• Home
  • »
  • News
  • »
  • business
  • »
  • Old Monk: ವರ್ಷಕ್ಕೆ 80 ಲಕ್ಷ ಬಾಟಲಿ ಮಾರಾಟ! ಭಾರತೀಯ ಬ್ರಾಂಡ್ ಮದ್ಯ ವಿಶ್ವದಲ್ಲೇ ಅತ್ಯುತ್ತಮವಂತೆ

Old Monk: ವರ್ಷಕ್ಕೆ 80 ಲಕ್ಷ ಬಾಟಲಿ ಮಾರಾಟ! ಭಾರತೀಯ ಬ್ರಾಂಡ್ ಮದ್ಯ ವಿಶ್ವದಲ್ಲೇ ಅತ್ಯುತ್ತಮವಂತೆ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

Old Monk: ಹಲವು ದೇಶಗಳಲ್ಲಿ ತನ್ನ ಹೆಸರು ಸ್ಥಾಪಿಸಿದ ಭಾರತದ ಅತ್ಯಂದ ಹಳೆಯ ಮದ್ಯ ಬ್ರ್ಯಾಂಡ್‌ ಯಾವುದು ಅಂತ ಕುತೂಹಲ ಇದ್ರೆ ಈ ಸುದ್ದಿ ಓದಿ.

  • Share this:

ವಿಶ್ವದ ಯಾವುದೇ ದೇಶಕ್ಕೆ ಕಾಲಿಟ್ರೂ ಮದ್ಯ ಪ್ರಿಯರು ಸಿಕ್ಕೇ ಸಿಗ್ತಾರೆ. ಭಾರತದಲ್ಲಂತು ಹೆಚ್ಚಿನ ಆದಾಯ ಬರೋದೆ ಅಬಕಾರಿ ಇಲಾಖೆಯಿಂದ. ಹಲವು ದೇಶಗಳಲ್ಲಿ ಮದ್ಯಕ್ಕೆ (Drinks) ತುಂಬಾ ಬೇಡಿಕೆ ಇದೆ. ಭಾರತದ ಮದ್ಯ ಕಂಪನಿಯೊಂದು ಒಂದು ವರ್ಷದಲ್ಲಿ 80 ಲಕ್ಷ ಬಾಟಲಿಗಳನ್ನು ಮಾರಾಟ (Sale) ಮಾಡುತ್ತದೆ. ರಷ್ಯಾ, ಅಮೆರಿಕ, ಬ್ರಿಟನ್‌, ಜರ್ಮನಿ, ಜಪಾನ್, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ (Nation) ತನ್ನ ಹೆಸರು ಸ್ಥಾಪಿಸಿದ ಭಾರತದ ಅತ್ಯಂದ ಹಳೆಯ ಮದ್ಯ ಬ್ರ್ಯಾಂಡ್‌  (Old Brand) ಯಾವುದು ಅಂತ ಕುತೂಹಲ ಇದ್ರೆ ಈ ಸುದ್ದಿ ಓದಿ.


50ಕ್ಕೂ ಹೆಚ್ಚು ದೇಶಗಳಿಗೆ ಸರಬರಾಜಾಗುತ್ತಿರುವ ಮದ್ಯ ಯಾವುದು ಎಂದರೆ ಓಲ್ಡ್‌ ಮಾಂಕ್‌ ರಮ್. ಎಲ್ಲಾ ದೇಶಗಳಲ್ಲೂ ಮದ್ಯ ಸೇವನೆ ಒಂದು ಟ್ರೆಂಡ್ ಆಗಿದೆ. ಜನ ಹೆಚ್ಚಿದಂತೆ ಮದ್ಯಪಾನ ಮಾಡುವ ಮತ್ತು ಖರೀದಿಸುವವರ ಸಂಖ್ಯೆಯೂ ಹೆಚ್ಚಿದೆ. ಓಲ್ಡ್‌ ಮಾಂಕ್‌ ರಮ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ. ಹಿಂದೊಮ್ಮೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಈ ಬ್ರಾಂಡ್ ಈಗ ಒಂದು ವರ್ಷಕ್ಕೆ ಬರೋಬ್ಬರಿ 80 ಲಕ್ಷ ಮದ್ಯ  ಭಾಟಲಿಗಳನ್ನು ಮಾರಾಟ ಮಾಡುತ್ತಿದೆ.


170 ವರ್ಷಗಳ ಇತಿಹಾಸ ಹೊಂದಿರುವ ಮದ್ಯ


170 ವರ್ಷಗಳ ಇತಿಹಾಸವಿರುವ ಓಲ್ಡ್‌ ಮಾಂಕ್‌ ಪ್ರಾರಂಭವಾದದ್ದು 1954 ರಲ್ಲಿ, ಇದು 1855ರಲ್ಲಿ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ತಯಾರಿಸಲ್ಪಟ್ಟಿತ್ತು. . ಇಲ್ಲಿ ಎಡ್ವರ್ಡ್ ಅಬ್ರಹಾಂ ಡಯರ್ ಎಂಬ ಉದ್ಯಮಿ ಸಾರಾಯಿ ಕೇಂದ್ರವನ್ನು ಸ್ಥಾಪಿಸಿದ್ದ. ಬ್ರಿಟಿಷ್ ಸೈನ್ಯಕ್ಕೆ ಅಗ್ಗದ ಬಿಯರ್ ಸರಬರಾಜು ಮಾಡುವುದು ಇದರ ಮೂಲ ಉದ್ದೇಶವಾಗಿತ್ತು. ಅವರ ಮಗ ರೆನೆಗಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ಬ್ರಿಟಿಷ್ ಸೈನ್ಯದಲ್ಲಿ ಕರ್ನಲ್ ಆಗಿದ್ದರು. ಕಸೌಲಿಯಲ್ಲಿ ತಯಾರಾದ ಈ ಸಾರಾಯಿ ಇಡೀ ಉದ್ಯಮವನ್ನೇ ಬದಲಿಸಿದೆ.


ಓಲ್ಡ್ ಮಾಂಕ್ ರಮ್ ಸಾಂಪ್ರದಾಯಿಕ ವಿಧಾನದಿಂದ ತಯಾರಿಸಿದ ಗುಣಮಟ್ಟದ ಡಾರ್ಕ್ ರಮ್ ಆಗಿದೆ. ಇದನ್ನು ಓಕ್ ಬ್ಯಾರೆಲ್‌ಗಳಲ್ಲಿ ಕನಿಷ್ಠ 7 ವರ್ಷಗಳವರೆಗೆ ಹದಗೊಳಿಸಿದ್ದಾರೆ. ಈ ಪಾನೀಯವು 42.8% ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಮೃದುವಾದ ಕೆನೆ ಹೊಂದಿರುತ್ತದೆ. ಇದರ ರುಚಿಯು ಕ್ಯಾರಮೆಲ್, ಚಾಕೊಲೇಟ್ ಮತ್ತು ವೆನಿಲ್ಲಾ ಪರಿಮಳದಿಂದ ಕೂಡಿರುತ್ತದೆ.


ಇದನ್ನೂ ಓದಿ: ಆಭರಣ ಪ್ರಿಯರಿಗಿಂದು ಸಿಹಿ-ಕಹಿ! ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ!


ಹೆಸರು ಬರಲು ಕಾರಣವೇನು?


ಕಂಪನಿ ಮಾಲಿಕ ಕಪಿಲ್ ಮೋಹನ್ ಅವರು ಕಾಡು ಮತ್ತು ಪರ್ವತಗಳಿಗೆ ಪ್ರಯಾಣಿಸುವಾಗ ಅಲ್ಲಿ ವಾಸಿಸುವ ಸಂತರು ವಿಭಿನ್ನ ರೀತಿಯ ಪಾನೀಯವನ್ನು ಕುಡಿಯುವುದನ್ನು ನೋಡಿದ್ದರು. ಆ ಸಂತರು ಪರ್ವತಗಳ ಶೀತ ವಾತಾವರಣದಲ್ಲಿ ಜೀವಿಸಲು ಆ ಪಾನೀಯವನ್ನು ಸೇವಿಸುತ್ತಿದ್ದರು. ಅವರು ಸೇವಿಸುವ ಈ ಪಾನೀಯದಿಂದ ಸ್ಪೂರ್ತಿ ಪಡೆದ ಕಪಿಲ್ ಮೋಹನ್ ತಮ್ಮ ಕಂಪನಿಗೆ 'ಓಲ್ಡ್ ಮಾಂಕ್‌ ರಮ್‌' ಎಂದು ಹೆಸರಿಟ್ಟರು. ಈ ಹೆಸರೇ ಬಾರೀ ಜನಪ್ರಿಯತೆ ಸಾಧಿಸಿದೆ.


ಇದನ್ನೂ ಓದಿ: ಟೊಮೇಟೋ, ಸೊಪ್ಪು ತಾಜಾ ಇದ್ಯಾ? ಹಾಗಲಕಾಯಿ ಎಷ್ಟಮ್ಮ? ಬೀದಿಬದಿ ತರಕಾರಿ ಖರೀದಿಸಿದ ಸಚಿವೆ!


ಆರಂಭದಲ್ಲಿ ಓಲ್ಡ್‌ ಮಾಂಕ್‌ ಮದ್ಯವನ್ನು ಸೇನೆಗೆ ಮಾತ್ರ ಸಿದ್ಧಪಡಿಸಲಾಗುತ್ತಿತ್ತು. ಆದರೆ ಜನರಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಈ ಬ್ರ್ಯಾಂಡ್ ಅನೇಕ ಸ್ಥಳಗಳಲ್ಲಿ ಪ್ರಸಿದ್ಧವಾಯಿತು. ಅದರ ನಂತರ ಅದರ ಉತ್ಪಾದನೆಯು ಅನೇಕ ನಗರಗಳು ಸೇರಿದಂತೆ ಇತರ ದೇಶಗಳಲ್ಲಿ ಪ್ರಾರಂಭವಾಯಿತು. ಇದರ ಜನಪ್ರಿಯತೆಯು 2002 ರಲ್ಲಿ ಬಹಿರಂಗಪಡಿಸಿದ ಅಂಕಿ ಅಂಶದ ಪ್ರಕಾರ ಒಂದು ವರ್ಷದಲ್ಲಿ 80 ಲಕ್ಷ ಬಾಟಲಿಗಳು ಮಾರಾಟವಾಗುತ್ತವೆ. ಓಲ್ಡ್ ಮಾಂಕ್‌ ಇಷ್ಟ ಪಡುವ ಅನೇಕ ಅಭಿಮಾನಿಗಳು ಇದನ್ನೇ ಕುಡಿಯಲು ಬಯಸುತ್ತಾರೆ

First published: