Dye Neuroscience Kit: ಭಾರತದ ಮೊಟ್ಟ ಮೊದಲ ಡೈ ನ್ಯೂರೋಸೈನ್ಸ್‌ ಕಿಟ್‌ ತಯಾರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ

ದೀಪಕ್ ಖತ್ರಿ ಅವರ ಹೊಸ ಸ್ಟಾರ್ಟ್ಅಪ್

ದೀಪಕ್ ಖತ್ರಿ ಅವರ ಹೊಸ ಸ್ಟಾರ್ಟ್ಅಪ್

ಈಗೀಗ ಸ್ಟಾರ್ಟ್‌ಅಪ್‌ ಆರಂಭಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲಿ ದೆಹಲಿಯ ಯುವಕನೊಬ್ಬ ತನ್ನ ಹೊಸ ಸ್ಟಾರ್ಟ್‌ಅಪ್‌ ನಿಂದ ಅಪ್‌ಸೈಡ್‌ ಡೌನ್‌ ಲ್ಯಾಬ್‌ಗಳನ್ನು ಪ್ರಾರಂಭಿಸಿದ್ದಾರೆ. ಈ ಲ್ಯಾಬ್‌ ವಿಶ್ವದಲ್ಲಿ ಮೊದಲ ಬಾರಿಗೆ ಡೈ ನ್ಯೂರೊ ಸೈನ್ಸ್‌ ಕಿಟ್‌ ಅನ್ನು ತಯಾರಿಸಿದೆ.

ಮುಂದೆ ಓದಿ ...
  • Share this:

ವಿಜ್ಞಾನ (Science) ಲೋಕ ದಿನದಿಂದ ದಿನಕ್ಕೆ ಎತ್ತರವಾಗಿ ಬೆಳೆಯುತ್ತಿದೆ. ದಿನಕ್ಕೊಂದು ಹೊಸ ಸಂಶೋಧನೆಗಳು (Research), ಹೊಸ ಆವಿಷ್ಕಾರಗಳು (invention) ಆಗುತ್ತಲೇ ಇರುತ್ತವೆ. ಅದರಲ್ಲೂ ಈಗೀಗ ಸ್ಟಾರ್ಟ್‌ಅಪ್‌ ಆರಂಭಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲಿ ದೆಹಲಿಯ ಯುವಕನೊಬ್ಬ ತನ್ನ ಹೊಸ ಸ್ಟಾರ್ಟ್‌ಅಪ್‌ ನಿಂದ (Startup) ಅಪ್‌ಸೈಡ್‌ ಡೌನ್‌ ಲ್ಯಾಬ್‌ಗಳನ್ನು ಪ್ರಾರಂಭಿಸಿದ್ದಾರೆ. ಈ ಲ್ಯಾಬ್‌ ವಿಶ್ವದಲ್ಲಿ ಮೊದಲ ಬಾರಿಗೆ ಡೈ ನ್ಯೂರೊ ಸೈನ್ಸ್‌ ಕಿಟ್‌ ಅನ್ನು (DYE Neuroscience)ತಯಾರಿಸಿದೆ. ಇದರಿಂದ ವಿಶ್ವದಾದ್ಯಂತ ವಿದಾರ್ಥಿಗಳು (Students) ಮತ್ತು ಸಂಶೋಧಕರಿಗೆ ನ್ಯೂರೊಸೈನ್ಸ್‌ ಕಿಟ್‌ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತಿದೆ.


ಇದನ್ನು ಮೊಟ್ಟ ಮೊದಲ ಬಾರಿಗೆ ಆವಿಷ್ಕಾರಗೊಳಿಸಿದ ಯುವಕ ಮೂಲತಃ ದೆಹಲಿಯವರಾಗಿದ್ದಾರೆ. ಅವರ ಹೆಸರು ದೀಪಕ್ ಖತ್ರಿ. ಇವರು ಇಂಜಿನಿಯರ್‌ ಪದವಿಯನ್ನು ಪಡೆದಿದ್ದಾರೆ.


ದೀಪಕ್‌ ಖತ್ರಿ ಅವರ ಹಿನ್ನೆಲೆ
ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ವಿಜ್ಞಾನದ ಬಗ್ಗೆ ಹೆಚ್ಚಿನ ಒಲವನ್ನು ಇರಿಸಿಕೊಂಡವರು ಆಗಿದ್ದಾರೆ. ಆದ್ದರಿಂದ ಇವರ ಆರನೇ ವಯಸ್ಸಿನಲ್ಲಿಯೇ ಎಲೆಕ್ಟ್ರಾನಿಕ್ಸ್‌ನೊಂದಿಗೆ ಹೆಚ್ಚು ಕಾಲ ಆಟವಾಡುತ್ತಿದ್ದರು. ಆ ಎಲೆಕ್ಟ್ರಾನಿಕ್ಸ್‌ನ ಒಳಗಿನ ಬಿಡಿ ಭಾಗಗಳು ಮತ್ತು ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸಲು ಅವರು ತಮ್ಮ ಆಟಿಕೆಗಳನ್ನು ಒಡೆದು ಹಾಕುತ್ತಿದ್ದರು. ನಂತರ ಅವರ ಯೋಚನೆ ಟಿ.ವಿಗಳಂತಹ ಎಲೆಕ್ಟ್ರಾನಿಕ್ಸ್‌ ಕಡೆಗೆ ಬಿತ್ತು. ಅವುಗಳ ಬಿಡಿ ಭಾಗಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.


ಇದನ್ನೂ ಓದಿ:  Truly Desi: ತಾಯಿ ಸಾಧನೆಗೆ ಕಾರಣವಾಯ್ತು ಮಗಳ ಅಲರ್ಜಿ! ಸ್ಟಾರ್ಟ್‌ ಅಪ್ ಶುರು ಮಾಡಿ 2 ಕೋಟಿ ವಹಿವಾಟು!


"ನಾನು ಎಲೆಕ್ಟ್ರಾನಿಕ್ಸ್‌ಗಳನ್ನು ಓಪನ್‌ ಮಾಡಿ, ಅವುಗಳ ಬಿಡಿ ಭಾಗಗಳನ್ನು ತೆರೆದು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸುವುದನ್ನು ನಾನು ಹೆಚ್ಚು ಇಷ್ಟಪಡುತ್ತಿದ್ದೇನೆ. ನಾನು ಮನೆಯಲ್ಲಿ ಉಪಕರಣಗಳನ್ನು ಎಲ್ಲವನ್ನು ಪರಿಶೀಲಿಸಿದ ನಂತರ, ನಾನು ಸ್ಕ್ರ್ಯಾಪ್ ಅಂಗಡಿಗಳಿಗೆ ಭೇಟಿ ನೀಡಲು ಪ್ರಾರಂಭಿಸಿದೆ. ನಂತರ ನಾನು ಬೆಸುಗೆ ಹಾಕುವ ಐರನ್‌ಗಳು ಮತ್ತು ಇತರ ಉತ್ಪನ್ನಗಳನ್ನು ಖರೀದಿಸುತ್ತಿದ್ದೆ ಮತ್ತು ಆ ಉತ್ಪನ್ನಗಳನ್ನು ಕೂಡ ಓಪನ್‌ ಮಾಡಿ, ಅವುಗಳನ್ನು ಸಹ ಪರಿಶೀಲಿಸುತ್ತಿದ್ದೆ"ಎನ್ನುತ್ತಾರೆ. ಅದರಲ್ಲಿನ ಸರ್ಕ್ಯೂಟ್‌ಗಳನ್ನು ನೋಡಲು ಪ್ರಯತ್ನಿಸುತ್ತಿದ್ದೆ. ನಾನು ಇವುಗಳ ಬಗ್ಗೆ ತಿಳಿಯಲು ವಿಜ್ಞಾನದ ನಿಯತಕಾಲಿಕೆಗಳನ್ನು ಸಹ ಓದುತ್ತೇನೆ, ”ಎಂದು ಅವರು ದಿ ಬೆಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


ಇದರ ನಂತರ ತಮ್ಮ ಮಾತನ್ನು ಮುಂದುವರಿಸುತ್ತಾ “ನಾನು 11ನೇ ತರಗತಿಯಲ್ಲಿದ್ದಾಗ ಕಂಪ್ಯೂಟರ್ ಸೈನ್ಸ್ ಆಯ್ಕೆ ಮಾಡಿ ಕಲಿತೆ. ಈ ಹೆಚ್ಚುವರಿ ಜ್ಞಾನದಿಂದ ನಾನು ಮನೆಯಲ್ಲಿ ಅನೇಕ ಸರ್ಕ್ಯೂಟ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸುತ್ತಿದ್ದರು. 2016 ರಲ್ಲಿ, ಅವರು ದೆಹಲಿಯ ನೇತಾಜಿ ಸುಭಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್‌ ಅಭ್ಯಾಸ ಮಾಡುತ್ತಿರುವಾಗ, ಅವರು ನರವಿಜ್ಞಾನಿ ಗ್ರೆಗ್ ಗೇಜ್ ಅವರ TED ಟಾಕ್‌ ಕೇಳುವ ಅವಕಾಶ ಪಡೆದರು. ನಂತರ ಇವರ ಜೀವನದಲ್ಲಿ ನಡೆದದ್ದು ಅದ್ಭುತವೇ ಸರಿ” ಎಂದು ಅವರು ತಮ್ಮ ಜೀವನದ ಹಿಂದಿನ ಘಟನೆಗಳ ಬಗ್ಗೆ ನೆನಪಿಸಿಕೊಳ್ಳುತ್ತಾರೆ.


ವಿದ್ಯಾರ್ಥಿನ್ಯೂರೊಸೈನ್ಸ್‌ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿದ್ದು ಹೇಗೆ 
“ಆ TED ಟಾಕ್‌ ವಿಡಿಯೋದಲ್ಲಿ, ನರವಿಜ್ಞಾನಿ ಗೇಜ್‌ ಅವರು ಇನ್ನೊಬ್ಬ ವ್ಯಕ್ತಿಯ ತೋಳನ್ನು ನಿಯಂತ್ರಿಸಲು ನ್ಯೂರೊಸೈನ್ಸ್‌ ಡೈ ಕಿಟ್ ಅನ್ನು ಬಳಕೆ ಮಾಡುತ್ತಾರೆ. ಅವರು ಆ ಕಿಟ್ ಅನ್ನು ಇಬ್ಬರಿಗೂ ಸಂಪರ್ಕಿಸುತ್ತಾನೆ. ಆಗ ಮತ್ತೊಬ್ಬ ವ್ಯಕ್ತಿಯ ತೋಳು ,ಮೊದಲ ವ್ಯಕ್ತಿಯ ಮೆದುಳಿನ ಸಂಕೇತದ ಪ್ರಕಾರ ಚಲಿಸುತ್ತದೆ. ಇದನ್ನು ನೋಡಿ ನಾನು ಸಂಪೂರ್ಣವಾಗಿ ಕಳೆದು ಹೋದೆ. ನನಗೆ ಅದು ಒಂದು ಮ್ಯಾಜಿಕ್‌ ತರ ಕಾಣಿಸುತ್ತಿತ್ತು. ಆಗಿನಿಂದ ನನಗೆ ನ್ಯೂರೊಸೈನ್ಸ್‌ ಬಗ್ಗೆ ಹೆಚ್ಚು ಆಸಕ್ತಿ ಬಂದಿತು” ದೀಪಕ್‌ ಖತ್ರಿ ಅವರು ವಿವರಿಸುತ್ತಾರೆ.


ಇದನ್ನೂ ಓದಿ: Pears Farming: ಅರೇ ವಾವ್! ಈ ಹಣ್ಣು ಬೆಳೆಸಿ ವರ್ಷಕ್ಕೆ 25 ಲಕ್ಷ ರೂಪಾಯಿ ಗಳಿಸ್ತಾರೆ ರೈತ


ನರ ವಿಜ್ಞಾನಿ ಗೇಜ್ ಬ್ಯಾಕ್‌ಯಾರ್ಡ್ ಬ್ರೈನ್ಸ್‌ನ ಸಹ-ಸಂಸ್ಥಾಪಕ ಮತ್ತು CEO ಆಗಿದ್ದು, ಈ ಸಂಸ್ಥೆಯು ಎಲ್ಲಾ ವಯೋಮಾನದ ವಿದ್ಯಾರ್ಥಿಗಳಿಗೆ ನ್ಯೂರೊಸೈನ್ಸ್‌ ಕಿಟ್‌ಗಳನ್ನು ಒದಗಿಸುತ್ತದೆ. ಆ ಸಂಸ್ಥೆಯು ಮುಕ್ತ ಮಾಹಿತಿಯನ್ನು ಸಹ ನೀಡುತ್ತದೆ. ಇದು ದೀಪಕ್‌ ಖತ್ರಿ ಅವರು ಈ ಕಿಟ್‌ಗಳನ್ನು ಪಡೆಯಲು ಮತ್ತು ಅದರಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಸಾಧ್ಯವಾಯಿತು.


ಮೊದಲ ಬಾರಿಗೆ ನ್ಯೂರೋಸೈನ್ಸ್‌ ಕಿಟ್‌ ತಯಾರಿಸಿದ್ದು ಹೇಗೆ
"ನ್ಯೂರೋಸೈನ್ಸ್‌ ಕಿಟ್‌ ತಯಾರಿಕೆಗೆ ಮುಖ್ಯವಾಗಿ ಸರ್ಕ್ಯೂಟ್‌ ಬೇಕಾಗುತ್ತದೆ. ಆ ಸರ್ಕ್ಯೂಟ್‌ಗಾಗಿ ಅವರ ಹಾರ್ಡ್‌ವೇರ್ ಸ್ಕೀಮ್ಯಾಟಿಕ್ ಅನ್ನು ನಾನು ಆನ್‌ಲೈನ್‌ನಲ್ಲಿ ನೋಡಿ ನಂತರ ಅದನ್ನು ಮಾಡಲು ಪ್ರಯತ್ನಿಸಿದೆ. ಆದರೆ, ಅದಕ್ಕೆ ತಗಲುವ ವೆಚ್ಚವು 1,000 ರೂ. ಬರುತ್ತಿತ್ತು. ಆ ಸಮಯದಲ್ಲಿ ಇಷ್ಟು ಹನವು ಕೂಡ ನನಗೆ ಬಹಳಷ್ಟು ಎನಿಸುತ್ತಿತ್ತು. ಅದರ ನಂತರ ನಾನು ಪ್ರತಿಯೊಂದು ಬಿಡಿ ಭಾಗಕ್ಕೂ ತಂತ್ರಜ್ಞಾನವನ್ನು ಸಂಶೋಧಿಸಿದೆ. ನಾನು ಬಿಡಿ ಭಾಗಗಳನ್ನು ಅಗ್ಗವಾಗಿ ಖರೀದಿಸಿದೆ. 1000 ರೂ. ಬೆಲೆ ಬಾಳುವ ಸರ್ಕ್ಯೂಟ್‌ ಅನ್ನು ನಾನು 100 ರೂ. ಕ್ಕೆ ತಯಾರಿಸಿದೆ. ಈ ಕಿಟ್‌ ತಯಾರಿಕೆಗೆ ನಿಮಗೆ ಸರಿಯಾದ ಉಪಕರಣಗಳು ಬೇಕಾಗುತ್ತವೆ ”ಎಂದು ಅವರು ಹೇಳುತ್ತಾರೆ.


“2016 ರಲ್ಲಿ ಮಾಡಿದ ಈ ನ್ಯೂರೊಸೈನ್ಸ್‌ನ ಮೊದಲ ಪ್ರಯೋಗವೇ ಮುಂದೆ ಕೇವಲ 24 ವರ್ಷದ ಯುವಕನಾದ ನನಗೆ ನಂತರದಲ್ಲಿ ನಾಲ್ಕು ವರ್ಷಗಳ ನಂತರ ಅಪ್‌ಸೈಡ್ ಡೌನ್ ಲ್ಯಾಬ್ಸ್ ಎಂಬ ಸ್ಟಾರ್ಟಪ್ ಅನ್ನು ಪ್ರಾರಂಭಿಸಲು ಕಾರಣವಾಯಿತು. ಡೈ ನ್ಯೂರೋಸೈನ್ಸ್ ಕಿಟ್‌ಗಳನ್ನು ತಯಾರಿಸುವ ಭಾರತದ ಮೊದಲ ಸ್ಟಾರ್ಟ್‌ಅಪ್ ಇದಾಗಿದೆ” ಎಂದು ಅವರು ಹೇಳುತ್ತಾರೆ.


ದೀಪಕ್‌ ಖತ್ರಿ ಅವರು ಕಾಲೇಜಿನಲ್ಲಿದ್ದಾಗ, ಬಯೋಟೆಕ್ನಾಲಜಿ ಇಂಜಿನಿಯರ್ ನ್ಯೂರೊಸೈನ್ಸ್‌ ಕಿಟ್‌ಗಳನ್ನು ಅಗ್ಗವಾಗಿಸಲು, ಕಡಿಮೆ-ವೆಚ್ಚದ ವಿನ್ಯಾಸಗಳಲ್ಲಿ ತಯಾರಿಸುವುದಕ್ಕೆ ಕೆಲಸ ಮಾಡಲು ಪ್ರಾರಂಭಿಸಿದರು.


ಭಾರತದ ಮೊದಲ ಡೈ ನ್ಯೂರೊಸೈನ್ಸ್‌ ಕಿಟ್‌ಗಳ ತಯಾರಿಕೆ
2017 ರಲ್ಲಿ, ಅವರು ಕಡಿಮೆ-ವೆಚ್ಚದ ಜೈವಿಕ ಆಂಪ್ಲಿಫೈಯರ್ ಕಿಟ್‌ ಒಂದನ್ನು ತಯಾರಿಸಿದರು. ಅದನ್ನು ಪ್ರಾಸ್ಥೆಟಿಕ್ಸ್ ಮತ್ತು ಮಾನವ ವರ್ಧನೆಗಾಗಿ ಬಳಸಬಹುದು ಎಂದು ಅವರು ಹೇಳುತ್ತಾರೆ. ಈ ಯೋಜನೆಯು ಅವರಿಗೆ ಕಾಲೇಜಿನ ವಿಜ್ಞಾನ ಸ್ಪರ್ಧೆಯಲ್ಲಿ ಬಹುಮಾನವನ್ನು ತಂದುಕೊಟ್ಟಿತು. ಇದರ ಪ್ರೇರಣೆಯಿಂದ, ಅವರು 2019 ರಲ್ಲಿ ಆನ್‌ಲೈನ್ ಮಾರುಕಟ್ಟೆಯಾದ ಟಿಂಡಿಯಲ್ಲಿ ತಮ್ಮ ಮೊದಲ ಡೈ ನ್ಯೂರೊ ಸೈನ್ಸ್‌ ಕಿಟ್ ಅನ್ನು ಮಾರಾಟ ಮಾಡಲು ಮುಂದಾದರು.


"ಅದಕ್ಕೆ ನಾನು ಕೊಟ್ಟ ಹೆಸರು Bioamp v1 ಎಂಬುದಾಗಿತ್ತು. ಇದು EEG, ECG, EKG ಮತ್ತು EMG ನಂತಹ ಜೈವಿಕ ಸಂಕೇತಗಳನ್ನು ವರ್ಧಿಸುವ ತೆರೆದ ಹಾರ್ಡ್‌ವೇರ್ ಬೋರ್ಡ್ ಆಗಿದೆ. ನಾನು ಟಿಂಡಿ ಮಾರುಕಟ್ಟೆಯಲ್ಲಿ ಎರಡು ಉತ್ಪನ್ನಗಳನ್ನು ಮಾರಾಟ ಮಾಡಲು ಅವುಗಳನ್ನು ಅದರಲ್ಲಿ ಸೇರಿಸಿದೆ. ಆದರೆ ಅವುಗಳನ್ನು ಮಾರಾಟ ಮಾಡಲು ಸಾಕಷ್ಟು ಸಮಯ ಹಿಡಿಯಿತು. 2020 ರಲ್ಲಿ ಇಬ್ಬರು ನನ್ನ ಉತ್ಪನ್ನಗಳನ್ನು ಖರೀದಿಸಿದರು. ಅದರಿಂದ ನಾನು ಮತ್ತಷ್ಟು ಕಿಟ್‌ಗಳನ್ನು ತಯಾರಿಸಲು ಪ್ರೇರಣೆ ಆಯಿತು. ನನ್ನ ಕೆಲಸವನ್ನು ಮತ್ತೆ ಮುಂದುವರಿಸಿದೆ” ಎಂದು ದೀಪಕ್‌ ಖತ್ರಿ ಹೇಳುತ್ತಾರೆ.


ಇದನ್ನೂ ಓದಿ:  Organic Farming: ಕಾರ್ಪೊರೇಟ್ ಕಂಪನಿ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಟೆಕ್ಕಿ, ಸಂಪಾದನೆ ಕೋಟಿ ಕೋಟಿ!


ಆ ವರ್ಷದಲ್ಲಿಯೇ, ದೀಪಕ್‌ ಅವರು ಗೂಗಲ್ ಸಮ್ಮರ್ ಆಫ್ ಕೋಡ್‌ನಲ್ಲಿ ಭಾಗವಹಿಸಿದರು. ಗೂಗಲ್‌ ಸಮ್ಮರ್‌ ಆಫ್‌ ಕೋಡ್‌ ಎಂಬುದು ಉಚಿತ ಮತ್ತು ಮುಕ್ತ-ಮೂಲ ಸಾಫ್ಟ್‌ವೇರ್ ಕೋಡಿಂಗ್ ಪ್ರಾಜೆಕ್ಟ್‌ ಆಗಿದೆ. ಇದರಲ್ಲಿ ಭಾಗವಹಿಸುವವರು ಸ್ಟೈಫಂಡ್ ಕೂಡ ಪಡೆಯುತ್ತಾರೆ. ಈ ಪ್ರಾಜೆಕ್ಟ್‌ನಲ್ಲಿ ದೀಪಕ್‌ ಅವರು 2 ಲಕ್ಷ ರೂ. ಗಳನ್ನು ಗೆದ್ದರು. ಇದರಿಂದ ಅವರು ತಮ್ಮ ಕಂಪನಿಯನ್ನು ಬೂಟ್‌ಸ್ಟ್ರಾಪ್ ಮಾಡಲು ಸಾಧ್ಯವಾಯಿತು.


ಕಂಪನಿ ತಯಾರಿಸುವ ಉದ್ದೇಶವೇನು 
ಡಿಸೆಂಬರ್ 2020 ರಲ್ಲಿ, ಅವರು ತಮ್ಮ ಕಂಪನಿ ಅಪ್‌ಸೈಡ್ ಡೌನ್ ಲ್ಯಾಬ್ಸ್ ಅನ್ನು ಅಧಿಕೃತವಾಗಿ ನೋಂದಾಯಿಸಿದರು. ಈ ಕಂಪನಿಯ ಉದ್ದೇಶ ಭಾರತದಲ್ಲಿನ ವಿದ್ಯಾರ್ಥಿಗಳಿಗೆ ನ್ಯೂರೊಸೈನ್ಸ್‌ ಬಗ್ಗೆ ತಿಳಿಯಲು ಮತ್ತು ಚಿಕ್ಕ ವಯಸ್ಸಿನಿಂದಲೇ ಈ ಕ್ಷೇತ್ರದಲ್ಲಿ ಅವರ ಆಸಕ್ತಿಯನ್ನು ಬೆಳೆಸುವುದು ಸ್ಟಾರ್ಟಪ್‌ನ ಆಲೋಚನೆಯಾಗಿದೆ. ಗ್ರೆಗ್ ಗೇಜ್ ಅವರ ಪ್ರಕಾರ, 5 ರಲ್ಲಿ ಒಬ್ಬ ವ್ಯಕ್ತಿ ನರವೈಜ್ಞಾನಿಕ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಈ ನ್ಯೂರೊಸೈನ್ಸ್‌ ಕಿಟ್‌ನಿಂದ ಮೆದುಳಿನ ಬಗ್ಗೆ ಹೆಚ್ಚಿನ ಜನರು ಅಧ್ಯಯನ ಮಾಡಲು ಈ ಕಿಟ್‌ ಸಹಾಯ ಮಾಡುತ್ತದೆ.

Published by:Ashwini Prabhu
First published: