Stock Trading Loss: ಸ್ಟಾಕ್ ಟ್ರೇಡಿಂಗ್​ನಲ್ಲಿ 30 ಲಕ್ಷ ರೂಪಾಯಿ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Stock Trading Loss: ಎಷ್ಟೋ ಜನರು ದುರಾಸೆಗೆ ಬಿದ್ದು ಈ ಸ್ಟಾಕ್ ಟ್ರೇಡಿಂಗ್​ನಲ್ಲಿ ಹಣ ಕಳೆದುಕೊಂಡವರು ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿಗೆ ಸ್ಟಾಕ್ ಟ್ರೇಡಿಂಗ್ ಒಂದು ದೊಡ್ಡ ಚಟವಾಗಿ ಬೆಳೆದಿದೆ.

  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ಹೌದು, ಯಾವುದೇ ಅಭ್ಯಾಸ, ಚಟಗಳು ಇತಿ-ಮಿತಿಯಲ್ಲಿ ಇದ್ದರೆ ಅದು ಚೆನ್ನಾಗಿರುತ್ತದೆ. ಇವೆಲ್ಲವೂ ಜಾಸ್ತಿಯಾದರೆ ಅದು ಮುಂದೊಂದು ದಿನ ಜೀವನಕ್ಕೆ ಮಾರಕವಾಗುತ್ತದೆ. ಅದರಲ್ಲೂ ಈಗಂತೂ ಈ ಮೊಬೈಲ್ ಫೋನ್​ಗಳಲ್ಲಿ (Mobile) ಹಣವನ್ನು ಹಾಕಿ ಆಡುವ ಗೇಮ್ ಗಳು ಎಷ್ಟೋ ಬಾರಿ ಚಟವಾಗಿ ಬಿಡುತ್ತವೆ ಮತ್ತು ಅದರಲ್ಲಿ ತಮ್ಮ ಮನೆ ಮತ್ತು ಹಣವನ್ನು (Money) ಕಳೆದುಕೊಂಡು ರಸ್ತೆಗೆ ಬಂದು ನಿಲ್ಲುವವರನ್ನು ನೋಡಿದ್ದೇವೆ. ಇನ್ನೂ ಕೆಲವು ಜನರಿಗೆ ತಮಗೆ ಒಂದು ನಿರ್ದಿಷ್ಟವಾದ ಆಟದ ಬಗ್ಗೆ ಚಟ ಬೆಳೆದಿದೆ ಅಂತ ಗೊತ್ತಿದ್ದರೂ ಸಹ ಅಂತಹ ಚಟಗಳಿಂದ (Addiction) ಹೊರ ಬರಲು ಆಗುವುದಿಲ್ಲ.


ಹೀಗೆ, ಈಗ ಅನೇಕ ಜನರು ಮನೆಯಲ್ಲಿಯೇ ಕುಳಿತುಕೊಂಡು ಟ್ರೇಡಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಎಷ್ಟೋ ಜನರು ದುರಾಸೆಗೆ ಬಿದ್ದು ಈ ಸ್ಟಾಕ್ ಟ್ರೇಡಿಂಗ್​ನಲ್ಲಿ ಹಣ ಕಳೆದುಕೊಂಡವರು ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿಗೆ ಸ್ಟಾಕ್ ಟ್ರೇಡಿಂಗ್ ಒಂದು ದೊಡ್ಡ ಚಟವಾಗಿ ಬೆಳೆದಿದೆ.


ಬೆಂಗಳೂರಿನ ವ್ಯಕ್ತಿಗೆ ಚಟವಾಗಿ ಬೆಳೆದಿದೆ ಈ ಸ್ಟಾಕ್ ಮಾರ್ಕೆಟ್ ಹೂಡಿಕೆ


ಬೆಂಗಳೂರಿನ 39 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮತ್ತು ವ್ಯಾಪಾರ ಮಾಡುವ ಅಭ್ಯಾಸವು ಚಟವಾಗಿ ಬದಲಾಗಿದೆ. ಈಗ ಈ ಚಟದಿಂದ ಹೊರಬರುವ ಸಲುವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಎಂದರೆ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ: ಕಾರಿನಲ್ಲಿ ಎಸಿ ಬಳಸಿದ್ರೆ ನಿಜವಾಗ್ಲೂ ಪೆಟ್ರೋಲ್​ ಖಾಲಿಯಾಗುತ್ತಾ?


ವ್ಯಾಪಾರದಲ್ಲಿ 30 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನು ಕಳೆದುಕೊಂಡ ನಂತರ ಮತ್ತು ಅವರ ಕುಟುಂಬ ಸದಸ್ಯರಿಂದ ಚಿಕಿತ್ಸೆ ಪಡೆಯಲು ಮನವೊಲಿಸಿದ ನಂತರ ವ್ಯಕ್ತಿಯು ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (ಎಸ್‌ಯುಟಿ) ಕ್ಲಿನಿಕ್ ನಲ್ಲಿ ವೃತ್ತಿಪರರನ್ನು ಸಂಪರ್ಕಿಸಲು ಆಯ್ಕೆ ಮಾಡಿಕೊಂಡಿದ್ದಾರೆ.


ಇಂತಹ ಚಟಗಳ ಬಗ್ಗೆ ಏನಂತಾರೆ ವೈದ್ಯರು?


ಜೂಜು ಅಥವಾ ಗೇಮಿಂಗ್ ವ್ಯಸನದಂತಹ ಇತರ ಪ್ರಕರಣಗಳಿಗಿಂತ ಭಿನ್ನವಾಗಿ, ರೋಗಿಯ ಸಮಸ್ಯೆಯನ್ನು ವಿವರವಾಗಿ ಅರ್ಥಮಾಡಿಕೊಳ್ಳುವ ಮೂಲಕ ರೋಗಿಯ ಪರಿಸ್ಥಿತಿಯನ್ನು ಪರಿಹರಿಸಲು ಅವರು ಹೊಸ ವಿಧಾನವನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಎಸ್‌ಯುಟಿ ಕ್ಲಿನಿಕ್ ಸಂಯೋಜಕ ಡಾ. ಮನೋಜ್ ಕುಮಾರ್ ಶರ್ಮಾ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


ಸಾಂದರ್ಭಿಕ ಚಿತ್ರ


ಈ ಹಿಂದೆ ಆ ವ್ಯಕ್ತಿಯು ಷೇರು ಮಾರುಕಟ್ಟೆಯಲ್ಲಿ ತನ್ನ ಭವಿಷ್ಯವಾಣಿ ಹೇಳಿರುವಂತೆಯೇ ಆಗಿದೆ ಅಂತ ಅವರು ಹೇಳಿದರು. ಆ ವ್ಯಕ್ತಿಯು ಈ ಹಿಂದೆ ಗಮನಾರ್ಹ ನಷ್ಟವನ್ನು ಅನುಭವಿಸಿದ್ದನು, ಆದರೆ ವ್ಯಾಪಾರದಲ್ಲಿ ಅವನ ಅತಿಯಾದ ಆಸಕ್ತಿಯು ತನ್ನ ಜೀವನದ ಎಲ್ಲಾ ಉಳಿತಾಯದ ಹಣವನ್ನು ಕಳೆದುಕೊಳ್ಳುವಂತೆ ಮತ್ತು ಇತರರಿಂದ ಹಣವನ್ನು ಸಾಲವಾಗಿ ಪಡೆಯುವಂತೆ ಮಾಡಿತು.


ಇದು ಅವರ ಕುಟುಂಬ ಜೀವನದ ಮೇಲೆ ತುಂಬಾನೇ ಪ್ರಭಾವ ಬೀರಿತು ಮತ್ತು ಚಿಕಿತ್ಸೆ ಪಡೆಯಲು ಸಹ ಕಾರಣವಾಯಿತು. ಅವರ ಚಿಕಿತ್ಸೆಯ ಭಾಗವಾಗಿ, ಅವರು ಈಗಾಗಲೇ ಎರಡು ಸೆಷನ್ ಗಳಿಗೆ ಹಾಜರಾಗಿದ್ದಾರೆ.
ಸ್ಟಾಕ್ ಟ್ರೇಡಿಂಗ್ ಚಟಕ್ಕೆ ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿದೆ ಅಂತಾರೆ ಮನಶ್ಶಾಸ್ತ್ರಜ್ಞರು


ಸ್ಟಾಕ್ ಟ್ರೇಡಿಂಗ್ ಪ್ರಕರಣಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಸ್‌ಯುಟಿ ವೃತ್ತಿಪರರು ಒಪ್ಪಿಕೊಂಡಿದ್ದಾರೆ. ಹಿರಿಯ ಮನಶ್ಶಾಸ್ತ್ರಜ್ಞರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ "ಸ್ಟಾಕ್ ಟ್ರೇಡಿಂಗ್ ಚಟಕ್ಕೆ ಅಥವಾ ವ್ಯಸನಕ್ಕೆ ಚಿಕಿತ್ಸೆ ನೀಡುವುದು ನಮಗೆ ದೊಡ್ಡ ಸವಾಲಾಗಿದೆ, ಏಕೆಂದರೆ ಇದಕ್ಕೆ ಅತ್ಯಂತ ಜಾಗರೂಕ ಮತ್ತು ಸಂಪೂರ್ಣ ವಿಧಾನದ ಅಗತ್ಯವಿದೆ, ಏಕೆಂದರೆ ರೋಗಿಗೆ ಔಷಧಿಗಳ ಅಗತ್ಯವಿರುವ ಯಾವುದೇ ಹಠಾತ್ ಸಮಸ್ಯೆಗಳಿಲ್ಲ. ಈ ಸಂದರ್ಭದಲ್ಲಿ ವ್ಯಕ್ತಿಯು ವ್ಯಾಪಾರದಿಂದ ಸಂಪೂರ್ಣವಾಗಿ ದೂರವಿರಬೇಕೇ ಅಥವಾ ನಿಯಂತ್ರಿತ ರೀತಿಯಲ್ಲಿ ಅದರಲ್ಲಿ ತೊಡಗಬೇಕೇ ಎಂಬ ಎರಡು ಬಹುಮುಖ್ಯವಾದ ಅಂಶಗಳು ನಮ್ಮ ಮುಂದೆ ಇವೆ” ಅಂತ ಹೇಳಿದರು.

First published: