇವಲ ಒಂದೇ ಒಂದು ತಿಂಗಳಲ್ಲಿ 664 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಅದೃಷ್ಟಲಕ್ಷ್ಮಿಯು ಹೇಗೆ? ಯಾವಾಗ? ಯಾರಿಗೆ? ಒಲಿದು ಬರುತ್ತಾಳೆ ಎನ್ನುವುದನ್ನು ಯಾರಿಂದಲೂ ಊಹೆ ಮಾಡಲು ಸಹ ಆಗುವುದಿಲ್ಲ ನೋಡಿ. ಇವತ್ತು ಒಂದು ನೂರು ರೂಪಾಯಿಗೆ ಪರದಾಡುವ ವ್ಯಕ್ತಿಯ (Person) ಜೇಬಿನಲ್ಲಿ ಮರುದಿನ ಸಾವಿರಾರು ರೂಪಾಯಿಗಳಿರಬಹುದು. ಅದರಲ್ಲೂ ಜನರು ಈಗಂತೂ ತಮ್ಮ ಅದೃಷ್ಟ (Luck) ಪರೀಕ್ಷೆ ಮಾಡಿಕೊಳ್ಳಲು ಮತ್ತು ಬೇಗನೆ ಹಣ (Money) ಮಾಡಬೇಕು ಅಂತ ಹಣವನ್ನು ಸೈಟ್ ಖರೀದಿ ಮಾಡುವುದರಲ್ಲಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Investment) ಮಾಡುವುದನ್ನು ನಾವು ನೋಡಿರುತ್ತೇವೆ. ಈಗಂತೂ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ (Students) ಹಿಡಿದು ಕೆಲಸ ಮಾಡುತ್ತಿರುವ ಉದ್ಯೋಗಿಗಳವರೆಗೆ ಬಹುತೇಕರು ತಮ್ಮ ಅಲ್ಪ ಸ್ವಲ್ಪ ಉಳಿತಾಯದ ಹಣವನ್ನು ಈ ಷೇರು ಮಾರುಕಟ್ಟೆಗಳಲ್ಲಿ (Share Market) ಹೂಡಿಕೆ ಮಾಡುತ್ತಿದ್ದಾರೆ.

ಷೇರು ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ
ಕೆಲವರಂತೂ ಈ ಷೇರು ಮಾರುಕಟ್ಟೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಮನೆಯಲ್ಲಿ ಕೂತು ಬೆಳಿಗ್ಗೆಯಿಂದ ಸಂಜೆಯವರೆಗೆ ಷೇರು ವಹಿವಾಟಿನಲ್ಲಿಯೇ ತಮ್ಮ ಸಮಯವನ್ನು ಹಾಕುತ್ತಾರೆ. ಇನ್ನೂ ಕೆಲವರಂತೂ ಈ ಷೇರು ಮಾರುಕಟ್ಟೆಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಸಾರ್ವಜನಿಕರು ಹೇಗೆ ಈ ಷೇರು ಮಾರುಕಟ್ಟೆಗಳಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಅಂತ ತರಬೇತಿ ಸಹ ಕೊಡುತ್ತಿದ್ದಾರೆ.

ಈ ಷೇರು ಮಾರುಕಟ್ಟೆಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುವುದರ ಬಗ್ಗೆ ಜನರು ಎಷ್ಟರ ಮಟ್ಟಿಗೆ ಗಂಭೀರವಾಗಿದ್ದಾರೆ ಎಂದರೆ ಅವರು ಹಲವಾರು ಗಂಟೆಗಳ ಕಾಲ ತಮ್ಮ ಲ್ಯಾಪ್‌ಟಾಪ್ ಮೇಲಿಂದ ತಮ್ಮ ಕಣ್ಣುಗಳನ್ನು ತೆಗೆಯುವುದೇ ಇಲ್ಲ.  ಒಟ್ಟಿನಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮತ್ತು ಅಲ್ಲಿ ಯಾವಾಗ ಯಾವ ಕಂಪನಿಯ ಷೇರುಗಳ ಬೆಲೆ ಜಾಸ್ತಿಯಾಗುತ್ತದೆ ಮತ್ತು ಯಾವ ಕಂಪನಿಗಳ ಷೇರುಗಳ ಬೆಲೆ ಕಡಿಮೆ ಆಗುತ್ತದೆ ಎನ್ನುವುದರ ಮೇಲೆ ಸಂಪೂರ್ಣವಾದ ಗಮನ ಇರುತ್ತದೆ.

ಇದನ್ನೂ ಓದಿ:  Business: ಕಾರ್ಪೊರೇಟ್ ಉದ್ಯೋಗಕ್ಕಿಂತ ಈ ಉದ್ಯಮವೇ ಬೆಸ್ಟ್; MBA ಪದವಿ ಪಡೆದು ಆಹಾರೋದ್ಯಮದಲ್ಲಿ ಯಶಸ್ಸು ಕಂಡವರಿವರು

ಒಟ್ಟಿನಲ್ಲಿ ಹೇಳುವುದಾದರೆ ಬರೀ ಭಾರತದಲ್ಲಿ ಅಲ್ಲದೆ ಬೇರೆ ಬೇರೆ ದೇಶಗಳ ಜನರು ಸಹ ತಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರಿ ಲಾಭವನ್ನು ಗಳಿಸುತ್ತಿದ್ದಾರೆ. ಅನೇಕ ಹೂಡಿಕೆದಾರರು ಈ ಷೇರು ಜಾಗತಿಕ ಮಾರುಕಟ್ಟೆಯಲ್ಲಿ ಕೋಟ್ಯಾಧಿಪತಿಗಳಾಗುತ್ತಿದ್ದಾರೆ.

215 ಕೋಟಿ ರೂ ಹೂಡಿಕೆ ಮಾಡಿದ್ದ ವ್ಯಕ್ತಿಗೆ ಸಿಕ್ತು 600 ಕೋಟಿ ರೂ 
ಇಲ್ಲೊಂದು ಸುದ್ದಿ ಸಹ ಇದಕ್ಕೆ ಸಂಬಂಧಿಸಿದ್ದಾಗಿದೆ. ಷೇರು ಮಾರುಕಟ್ಟೆಯಲ್ಲಿ 215 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ ಒಬ್ಬ ವಿದ್ಯಾರ್ಥಿಯು ಕೇವಲ ಒಂದೇ ಒಂದು ತಿಂಗಳಲ್ಲಿ 664 ಕೋಟಿ ರೂಪಾಯಿಗಳಿಗೂ ಹೆಚ್ಚು ಲಾಭ ಗಳಿಸಿದ ಕಥೆಯೊಂದು ಇದೀಗ ಬೆಳಕಿಗೆ ಬಂದಿದೆ.

ಯೂನಿವರ್ಸಿಟೀ ಆಫ್ ಸೌತ್ ಕ್ಯಾಲಿಫೋರ್ನಿಯಾದ 21 ವರ್ಷದ ವಿದ್ಯಾರ್ಥಿ ಜೇಕ್ ಫ್ರೀಮನ್, ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ ಷೇರುಗಳನ್ನು ಖರೀದಿಸಿದ್ದರು, ಅದರ ಮೂಲಕ ಅವರು ಕೋಟಿ ರೂಪಾಯಿಗಳನ್ನು ಗಳಿಸಿದರು. ಒಂದು ತಿಂಗಳಲ್ಲಿ, ಅವರು ಸುಮಾರು 878 ಕೋಟಿ ರೂಪಾಯಿಗಳನ್ನು ಗಳಿಸಿದರು. ಎಂದರೆ ಈ ವಿದ್ಯಾರ್ಥಿ ಕೇವಲ ಒಂದೇ ಒಂದು ತಿಂಗಳಲ್ಲಿ 664 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.

ಆ ಷೇರು ಯಾವುದು?
ಈ ವಿದ್ಯಾರ್ಥಿಯು ಜುಲೈನಲ್ಲಿ ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ ಸುಮಾರು 50 ಲಕ್ಷ ಷೇರುಗಳನ್ನು 440 ರೂಪಾಯಿಗಳಿಗೆ ಒಂದರಂತೆ ಖರೀದಿಸಿದರು ಮತ್ತು ಕೇವಲ ಒಂದು ತಿಂಗಳಲ್ಲಿ ಜೇಕ್ ಈ ಷೇರುಗಳನ್ನು ಮಾರಾಟ ಮಾಡಿದಾಗ ಈ ಸ್ಟಾಕ್ ನ ಮೌಲ್ಯವು 2,160 ರೂಪಾಯಿಗಳ ಮಟ್ಟವನ್ನು ತಲುಪಿತ್ತು.

ಇದನ್ನೂ ಓದಿ: Best Business Idea: ಭಾರತದ ಟಾಪ್ 10 ಬ್ಯುಸಿನೆಸ್​ ಐಡಿಯಾಗಳು! ಕಡಿಮೆ ಹೂಡಿಕೆ, ಹೆಚ್ಚಿನ ಲಾಭ

ಜೇಕ್ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಹಣವನ್ನು ಎರವಲು ಪಡೆದು ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಿದರು. ಡೈಲಿ ಮೇಲ್ ಅವರೊಂದಿಗಿನ ಸಂಭಾಷಣೆಯಲ್ಲಿ, ಜೇಕ್ ಅವರು ತಮ್ಮ ಚಿಕ್ಕಪ್ಪನೊಂದಿಗೆ ಸ್ಟಾಕ್ ಗಳ ಬಗ್ಗೆ ಚರ್ಚಿಸಿದ ನಂತರ ಸುಮಾರು 200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಹೇಳಿದರು. "ಇಂತಹ ಒಂದು ದೊಡ್ಡ ಲಾಭವನ್ನು ನಾನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ" ಎಂದು ಫ್ರೀಮನ್ ಸಂದರ್ಶನವೊಂದರಲ್ಲಿ ಹೇಳಿದರು.
Published by:Ashwini Prabhu
First published: