Broadband: ದುಡ್ಡು ಕಟ್ಟಿ ಸುಸ್ತಾಗಿ ಸ್ವಂತ ಬ್ರಾಡ್‌ಬ್ಯಾಂಡನ್ನೇ ತಯಾರಿಸಿದ್ದಾರೆ ಈ ವ್ಯಕ್ತಿ! ಏನ್​ ತಲೆ ಗುರೂ

ಕೆಲವೊಮ್ಮೆ ನಾವು ಹಾಕಿಸಿಕೊಂಡ ಈ ಬ್ರಾಡ್‌ಬ್ಯಾಂಡ್ ನ ಬಿಲ್ ತುಂಬಾನೇ ಬಂದರೆ ಜನರು ಏನು ಮಾಡುವುದು ಹೇಳಿ? ಬಹುತೇಕರು ತಮ್ಮ ಕೆಲಸ ಸುಗಮವಾಗಿ ನಡೆಯುತ್ತಾ ಇದೆಯಲ್ಲಾ ಅಂತ ಬಿಲ್ ಬಗ್ಗೆ ಅಷ್ಟಾಗಿ ತಲೆ ಕೆಡೆಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಹೀಗೆ ದುಬಾರಿಯಾದ ಬಿಲ್ ಗಳನ್ನು ಪಾವತಿಸಬಾರದು ಎಂದು ವಿನೂತನವಾದ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸ್ವಂತ ಬ್ರಾಡ್‌ಬ್ಯಾಂಡ್ ತಯಾರಿಸಿದ ವ್ಯಕ್ತಿ

ಸ್ವಂತ ಬ್ರಾಡ್‌ಬ್ಯಾಂಡ್ ತಯಾರಿಸಿದ ವ್ಯಕ್ತಿ

  • Share this:
ಸಾಮಾನ್ಯವಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ (Company) ಕೆಲಸ ಮಾಡುವ ಉದ್ಯೋಗಿಗಳಿಗೆ ವಾರದಲ್ಲಿ ಇಂತಿಷ್ಟು ದಿನಗಳ ಕಾಲ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತಹ ಅವಕಾಶವನ್ನು (Chance) ಕಂಪನಿಯು ನೀಡಿರುತ್ತದೆ. ಇದಕ್ಕಾಗಿ ಅಂತಹ ಉದ್ಯೋಗಿಗಳು ತಮ್ಮ ಮನೆಯಲ್ಲೂ ಸಹ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಅನ್ನು (Broadband) ಹಾಕಿಸಿಕೊಂಡಿರುತ್ತಾರೆ. ಅಮೆರಿಕದಂತಹ ದೇಶಗಳಲ್ಲಿ ಕೆಲ ಕಂಪನಿಗಳ ಉದ್ಯೋಗಿಗಳು (Employees) ತಮಗೆ ಬೇಕಾದಾಗ ಮತ್ತು ಆಫೀಸಿಗೆ (Office) ಹೋಗಲು ಮತ್ತು ಕೆಲವೊಮ್ಮೆ ಹೋಗಲು ಆಗದೆ ಇರುವುದರಿಂದ ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ಕೆಲಸ ಮಾಡಿಕೊಳ್ಳುವುದರಿಂದ ಬಹುತೇಕರು ಈ ವೈ-ಫೈ ಮತ್ತು ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಅನ್ನು ತಮ್ಮ ಮನೆಯಲ್ಲಿ ಹಾಕಿಸಿಕೊಳ್ಳುತ್ತಾರೆ.

ದುಬಾರಿ ಬಿಲ್ ಪಾವತಿ ತಪ್ಪಿಸಲು  ಸ್ವಂತ ಬ್ರಾಡ್‌ಬ್ಯಾಂಡ್ ತಯಾರಿ
ಕೆಲವೊಮ್ಮೆ ನಾವು ಹಾಕಿಸಿಕೊಂಡ ಈ ಬ್ರಾಡ್‌ಬ್ಯಾಂಡ್ ನ ಬಿಲ್ ತುಂಬಾನೇ ಬಂದರೆ ಜನರು ಏನು ಮಾಡುವುದು ಹೇಳಿ? ಬಹುತೇಕರು ತಮ್ಮ ಕೆಲಸ ಸುಗಮವಾಗಿ ನಡೆಯುತ್ತಾ ಇದೆಯಲ್ಲಾ ಅಂತ ಬಿಲ್ ಬಗ್ಗೆ ಅಷ್ಟಾಗಿ ತಲೆ ಕೆಡೆಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಹೀಗೆ ದುಬಾರಿಯಾದ ಬಿಲ್ ಗಳನ್ನು ಪಾವತಿಸಬಾರದು ಎಂದು ವಿನೂತನವಾದ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಈ ಅಮೆರಿಕದ ವ್ಯಕ್ತಿಗೆ ಬಂದಿರುವ ದುಬಾರಿಯಾದ ಬ್ರಾಡ್‌ಬ್ಯಾಂಡ್ ಬಿಲ್ ಅನ್ನು ಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳಲು ತನ್ನದೇ ಆದ ಸ್ವಂತವಾದ ಬ್ರಾಡ್‌ಬ್ಯಾಂಡ್ ಆನ್ನು ನಿರ್ಮಿಸಿಕೊಂಡಿದ್ದಾನೆ ಎಂದು ಹೇಳಬಹುದು. ಈ ವ್ಯಕ್ತಿಗೆ ಬಂದ ಬಿಲ್ ಬರೋಬ್ಬರಿ 40 ಲಕ್ಷ ರೂಪಾಯಿ ಆಗಿತ್ತು ಎಂದು ಹೇಳಬಹುದು. ಭಾರಿ ಮೊತ್ತದ ಬಿಲ್ ನೋಡಿದ ನಂತರ ಈ ವ್ಯಕ್ತಿ ತನ್ನದೇ ಆದ ಬ್ರಾಡ್‌ಬ್ಯಾಂಡ್ ಅನ್ನು ನಿರ್ಮಿಸಿಕೊಂಡಿರುವ ಆ ವ್ಯಕ್ತಿಗೆ ಯುಎಸ್ ಸರ್ಕಾರ 2.6 ಮಿಲಿಯನ್ ಡಾಲರ್ ಎಂದರೆ 20 ಕೋಟಿ ರೂಪಾಯಿ ಹಣವನ್ನು ನೀಡಿದೆ ಎಂದು ಹೇಳಬಹುದು.

ಐದು ವರ್ಷಗಳ ಹಿಂದೆ  ಐಎಸ್‌ಪಿ ನಿರ್ಮಿಸಲು ಪ್ರಾರಂಭ 
ಜೇರೆಡ್ ಮೌಚ್ ತನ್ನ ಮನೆಗೆ ಇಂಟರ್ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಲು ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ತನ್ನದೇ ಆದ ಫೈಬರ್ ಬ್ರಾಡ್‌ಬ್ಯಾಂಡ್ ಅನ್ನು ರಚಿಸಿಕೊಂಡಿದ್ದಾನೆ. 1.5 ಎಂಬಿಪಿಎಸ್ ವೇಗದ ಇಂಟರ್ನೆಟ್ ವೇಗದಿಂದ ಅನೇಕ ಬಾರಿ ಕೆಲಸದಲ್ಲಿ ಅಡೆತಡೆಗಳನ್ನು ಅನುಭವಿಸಿದ ನಂತರ ಮೌಚ್ ತುಂಬಾನೇ ಬೇಸತ್ತು ಹೋಗಿದ್ದರು ಎಂದು ಹೇಳಬಹುದು. ಆದ್ದರಿಂದ, ಅವರು ಸುಮಾರು ಐದು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಐಎಸ್‌ಪಿ (ಇಂಟರ್ನೆಟ್ ಸೇವಾ ಪೂರೈಕೆದಾರ) ಅನ್ನು ನಿರ್ಮಿಸಲು ಪ್ರಾರಂಭಿಸಿದರು.

ಇದನ್ನೂ ಓದಿ: Cauvery: ಕಾವೇರಿ ನದಿಯಲ್ಲಿ ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳೇ ಇವರ ಆದಾಯದ ಮೂಲ

ಅಮೆರಿಕದ ಪ್ರಮುಖ ಬ್ರಾಡ್‌ಬ್ಯಾಂಡ್ ಕಂಪನಿಗಳು ತಮ್ಮ ಪ್ರದೇಶಕ್ಕೆ ತಮ್ಮ ವೇಗದ ನೆಟ್‌ವರ್ಕ್ ಗಳನ್ನು ವಿಸ್ತರಿಸಿದ ನಂತರ ಅವರು "ಹೈ-ಸ್ಪೀಡ್ ಇಂಟರ್ನೆಟ್ ಪಡೆಯಲು ದೂರವಾಣಿ ಕಂಪನಿಯನ್ನು ಪ್ರಾರಂಭಿಸಬೇಕಾಯಿತು" ಎಂದು ಅವರು ಹೇಳಿದರು. ಮೌಚ್ ಮೊದಲಿಗೆ ಇಂಟರ್ನೆಟ್ ದೈತ್ಯ ಕಾಮ್ಕಾಸ್ಟ್ ಗೆ ತಮ್ಮ ನೆಟ್‌ವರ್ಕ್ ಅನ್ನು ವಿಸ್ತರಿಸುವಂತೆ ಕೇಳಿದರು. ಆದರೆ ಅವರು ಅವನಿಗೆ ಹಾಗೆ ನೆಟ್‌ವರ್ಕ್ ನ ವ್ಯಾಪ್ತಿಯನ್ನು ವಿಸ್ತರಿಸಲು 50,000 ಡಾಲರ್ ಎಂದರೆ 40 ಲಕ್ಷ ರೂಪಾಯಿ ಬಿಲ್ ಮಾಡಿದ್ದರಂತೆ. ಈ ದೊಡ್ಡ ಮೊತ್ತವನ್ನು ಉಲ್ಲೇಖಿಸಿದ್ದನ್ನು ನೋಡಿ ಇವರು ತಮ್ಮದೇ ಆದ ಬ್ರಾಡ್‌ಬ್ಯಾಂಡ್ ಅನ್ನು ನಿರ್ಮಿಸಿಕೊಳ್ಳಲು ಮುಂದಾದರು.

55 ಡಾಲರ್ ಗೆ 100 ಎಂಬಿಪಿಎಸ್ ಮತ್ತು ಅನಿಯಮಿತ ಡೇಟಾ 
ಈ ಪ್ರಕ್ರಿಯೆಯು ಇವರಿಗೆ ಅಷ್ಟೊಂದು ಸರಳವಾಗಿರಲಿಲ್ಲ ಮತ್ತು ಮೌಚ್ ಅವರು ಮೊದಲು ನೆಟ್‌ವರ್ಕ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರಿಂದ ವಾಷ್ಟೆನಾವ್ ಫೈಬರ್ ಪ್ರಾಪರ್ಟೀಸ್ ಕಂಪನಿಯನ್ನು ಪ್ರಾರಂಭಿಸಲು ಅವರಿಗೆ ಅನುವು ಮಾಡಿಕೊಟ್ಟಿತು. ಮೌಚ್ ಮೊದಲು ತನ್ನ ಸಲುವಾಗಿ ಈ ಕಂಪನಿಯನ್ನು ಪ್ರಾರಂಭಿಸಿದನು, ಆದರೆ ಅವನ ಬೇಸರಗೊಂಡ ನೆರೆಹೊರೆಯವರು ಸಹ ಇವರ ಬ್ರಾಡ್‌ಬ್ಯಾಂಡ್ ಬಳಸಿಕೊಂಡು ಸೈನ್ ಅಪ್ ಮಾಡಲು ಪ್ರಾರಂಭಿಸಿದರು.

ಇದನ್ನೂ ಓದಿ:  Business Ideas: ಖುಷಿ ತಂದ ಮೆಣಸಿನ ಕೃಷಿ, 1 ಲಕ್ಷದ 80 ಸಾವಿರ ಲಾಭ ಗಳಿಸಿದ ಮಹಿಳೆಯರು!

ಇಂದು ಸುಮಾರು 70 ನೆರೆಹೊರೆಯವರು ಮೌಚ್ ನ ಬ್ರಾಡ್‌ಬ್ಯಾಂಡ್ ಅನ್ನು ಬಳಸುತ್ತಾರೆ ಮತ್ತು ಈಗ ಹೆಚ್ಚುವರಿ 600 ಮನೆಗಳಿಗೆ ಸೇವೆ ಸಲ್ಲಿಸಲು ಸರ್ಕಾರವು ಅವರಿಗೆ ಅನುದಾನದ ಹಣವನ್ನು ಈಗಾಗಲೇ ನೀಡಿದೆ. ಗ್ರಾಹಕರು ತಿಂಗಳಿಗೆ 55 ಡಾಲರ್ ಎಂದರೆ 4,300 ರೂಪಾಯಿಗೆ 100 ಎಂಬಿಪಿಎಸ್ ಮತ್ತು ಅನಿಯಮಿತ ಡೇಟಾವನ್ನು ಬಳಸಬಹುದು.
Published by:Ashwini Prabhu
First published: