Own Business: ಶಾಲೆಯಲ್ಲಿ ಬ್ರೆಡ್ ಮಾರಿ ಐಫೋನ್ ಖರೀದಿಸಿದ ಹುಡುಗಿ! 12ರ ಬಾಲಕಿಯ ಛಲಕ್ಕೆ ನೀವೇನಂತೀರಿ?

ಬ್ರೆಡ್​ ಮಾರಿ ಐಫೋನ್ ಖರೀದಿಸಿದ 12 ವರ್ಷದ ಶಾಲಾ ಹುಡುಗಿ

ಬ್ರೆಡ್​ ಮಾರಿ ಐಫೋನ್ ಖರೀದಿಸಿದ 12 ವರ್ಷದ ಶಾಲಾ ಹುಡುಗಿ

Viral Story: ದುಬೈನಲ್ಲಿ 12 ವರ್ಷದ ಶಾಲಾ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಬ್ರೆಡ್​ ಮಾರಾಟ ಮಾಡಿ ಗಳಿಸಿದ ಹಣದಲ್ಲಿ ಆ್ಯಪಲ್ ಕಂಪೆನಿಯ ಐಫೋನ್ 14 ಅನ್ನೇ ಖರೀದಿಸಿದ್ದಾಳೆ.

  • Share this:

ಕಷ್ಟಪಟ್ಟು ದುಡಿದು, ತಾನು ತಯಾರಿಸಿದ ಬ್ರೆಡ್‌ಗಳನ್ನು ಶಾಲೆಯಲ್ಲಿ ಮಾರಿ ಅದರಿಂದ ಬಂದಂತಹ ಹಣದಿಂದ ದುಬಾರಿ ಬೆಲೆಯ ಐಫೋನ್ 14 ಅನ್ನು ಖರೀದಿಸಿದ ದುಬೈನ 12 ವರ್ಷದ ಹುಡುಗಿ (12 Year Old School Girl) ಇವಳು. ಈ ವಿಡಿಯೋ ಸದ್ಯ ಇಂಟರ್‌ನೆಟ್‌ನಲ್ಲಿ (Viral Video) ಭಾರೀ ಸದ್ದು ಮಾಡುತ್ತಿದೆ. ಈಕೆಯ ಕಥೆ ನಿಜಕ್ಕೂ ಯುವಜನತೆಗೆ ಸ್ಪೂರ್ತಿ ನೀಡುವಂತಿದೆ. ಏಳನೇ ತರಗತಿಯಲ್ಲಿ ಓದುತ್ತಿರುವಂತಹ ಬಿಯಾಂಕಾ ಜೆಮಿ ವಾರಿಯವ (Bianca Jemi Wariyava), ತನ್ನ ಸ್ವಂತ ಪರಿಶ್ರಮದಲ್ಲಿ ಐಫೋನ್ (iPhone 14)  ಖರೀದಿಸಿದ ಹುಡುಗಿ. ಬಿಯಾಂಕಾ ಅವರ ತಂದೆ ಭಾರತೀಯರು ಮತ್ತು ಅವರ ತಾಯಿ ಫಿಲಿಪಿನೋದವರು. ಬಿಯಾಂಕಾ ಪೋಷಕರು ಇಬ್ಬರೂ ವೃತ್ತಿಪರ ಬೇಕರ್‌ಗಳು, ದುಬೈನ ಕೆಲವು ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.


ಅವರು ಮನೆಯಲ್ಲಿ ಅಡುಗೆ ಮಾಡುವುದನ್ನು ನೋಡುತ್ತಾ ಬಿಯಾಂಕಾ ಬೆಳೆದಿರುತ್ತಾಳೆ. ಹೊಸ ಮೊಬೈಲ್ ಫೋನ್ ಬಯಸಿದ ಬಿಯಾಂಕಾ ತನ್ನ ಸಹಪಾಠಿಗಳಿಗೆ ಮತ್ತು ಶಿಕ್ಷಕರಿಗೆ ಬ್ರೆಡ್ ಮಾರಾಟ ಮಾಡುವ ಆಲೋಚನೆಯನ್ನು ಮಾಡಿದಳು. ಈಕೆಯ ಪೋಷಕರು ಕೆಲವು ಪರಿಸ್ಥಿತಿಗಳ ಕಾರಣ ಈ ದುಬಾರಿ ಫೋನ್‌ ಅನ್ನು ಮಗಳಿಗೆ ಕೊಡಿಸಲಾಗಲಿಲ್ಲ. ಈ ಕಾರಣದಿಂದಲೇ ಕೇವಲ 12 ವರ್ಷದ ಹುಡುಗಿ ಬಿಯಾಂಕ ಸತತ ಆರು ತಿಂಗಳ ಪರಿಶ್ರಮದ ಪ್ರತಿಫಲವಾಗಿ ಈ ದುಬಾರಿ ಫೋನ್ ಖರೀದಿಸಿದ್ದಾಳೆ.


ಈ ಬಗ್ಗೆ ಬಿಯಾಂಕಾ ಅವರ ಅಭಿಪ್ರಾಯ


ಬಿಯಾಂಕಾಳ ತಾಯಿ ಜೆಮಿನಿ ವಾರಿಯವಾ ಒಂದು ದಿನ ಬ್ರೆಡ್ ತಯಾರಿಸಿ ಅದನ್ನು ಊಟದ ಡಬ್ಬಿಯಲ್ಲಿ ಪ್ಯಾಕ್ ಮಾಡಿ ಮಗಳಿಗೆ ಕೊಡುತ್ತಾಳೆ. ಬಿಯಾಂಕ ಇದನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡು ತಿನ್ನುತ್ತಾಳೆ.


ಇದನ್ನೂ ಓದಿ: ಅತಿಯಾಗಿ ಮೊಬೈಲ್ ಬಳಸ್ಬೇಡಿ ಎಂದಿದ್ಯಾಕೆ ಸೆಲ್ ಫೋನ್ ಪಿತಾಮಹ ಮಾರ್ಟಿನ್ ಕೂಪರ್? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್


ಈ ಬ್ರೆಡ್‌ ಅನ್ನು ಆಕೆ ಸ್ನೇಹಿತರು ತುಂಬಾ ಇಷ್ಟಪಟ್ಟು ತಿಂದರು ಹಾಗೂ ಮರುದಿನವೂ ಕೂಡಾ ಇದನ್ನು ಶಾಲೆಗೆ ತೆಗೆದುಕೊಂಡು ಬರುವಂತೆ ಆಕೆಯಲ್ಲಿ ಕೇಳಿಕೊಂಡರು ಎಂದು ಬಿಯಾಂಕಾ ಹೇಳುತ್ತಾಳೆ.


ಮಾರಾಟ ಮಾಡುವಂತೆ ಟ್ರಿಕ್​ ಹೇಳಿಕೊಟ್ಟ ಸ್ನೇಹಿತೆ


ಒಮ್ಮೆ ಬಿಯಾಂಕಾಳ ಸ್ನೇಹಿತೆಯೊಬ್ಬಳು ಬ್ರೆಡ್‌ ಅನ್ನು ಉಚಿತವಾಗಿ ನೀಡುವ ಬದಲು ಏಕೆ ನೀನು ಅವುಗಳನ್ನು ಮಾರಾಟ ಮಾಡಬಾರದು ಎಂಬ ಉಪಾಯವನ್ನು ನೀಡುತ್ತಾಳೆ. ನಂತರ ಇದರಿಂದ ಗಳಿಸಿದ ಹಣದಿಂದ ನನಗೆ ಐಫೋನ್ 14 ಅನ್ನು ಖರೀದಿಸಬಹುದು ಅಲ್ವಾ ಎಂದು ಬಿಯಾಂಕಾ ಯೋಚಿಸುತ್ತಾಳೆ.


ಬ್ರೆಡ್​ ಮಾರಿ ಐಫೋನ್ ಖರೀದಿಸಿದ 12 ವರ್ಷದ ಶಾಲಾ ಹುಡುಗಿ


ಇದು ಈಕೆಯ ಜೀವನಕ್ಕೆ ಒಂದು ತಿರುವನ್ನು ನೀಡುತ್ತದೆ. ಬ್ರೆಡ್ ಮಾರಾಟ ಮಾಡುವ ಯೋಜನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸುತ್ತಾಳೆ. ಆಕೆಯ ಪೋಷಕರು ಇದಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ಸೂಚಿಸುತ್ತಾರೆ. ಆಕೆಯ ತಂದೆ ಭಾರತೀಯ, ಅವರ ಹೆಸರು ಜೆಮಿಭಾಯಿ ವಾರಿಯವ. ಆಕೆಯ ತಾಯಿ ಬ್ರೆಡ್ ಬೇಕ್ ಮಾಡುವ ಪರಿಣಿತಿಯನ್ನು ಮಗಳಿಗೆ ತಿಳಿಸಿಕೊಟ್ಟರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.


ಬಿಯಾಂಕಾ ಬ್ರೆಡ್ ಹೇಗೆ ತಯಾರಿಸಿ ಮಾರಾಟ ಮಾಡುತ್ತಿದ್ದಳು?


ಬಿಯಾಂಕ ನಾಲ್ಕು ಬ್ರೆಡ್ ಪೀಸ್‌ಗಳನ್ನು 10 ದಿರಾಮ್‌ ಅಂದರೆ ಭಾರತದ 224 ರೂಪಾಯಿಗೆ ಮಾರಾಟ ಮಾಡಿದಳು. ನಂತರ ದಿನಕಳೆದಂತೆ ದಿನಕ್ಕೆ ಸರಾಸರಿ 60 ಬ್ರೆಡ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದಳು. ಆಕೆ ತನ್ನ ಮನೆ ಕೆಲಸವನ್ನೆಲ್ಲಾ ಮುಗಿಸಿ ನಂತರ ಸಂಜೆ ಬ್ರೆಡ್ ಬೇಕ್ ಮಾಡುತ್ತಿದ್ದಳು ಮತ್ತು ಆರ್ಡರ್ ಲೀಸ್ಟ್‌ನಲ್ಲಿರುವ ಬ್ರೆಡ್ ಪೀಸ್‌ಗಳನ್ನು ಮಾತ್ರ ಬೇಕ್‌ ಮಾಡುತ್ತಿದ್ದಳು.


ಇದೇ ಮಾರ್ಚ್ ಎರಡನೇ ವಾರದ ವೇಳೆಗೆ ಬಿಯಾಂಕಾ ಬ್ರೆಡ್ ಮಾರಿ ಗಳಿಸಿದ ಹಣ ಸುಮಾರು 3000 ದಿರಾಮ್(ಅಂದಾಜು ರೂ 67,000). ಬಂದ ಹಣದಲ್ಲಿ ಐಫೋನ್ 14 ಮೊಬೈಲ್ ಫೋನ್ ಖರೀದಿಸುತ್ತಾಳೆ.ಱ


ಶಿಕ್ಷಕರು ಮತ್ತು ಸಹಪಾಠಿಗಳಿಗೆ ಬಿಯಾಂಕಾ ತಯಾರಿಸಿದ ಬ್ರೆಡ್


"ನಾನು ಪ್ಲೇನ್‌ ಬ್ರೆಡ್ ಅನ್ನು ಬೇಕ್‌ ಮಾಡುತ್ತಿರಲಿಲ್ಲ, ಬದಲಾಗಿ ಸಾದಾ ಮೃದುವಾದ ರೋಲ್, ಓರಿಯೊ, ಉಬೆ, ಚೀಸ್, ಚೀಸ್ ನೊಂದಿಗೆ ಟರ್ಕಿ ಸಲಾಮಿ ಮತ್ತು ಚಿಕನ್ ಫ್ರಾಂಕ್‌ಗಳಂತಹ ಬೇರೆ ಬೇರೆ ರೀತಿಯ ಫ್ಲೇವರ್ ಬ್ರೆಡ್‌ಗಳನ್ನು ತಯಾರಿಸುತ್ತಿದ್ದೆ ಹಾಗೂ ಈ ಎಲ್ಲಾ ಫ್ಲೇವರ್ ಬ್ರೆಡ್‌ಗಳು ನನ್ನ ಶಿಕ್ಷಕರು ಮತ್ತು ಸಹಪಾಠಿಗಳಿಗೆ ತುಂಬಾ ಇಷ್ಟವಾಗುತ್ತಿತ್ತು, ಎಂದು ಬಿಯಾಂಕಾ ಹೇಳಿದರು.
ಶಾಲೆಯಲ್ಲಿ ಬ್ರೆಡ್ ಮಾರಾಟ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ ಎಂದು ಬಿಯಾಂಕಾ ಹೇಳುತ್ತಾಳೆ. ಒಂದು ಹಂತದಲ್ಲಿ ಆಕೆಯನ್ನು ವಿದ್ಯಾರ್ಥಿಗಳು ಗೇಲಿ ಮಾಡಿದ್ದು ಉಂಟು. ಕೆಲವು ವಿದ್ಯಾರ್ಥಿಗಳು ನನ್ನನ್ನು ಕೀಳಾಗಿ ನೋಡಿದರು. ಅವರು ತಮ್ಮ ತಮ್ಮಲ್ಲೇ ಅವಳು ಬ್ರೆಡ್ ಮಾರಾಟ ಮಾಡುವ ಬದಲು ನೇರವಾಗಿ ಆಕೆಯ ಪೋಷಕರ ಬಳಿ ಬೇಕೆಂದು ಕೇಳಬಹುದಲ್ವಾ ಎಂದು ಮಾತನಾಡಿಕೊಂಡರು. ಜೊತೆಗೆ ಅವರು ನನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಪ್ರಶ್ನಿಸಿದ್ದಾರೆ ಎಂದು ಬಿಯಾಂಕ ಹೇಳುತ್ತಾಳೆ.

top videos


    ನನ್ನ ಪೋಷಕರು, ಸಹಪಾಠಿಗಳು, ಶಿಕ್ಷಕರು ಮತ್ತು ನೆರೆಹೊರೆಯವರು ನನ್ನ ಕೆಲಸವನ್ನು ಪ್ರೋತ್ಸಾಹಿಸಿದ್ದಾರೆ ಜೊತೆಗೆ ಪ್ರೇರಣೆಯನ್ನು ನೀಡಿದ್ದಾರೆ ಎಂದು ತಿಳಿಸುತ್ತಾರೆ.

    First published: