Wild Fruit: ಅಪರೂಪದ ಕಾಡು ಹಣ್ಣನ್ನು ಬೆಳೆದು ಲಕ್ಷಾಧಿಪತಿಯಾದ ರೈತ! ಕೃಷಿ ಮಾಡ್ತಿನಿ ಅನ್ನುವವರು ಒಮ್ಮೆ ಇವ್ರನ್ನು ನೋಡಿ

ಕೇರಳದ ಇಡುಕ್ಕಿನಲ್ಲಿ 69 ವರ್ಷದ ರೈತನೊಬ್ಬ ತನ್ನ ಹೊಲದಲ್ಲಿ ಕಾಡಿನ ಜನರು ಇಷ್ಟಪಟ್ಟು ಸೇವಿಸುವ ಅಪರೂಪದ ಕಾಡು ಹಣ್ಣೊಂದನ್ನು ಬೆಳೆಯುವ ಮೂಲಕ ಅಪಾರವಾದ ಜನಮನ್ನಣೆ ಪಡೆದಿದ್ದಾರೆ. ಅವರೇ ಕೇರಳದ ಆದರ್ಶ ರೈತ ಬೇಬಿ ಅಬ್ರಾಹಂ ಆಗಿದ್ದಾರೆ. ಆ ಕಾಡು ಹಣ್ಣಿನ ಹೆಸರೇನು ಗೊತ್ತೆ? ಮುಂದಕ್ಕೆ ಓದಿ

ಮೂತಿ ಪಝಂ

ಮೂತಿ ಪಝಂ

  • Share this:
ಅಪರೂಪದ ಕಾಡು ಹಣ್ಣನ್ನು ಬೆಳೆದು ಲಕ್ಷಾಧಿಪತಿಯಾದ ರೈತ! ಕೃಷಿ ಮಾಡ್ತಿನಿ ಅನ್ನುವವರು ಒಮ್ಮೆ ಇವ್ರನ್ನು ನೋಡಿಕೇರಳದ ಇಡುಕ್ಕಿನಲ್ಲಿ (Idukki in Kerala) 69 ವರ್ಷದ ರೈತನೊಬ್ಬ (Farmer) ತನ್ನ ಹೊಲದಲ್ಲಿ ಕಾಡಿನ ಜನರು ಇಷ್ಟಪಟ್ಟು ಸೇವಿಸುವ ಅಪರೂಪದ ಕಾಡು ಹಣ್ಣೊಂದನ್ನು (wild fruit) ಬೆಳೆಯುವ ಮೂಲಕ ಅಪಾರವಾದ ಜನಮನ್ನಣೆ ಪಡೆದಿದ್ದಾರೆ. ಅವರೇ ಕೇರಳದ ಆದರ್ಶ ರೈತ ಬೇಬಿ ಅಬ್ರಾಹಂ (Baby Abraham) ಆಗಿದ್ದಾರೆ. ಆ ಕಾಡು ಹಣ್ಣಿನ ಹೆಸರೇನು ಗೊತ್ತೆ? ಅದು ಕಾಡಿನಲ್ಲಿ ಸಮೃದ್ಧವಾಗಿ ಬೆಳೆಯುವ ಅಪರೂಪದ ‘ಮೂತಿ ಪಝಂ’ (Mooti Pazham) ಹಣ್ಣಾಗಿದೆ. ಆ ಹಣ್ಣಿನ ವಿಶಿಷ್ಟತೆ ಏನು? ಅದನ್ನು ಹೇಗೆ ಬೆಳೆಯಲಾಗುತ್ತದೆ? ಇನ್ನು ಇತರ ಮಾಹಿತಿಗಳನ್ನು ಈ ರೈತನಿಂದಲೇ ಕೇಳಿ ತಿಳಿದುಕೊಳ್ಳೋಣ ಬನ್ನಿ.

ಬಾಕೊರಿಯಾ ಕರ್ಟ್‌ಲೆನ್ಸಿಸ್‌ ಮರದ ಹಣ್ಣು
ಇದು ಬಾಕೊರಿಯಾ ಕರ್ಟ್‌ಲೆನ್ಸಿಸ್‌ ಎಂಬ ಮರದ ಹಣ್ಣಾಗಿದೆ. ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ಸೇವಿಸುವ ಈ ಹಣ್ಣುಗಳು ಕೇರಳದ ಇಡುಕ್ಕಿಯ ಕಾಡುಗಳ ಬಳಿ ಸಮೃದ್ಧವಾಗಿ ಬೆಳೆಯುತ್ತವೆ. ಈ ಹಣ್ಣುಗಳು ಈ ಕೇರಳದ ರೈತನಿಗೆ ಬಹು ಆಕರ್ಷಕವಾಗಿ ಕಂಡಿರುವುದರಿಂದ ಅವುಗಳ ಸಸ್ಯಗಳನ್ನು ತಂದು ತನ್ನ ಹೊಲದಲ್ಲಿ ನೆಟ್ಟು, ಈಗ ಆ ಸಸ್ಯಗಳು ಮರಗಳಾಗಿ ಬೆಳೆದು ಯಥೇಚ್ಛವಾಗಿ ಹಣ್ಣುಗಳನ್ನು ಬಿಡುತ್ತಿವೆ.

ಈ ಬಗ್ಗೆ ರೈತ ಏನು ಹೇಳಿದ್ದಾರೆ ನೋಡಿ
“ಈ ಕಾಡು ಹಣ್ಣುಗಳು ಮರದ ಕಾಂಡದಲ್ಲಿ ಹಣ್ಣುಗಳನ್ನು ಬಿಡುತ್ತವೆ. ಆಗ ಅದರ ದೃಶ್ಯವನ್ನು ನೋಡುವುದೇ ಸುಂದರವಾಗಿರುತ್ತದೆ. ನಾನು ಮತ್ತು ನನ್ನ ಅಣ್ಣ ಚಿಕ್ಕವರಿದ್ದಾಗ ಈ ಹಣ್ಣುಗಳನ್ನು ಕಿತ್ತುಕೊಂಡು ಬರಲು ದಿನವೂ ಕಾಡಿಗೆ ಹೋಗುತ್ತಿದ್ದೆವು. ಈ ಹಣ್ಣುಗಳು ಅತ್ಯಂತ ರುಚಿಕರ ಹಣ್ಣಾಗಿದೆ. ಆಗ ಅದರ ಪೌಷ್ಟಿಕಾಂಶದ ಬೆಲೆಯ ಬಗ್ಗೆ ನಮಗೆ ಖಂಡಿತ ತಿಳಿದಿರಲಿಲ್ಲ ”ಎಂದು ಕೇರಳದ ರೈತ ಬೇಬಿ ಅಬ್ರಹಾಂ ಮಾಧ್ಯಮದ ಜೊತೆ ಮಾತನಾಡುವಾಗ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Ikipalin: ಸಂಬಂಧಿಕರು ಸಾವನ್ನಪ್ಪಿದರೆ ತಮ್ಮ ಬೆರಳುಗಳನ್ನು ಕತ್ತರಿಸಿಕೊಳ್ತಾರೆ ಈ ಮಹಿಳೆಯರು!ತಮ್ಮ ಮಾತನ್ನು ಮುಂದುವರಿಸಿದ ರೈತ ಬೇಬಿ ಅಬ್ರಾಹಂ ಅವರು “ಈ ಕಾಡು ಹಣ್ಣು ಆಕರ್ಷಕ ಬಣ್ಣದಿಂದ ಕೂಡಿದ್ದು, ಸಿಹಿ ಮತ್ತು ಹುಳಿ ಮಿಶ್ರಿತ ರುಚಿಯನ್ನು ಹೊಂದಿರುವುದರಿಂದ ಈ ಹಣ್ಣುಗಳನ್ನು ಕಾಡಿನಲ್ಲಿರುವ ಪ್ರಾಣಿಗಳಾದ ಆನೆಗಳು, ಅಳಿಲುಗಳು ಮತ್ತು ಮಂಗಗಳಂತಹ ಪ್ರಾಣಿಗಳು ಇವುಗಳನ್ನು ತಿನ್ನುತ್ತವೆ. ಈ ಹಣ್ಣುಗಳೆಂದರೆ ಸಸ್ಯಾಹಾರಿ ಪ್ರಾಣಿಗಳಿಗೆ ತುಂಬಾ ಇಷ್ಟ. ಆದರೆ ಜಾಗತಿಕ ಅಭಿವೃದ್ಧಿ ಎಂಬ ಹೆಸರಿನಲ್ಲಿ ಕಾಡುಗಳ ನಾಶ ಮಾಡಿರುವುದರಿಂದ ಈ ಹಣ್ಣಿನ ಮರಗಳು ಕಣ್ಮರೆಯಾಗಿವೆ ಮತ್ತು ಈಗ ಎಲ್ಲಿಯೂ ಕಂಡುಬರುತ್ತಿಲ್ಲ” ಎಂದು ಹೇಳಿದರು.

ಕೇರಳದ ಈ ಆದರ್ಶ ರೈತನ ಹಿನ್ನೆಲೆ?
ಈ ಕೇರಳದ ರೈತ ಈಗ 69 ವರ್ಷದ ಹರೆಯ ವ್ಯಕ್ತಿಯಾಗಿದ್ದಾರೆ. ಇವರು ಕೃಷಿಯನ್ನೆ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇವರು ಈ ಹಿಂದೆ 30 ವರ್ಷಗಳ ಹಿಂದೆ ಬುಡಕಟ್ಟು ಜನಾಂಗದವರಿಂದ ಕಾಡು ಹಣ್ಣಾದ ʼಮೂತಿ ಪಝಂʼ ನ ಮೂರು ಸಸಿಗಳನ್ನು ಖರೀದಿಸಿ ಅವರ ಹೊಲದಲ್ಲಿ ನೆಟ್ಟಿದ್ದು, ಈಗ ಹಣ್ಣುಗಳಾಗಿ ಫಲ ನೀಡುತ್ತಿವೆ ಎಂದು ಈ ರೈತನ ಸಹೋದರ ತಿಳಿಸಿದರು.

ಇಂದು, ನನ್ನ ತಮ್ಮ ತನ್ನ ಮನೆಯ ಸುತ್ತಲಿನ ಒಂದು ಎಕರೆ ಹೊಲದಲ್ಲಿ ಸುಮಾರು 250 ಮೂತಿ ಪಝಂ ಮರಗಳನ್ನು ಬೆಳೆಸಿದ್ದಾರೆ. ಇದಲ್ಲದೆ, ಅವರು ಅದರ ಸಸಿಗಳನ್ನು ಬೆಳೆಸಿ, ಅದರ ಮೂಲಕ ಈ ಕಾಡು ಹಣ್ಣು ಹೊಂದಿರುವ ಪೋಷಕಾಂಶಗಳ ಕುರಿತು ಸಾಕಷ್ಟು ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಹಣ್ಣಿನ ಸಸಿಗಳ ಮಾರಾಟದಿಂದ ವಾರ್ಷಿಕವಾಗಿ ಸುಮಾರು 1 ಲಕ್ಷ ರೂಪಾಯಿಗಳನ್ನು ನನ್ನ ತಮ್ಮ ಗಳಿಸುತ್ತಿದ್ದಾರೆ ಎಂದು ಅವರ ಸಹೋದರ ಹೇಳಿದರು.

ಈ ಮರಗಳು ಹೆಚ್ಚಾಗಿ ಎಲ್ಲಿ ಕಂಡು ಬರುತ್ತವೆ?
ಪಶ್ಚಿಮ ಘಟ್ಟದ ಪರ್ವತಗಳಲ್ಲಿ ಈ ಮರಗಳು ಹೆಚ್ಚಾಗಿ ಕಂಡುಬರುತ್ತವೆ. 'ಮೂತಿ' ಎಂಬ ಹೆಸರಿನ ಒಳಾರ್ಥವು 'ಕೆಳಗೆ' ಅಥವಾ 'ಕೆಳಭಾಗದಲ್ಲಿ' ಮತ್ತು 'ಪಜಮ್' ಎಂದರೆ 'ಹಣ್ಣು' ಎಂದು ಹೇಳಲಾಗುತ್ತದೆ. ಅಂದರೆ ಕೆಳಭಾಗದಲ್ಲಿ ಬೆಳೆಯುವ ಹಣ್ಣು ಎಂಬ ಅರ್ಥವನ್ನು ಹೊಂದಿದೆ.

ಇದನ್ನೂ ಓದಿ:  ರೈತನ ಅದೃಷ್ಟ ಬದಲಿಸಿದ ಕೃಷಿ, ಈಗ ಲಕ್ಷಗಟ್ಟಲೆ ಸಂಪಾದನೆ, ತೋಟದ ಮನೆಗೆ ಡಿಸಿ ಎಂಟ್ರಿ!

ಕೇರಳದ ಅರಣ್ಯಗಳಿರುವ ಇಡುಕ್ಕಿ, ಪತ್ತನಂತಿಟ್ಟ, ಕೊಲ್ಲಂ, ತ್ರಿಶೂರ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಈ ಮರಗಳು ಹೆಚ್ಚಾಗಿ ಕಂಡುಬರುತ್ತವೆ. ಇದಲ್ಲದೆ, ಇವು ಕೇರಳದ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ ಸಹ ಕಾಣ ಸಿಗುತ್ತವೆ.
Published by:Ashwini Prabhu
First published: