Pears Farming: ಅರೇ ವಾವ್! ಈ ಹಣ್ಣು ಬೆಳೆಸಿ ವರ್ಷಕ್ಕೆ 25 ಲಕ್ಷ ರೂಪಾಯಿ ಗಳಿಸ್ತಾರೆ ರೈತ

1980 ರಲ್ಲಿ, ಅರಣ್ಯ ನಿಗಮದಲ್ಲಿ ಗುತ್ತಿಗೆದಾರರಾಗಿದ್ದ ಹಾಜಿ ಮೊಹಮ್ಮದ್ ಶಫಿ ಶೇಖ್ ಅವರು ಕಾಶ್ಮೀರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಅಲ್ಲಿ ಕಣ್ಣಿಗೆ ಬಿದ್ದಿದ್ದು ಹೊರವಲಯದ ಒಂದು ರಸ್ತೆಯ ಬಳಿ ಇರುವ ಹಸಿರು ಪಿಯರ್ಸ್ ನ ಸುಂದರವಾದ ತೋಟ. ಬಳಿಕ ಇವರು ಈ ಕೃಷಿಯನ್ನು ಶುರು ಮಾಡಿ ಈಗ ಲಕ್ಷಾನುಗಟ್ಟಲೆ ದುಡಿಯುತ್ತಿದ್ದಾರೆ.

ಪಿಯರ್ಸ್ ಹಣ್ಣಿನ ಕೃಷಿ

ಪಿಯರ್ಸ್ ಹಣ್ಣಿನ ಕೃಷಿ

  • Share this:
ಕೆಲವೊಮ್ಮೆ ಬದುಕಿನಲ್ಲಿ ಯಾವ ಘಳಿಗೆಯಲ್ಲಿ ನಮಗೆ ಯಾವ ಆಲೋಚನೆ ಬರುತ್ತದೆಯೋ ಮತ್ತು ಯಾವ ಕೆಲಸ (Work) ನಮ್ಮ ಜೀವನಕ್ಕೆ ದೊಡ್ಡ ಆಧಾರವಾಗುತ್ತದೆಯೋ ಅಂತಾನೆ ಗೊತ್ತಾಗುವುದಿಲ್ಲ ನೋಡಿ. ಇಲ್ಲಿಯೂ ಸಹ ಅಂತಹದೇ ಒಂದು ನೈಜ ಘಟನೆಯೊಂದು ನಡೆದಿದೆ ನೋಡಿ. 1980 ರಲ್ಲಿ, ಅರಣ್ಯ ನಿಗಮದಲ್ಲಿ ಗುತ್ತಿಗೆದಾರರಾಗಿದ್ದ ಹಾಜಿ ಮೊಹಮ್ಮದ್ ಶಫಿ ಶೇಖ್ (Haji Mohammad Shafi Shaikh) ಅವರು ಕಾಶ್ಮೀರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಶ್ರೀನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ತಮ್ಮ ಸೋದರ ಸಂಬಂಧಿಗಳಾದ ಅಬ್ದುಲ್ ರಶೀದ್ ಶೇಖ್ ಮತ್ತು ಗುಲಾಮ್ ನಬಿ ಅವರನ್ನು ಅವರು ಭೇಟಿಯಾಗಬೇಕಿತ್ತು. ಹಾಗೆ ಭೇಟಿ ಆದ ನಂತರ ಈ ಮೂವರು ಅಲ್ಲೇ ಹತ್ತಿರದಲ್ಲಿರುವ ಕೆಲವು ಪ್ರವಾಸಿ ತಾಣಗಳನ್ನು (Tourist Spots) ನೋಡಿಕೊಂಡು ಬರಲು ನಿರ್ಧರಿಸಿದರು.

ಅವರು ತಮ್ಮ ಪ್ರಯಾಣವನ್ನು ಶ್ರೀನಗರದ ಸುಂದರವಾದ ಪ್ರದೇಶವಾದ ನಿಶಾತ್ ನೊಂದಿಗೆ ಪ್ರಾರಂಭಿಸಿದರು, ಇದು ಪ್ರಸಿದ್ಧ ಮೊಘಲ್ ಉದ್ಯಾನವನ್ನು ಹೊಂದಿದೆ. ಹಾಗೆ ಹೋಗುತ್ತಿದ್ದಾಗ ಅವರ ಕಣ್ಣಿಗೆ ಹೊರವಲಯದ ಒಂದು ರಸ್ತೆಯ ಬಳಿ ಇರುವ ಹಸಿರು ಪಿಯರ್ಸ್ ನ ಸುಂದರವಾದ ತೋಟ ಇತ್ತು, ಅಲ್ಲಿ ಶಫಿ ಮತ್ತು ಇತರರು ಆ ಹಣ್ಣುಗಳನ್ನು ಸವಿಯುತ್ತಾ ಮತ್ತು ವಿಚಾರಿಸುತ್ತಾ ಗಂಟೆಗಟ್ಟಲೆ ಕಳೆದರು.

ಪಿಯರ್ಸ್ ಹಣ್ಣಿನ ಆಸಕ್ತಿ ಉಂಟಾಗಿದ್ದು ಹೇಗೆ 
ಆ ತೋಟದಲ್ಲಿ ಸಮಯ ಕಳೆಯುತ್ತಾ ಆ ಪಿಯರ್ಸ್ ಹಣ್ಣಿನ ಬಗ್ಗೆ ಅವರ ಆಸಕ್ತಿ ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ, ಶಫಿ ತನ್ನ ಹುಟ್ಟೂರಾದ ಭದೇರ್ವಾದ ಭರೋವಾದಲ್ಲಿ ಇದೇ ರೀತಿಯ ತೋಟವನ್ನು ಬೆಳೆಸುವ ಆಲೋಚನೆಯನ್ನು ಮಾಡಿದರು. ಭರೋವಾದಲ್ಲಿನ ಜನರಿಗೆ ಈ ಹಣ್ಣಿನ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ, ಏಕೆಂದರೆ ಇಲ್ಲಿನ ಜನರು ಬರೀ ತಮ್ಮ ಜಾನುವಾರುಗಳಿಗೆ ಆಹಾರ ನೀಡಲು ಬೇಕಾಗುವ ಮೆಕ್ಕೆಜೋಳ ಮತ್ತು ಮೇವನ್ನು ಮಾತ್ರ ಬೆಳೆಯುತ್ತಿದ್ದರು.

"ಭರೋವಾದ ಸಂಪೂರ್ಣ ಪ್ರದೇಶವು ಗುಡ್ಡಗಾಡು ಪ್ರದೇಶವಾಗಿತ್ತು ಮತ್ತು ಬರ ಪರಿಸ್ಥಿತಿಗಳಿಂದಾಗಿ ರೈತರು ಬೆಳೆದ ಏಕೈಕ ಬೆಳೆ ಮೆಕ್ಕೆಜೋಳವಾಗಿತ್ತು. ಜನರು ಆರ್ಥಿಕವಾಗಿ ಅಷ್ಟೊಂದು ಸ್ಥಿರವಾಗಿರಲಿಲ್ಲ, ಇದರಿಂದಾಗಿ ಜೀವನೋಪಾಯಕ್ಕೆ ಮೆಕ್ಕೆಜೋಳವೊಂದನ್ನು ಬಿಟ್ಟು ಬೇರೆ ಯಾವುದೇ ಬೆಳೆಗಳನ್ನು ಪ್ರಯತ್ನಿಸಲು ಅವರಿಗೆ ಸಾಧ್ಯವಾಗಿರಲಿಲ್ಲ" ಎಂದು ಶಫಿ ಹೇಳುತ್ತಾರೆ. ಅದೇ ವರ್ಷದಲ್ಲಿ, ಅವರು ಕೆಲವು ಪಿಯರ್ಸ್ ಮತ್ತು ವಾಲ್ನಟ್ ಸಸಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅವುಗಳ ಬೆಳವಣಿಗೆ ಹೇಗಿರುತ್ತದೆ ಅಂತ ಗಮನಿಸಲು ತಮ್ಮ ಮನೆಯ ಪಕ್ಕದಲ್ಲಿಯೇ ಅವುಗಳನ್ನು ಬಿತ್ತಿದರು.

ಇದನ್ನೂ ಓದಿ: How to Become Rich: 30ನೇ ವಯಸ್ಸಿಗೇ ನೀವು ಶ್ರೀಮಂತರಾಗಬೇಕಾ? ಈಗಿನಿಂದಲೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

"ಆಶ್ಚರ್ಯಕರವಾಗಿ, ಸಸ್ಯಗಳು ಸಾಮಾನ್ಯವಾಗಿ ಬೆಳೆದವು ಮತ್ತು ಕೆಲವೇ ವರ್ಷಗಳಲ್ಲಿ ಹಣ್ಣುಗಳನ್ನು ನೀಡಲು ಪ್ರಾರಂಭಿಸಿದವು. ಇದು ನನಗೆ ತುಂಬಾ ಪ್ರೋತ್ಸಾಹದಾಯಕವಾಗಿತ್ತು ಮತ್ತು ನನ್ನ ಪ್ರದೇಶದ ತೋಟಗಾರಿಕೆಯ ವ್ಯಾಪ್ತಿಯ ಬಗ್ಗೆ ಜನರಿಗೆ ಕಲ್ಪನೆಯನ್ನು ನೀಡಲು ಹೆಚ್ಚು ಸಸ್ಯಗಳನ್ನು ಬಿತ್ತಲು ನನ್ನಲ್ಲಿ ಆಸಕ್ತಿ ಬೆಳೆಯಿತು" ಎಂದು ಶಫಿ ಹೇಳುತ್ತಾರೆ.

ಪಿಯರ್ಸ್ ಮತ್ತು ಸೇಬುಗಳಲ್ಲದೆ, ಶಫಿ ವಾರ್ಷಿಕವಾಗಿ 15 ರಿಂದ 20 ಕ್ವಿಂಟಾಲ್ ವಾಲ್ನಟ್ ಗಳನ್ನು ಸಹ ಕಟಾವು ಮಾಡುತ್ತಾರೆ.

ಪಿಯರ್ಸ್ ಬೆಳೆಯುವುದು ಶಫಿಗೆ ಸುಲಭವಾಗಿರಲಿಲ್ಲ
ಕೆಲವು ದಶಕಗಳ ಹಿಂದೆ ಕೇವಲ ಮೇವು ಮತ್ತು ಮೆಕ್ಕೆಜೋಳಕ್ಕೆ ಸೀಮಿತವಾಗಿದ್ದ ಭೂಮಿಯಲ್ಲಿ ಪಿಯರ್ಸ್ ಬೆಳೆಯುವ ಪ್ರಯಾಣವು ಶಫಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ರೋಗ-ಮುಕ್ತ ಉತ್ಪನ್ನಗಳನ್ನು ಹೊಂದಲು ತಜ್ಞರ ಸಹಾಯವನ್ನು ತೆಗೆದುಕೊಳ್ಳುವ ಅವರಿಗೆ ಇದು ನಿಜವಾಗಿಯೂ ತಾಳ್ಮೆ ಮತ್ತು ದೃಢ ನಿಶ್ಚಯದ ಕೆಲಸವಾಗಿತ್ತು.

"1993 ರಲ್ಲಿ ನನ್ನ ಪಿಯರ್ಸ್ ಬೆಳೆಯುವುದನ್ನು ನೋಡಿದಾಗ, ನಾನು ತಕ್ಷಣವೇ ನನ್ನ ಕೆಲಸವನ್ನು ತೊರೆದು ನನ್ನ ಸಂಪೂರ್ಣ ಸಮಯವನ್ನು ತೋಟಗಾರಿಕೆಗೆ ಮೀಸಲಿಟ್ಟೆ. ನನ್ನ ಪ್ರಯತ್ನಗಳು ನನ್ನ ಹಳ್ಳಿಯ ಜನರ ಹಣೆಬರಹವನ್ನು ಬದಲಾಯಿಸುತ್ತದೆ ಎಂಬ ಭರವಸೆಯನ್ನು ನಾನು ಯಾವಾಗಲೂ ಹೊಂದಿದ್ದೆ" ಎಂದು ಅವರು ಹೇಳುತ್ತಾರೆ. ತನ್ನ ಪ್ರಯತ್ನಗಳಿಂದ ಲಾಭ ಪಡೆದ ನಂತರ, ಶಫಿ ಅಂತಿಮವಾಗಿ 2002 ರಲ್ಲಿ ಮೆಕ್ಕೆಜೋಳ ಬೆಳೆಯುವ ಪದ್ಧತಿಯನ್ನು ಸಂಪೂರ್ಣವಾಗಿ ತ್ಯಜಿಸಲು ನಿರ್ಧರಿಸಿದರು ಮತ್ತು ಅವರ ನೆರೆಹೊರೆಯವರು ಮತ್ತು ಕುಟುಂಬದ ವಿರೋಧದ ಹೊರತಾಗಿಯೂ ತೋಟಗಾರಿಕೆಯನ್ನು ಮಾಡಲು ಇಲ್ಲಿಗೆ ಸ್ಥಳಾಂತರಗೊಂಡರು.

"ಇದು ನನಗೆ ತುಂಬಾ ಕಷ್ಟದ ನಿರ್ಧಾರವಾಗಿತ್ತು ಮತ್ತು ಮೆಕ್ಕೆಜೋಳ ಕೃಷಿಯನ್ನು ತ್ಯಜಿಸಿದ್ದಕ್ಕಾಗಿ ಜನರು ಆಗಾಗ್ಗೆ ನನ್ನನ್ನು ತುಂಬಾನೇ ಪ್ರಶ್ನಿಸುತ್ತಿದ್ದರು. ಆರಂಭಿಕ ವರ್ಷಗಳು ಕಷ್ಟಗಳಿಂದ ತುಂಬಿದ್ದವು, ಏಕೆಂದರೆ ಸಸ್ಯಗಳು ಫಲಗಳನ್ನು ನೀಡಲು ಸ್ವಲ್ಪ ವರ್ಷಗಳ ಅಗತ್ಯವಿತ್ತು" ಎಂದು ಅವರು ಹೇಳುತ್ತಾರೆ. ಇಲ್ಲಿ ಬೆಳೆಯುತ್ತಿರುವ ಸ್ಥಳೀಯ ಪಿಯರ್ಸ್ ಮತ್ತು ವಾಲ್ನಟ್ ಗಳು ಅವರಿಗೆ ತೃಪ್ತಿ ಪಡಿಸಲಿಲ್ಲ ಮತ್ತು ಶಫಿ ಅಂತಿಮವಾಗಿ ಶೆರ್-ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಜಮ್ಮುವಿನಿಂದ ಕೆಂಪು ಪಿಯರ್ಸ್ ಗಳನ್ನು ಬೆಳೆಯಲು ಸಹಾಯವನ್ನು ಕೋರಿದರು.

"ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡವು ದೈನಂದಿನ ಭೇಟಿಯ ಸಮಯದಲ್ಲಿ ನನ್ನ ತೋಟವನ್ನು ವೈಜ್ಞಾನಿಕವಾಗಿ ವಿಸ್ತರಿಸುವ ನನ್ನ ಬದ್ಧತೆ ಮತ್ತು ಬಯಕೆಯನ್ನು ನೋಡಿ, ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊಫೆಸರ್ ಡಾ. ವಿಕಾಸ್ ಟಂಡನ್ ಅವರು ಕೆಲವು ಇಟಾಲಿಯನ್ ಪಿಯರ್ಸ್ ಸಸಿಗಳನ್ನು ನನಗೆ ನೀಡಿದರು, ಇದು ನನ್ನ ಪ್ರಯಾಣದಲ್ಲಿ ಮಹತ್ವದ ತಿರುವು ನೀಡಿತು" ಎಂದು ಅವರು ಹೇಳುತ್ತಾರೆ.

ಕೆಂಪು ಪಿಯರ್ಸ್ ಜೊತೆಗೆ ಇತರ ಹಣ್ಣುಗಳ ಬೆಳೆ
ಯಶಸ್ವಿಯಾಗಿ ಕೆಂಪು ಪಿಯರ್ಸ್ ಬೆಳೆದ ನಂತರ, ಅವರು ತಮ್ಮ ತೋಟದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲು ಕೆಂಪು ಪಿಯರ್ಸ್ ಹಣ್ಣುಗಳೊಂದಿಗೆ ಹಸಿರು ಪಿಯರ್ಸ್ ಸಸ್ಯಗಳನ್ನು ಸಹ ಕಸಿ ಮಾಡಿದರು. "ಈಗ ನಾನು ಸುಮಾರು 250 ಕೆಂಪು ಪಿಯರ್ಸ್ ಮರಗಳನ್ನು ಹೊಂದಿದ್ದೇನೆ ಮತ್ತು ಅವುಗಳನ್ನು ಹೊರತುಪಡಿಸಿ, ನಾನು ಹಸಿರು ಪಿಯರ್ಸ್, ಸೇಬುಗಳು ಮತ್ತು ಇತರ ವೈವಿಧ್ಯಮಯ ಹಣ್ಣುಗಳನ್ನು ಬೆಳೆಯುತ್ತೇನೆ. ಸಂಶೋಧನೆಗಾಗಿ, ನನ್ನ ತೋಟದಲ್ಲಿ ವಿಲಕ್ಷಣ ಹಣ್ಣುಗಳನ್ನು ಬೆಳೆಯುವ ತಾಂತ್ರಿಕತೆಗಳನ್ನು ಕಲಿಯಲು ನಾನು ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಭೇಟಿ ನೀಡಿದ್ದೆ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Gac Fruit: ಅಪರೂಪದ ಗ್ಯಾಕ್ ಹಣ್ಣನ್ನು ಬೆಳೆಸಿ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ ಕೇರಳದ ಕೃಷಿಕ

ತನ್ನ ಹಲವಾರು ಸಸ್ಯಗಳು ಹಣ್ಣುಗಳನ್ನು ನೀಡಲು ಸಿದ್ಧವಾಗಿರುವುದರಿಂದ ಮುಂಬರುವ ವರ್ಷಗಳಲ್ಲಿ ತಮ್ಮ ಉತ್ಪಾದನೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಆಶಿಸುತ್ತಿದ್ದಾರೆ. "ನಾನು ನನ್ನ ತೋಟಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಲೇ ಇದ್ದೇನೆ. ಗುಣಮಟ್ಟದ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಹಿಡಿದು ಸಕಾಲಿಕ ಕಳೆ ತೆಗೆಯುವವರೆಗೆ, ಮುಂಬರುವ ವರ್ಷಗಳಲ್ಲಿ ನನ್ನ ಉತ್ಪಾದನೆ ಇನ್ನೂ ಹೆಚ್ಚಾಗುತ್ತದೆ" ಎಂದು ಅವರು ಹೇಳುತ್ತಾರೆ.

ಭದೇರ್ವಾದ ರೈತರಿಗೆ ಆಶಾಕಿರಣ
ಶಫಿಯ ಕಠಿಣ ಪರಿಶ್ರಮದಿಂದ ಹಣ್ಣುಗಳನ್ನು ನೀಡುವುದನ್ನು ನೋಡಿದ ಅವರ ಕಿರಿಯ ಸಹೋದರ ಅಬ್ದುಲ್ ರಶೀದ್ ಕೂಡ ತೋಟಗಾರಿಕೆಗೆ ಬದಲಾಗಿದ್ದಾರೆ ಮತ್ತು ಅವರ ತೋಟಗಳಲ್ಲಿ 2,500ಕ್ಕೂ ಹೆಚ್ಚು ಪಿಯರ್ಸ್ ಮರಗಳನ್ನು ಹೊಂದಿದ್ದಾರೆ. ಅವರ ಸೋದರ ಸಂಬಂಧಿ ಗುಲಾಮ್ ನಬಿ ಕೂಡ ಅವರ ಮಾರ್ಗವನ್ನು ಅನುಸರಿಸಿದರು ಮತ್ತು ಉತ್ತಮ ಆದಾಯವನ್ನು ಪಡೆಯಲು ತಮ್ಮ ಭೂಮಿಯಲ್ಲಿ ಪಿಯರ್ಸ್ ಬೆಳೆದರು.

"ನನ್ನ ಗ್ರಾಮವು ಕ್ರಮೇಣ ಪ್ರಗತಿ ಹೊಂದುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಮ್ಮ ಹಳ್ಳಿಯಲ್ಲಿ ಪಿಯರ್ಸ್ ಮತ್ತು ಇತರ ಹಣ್ಣುಗಳನ್ನು ಬೆಳೆಯಲು ಸಮರ್ಪಿತರಾಗಿರುವ ಬಹಳಷ್ಟು ಬೆಳೆಗಾರರನ್ನು ನಾನು ಈಗ ನೋಡುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.

ಭರೋವಾ ಮಾತ್ರವಲ್ಲ, ಪಕ್ಕದ ಹಳ್ಳಿಗಳಾದ ಖಲೋ ಮತ್ತು ಶಾನಾತ್ರಾ ಕೂಡ ವಿಲಕ್ಷಣ ಇಟಾಲಿಯನ್ ಕೆಂಪು ಪಿಯರ್ಸ್ ಬೆಳೆಯಲು ಮನ್ನಣೆ ಪಡೆಯುತ್ತಿವೆ. ಈ ಮೂರು ಹಳ್ಳಿಗಳು ವಾರ್ಷಿಕವಾಗಿ ಸುಮಾರು 1.5 ಮೆಟ್ರಿಕ್ ಟನ್ ಕೆಂಪು ಪಿಯರ್ಸ್ ಹಣ್ಣುಗಳನ್ನು ಬೆಳೆಯುತ್ತಿವೆ. ಗುಡ್ಡಗಾಡು ಜಿಲ್ಲೆಯ ಭದೇರ್ವಾದಲ್ಲಿ ಅವರ ಪ್ರಯತ್ನಗಳು ಮತ್ತು ತೋಟಗಾರಿಕೆಯನ್ನು ತೆಗೆದುಕೊಳ್ಳುವುದರಿಂದ ಅನೇಕ ರೈತರು ಸ್ಫೂರ್ತಿ ಪಡೆಯುತ್ತಿದ್ದಾರೆ. ಇಂದು, ಭರೋವಾ, ಖಲೋ ಮತ್ತು ಶಾನತ್ರ ಗ್ರಾಮಗಳಿಂದ 165 ಕುಟುಂಬಗಳು ಹಣ್ಣುಗಳನ್ನು, ವಿಶೇಷವಾಗಿ ಇಟಾಲಿಯನ್ ಪಿಯರ್ಸ್ ಗಳನ್ನು ಬೆಳೆಯಲು ಶುರು ಮಾಡಿವೆ.

ತೋಟಗಾರಿಕೆ ಉದ್ಯೋಗಗಳನ್ನು ಸಹ ಸೃಷ್ಟಿ ಮಾಡಿದೆ
ಶಫಿ ಅವರು ಈ ಉಪಕ್ರಮವನ್ನು ತೆಗೆದು ಕೊಂಡಾಗಿನಿಂದ, ಹಳ್ಳಿಯ ಹಣೆಬರಹ ಬದಲಾಗಿದೆ. ಹೆಚ್ಚಿನ ಯುವಕರು ಬೆಳೆಯುತ್ತಿರುವ ಪಿಯರ್ಸ್ ಗಳೊಂದಿಗೆ ತಮ್ಮನ್ನು ತಾವು ಸಂಯೋಜಿಸುವುದರಿಂದ ತೋಟಗಾರಿಕೆಯು ಗ್ರಾಮಕ್ಕೆ ಹೆಚ್ಚಿನ ಉದ್ಯೋಗವನ್ನು ಸಹ ಒದಗಿಸುತ್ತದೆ.

ಈ ಋತುವಿನಲ್ಲಿ ಅವರು ತಮ್ಮ ತೋಟಗಳಲ್ಲಿ ಸುಮಾರು 25 ಜನರನ್ನು ನೇಮಿಸಿಕೊಳ್ಳುತ್ತಾರೆ, ಅವರು ಪಿಯರ್ಸ್ ಹಣ್ಣುಗಳನ್ನು ಕತ್ತರಿಸುವುದು ಮತ್ತು ಕೊಯ್ಲು ಮಾಡುವುದನ್ನು ನೋಡಿಕೊಳ್ಳುತ್ತಾರೆ. "ಆರಂಭದಲ್ಲಿ ನನ್ನ ತೋಟಗಳನ್ನು ನೋಡಿಕೊಳ್ಳುವುದಕ್ಕೆ ನಾಲ್ಕು ಹುಡುಗರಿದ್ದರು. ಈಗ ಸುಗ್ಗಿಯ ಸಮಯದಲ್ಲಿ ಸುಮಾರು 25 ಹುಡುಗರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Debt: 2022ರಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್​ 10 ದೇಶಗಳ ಪಟ್ಟಿ ಇಲ್ಲಿದೆ! ಭಾರತವೂ ಇದ್ಯಾ? ನೋಡಿ

ಖಲು ಗ್ರಾಮದ ನಿವಾಸಿಯಾದ 50 ವರ್ಷ ವಯಸ್ಸಿನ ಕೃಷ್ಣ ಲಾಲ್ 15 ವರ್ಷಗಳಿಂದ ಶಫಿಯೊಂದಿಗೆ ಪ್ಯಾಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತಮ ಜೀವನೋಪಾಯವನ್ನು ಗಳಿಸುತ್ತಿದ್ದಾರೆ. "ನಾನು ಈ ಮೊದಲು ರೈತನಾಗಿ ಕೆಲಸ ಮಾಡುತ್ತಿದ್ದೆ ಮತ್ತು ನನ್ನ ಸಂಪಾದನೆ ನನ್ನ ಕುಟುಂಬ ನಡೆಸುವುದಕ್ಕೆ ಸಾಕಾಗುತ್ತಿರಲಿಲ್ಲ. ಈಗ ಶಫಿ ಸಾಹೇಬ್ ಅವರ ತೋಟದಲ್ಲಿ ಋತುವಿನಲ್ಲಿ ನಾನು ಸುಮಾರು 30,000 ರೂಪಾಯಿಗಳನ್ನು ಗಳಿಸುತ್ತೇನೆ" ಎಂದು ಹೇಳುತ್ತಾರೆ.
Published by:Ashwini Prabhu
First published: