• Home
  • »
  • News
  • »
  • business
  • »
  • Tea Startup: ಚಹಾ ಸ್ಟಾರ್ಟ್ಅಪ್ ಶುರುಮಾಡಿದ ಬಿಟೆಕ್ ವಿದ್ಯಾರ್ಥಿನಿ! ಈ ವೈರಲ್ ವಿಡಿಯೋ ಯುವಕರಿಗೆ ಸ್ಪೂರ್ತಿ

Tea Startup: ಚಹಾ ಸ್ಟಾರ್ಟ್ಅಪ್ ಶುರುಮಾಡಿದ ಬಿಟೆಕ್ ವಿದ್ಯಾರ್ಥಿನಿ! ಈ ವೈರಲ್ ವಿಡಿಯೋ ಯುವಕರಿಗೆ ಸ್ಪೂರ್ತಿ

ಬಿಟೆಕ್ ವಿದ್ಯಾರ್ಥಿನಿಯ ಚಹಾ ಬ್ಯುಸಿನೆಸ್‌

ಬಿಟೆಕ್ ವಿದ್ಯಾರ್ಥಿನಿಯ ಚಹಾ ಬ್ಯುಸಿನೆಸ್‌

ಇತ್ತೀಚೆಗೆ ಸಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಸುದ್ದಿ ಮಾಡಿತ್ತು. ವಾಣಿಜ್ಯ ವಿಷಯದಲ್ಲಿ ಪದವೀಧರರಾಗಿರುವ ಅವಿನಾಶ್ ಕುಮಾರ್ ಶುಕ್ಲಾ ಅವರು ದುರದೃಷ್ಟವಶಾತ್‌ 2021ರಲ್ಲಿ ತಂದೆಯನ್ನು ಕಳೆದುಕೊಂಡರು ಮತ್ತು ಅದರ ನಂತರ ತಮ್ಮ ಕೆಲಸವನ್ನು ಸಹ ಕಳೆದುಕೊಂಡು ಕಳೆದ ಮೂರು ತಿಂಗಳಿಂದ ನಿರುದ್ಯೋಗಿಯಾಗಿದ್ದರು.

ಮುಂದೆ ಓದಿ ...
  • News18 Kannada
  • Last Updated :
  • Haryana, India
  • Share this:

ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಲ್ಲಿ ಅನೇಕ ಯುವಕ ಮತ್ತು ಯುವತಿಯರು ತಮ್ಮ ಕೆಲಸಗಳನ್ನು (Job) ಕಳೆದುಕೊಂಡರು. ಇನ್ನೇನು ಮಾಡೋದು ಅಂತ ತೋಚದೆ ಅವರಲ್ಲಿ ಬಹುತೇಕರು ತಮ್ಮ ಊರಿಗೆ ಬಂದು ವ್ಯವಸಾಯದಲ್ಲಿ (Farming) ತಮ್ಮನ್ನು ತೊಡಗಿಸಿಕೊಂಡರೆ, ಇನ್ನೂ ಕೆಲವರು ತಮ್ಮದೇ ಆದ ಬೇರೆ ಬೇರೆ ಕೆಲಸಗಳನ್ನು ಶುರು ಮಾಡಿದ್ದಾರೆ. ಇತ್ತೀಚೆಗೆ ಸಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ(Social Media) ತುಂಬಾನೇ ಸುದ್ದಿ ಮಾಡಿತ್ತು. ವಾಣಿಜ್ಯ ವಿಷಯದಲ್ಲಿ ಪದವೀಧರರಾಗಿರುವ ಅವಿನಾಶ್ ಕುಮಾರ್ ಶುಕ್ಲಾ ಅವರು ದುರದೃಷ್ಟವಶಾತ್‌ 2021ರಲ್ಲಿ ತಂದೆಯನ್ನು ಕಳೆದುಕೊಂಡರು ಮತ್ತು ಅದರ ನಂತರ ತಮ್ಮ ಕೆಲಸವನ್ನು ಸಹ ಕಳೆದುಕೊಂಡು ಕಳೆದ ಮೂರು ತಿಂಗಳಿಂದ ನಿರುದ್ಯೋಗಿಯಾಗಿದ್ದರು.


ಕೆಲಸವನ್ನು ಕಳೆದುಕೊಂಡ ನಂತರ ಶುಕ್ಲಾ ಅವರಿಗೆ ತುಂಬಾನೇ ಹಣಕಾಸಿನ ತೊಂದರೆಯಾಯಿತು. ನಂತರ ಫುಡ್‌ ಬ್ಯುಸಿನೆಸ್‌ ಅನ್ನು ಶುರು ಮಾಡಲು ನಿರ್ಧರಿಸಿ ತಮ್ಮ ಬೈಕ್ ಮೇಲೆ ಇಡ್ಲಿ-ಸಾಂಬಾರ್ ಮಾರಲು ಶುರುಮಾಡಿದ್ದನ್ನು ವಿಡಿಯೋದಲ್ಲಿ ನಾವೆಲ್ಲಾ ನೋಡಿದ್ದೆವು. ಹೀಗೆ ಯುವಕರು ಹೊಟ್ಟೆ ಪಾಡಿಗಾಗಿ ತಮ್ಮ ಸ್ವಂತ ಫುಡ್ ಬ್ಯುಸಿನೆಸ್ ಅನ್ನು ಶುರು ಮಾಡುತ್ತಿದ್ದಾರೆ.


ವಿದ್ಯಾರ್ಥಿನಿ ಶುರು ಮಾಡಿದ ಚಹಾ ಸ್ಟಾರ್ಟ್ಅಪ್
ಈಗ ಬಿಹಾರದ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬಳು ತನ್ನ ಕನಸನ್ನು ನನಸು ಮಾಡಿಕೊಳ್ಳಲು ಹರಿಯಾಣದ ಫರಿದಾಬಾದ್ ನಲ್ಲಿ ಚಹಾ ಸ್ಟಾರ್ಟ್‌ಅಪ್ ಅನ್ನು ಶುರು ಮಾಡಿದ್ದಾಳೆ. ವರ್ತಿಕಾ ಸಿಂಗ್ ಯಾವಾಗಲೂ ತನ್ನದೇ ಆದ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಉತ್ಸುಕಳಾಗಿದ್ದಳು ಮತ್ತು ತನ್ನ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸುವ ಮೊದಲು ತನ್ನ ಪದವಿಯನ್ನು ಪೂರ್ಣಗೊಳಿಸಲು 4 ವರ್ಷಗಳವರೆಗೆ ಕಾಯಲು ಬಯಸಲಿಲ್ಲ ಮತ್ತು ‘ಬಿ.ಟೆಕ್ ಚಾಯ್ವಾಲಿ’ ಎಂಬ ಹೆಸರಿನೊಂದಿಗೆ ತನ್ನ ಚಹಾ ಅಂಗಡಿಯನ್ನು ಪ್ರಾರಂಭಿಸಿದಳು.


ಇದನ್ನೂ ಓದಿ: Business Idea: ಕರ್ನಾಟಕದೆಲ್ಲೆಡೆ ಖರ್ಜೂರದ ಸಿಹಿ ಹಂಚುತ್ತಿರುವ ಆದರ್ಶ ರೈತನ ಯಶಸ್ಸಿನ ಕಥೆಯಿದು!


ಈಗ, ‘ಸ್ವಾಗ್ ಸೆ ಡಾಕ್ಟರ್’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವರ್ತಿಕಾ ತನ್ನ ಚಹಾ ಅಂಗಡಿಯ ಬಗ್ಗೆ ಮಾತನಾಡಿದ್ದಾರೆ ನೋಡಿ. ಅವರ ಅಂಗಡಿಯಲ್ಲಿ ಸಿಗುವ ಚಹಾಗಳ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಿದ್ದಾರೆ. ವಿಡಿಯೋದಲ್ಲಿ ವರ್ತಿಕಾ ಅವರು ಫರಿದಾಬಾದ್ ನ ಗ್ರೀನ್ ಫೀಲ್ಡ್ ಬಳಿ ಚಹಾ ಅಂಗಡಿಯನ್ನು ತೆರೆದಿದ್ದಾರೆ ಮತ್ತು ಸಂಜೆ 5.30 ರಿಂದ ರಾತ್ರಿ 9 ರವರೆಗೆ ತಮ್ಮ ಸ್ಟಾಲ್ ಅನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ.


ಯಾವೆಲ್ಲಾ ಚಹಾ ಸಿಗುತ್ತೆ ಇಲ್ಲಿ ಗೊತ್ತೇ?
ವರ್ತಿಕಾ ಅವರು ಮಸಾಲಾ ಮತ್ತು ಲೆಮನ್ ಟೀ (ನಿಂಬೆ ಚಾಯ್) ಅನ್ನು ತಲಾ 20 ರೂಪಾಯಿಗೆ ಮಾರುತ್ತಾರೆ ಮತ್ತು ಸಾಮಾನ್ಯ ಚಾಯ್ ಅನ್ನು 10 ರೂಪಾಯಿಗೆ ಮಾರಾಟ ಮಾಡುತ್ತಾರೆ. ಒಂದು ಸಣ್ಣ ಸ್ಟೋವ್ ಇದೆ, ಅದರ ಮೇಲೆ ಅಲ್ಯೂಮಿನಿಯಂ ಕೆಟಲ್ ಅನ್ನು ಇರಿಸಲಾಗಿದೆ. ಜನರು ಅವಳ ಸುತ್ತಲೂ ಬಿಸಿ ಬಿಸಿ ಚಹಾಗಾಗಿ ಕಾಯುತ್ತಿರುವುದನ್ನು ಸಹ ಈ ವಿಡಿಯೋದಲ್ಲಿ ನಾವು ನೋಡಬಹುದು.


ವೈರಲ್ ಆಗಿದೆ ಇವರ ವಿಡಿಯೋ
ಅವರ ಈ ವಿಡಿಯೋ ಇಲ್ಲಿಯವರೆಗೆ 56,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ದೃಢ ನಿಶ್ಚಯ ಮತ್ತು ಪ್ರಯತ್ನವನ್ನು ತುಂಬಾನೇ ಶ್ಲಾಘಿಸಿದರು. ಬಳಕೆದಾರರೊಬ್ಬರು "ನಾನು ನಿಮ್ಮ ನಗು ಮತ್ತು ವಿಶ್ವಾಸವನ್ನು ಇಷ್ಟಪಡುತ್ತೇನೆ. ನಾನು ನಿಮ್ಮ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು "ಹೀಗೆ ಮುಂದುವರೆಸಿ, ಒಂದು ವರ್ಷದಲ್ಲಿ ನೀವು ಒಂದು ಬ್ರ್ಯಾಂಡ್ ಆಗುತ್ತೀರಿ" ಎಂದು ಹೇಳಿದ್ದಾರೆ.ಇದನ್ನೂ ಓದಿ:  Licious: ಭಾರತದ ಸಾಂಸ್ಕೃತಿಕ ಬೂಟಾಟಿಕೆಯಿಂದಾಗಿ ಮಾಂಸ ಉದ್ಯಮ ನಡೆಸ್ತಾ ಇದ್ಯಂತೆ


ಈ ಹಿಂದೆ ಸಹ ಅರ್ಥಶಾಸ್ತ್ರ ಪದವೀಧರೆ ಪ್ರಿಯಾಂಕಾ ಗುಪ್ತಾ ಅವರು ಬಿಹಾರದ ರಾಜಧಾನಿ ಪಾಟ್ನಾದ ಮಹಿಳಾ ಕಾಲೇಜಿನ ಬಳಿ ಚಹಾ ಅಂಗಡಿಯನ್ನು ಸ್ಥಾಪಿಸಿದ್ದರು. "ಎಂಬಿಎ ಚಾಯ್ವಾಲಾ" ಎಂದು ಪ್ರಸಿದ್ಧರಾಗಿರುವ ಪ್ರಫುಲ್ಲ ಬಿಲ್ಲೋರ್ ಅವರ ಕಥೆಯನ್ನು ಕೇಳಿದ ನಂತರ ಚಹಾ ಅಂಗಡಿಯನ್ನು ತೆರೆಯಲು ಪ್ರೇರಣೆ ಸಿಕ್ಕಿತು ಎಂದು ಹೇಳಿದರು.

Published by:Ashwini Prabhu
First published: