• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Budget 2023: ಕಿಸಾನ್ ಸಮ್ಮಾನ್ ನಿಧಿಗೆ ಸಿಗುತ್ತಾ ಬಜೆಟ್‌ನಲ್ಲಿ ಬಂಪರ್? ಸಹಾಯಧನ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ ಸಾಧ್ಯತೆ

Budget 2023: ಕಿಸಾನ್ ಸಮ್ಮಾನ್ ನಿಧಿಗೆ ಸಿಗುತ್ತಾ ಬಜೆಟ್‌ನಲ್ಲಿ ಬಂಪರ್? ಸಹಾಯಧನ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ ಸಾಧ್ಯತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಘೋಷಣೆಯಾಗಲಿರುವ ಕೇಂದ್ರ ಬಜೆಟ್ 2023-24, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಶುಭ ಸುದ್ದಿಯನ್ನು ತರಲಿದೆ. ಆ ಸುದ್ದಿ ಏನಾಂದ್ರೆ ಸಾನ್ ಸಮ್ಮಾನ್ ಸಹಾಯಧನ ಏರಿಕೆಯಾಗಿದೆ.

  • Share this:

    ಫೆಬ್ರವರಿ 1 (February)ರಂದು ಸಂಸತ್ತಿನಲ್ಲಿ ಘೋಷಣೆಯಾಗಲಿರುವ ಕೇಂದ್ರ ಬಜೆಟ್ (Budget) 2023-24, ಪಿಎಂ ಕಿಸಾನ್ ಸಮ್ಮಾನ್ ನಿಧಿ (Kisan Samman) ಯೋಜನೆಯ ಫಲಾನುಭವಿಗಳಿಗೆ ಶುಭ ಸುದ್ದಿಯನ್ನು (Good News) ತರಲಿದೆ. ಸುದ್ದಿ ವರದಿಯ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Sita Raman) ಅವರು ರೈತರಿಗೆ (Farmer) ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಮೊತ್ತವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಯೋಜಿಸುತ್ತಿದೆ.


    ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ರೂ 6,000 ದಿಂದ ರೂ 8,000 ಕ್ಕೆ ಹೆಚ್ಚಿಸಬಹುದು ಅಂತೆಯೇ ಮೊತ್ತವನ್ನು 2,000 ರೂ.ಗಳಂತೆ ನಾಲ್ಕು ಕಂತುಗಳಾಗಿ ವಿಂಗಡಿಸುವ ಸಾಧ್ಯತೆಯಿದೆ. ಪ್ರತಿ 4 ತಿಂಗಳಿಗೊಮ್ಮೆ ಕಂತಿನ ಮೊತ್ತ ಬಿಡುಗಡೆಯಾಗುತ್ತದೆ ಎಂದು ವರದಿ ತಿಳಿಸಿದೆ.


    13 ನೇ ಕಂತಿಗಾಗಿ ಕಾಯುತ್ತಿರುವ ರೈತರು


    ಪ್ರಸ್ತುತ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಯೋಜನೆಯ ಭಾಗವಾಗಿ, ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ 6,000 ಆದಾಯವನ್ನು ನೀಡಲಾಗುತ್ತದೆ.


    ಸಂಪೂರ್ಣ ಧನ ಸಹಾಯವನ್ನು ನೇರವಾಗಿ ಈ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ವರದಿಗಳ ಪ್ರಕಾರ, 13 ನೇ ಕಂತು ಜನವರಿ ಅಂತ್ಯದಲ್ಲಿ ಬರುವ ಸಾಧ್ಯತೆಯಿದೆ ಆದರೆ ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.


    13 ಕೋಟಿ ರೈತ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ


    ಒಟ್ಟು 13 ಕೋಟಿ ರೈತ ಕುಟುಂಬಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತು ಫಲಾನುಭವಿಗಳಾಗಲಿವೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ರೈತ ಕುಟುಂಬಗಳು ಕೆಲವೊಂದು ನೀತಿ ನಿಯಮಗಳನ್ನು ಹಾಗೂ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.


    ವರದಿಗಳಲ್ಲಿ ಹೇಳಿರುವಂತೆ, ಇ-ಕೆವೈಸಿ ಮತ್ತು ಇತರ ಮಾನದಂಡಗಳ ನಿಯಮಗಳನ್ನು ಪೂರೈಸುವ ರೈತರಿಗೆ ಮಾತ್ರ ಯೋಜನೆಯ ಪ್ರಯೋಜನ ದೊರೆಯುತ್ತದೆ.


    ಕೆಲವೊಂದು ರಾಜ್ಯಗಳಿಗೆ ಆದಾಯ ಮೊತ್ತ ಏರಿಕೆ


    ಆದಾಯವನ್ನು ರೂ 6,000 ದಿಂದ ರೂ 8,000 ಕ್ಕೆ ಹೆಚ್ಚಿಸುವ ಘೋಷಣೆಯನ್ನು ಕೇಂದ್ರ ಸರಕಾರ ಕಳೆದ ವರ್ಷ ಮಾಡಿತ್ತು. ವರದಿಯ ಪ್ರಕಾರ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ 5 ರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ಘೋಷಣೆಯನ್ನು ನಿರ್ಧರಿಸಿತ್ತು.


    A bumper in the budget by getting Kisan Samman fund? Allowance may be increased from 6,000 to 8,000
    ಸಾಂಕೇತಿಕ ಚಿತ್ರ


    ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣವನ್ನು ಹೆಚ್ಚಿಸುವುದರ ಜೊತೆಗೆ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಮೇಲೆ ಪ್ಯಾನಲ್ ಸ್ಥಾಪಿಸುವ ಬಗ್ಗೆಯೂ ಸಹ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು.


    ಇದನ್ನೂ ಓದಿ:Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ನೋಂದಾಯಿಸಿಕೊಳ್ಳಲು ಈಗಲೂ ಇದೆ ಅವಕಾಶ!


    13ನೇ ಕಂತಿನ ಬಿಡುಗಡೆ ಯಾವಾಗ?


    ಪಿಎಂ ಕಿಸಾನ್ ಯೋಜನೆಯ 13 ನೇ ಕಂತು ಜನವರಿ ಅಂತ್ಯದಲ್ಲಿ ಬರುವ ಸಾಧ್ಯತೆಯಿದೆ. ಆದರೆ, ನಿಖರವಾದ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ.




    ಮಾನದಂಡಗಳನ್ನು ಪೂರೈಸಿದ ರೈತರಿಗೆ ಮಾತ್ರ ಹಣ ದೊರೆಯುತ್ತದೆ


    13 ನೇ ಕಂತಿನ ದಿನಾಂಕವನ್ನು ಘೋಷಿಸಿದ ನಂತರ, ಪ್ರಧಾನಿ ಮೋದಿ ನೇರವಾಗಿ ರೈತರ ಖಾತೆಗೆ 13 ನೇ ಕಂತು (ಪಿಎಂ ಕಿಸಾನ್ 13 ನೇ ಕಂತು) ಬಿಡುಗಡೆ ಮಾಡುತ್ತಾರೆ. ಒಟ್ಟು 13 ಕೋಟಿ ರೈತ ಕುಟುಂಬಗಳು ಈ ಬಾರಿ ಹಣ ಪಡೆಯಬೇಕಿದೆ. ಆದಾಗ್ಯೂ, ಇ-ಕೆವೈಸಿ ಮತ್ತು ಇತರ ಮಾನದಂಡಗಳ ನಿಯಮಗಳನ್ನು ಪೂರೈಸುವ ರೈತರು ಮಾತ್ರ ಹಣವನ್ನು ಪಡೆಯುತ್ತಾರೆ.

    Published by:Gowtham K
    First published: