• Home
  • »
  • News
  • »
  • business
  • »
  • VIP Boeing Jet: 95 ಮಿಲಿಯನ್​ ಮೌಲ್ಯದ ಜೆಟ್​ ಗುಜುರಿಗೆ, ಜಸ್ಟ್​ 48 ಗಂಟೆ ಹಾರಾಡಿದ ವಿಮಾನ ಕೊಳ್ಳೋರೆ ಇಲ್ಲ

VIP Boeing Jet: 95 ಮಿಲಿಯನ್​ ಮೌಲ್ಯದ ಜೆಟ್​ ಗುಜುರಿಗೆ, ಜಸ್ಟ್​ 48 ಗಂಟೆ ಹಾರಾಡಿದ ವಿಮಾನ ಕೊಳ್ಳೋರೆ ಇಲ್ಲ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕ್ರೌನ್ ಪ್ರಿನ್ಸ್‌ನ ಅನಿರೀಕ್ಷಿತ ಮರಣದಿಂದ ದುಃಖತಪ್ತರಾಗಿದ್ದ ಸೌದಿ ರಾಜಮನೆತನದ ಯಾವುದೇ ಸದಸ್ಯರು ಜೆಟ್ ಬಗ್ಗೆ ಹೆಚ್ಚಿನ ಒಲವು ತೋರಲಿಲ್ಲ. ಹಾಗಾಗಿ ಯಾರಾದರೂ ಉತ್ತಮ ಖರೀದಿದಾರರು ದೊರೆಯುತ್ತಾರೆಯೇ ಎಂದು ಗ್ರಾಹಕರಿಗಾಗಿ ಕಾಯುತ್ತಾ ಈ ಜೆಟ್ ಅನ್ನು ಸ್ವಿಸ್ ವಿಮಾನ ನಿಲ್ದಾಣದಲ್ಲಿ ಬಳಸದೆಯೇ ಹಾಗೆಯೇ ನಿಲ್ಲಿಸಲಾಯಿತು.

ಮುಂದೆ ಓದಿ ...
  • Share this:

ವೈಭವೋಪೇತ ಒಳಾಂಗಣ ವಿನ್ಯಾಸವನ್ನೊಳಗೊಂಡಿದ್ದ ಬೋಯಿಂಗ್ ಜಂಬೋ (Boeing Jet) ಜೆಟ್ ಅನ್ನು ಇದೀಗ ಭಗ್ನಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. 42 ಗಂಟೆಗಳ ಕಾಲ ಮಾತ್ರವೇ ಹಾರಾಟ ನಡೆಸಿರುವ ಈ ವಿಮಾನವನ್ನು ಸೌದಿ ರಾಜಕುಮಾರನಿಗಾಗಿ (Prince) ಖರೀದಿಸಲಾಗಿತ್ತು. ಆದರೆ ವಿಮಾನ ಕೈಸೇರುವ ಒಂದು ವರ್ಷಕ್ಕಿಂತ ಮುನ್ನವೇ ರಾಜಕುಮಾರ ಅಸುನೀಗಿದ್ದು, ಜೆಟ್ ಅನ್ನು ಖರೀದಿಸಲು ಯಾವುದೇ ಸಮರ್ಪಕ ಗ್ರಾಹಕರು (Customers) ದೊರಕದ ಹಿನ್ನಲೆಯಲ್ಲಿ ಭಗ್ನಗೊಳಿಸಲಾಗುತ್ತಿದೆ ಎಂದು ಸುದ್ದಿಪತ್ರಿಕೆಗಳು (News Paper) ವರದಿ ಮಾಡಿವೆ.


ಐಷಾರಾಮಿ ಬೋಯಿಂಗ್ ಜಂಬೋ ಜೆಟ್‌ ಅನ್ನು ಭಗ್ನಗೊಳಿಸಲು ನಿರ್ಧಾರ


ಸೌದಿಯ ಕ್ರೌನ್ ಪ್ರಿನ್ಸ್‌ಗಾಗಿ ಈ ದುಬಾರಿ ವಿಮಾನವನ್ನು ಆರ್ಡರ್ ಮಾಡಲಾಗಿತ್ತು.  ಈ ವಿಮಾನದ ಒಳಾಂಗಣ ವಿನ್ಯಾಸವನ್ನು ಐಷಾರಾಮಿಯಾಗಿ ಹಾಗೂ ವೈಭಪೋತವಾಗಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ. ವಿಮಾನದ ಬೆಲೆಯನ್ನು $95 ಮಿಲಿಯನ್‌ಗೆ ಕಡಿತಗೊಳಿಸಲಾಗಿದ್ದರೂ ಖರೀದಿಸಲು ಯಾವುದೇ ಗ್ರಾಹಕರು ದೊರೆಯದೇ ಇದ್ದ ಕಾರಣ ಬೋಯಿಂಗ್ 747-8 ಅನ್ನು ಅರಿಜೋನಾದ ಪಿನಾಲ್ ಏರ್‌ಪಾರ್ಕ್‌ನಲ್ಲಿ ಭಗ್ನಗೊಳಿಸುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ ಎಂದು ಜರ್ಮನಿಯ ಏರೋ ಟೆಲಿಗ್ರಾಫ್ ವರದಿ ಮಾಡಿದೆ.


ಸೌದಿ ರಾಜಕುಮಾರನಿಗಾಗಿ ಆರ್ಡರ್ ಮಾಡಿದ್ದ ವಿಮಾನ


ಸುಮಾರು $280 ಮಿಲಿಯನ್ ವೆಚ್ಚದಲ್ಲಿ ಸೌದಿಯ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರಿಗಾಗಿ ವಿಮಾನವನ್ನು ಆರ್ಡರ್ ಮಾಡಲಾಗಿತ್ತು. ಆದರೆ ವಿಮಾನವನ್ನು ತಲುಪಿಸುವ ಒಂದು ವರ್ಷದ ಮೊದಲು 2011 ರಲ್ಲಿ ರಾಜಕುಮಾರ ಅನಿರೀಕ್ಷಿತವಾಗಿ ಮರಣ ಹೊಂದಿದರು. ವಿಮಾನವು 2012 ರಲ್ಲಿ ಸ್ಯಾನ್ ಆಂಟೋನಿಯೊದಿಂದ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ಗೆ ಹಾರಾಟ ನಡೆಸಿದ್ದು, ವಿಮಾನದ ಒಳಾಂಗಣವನ್ನು ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮೇಲ್ ಆನ್‌ಲೈನ್ ವರದಿ ಮಾಡಿದೆ.


ಇದನ್ನೂ ಓದಿ: Viral News: 12 ಪತ್ನಿಯರು, 102 ಮಕ್ಕಳಾದ್ಮೇಲೆ ಇವನಿಗೆ ಇನ್ನು ಮಕ್ಕಳು ಬೇಡ್ವಂತೆ!


ಜೆಟ್ ಖರೀದಿಸಲು ಆಸಕ್ತಿ ತೋರದ ಸೌದಿ ರಾಜವಂಶ


ಇನ್ನು ಸೌದಿಯ ರಾಜವಂಶಸ್ಥರು ಕೂಡ ವಿಮಾನವನ್ನು ಖರೀದಿಸಲು ಆಸಕ್ತಿ ತೋರಲಿಲ್ಲ ಎಂಬುದಾಗಿ ಪತ್ರಿಕೆ ತಿಳಿಸಿದ್ದು, ಕ್ರೌನ್ ಪ್ರಿನ್ಸ್‌ನ ಅನಿರೀಕ್ಷಿತ ಮರಣದಿಂದ ದುಃಖತಪ್ತರಾಗಿದ್ದ ಸೌದಿ ರಾಜಮನೆತನದ ಯಾವುದೇ ಸದಸ್ಯರು ಜೆಟ್ ಬಗ್ಗೆ ಹೆಚ್ಚಿನ ಒಲವು ತೋರಲಿಲ್ಲ. ಹಾಗಾಗಿ ಯಾರಾದರೂ ಉತ್ತಮ ಖರೀದಿದಾರರು ದೊರೆಯುತ್ತಾರೆಯೇ ಎಂದು ಗ್ರಾಹಕರಿಗಾಗಿ ಕಾಯುತ್ತಾ ಈ ಜೆಟ್ ಅನ್ನು ಸ್ವಿಸ್ ವಿಮಾನ ನಿಲ್ದಾಣದಲ್ಲಿ ಬಳಸದೆಯೇ ಹಾಗೆಯೇ ನಿಲ್ಲಿಸಲಾಯಿತು.


42 ಗಂಟೆಗಳ ಹಾರಾಟ


ಈ ವಿಮಾನವನ್ನು ನಾಶ ಪಡಿಸುವುದಕ್ಕೂ ಮೊದಲು ಒಮ್ಮೆ ಹಾರಾಟ ಮಾಡಿ ನೋಡಲಾಯಿತು. ಇದು ಹಾರಾಡಲು ಸಮರ್ಥವಾಗಿರುವ ಕಾರಣ ಬಹಿರಂಗಪಡಿಸದ ಮೊತ್ತಕ್ಕೆ ವಿಮಾನವನ್ನು ಮರು ಖರೀದಿಸಿತು, ಇದು ವಿಮಾನ ಉಳಿಯಬಹುದೆಂಬ ನಿರೀಕ್ಷೆಗಳನ್ನು ಹೆಚ್ಚಿಸಿತು ಎಂದು ಮೇಲ್ ಆನ್‌ಲೈನ್ ವರದಿ ಮಾಡಿದೆ. ಈ ವಿಮಾನವು ಬರೇ 42 ಗಂಟೆಗಳ ಹಾರಾಟ ನಡೆಸಿದ್ದರೂ, ಖರೀದಿದಾರರಿಗಾಗಿ ವಿಮಾನದ ಮೂಲ ಬೆಲೆಯನ್ನು ಕಡಿತಗೊಳಿಸಲಾಗಿದ್ದರೂ ಕೊಳ್ಳುವವರಿಲ್ಲದೆ ವಿಮಾನ ನಿಶ್ಚಲವಾಗಿ ನಿಂತಿತ್ತು ಎಂದು ಪತ್ರಿಕೆಗಳು ವರದಿ ಮಾಡಿವೆ.


ಐಶಾರಾಮಿ ಒಳಾಂಗಣ


ಬೋಯಿಂಗ್ 747 ಜೆಟ್‌ಗಿದೆ 30 ವರ್ಷಗಳ ಬಾಳ್ವಿಕೆ


ಬೋಯಿಂಗ್ 747 ಸಾಮಾನ್ಯವಾಗಿ ಸುಮಾರು 30 ವರ್ಷಗಳ ಬಾಳ್ವಿಕೆಯನ್ನು ಹೊಂದಿರುತ್ತದೆ. ಜೆಟ್ ಅನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ, ಹಾಗಾಗಿ ಇದೀಗ ಅದನ್ನು ಅರಿಜೋನಾ "ಬೋನಿಯಾರ್ಡ್" ನಲ್ಲಿ ಭಗ್ನಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.


ಬೋಯಿಂಗ್‌ನಿಂದ ತಯಾರಿಸಲಾದ ಕೊನೆಯ 747 ವಿಮಾನ


747-8 ಅನ್ನು ಲುಫ್ಥಾನ್ಸಾ ಸೇರಿದಂತೆ ವಿಮಾನಯಾನ ಸಂಸ್ಥೆಗಳಿಂದ ಸರಕು ಮತ್ತು ಪ್ರಯಾಣಿಕ ಜೆಟ್‌ಗಳಿಗಾಗಿ ಬಳಸಲಾಗುತ್ತಿದೆ, ಆದರೂ ಅದರ ನಾಲ್ಕು ಎಂಜಿನ್‌ಗಳು 787 ಡ್ರೀಮ್‌ಲೈನರ್ ಅಥವಾ ಏರ್‌ಬಸ್ A350 ನಂತಹ ಹೊಸ ಅವಳಿ-ಎಂಜಿನ್ ವಿಮಾನಗಳಿಗಿಂತ ಕಾರ್ಯನಿರ್ವಹಣೆಗೆ ಹೆಚ್ಚು ದುಬಾರಿಯಾಗಿದೆ.

First published: